ಪ್ರೊ ಶಿವರಾಮಯ್ಯ ಬರೆಯುತ್ತಾರೆ :ಬಾ, ಹುಲಿಕಲ್ ನೆತ್ತಿಗೆ-1…

-ಪ್ರೊ. ಶಿವರಾಮಯ್ಯ

2010 ಜನವರಿ ತಿಂಗಳ ಕೊನೆಯ ಪಾದ ಇರಬೇಕು. ಒಂದು ದಿನ ನಮ್ಮ ಡಾ. ಕೆ.ವೈ. ನಾರಾಯಣ ಸ್ವಾಮಿ ನನಗೆ ಫೋನ್ನಲ್ಲಿ ‘ರಂಗತಜ್ಞ ಸಿ. ಬಸವಲಿಂಗಯ್ಯ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ರಂಗಾಯಣದ ವತಿಯಿಂದ ನಾಟಕ ರೂಪಕ್ಕಿಳಿಸಲು ಹೊರಟಿದ್ದಾರೆ. ಅದಕ್ಕೆ ಸ್ಕ್ರಿಪ್ಟ್ ಮಾಡಿಕೊಡಲು ನನ್ನ ಕೇಳಿಕೊಂಡಿದ್ದಾರೆ. ಇದು ಸಾಧ್ಯವೇ ಎಂಬ ಭಯ ನನಗೆ ಕಾಡಿತಾದರೂ ‘ಮದುಮಗಳು’ ಕೃತಿಯ ಓದಿನ ಬೆರಗು ನನ್ನ ಕಾಡುತ್ತಿತ್ತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಆದ್ದರಿಂದ ‘ಆಯಿತು’ ಎಂದಿದ್ದೇನೆ. ನೀವು ‘ಪೂರ್ವಿಕರು’ ‘ಮದುಮಗಳು’ ಪ್ರಕಟವಾದಗಾಯ್ತು, ಈ ಕೃತಿ ಲೋಕದಲ್ಲಿ ಚಿತ್ರಣಗೊಂಡಿರುವ ಒಕ್ಕಲಿಗ, ದಲಿತ, ಬ್ರಾಹ್ಮಣ, ಕ್ರಿಶ್ಚಿಯನ್ ಹಾಗೂ ಮುಸ್ಲಿಮ್ರನ್ನು ಕುರಿತು ಕನ್ನಡ ವಿಮರ್ಶೆ ಎತ್ತಿರುವ ವಾಗ್ವಾದಗಳನ್ನು ಬಲ್ಲಂತವರು; ಮೇಲಾಗಿ ಕುವೆಂಪು ಅಭಿಮಾನಿಗಳು. ನೀವು ನನ್ನೊಡನೆ ಮೈಸೂರಿಗೆ ಬಂದು ಈ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ನೆರವಾಗಬೇಕು ಎಂದು ದೂಸರ ಮಾತಿಗೆ ಅವಕಾಶ ಕೊಡದೆ ‘ನಾಳೆ ನಾಡಿದ್ದರಲ್ಲಿ ಹೊರಡಬೇಕು’ ಎಂದು ಬಿಟ್ಟರು.ಆ ಪ್ರಕಾರ ಕೆವೈಎನ್, ನಾನು, ಭೈರೇಗೌಡ ಮೈಸೂರಿಗೆ ಹೊರಟೆವು.

ಅದೇ ದಿನ ವನರಂಗದಲ್ಲಿ ನೇದರ್ಲ್ಯಾಂಡಿನಿಂದ ಬಂದಿದ್ದ ಮರಗಾಲು ನೃತ್ಯ ಮಾಡುವ ಆದೇಶದ ಇಬ್ಬರು ಜಾನಪದ ಕಲಾವಿದರ ಪ್ರದರ್ಶನ ಕಾರ್ಯಕ್ರಮ ಇತ್ತು. ಬೆಂಗಳೂರಿನಲ್ಲಿ ನೋಡಲಾಗಿರದಿದ್ದ ಅವರ ಅಪರೂಪದ ನೃತ್ಯವನ್ನು ನೋಡುವ ಅವಕಾಶವೂ ಸಿಕ್ಕಿತು. ನಮ್ಮಲ್ಲಿನ ಮಹಿಷಾಸುರ ಮರ್ದಿನಿ ನಾಟ್ಯ ಕಥೆಯನ್ನು ಹೋಲುವ ಜನಪದ ಮರಗಾಲು ನೃತ್ಯ ಅದು. ಕೇವಲ ಒಂದು ಹೆಣ್ಣು ಒಂದು ಗಂಡು ಅಲ್ಲಿ ಪಾತ್ರಧಾರಿಗಳು, ಗಂಡಿನ ಗರ್ವ ಸ್ವಭಾವ ಗುಣವನ್ನು ಹೆಣ್ಣು ಮೆಟ್ಟಿನಿಲ್ಲುವ ಅದ್ಭುತ ಪ್ರದರ್ಶನ ಅದಾಗಿತ್ತು. 45 ನಿಮಿಷಗಳ ಆ ಪ್ರದರ್ಶನ ಕಣ್ಣೆವೆ ಬಡೆಯದ ನೋಟವಾಗಿತ್ತು.

ಆ ದಿನ ರಂಗಾಯಣದ ಪ್ರಭಾರ ನಿದರ್ೆಶಕರಾಗಿದ್ದ ಕಾ.ತ. ಚಿಕ್ಕಣ್ಣ, ಬಸವಲಿಂಗಯ್ಯ ಮತ್ತು ರಂಗಾಯಣದ ಕೆಲವು ನಟ-ನಟಿಯರು ಹಾಗೂ ರಂಗಾಯಣ ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ ಸೇರಿದ ಒಂದು ಸಭೆ ನಡೆಯಿತು. ಬಸು ತುಂಬ ಖುಷಿಯಲ್ಲಿದ್ದರು. ಕಾರಣ ಕುಕ್ಕರ ಹಳ್ಳಿಕೆರೆ ಮುಂದಿನ ಕುರುಚಲು ಕಾಡಿನಲ್ಲಿ ಮದುಮಗಳು ನಾಟಕವನ್ನು ಆಡಿಸಬಹುದೆಂದು ಮೈಸೂರು ವಿ.ವಿ.ದ ಕುಲಪತಿ ತಳವಾರ್ರರು ಅನುಮತಿ ಕೊಟ್ಟಿದ್ದರು.

ಅದೇ ಹುರುಪು ಉತ್ಸಾಹದಲ್ಲಿದ್ದ ಬಸು ನಮ್ಮನ್ನೆಲ್ಲ ಕುಕ್ಕರಹಳ್ಳಿಕೆರೆ ಮುಂದಿನ ಹಳ್ಳದಿಣ್ಣೆ, ಕೊರಕಲು, ಕಲ್ಲು ಮುಳ್ಳು, ಮರಗಿಡಗಳಿಂದ ಕೂಡಿದ ಆ ಕಾಡಿನಲ್ಲಿ ಸುತ್ತಾಡಿಸಿದರು. ಇದು ಶಿಂಬಾವಿ, ಇದು ಲಕ್ಕುಂದ, ಈ ಕೊರಕಲು ಗುತ್ತಿ ಮತ್ತು ಅವನ ಹುಲಿಯ ‘ದನಗೋಳು’ ಮಳೆಯಲ್ಲಿ ದಾಟುವ ಹಳ್ಳ, ಇದು ಮೇಗರವಳ್ಳಿ, ಇದು ಹಳೆಮನೆ, ಹೂವಳ್ಳಿ, ಇದು ಇದು ಬೆಟ್ಟಳ್ಳಿ, ಇವು ಹಳೆಪೈಕದ, ಹಸಲ, ಬಿಲ್ಲವರ ಕೆಳಕೇರಿಗಳು ಇತ್ಯಾದಿ….. ಈ ಎಲ್ಲವುಗಳ ಮಧ್ಯೆ ಇರುವ ಆ ಎತ್ತರದ ದಿಣ್ಣೆಯೆ ಹುಲಿಕಲ್ಗುಡ್ಡ; ಇಲ್ಲಿಯೇ ತುಂಗಾ ಪ್ರವಾಹ ಇತ್ಯಾದಿ ಹೀಗೆ ಸ್ಥಳ ನಿದರ್ೆಶನ ಮಾಡುತ್ತ ಆ ಬೇಸಿಗೆ ಬಿಸಿಲಿನಲ್ಲಿ ನಮ್ಮನ್ನು ಅಲ್ಲೆಲ್ಲ ಸುತ್ತಾಡಿಸಿ ತೋರಿಸಿದರು.

ಮುಂದುವರೆಯುವುದು…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: