ಗುರುಗುಂಟಿರಾಯರ On-line Transaction…

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ37

I think there is a world market for maybe five computers. . . IBM chairman Thomas Watson, 1943

ಜಗತ್ತಿನಾದ್ಯಂತ ಒಂದೈದು ಕಂಪ್ಯೂಟರ್ಗಳಿಗೆ ಮಾರುಕಟ್ಟೆ ಇದೆಯೆಂದು ನಾನು ಭಾವಿಸುತ್ತೇನೆ. . . ಐ.ಬಿ.ಎಮ್ ಚೇರ್ಮನ್ ಥಾಮನ್ ವಾಟ್ಸನ್, 1943.

ಗುರುಗುಂಟಿರಾಯರಿಗೆ ಕಂಪ್ಯೂಟರ್ ಕಂಡರೆ ಏನೋ ಭಯ. ಮುಟ್ಟಿದರೂ ಸಾಕು; ಡೈನಾಮೈಟ್ ತರ ಎಲ್ಲಾದರು ‘ಡಮಾರ್’ ಎಂದು ಬ್ಲಾಸ್ಟ್ ಆಗಿ ನುಚ್ಚು ನೂರಾದರೆ ಎಂಬ ಭಯ. ಮಗ-ಸೊಸೆ, ಅಷ್ಟೇ ಯಾಕೆ ಇತ್ತೀಚೆಗೆ ಮೊಮ್ಮಗನೂ ಕೂಡಾ ಲೀಲಾಜಾಲವಾಗಿ ಇಂಟರ್ನೆಟ್ ಎಂಬ ಲೀಲಾ ಜಾಲದಲ್ಲಿ ವಿಹರಿಸುವುದನ್ನು ನೋಡಿಯೇ ದಂಗಾಗುತ್ತಾರೆ.

ತಮ್ಮ ರಾಜ್ಯಭಾರ ನಡೆಯುತ್ತಿದ್ದ ಜಮಾನದಲ್ಲಿ ಅವರು ಕಂಡ ಸರ್ವರ್ ಎಂದರೆ ಉಡುಪಿ ಕೃಷ್ಣ ಭವನದಲ್ಲಿ ಇಡ್ಲಿಕಾಫಿ ತಂದಿಡುವ ಮಾಣಿ ಮಾತ್ರ. ಮೌಸ್ ಅಂದರೆ ಅಡಿಗೆಕೋಣೆಯಲ್ಲಿ ರಾದ್ಧಾಂತ ಮಾಡಿಕೊಂಡು ಬೆಕ್ಕಿನ ಮುಂದೆ ಮುಂದೆ ಓಡುವ ಪ್ರಾಣಿ ಎಂದೇ ಪರಿಚಯ. ಮಾನಿಟರ್ ಎಂದರೆ ಒಂದು ಜಾತಿಯ ಉಡ ಎಂದು ಹೈಸ್ಕೂಲಿನ ವಿಜ್ಞಾನ ಪಾಠದಲ್ಲಿ ಓದಿದ ನೆನಪು. ಕ್ಲಿಕ್ ಮಾಡುವುದು ಕೆಮರಾದಲ್ಲಿ ಮಾತ್ರ ಎಂದು ತಿಳಿದುಕೊಂಡಿದ್ದಾರೆ.

ಚಿಪ್ಸ್ ಎನ್ನುವುದು ಅವರು ಪೊಟಾಟೋ ಚಿಪ್ಸಿಗೆ ಮಾತ್ರ. ವಿಂಡೋಸ್ ಎನ್ನುವುದು ಕಿಟಕಿಗೆ ಅಲ್ಲವೇ? ಇನ್ನು ಕೀಬೋಡರ್್, ಸಿಪಿಯು, ರೂಟರ್, ಡೌನ್ಲೋಡ್, ಅಪ್ಲೋಡ್, ಈ ಮೈಲ್, ಆ ಮೈಲ್ ಇತ್ಯಾದಿ ಶಬ್ದಗಳನ್ನು ಕೇಳುವಾಗಲಂತೂ ಗ್ರೀಕ್ ಐನ್ಡ್ ಲಾಟಿನ್ ಭಾಷೆಯಲ್ಲಿ ನವ್ಯಕವನ ಕೇಳಿದಂತಾಗುತ್ತದೆ ರಾಯರಿಗೆ.

ಅಂತದ್ದರಲ್ಲಿ ಗುರುಗುಂಟಿರಾಯರಿಗೆ ಆನ್ ಲೈನ್ ವ್ಯವಹಾರಗಳ ಬಗ್ಗೆ ಇತ್ತೀಚೆಗೆ ಅತೀವ ಆಸಕ್ತಿ ಕೆರಳಿತು. ದಿನಾ ಪೇಪರಿನಲ್ಲಿ ಆನ್ಲೈನ್ ಆಗಿ ಮಾಡುವಂತಹ ವಿತ್ತೀಯ ವ್ಯವಹಾರಗಳ ಗುಣಗಾನವನ್ನು ಓದಿ ಕುತೂಹಲಿಗಳಾದರು.

ಅಬ್ಬಬ್ಬಾ, ಪೇಟೆಗೆ ಹೋಗದೆಯೇ ಮನೆಯಲ್ಲಿಯೇ ಕೂತು ಕಂಪ್ಯೂಟರ್ ಮೂಲಕ ಬ್ಯಾಂಕ್ ವ್ಯವಹಾರ ನಡೆಸಬಹುದಂತೆ! ಗಂಟೆಗಟ್ಟಲೆ ಕುಳಿತು ಪೇಪರ್ ವಕರ್್ ಮಾಡಿ ಹನುಮಂತನ ಬಾಲದ ತುದಿಯಲ್ಲಿ ಬೆವರೊರಸಿಕೊಳ್ಳುತ್ತಾ ನಿಂತು ಕೌಂಟರ್ ಕಿಂಡಿಗಳಲ್ಲಿ ಮಾಡುವ ವ್ಯವಹಾರಗಳನ್ನು ಕ್ಷಣಾರ್ಧದಲ್ಲಿಯೇ ಮೌಸ್ ಕ್ಲಿಕ್ ಮಾಡಿ ಮನೆಯ ಆರಾಮದಲ್ಲಿಯೇ ಕುಳಿತು ಮಾಡಬಹುದಂತೆ! ಆ ಮಳೆರಾಯ ಹೇಳುವ ಸುಡುಗಾಡು ಶೇರು ನಾರುಗಳನ್ನೂ ಕೂಡಾ ಕಂಪ್ಯೂಟರ್ ಮೂಲಕ ಆನ್ಲೈನ್ ಟ್ರೇಡ್ ಮಾಡಬಹುದಂತೆ! ಆಮೇಲೆ, ಮ್ಯೂಚುವಲ್ ಫಂಡ್ಗಳನ್ನು ಬೈ ಮಾಡುವುದು, ಸೋದರಳಿಯನ ಇಂಕಂ ಟಾಕ್ಸ್ ರಿಟನ್ಸರ್್ ಫೈಲಿಂಗ್, ವಿದ್ಯುತ್, ಟೆಲಿಫೋನ್ಗಳ ಬಿಲ್ಲು ಬಾಣ ಕಟ್ಟುವುದು . . . . ಒಂದೇ? ಎರಡೇ? ರಾಯರಿಗೆ ಕುತೂಹಲ ತಡೆಯದಾಯಿತು. ಒಂದು ಬಾರಿಯಾದರೂ ಮಾಡಿ ನೋಡಿಯೇ ಬಿಡಬೇಕು ಎಂಬ ಆಸೆ ಹುಟ್ಟಿತು.

ಸಂಕಲ್ಪವೇನೋ ಮಾಡಿದ್ದಾಯಿತು. ಆದರೆ ಮನೆಯಲ್ಲಿಯೇ ಕುಲದೇವತೆಯಂತೆ ಸ್ಥಾಪಿತವಾದ ಕಂಪ್ಯೂಟರ್ದೇವರ ದರ್ಶನ ಭಾಗ್ಯ ಮಾತ್ರ ನೆನೆಸಿದಷ್ಟು ಸುಲಭವಾಗಿರಲಿಲ್ಲ. ಸಂಜೆಯ ಹೊತ್ತು ಮೊಮ್ಮಗ ಅದರಲ್ಲಿ ‘ರೊಯ್. . ರೊಯ್. . ಡಿಶುಂ. . ಡಿಶುಂ’ ಎಂದೆಲ್ಲ ಸದ್ದೇಳುವ ವೀಡೀಯೋ ಗೇಮ್ಸ್ ಆಡುತ್ತಾ ಕಾಲಹರಣ ಮಾಡುತ್ತಿರಬೇಕಾದರೆ, ರಾತ್ರಿ ಹೊತ್ತು ಮಗರಾಯ ‘ಇಂಟನರ್ೆಟ್ ನೋಡ್ತೇನೆ, ಇರು’ ಅಂತ ಏನೇನೋ ಸರ್ಚ್ ಮಾಡ್ತಾ ಇರ್ತಾನೆ. ಡೇ ಟೈಮಲ್ಲಿ ಕಂಪ್ಯೂಟರ್ ಸ್ವಲ್ಪ ಫ್ರೀ ಆಗಿ ಸಿಗುತ್ತಾದರೂ ಸೊಸೆಯಮ್ಮ ಮನೆಯಲ್ಲಿಯೇ ಇರುವ ಸಮಯಗಳಲ್ಲಿ ಅದನ್ನು ಮುಟ್ಟಲು ಏನೋ ಮುಜುಗರ.

ಅದೆಲ್ಲಾದರು ಅವಳೆದುರೇ ನನ್ನ ಕೈಯಲ್ಲಿ ಹಾಳಾದರೆ? ಗೊತ್ತಿಲ್ಲದ ಸಂಗತಿಗೆ ಕೈಹಾಕಿ ಕಿತಾಪತಿಗೆ ಸಿಕ್ಕಿಹಾಕಿಕೊಂಡು ಮರ್ಯಾದೆ ಕಳೆದುಕೊಳ್ಳುವುದಕ್ಕಿಂತ ಸುಮ್ಮನಿರುವುದೇ ವಾಸಿ. ಅವಳನ್ನೇ ‘ಕಂಪ್ಯೂಟರ್ ಆನ್ ಮಾಡಿ ಕೊಡಮ್ಮ’ ಅಂತ ಕೇಳೋಣ ಅಂದ್ರೆ, ‘ಅವಳಿಗ್ಯಾಕೆ ಅಷ್ಟು ಸೊಪ್ಪು ಹಾಕೋದು’ ಎಂಬ ಹಿಂಜರಿಕೆ. ಎಷ್ಟಾದರೂ ಸೊಸೆಯಲ್ವೇ? ಮಗಳಲ್ಲವಲ್ಲ?

ಹೀಗೇ ದಿನ ದೂಡುತ್ತಾ ಇರಬೇಕಾದರೆ ಒಂದು ದಿನ ಸೊಸೆಯಮ್ಮನಿಗೆ ಹೊರಗೆ ಪೇಟೆಯಲ್ಲಿ ಒಂದು ಮದುವೆಗೆ ಹೋಗುವ ಸಂದರ್ಭ ಬಂತು. ಮನೆಯಲ್ಲಿ ಬೇರಾರೂ ಇಲ್ಲದ ಸಮಯ. ಆನ್ ಲೈನ್ ವ್ಯವಹಾರದ ಬಗ್ಗೆ ರಿಸಚರ್್ ಮಾಡಲು ಪ್ರಶಸ್ತವಾದ ಕಾಲ. ಅಂತೆಯೇ ಕದ್ದು ಸಿಗರೇತ್ ಸೇದುವ ಹದಿಹರೆಯದ ಹುಡುಗನಂತೆ ರಾಯರು ಕಂಪ್ಯೂಟರ್ ಆನ್ ಮಾಡಲು ಹೋಗುತ್ತಾರೆ. . . . .

Guys,, ಹಿಯರ್ ವಿ ವಿಲ್ ಟೇಕ್ ಅ ಚೋಟಾ ಸಾ ಬ್ರೇಕ್. ಔರ್ ಬ್ರೇಕ್ ಕೇ ಬಾದ್ ಹಮ್ ಆಪ್ಕೋ ಬತಾಯೇಂಗೇ ಕಿ ಗುರುಗುಂಟಿ ಸಾಬ್ ಕೇ ಕಂಪ್ಯೂಟರ್ ರಿಸಚರ್್ ಕಾ ಕ್ಯಾ ಹೋತಾ ಹೈ. . . . . . . . ಕಹೀ ಜಾಯಿಯೇಗಾ ಮತ್!

*********

ಮಿಂಚಿನ ವೇಗದಲ್ಲಿ ನಡೆಯುವ ವಿದ್ಯುನ್ಮಾನ ತಾಂತ್ರಿಕತೆ ಜನ್ಮತಾಳಿದ ಮೇಲೆ ನಾವು ನೀವು ಕೆಲಸ ಮಾಡುವ ರೀತಿನೀತಿಗಳೇ ಬದಲಾಗಿದೆ. ಕಾಗದಗಳ ಬಳಕೆಯಿಲ್ಲದೆ ಡಿಜಿಟಲ್ ಮಾಧ್ಯಮದಲ್ಲಿ ಮಾಹಿತಿಗಳ ಸಂಗ್ರಹಣೆ ಮತ್ತು ಅವುಗಳ ಮಿಂಚಿನ ವೇಗದ ರವಾನೆ ಮನುಕುಲಕ್ಕೆ ಒಂದು ಕ್ರಾಂತಿಯನ್ನೇ ತಂದಿದೆ. ಆಮೆಗತಿಯಲ್ಲಿ ಸಾಗುತ್ತಿದ್ದ ಕೆಲಸಗಳೆಲ್ಲವೂ ಈಗ ಕಂಪ್ಯೂಟರ್ ಸಹಾಯದೊಂದಿಗೆ ಮಿಂಚಿನ ವೇಗದಲ್ಲಿ ನಡೆಯುತ್ತದೆ. ವಿತ್ತೀಯ ಜಗತ್ತಿನಲ್ಲೂ ಕೂಡಾ ಹಲವಾರು ಕ್ರಾಂತಿಕಾರಕ ಆನ್ಲೈನ್ ಚಟುವಟಿಕೆಗಳು ಆರಂಭಗೊಂಡಿವೆ.

ಆನ್ಲೈನ್ ಬ್ಯಾಂಕ್ ಎಕೌಂಟ್:

ಈಗ ಯಾವುದೇ ಬ್ಯಾಂಕಿನವರೂ ಬೇಡಿಕೆಯ ಮೇರೆಗೆ ನಿಮಗೆ ಕಂಪ್ಯೂಟರ್ ಎದುರು ಕುಳಿತು ಚಲಾಯಿಸಬಲ್ಲಂತಹ ಆನ್ಲೈನ್ ಅಕೌಂಟ್ ನೀಡುತ್ತಾರೆ. ನಿಮ್ಮ ಸಾದಾ ಎಸ್ಬಿ ಅಕೌಂಟಿಗೇ ಆನ್ಲೈನ್ ಲಾಗ್-ಇನ್ ಐಡಿ ಮತ್ತು ಪಾಸ್ವಡರ್್ ಪಡೆದುಕೊಂಡು ಇದನ್ನು ಚಲಾಯಿಸಬಹುದಾಗಿದೆ. ಈ ಮೂಲಕ ನಿಮ್ಮ ಖಾತೆಯಲ್ಲಿರುವ ಬ್ಯಾಲನ್ಸ್ ದುಡ್ಡಿನ ವಿವರಗಳು, ಪಾಸ್ಬುಕ್ ವಿವರಗಳನ್ನು ದಿನದ 24 ಘಂಟೆಯೂ ಪಡೆಯಬಹುದಾಗಿದೆ. ಬೇಕಾದಂತೆ ಎಫ್.ಡಿ ಮಾಡಬಹುದು. ನಿಮ್ಮ ಟೆಲಿಫೋನ್, ಇನ್ಶ್ಯೂರನ್ಸ್, ಕ್ರೆಡಿಟ್ ಕಾಡರ್್ ಬಿಲ್, ಇತ್ಯಾದಿ ಪಾವತಿಗಳನ್ನು ಈ ಮೂಲಕ ಮಾಡಬಹುದು.BSNL  ಬಿಲ್ ಪಾವತಿ ಈ ರೀತಿ ಮಾಡಿದರೆ ನಿಮಗೆ 1% ರಿಯಾಯಿತಿ ಕೂಡಾ ದೊರೆಯುತ್ತದೆ. ಅಷ್ಟೇ ಅಲ್ಲ, ಮನೆಯಲ್ಲಿಯೇ ಕುಳಿತು NEFT (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್) ಮಾಡಬಹುದಾಗಿದೆ.

ಈ ಸೌಲಭ್ಯದಡಿಯಲ್ಲಿ IFSC ವ್ಯವಸ್ಥೆಯೊಡನೆ ಬರುವ ದೇಶದ ಯಾವುದೇ ಮೂಲೆಯ ಅಕೌಂಟಿಗೆ ಬೇಕಾದರೂ ದುಡ್ಡು ಕಳುಹಿಸಬಹುದು. 1 ಲಕ್ಷದವರೆಗೂ ಕೇವಲ 6 ರೂಪಾಯಿಗಳ ಶುಲ್ಕದಲ್ಲಿ ನಡೆಯುವ ಈ ಸೌಲಭ್ಯ ಕಂಪ್ಯೂಟರ್ ಹಾಗೂ ಇಂಟನರ್ೆಟ್ ಉಳ್ಳವರು ಮನೆಯಲ್ಲಿಯೇ ಕುಳಿತು ಮಧ್ಯರಾತ್ರಿಯಲ್ಲೂ ಮಾಡಬಹುದು. ಇನ್ನೊಮ್ಮೆ ಔಟ್ ಸ್ಟೇಶನ್ ಚೆಕ್ ಪೋಸ್ಟ್ ಮಾಡುವ ಮುನ್ನ ಅಥವ ಡಿ.ಡಿ ತೆಗೆಯಲು ಬ್ಯಾಂಕಿಗೆ ಹೋಗುವ ಮುನ್ನ ಇನ್ನೊಮ್ಮೆ ಯೋಚಿಸಿ.

ಆನ್ಲೈನ್ ಶೇರ್ ಟ್ರೇಡಿಂಗ್:

ಆನ್ಲೈನ್ ಅವತಾರದ ಅತ್ಯಂತ ಪ್ರಸಿದ್ಧ ಅವತರಣಿಕೆಯೇ ಈ ಆನ್ಲೈನ್ ಶೇರು ಟ್ರೇಡಿಂಗ್. ಬ್ರೋಕರ್ಗಳಿಗೆ ಫೋನ್ ಮಾಡಿ ಕಾಯುವ ಪ್ರಮೇಯವೇ ಇಲ್ಲ. ಚೆಕ್ ಬರೆದು, ಡಿ-ಮ್ಯಾಟ್ ಫಾಮರ್್ ತುಂಬಿ ಕೊಂಡೊಯ್ಯುವ ಕೆಲಸವಿಲ್ಲ. ಒಂದು ಎಸ್ಬಿ-ಡಿಮ್ಯಾಟ್-ಟ್ರೇಡಿಂಗ್- ಈ ರೀತಿ ತ್ರಿ-ಇನ್-ವನ್ ಟ್ರೇಡಿಂಗ್ ಖಾತೆ ತೆರೆದರೆ ಎಲ್ಲವೂ ಸಸೂತ್ರ, ಸುಲಲಿತ. ನಿಮ್ಮ ಮನೆಯ ಕಂಪ್ಯೂಟರ್ ಸ್ಕ್ರೀನಿನಲ್ಲಿ ಲೈವ್ ಆಗಿ ಇಡೀ ಮಾರುಕಟ್ಟೆಯ ದರ್ಶನವಾಗುತ್ತದೆ. ಎರಿಳಿಯುತ್ತಿರುವ ಶೇರು ಬೆಲೆಗಳನ್ನು ನೋಡಿ ಆನಂದಿಸುವುದಲ್ಲದೆ ಬೇಕಾದಂತೆ ಕ್ಷಣ ಮಾತ್ರದಲ್ಲಿ ಕೊಡಕೊಳ್ಳಬಹುದು. ಅಲ್ಲದೆ ನಿಮಗೆ ಈ ಟ್ರೇಡಿಂಗ್ ಖಾತೆ ನೀಡಿದ ಬ್ರೋಕಿಂಗ್ ಮನೆಯವರು ಮಾರುಕಟ್ಟೆಯ ಬಗ್ಗೆ ಸಾಕಷ್ಟು ಸಂಶೋಧನಾತ್ಮಕ ಮಾಹಿತಿಗಳನ್ನೂ ಒದಗಿಸುತ್ತಾರೆ.

ಮ್ಯೂಚುವಲ್ ಫಂಡ್:

ಸೆಬಿಯಣ್ಣ ಮ್ಯೂಚುವಲ್ ಫಂಡುಗಳ ಮೇಲಿನ ಎಂಟ್ರಿ ಲೋಡ್ ನಿಮರ್ೂಲನೆ ಮಾಡುವ ಸಂದರ್ಭದಲ್ಲಿ ಏಜೆಂಟರು ನೇರವಾಗಿ ಹೂಡಿಕೆದಾರರಿಂದ ಕಮಿಶನ್ ಪಡೆದುಕೊಳ್ಳಬಹುದು ಎಂಬ ಪರಿಹಾರವನ್ನೂ ನೀಡಿದ್ದಾನೆ.

ಆದರೆ ಬಿಸಿನೆಸ್ ಗಿಟ್ಟಿಸುವುದೇ ಒಂದು ದುಸ್ತರವಾದ ಸಂದರ್ಭದಲ್ಲಿ ಅದರ ಮೇಲಿನಿಂದ ಕಮಿಶನ್ ಕೂಡಾ ಕೇಳಲು ಏಜೆಂಟರು ಹೊರಡುವುದಿಲ್ಲ. ಕೇಳಿದರೆ ಯಾರೂ ಕೊಡುವಿದಿಲ್ಲ ಎಂದೂ ಅವರಿಗೆ ಗೊತ್ತಿದೆ. ಆದರೆ ನಿಮಗೆ ಆನ್-ಲೈನ್ ಶೇರ್ ಟೇಡಿಂಗ್ ಅಕೌಂಟ್ ಕೊಟ್ಟ ಸಂಸ್ಥೆ ಆ ಅಕೌಂಟ್ ಮುಖಾಂತರ ಯಾವುದೇ ಮ್ಯೂಚುವಲ್ ಫಂಡ್ ಖರೀದಿ ಮಾಡಿದರೂ ಕೂಡಾ ಕಮಿಶನ್ ಅನ್ನು ನಿಮ್ಮ ಎಸ್ಬಿ ಖಾತೆಯಿಂದ ಡೆಬಿಟ್ ಮಾಡುತ್ತಾರೆ. ಆದ್ದರಿಂದ ಆನ್ಲೈನ್ನಲ್ಲಿ ಮ್ಯೂಚುವಲ್ ಫಂಡ್ ಖರೀದಿಸುವ ಇರಾದೆ ಉಳ್ಳವರು ನಿಮ್ಮ ಟ್ರೇಡಿಂಗ್ ಅಕೌಂಟ್ ಮುಖಾಂತರ ಯುನಿಟ್ಸ್ ಖರೀದಿಸದಿರಿ.

ಬದಲಿಗೆ, ನಿಮಗೆ ಬೇಕಾದ ಫಂಡ್ ಹೌಸಿನ ವೆಬ್ ಸೈಟಿಗೆ ನೇರವಾಗಿ ಲಾಗ್-ಇನ್ ಆಗಿ ಯಾವುದೇ ಕಮಿಶನ್ ಇಲ್ಲದೆ ಆನ್ ಲೈನ್ನಲ್ಲಿ ಯುನಿಟ್ಸ್ ಖರೀದಿಸಿ. ಅದೇ ದಿನದ ಎನ್.ಎ.ವಿ ಲಭ್ಯವಾಗಬೇಕಾದರೆ ದಿನದ ಮಧ್ಯಾನ್ನ 3 ಘಂಟೆಯವರೆಗೂ ಯುನಿಟ್ಸ್ ಖರೀಧಿಸುವ ಸೌಲಭ್ಯ ಆನ್ ಲೈನ್ ಚಟುವಟಿಕೆಯ ಮೂಲಕ ಸಾಧ್ಯವಾಗಿದೆ. ಈ ರೀತಿ ಮಾರುಕಟ್ಟೆಯ ಗತಿಯನ್ನು ಚೆನ್ನಾಗಿ ನೋಡಿಕೊಂಡು ನಿಧರ್ಾರ ತೆಗೆದುಕೊಳ್ಳುವ ಕಾಲಾವಕಾಶ ಆನ್ಲೈನ್ ಖರೀದಿಯಿಂದಾಗಿ ಸಾಧ್ಯವಾಗಿದೆ.

IPO  ಮತ್ತುASBA:

ಆನ್ ಲೈನ್ ವ್ಯವಹಾರದ ಇನ್ನೊಂದು ಮಹತ್ತರದ ಸೌಲಭ್ಯವೆಂದರೆ ಐ.ಪಿ.ಓ ಗಳ ಎಪ್ಲಿಕೇಶನ್ ಫಾಮರ್ಿಗೆ ಪರದಾಡಿ ಡಿ.ಡಿ ಗಾಗಿ ಕ್ಯೂನಲ್ಲಿ ಹೊಡೆದಾಡುವ ಬದಲು ಘರ್ ಮೆ ಬೈಠೇ ಬೈಠೇ ಎಪ್ಲೈ ಮಾಡಬಹುದು. ಕೇವಲ ಕೆಲವೇ ಕೆಲವು ಕ್ಲಿಕ್ಕುಗಳ ಮೂಲಕ ಎರಡೇ ನಿಮಿಶದಲ್ಲಿ ಮುಗಿಸಬಹುದಾದ ಈ ಸೌಲಭ್ಯಕ್ಕೆ ಇತ್ತೀಚೆಗೆASBA ಸೌಕರ್ಯವೂ ಸೇರಿಕೊಂಡಿದೆ. ಈ ಅಸ್ಬಾ ಎಂಬ ಹೊಸ ಪ್ರಾಣಿಯ ಪೂರ್ಣ ಹೆಸರುApplication supported by Blocked Amount. ಅಂದರೆ ಎಪ್ಲಿಕೇಶನ್ಗೆ ತಗಲುವ ಮೊತ್ತವನ್ನು ನಿಮ್ಮ ಅಕೌಂಟಿನಲ್ಲಿಯೇ ಬ್ಲಾಕ್ ಮಾಡಿಡುತ್ತಾರೆ. ನಿಮಗೆ ಶೇರು ಅಲಾಟ್ ಆದರೆ ಮಾತ್ರ ಆದಷ್ಟು ಮೊತ್ತವನ್ನು ಆಮೇಲೆ ಅದರಿಂದ ತೆಗೆಯಲಾಗುತ್ತದೆ. ಇದರಿಂದಾಗಿ ನಿಮ್ಮ ಹಣ ನಿಮ್ಮ ಖಾತೆಯಲ್ಲಿಯೇ ನಿಮಗಾಗಿಯೇ ಬಡ್ಡಿ ದುಡಿಯುತ್ತಾ ಇರುತ್ತದೆ. ಮೊದಲಿನಂತೆ ದುಡ್ಡು ತೆತ್ತು ಬಡ್ಡಿರಹಿತ ರಿಫಂಡಿಗಾಗಿ ಕಾಯುವ ಪ್ರಮೇಯವಿಲ್ಲ. ಅಸ್ಬಾ ಪದ್ಧತಿಯ ಉಪಯೋಗವನ್ನು ಮನೆಯಲ್ಲಿಯೇ ಕುಳಿತು ಪಡೆಯಿರಿ.

ಆನ್ಲೈನ್ ಇನ್ಷೂರನ್ಸ್:

ಹಲವಾರು ಯುಲಿಪ್, ಅರೋಗ್ಯ ವಿಮೆ ಮತ್ತು ಟಮರ್್ ಇನ್ಶೂರನ್ಸ್ ಪ್ಲಾನುಗಳು ಈಗೀಗ ಆನ್ಲೈನ್ ಲಭ್ಯ. ಇವುಗಳಿಗೆ ಕಮಿಶನ್ ರಿಯಾಯತಿ ದೊರಕುತ್ತಿದ್ದು ಖರೀದಿದಾರರಿಗೆ ಚೀಪ್ ಅನ್ಡ್ ಬೆಸ್ಟ್ ಆಗುತ್ತದೆ. ಜಾಲದಲ್ಲಿ ಜಾಲಾಡಿ ನೋಡಿ ಉತ್ತಮ ಪಾಲಿಸಿಗಳನ್ನು ಕೊಂಡುಕೊಳ್ಳಿ.

ಈ ರೀತಿ ಈ ಸರ್ವಂ ಸರ್ವರ್ಮಯಂ ಆದ ಈ ಆನ್ ಲೈನ್ ಜಗತ್ತಿನ ಮಹಿಮೆ ಅಪಾರ. ಇಲ್ಲಿ ಕೊಟ್ಟದ್ದಲ್ಲದೆ ಬೇರೆಷ್ಟೋ ಗುಣದೋಶಗಳು ಇದರಲ್ಲಿ ಇವೆ. ಒಂದೊಂದಾಗಿ ತಿಳಿದುಕೊಳ್ಳಿ.

ನಾನು ಅದೆಲ್ಲವನ್ನೂ ಇಲ್ಲಿ ಈಗ ಬರೆಯುತ್ತಾ ಕೂತರೆ ನಮ್ಮ ಗುರುಗುಂಟಿರಾಯರ ಕತೆಯ ಮುಂದುವರಿದ ಭಾಗವನ್ನು ನಿಮಗೆ ಯಾರು ಹೇಳುತ್ತಾರೆ?

ಅಟ್ಯಾಚ್ಮೆಂಟ್:

ಬ್ರೇಕ್ ಕೇ ಬಾದ್ ಸ್ವಾಗತ್ ಹೈ!

ಸೊಸೆಯಮ್ಮ ಮಣಭಾರದ ಪಟ್ಟೆಸೀರೆ ಧರಿಸಿ ಅದರ ಮೇಲಿಂದ ‘ಚಿನ್ನ ಉತ್ತಮ ಇನ್ವೆಸ್ಟ್ಮೆಂಟ್’ ಅಂತ ಗಂಡನನ್ನು ಪೀಡಿಸಿ ಖರೀದಿಸಿದ ಎರಡು ಮಣ ತೂಕದ ಆಭರಣಗಳನ್ನು ಹೇರಿಕೊಂಡು ಪ್ರದರ್ಶನಾಥರ್ಾಯ ಮದುವೆ ಮನೆಯಾಭಿಮುಖವಾಗಿ ಹೊರಟುಹೋದ ಮೇಲೆ ಗುರುಗುಂಟಿರಾಯರು ಮನೆಯ ಹಾಲ್ನಲ್ಲಿ ತಣ್ಣಗೆ ಕುಳಿತ ಕಂಪ್ಯೂಟರನ್ನು ತಮ್ಮ ಬೆದರುಕೈಗಳಿಂದಲೇ ಮೆಲ್ಲನೆ ಒಮ್ಮೆ ಮುಟ್ಟಿ ನೋಡಿದರು. ಅನಾಹುತವೇನೂ ಸಂಭವಿಸಲಿಲ್ಲ. ಸಿಡಿಯುವ ಲಕ್ಷಣವೂ ಕಾಣಿಸಲಿಲ್ಲ. ಹಾಗೇ ಅರೆಕ್ಷಣ ಅದನ್ನೇ ದಿಟ್ಟಿಸಿ ನೋಡಿ ಅವಲಕ್ಕಿ ಮಿಲ್ನಂತೆ ಕುಟ್ಟುವ ಗುಂಡಿಗೆಗೆ ಧೈರ್ಯ ತುಂಬುತ್ತಾ ಮನದಲ್ಲಿ ಹನುಮಂತನ ನಾಮ ಸ್ಮರಣೆ ಮಾಡುತ್ತಾ ಮೆಲ್ಲನೆ ಪವರ್ ಗುಂಡಿಯನ್ನು ಅದುಮಿದರು.

ರೊಯ್ಯನೆ ಹಿಂದಿನಿಂದ ಫ್ಯಾನ್ ಸ್ಟಾಟರ್್ ಆದ ಸದ್ದಿನೊಂದಿಗೆ ಕಂಪ್ಯೂಟರ್ ಜೀವಕ್ಕೆ ಬರುತ್ತಾ ಫಳ್ ಎಂದು ಮುಖ ತುಂಬಾ ನೀಲಿ ಪರದೆ ಹೇರಿಕೊಂಡು ಬೆಳಕು ಚೆಲ್ಲಿತು. ರಾಯರು ಏಕ್ದಂ ಖುಶ್ ಆದರು. ಪರಮವೀರ ಚಕ್ರ ಸಿಕ್ಕಿದಷ್ಟೇ ಸಂತಸವನ್ನು ಮುಖದಲ್ಲಿ ತುಂಬಿಕೊಂಡು ಪಕ್ಕದಲ್ಲಿದ್ದ ಚೇರ್ ಎಳೆದುಕೊಂಡು ಕಂಪ್ಯೂಟರ್ ಎದುರಿಗೆ ಕುಳಿತರು. ‘ಆಹಾ ನಾನೂ ಆನ್ಲೈನ್ ಮಾಡಬಲ್ಲೆ’ ಎಂದು ಬೀಗುತ್ತಿರುವ ಸಂದರ್ಭದಲ್ಲಿ ಎದುರಿಗೆ ಕಂಪ್ಯೂಟರ್ ತನ್ನ ಸ್ಕ್ರೀನಿನಲ್ಲಿ ಲಾಗ್-ಇನ್ ಪಾಸ್ ವಡರ್್ ಬೇಡುತ್ತಾ ಅಲ್ಲಿಗೇ ನಿಂತುಬಿಟ್ಟಿತು. ರಾಯರಿಗೆ ಈಗ ಏನು ಮಾಡಬೇಕೆಂದು ಗೊತ್ತಾಗಲಿಲ್ಲ.

ಅಲ್ಪ ಸ್ವಲ್ಪ ತಲೆಕೆರೆದುಕೊಂಡ ಬಳಿಕ ಈ ಪಾಸ್ವಡರ್್ ಜಾಗದಲ್ಲಿ ಏನೂ ಒಂದು ತುಂಬ ಬೇಕು ಎಂದು ಹೊಳೆಯಿತು. ಅಜರ್ಿ ಫಾಮರ್ಿನಲ್ಲಿ ಹೆಸರು ಕೇಳುತ್ತಿರಬಹುದು ಅಂತ ‘ಗುರುಗುಂಟಿರಾಯ’ ಅಂತ ಒಂದೊಂದೇ ಅಕ್ಷರಗಳನ್ನು ಕೀಬೋಡರ್ಿನಲ್ಲಿ ಟೈಪ್ ಮಾಡಿದರು. ‘ಪಾಸ್ವಡರ್್ ಇನ್ವಾಲಿಡ್, ಟ್ರೈ ಅಗೈನ್’ ಅಂತ ಬಂತು. ಓಹೋ ಮಗನ ಕಂಪ್ಯೂಟರ್ ಅಲ್ಲವೇ ಅಂತ ನಸುನಗುತ್ತಾ ಸೊಸೆಯ ಹೆಸರು ಹಾಕಿ ನೋಡಿದರು. ಸೊಸೆಯ ಹೆಸರಿಗೂ ಕಂಪ್ಯೂಟರ್ ಜಪ್ಪಯ್ಯ ಅನ್ನಲಿಲ್ಲ. ಆವಾಗ ಮಗನ ಹೆಸರು, ಬಳಿಕ ಮೊಮ್ಮಗನ ಹೆಸರು ಹಾಕಿ ನೋಡಿದರು. ಊಹೂಂ! ಯಾರ ಹೆದರಿಕೆಗೂ ಕಂಪ್ಯೂಟರ್ ಹಂದುವ ಲಕ್ಷಣ ಕಾಣಲಿಲ್ಲ.

ಈಗ ರಾಯರಿಗೆ ತಾಳ್ಮೆ ತಪ್ಪತೊಡಗಿತು. ಎರಡೆರಡು ಬಾರಿ ಕೀಬೋಡರ್್ ಕುಟ್ಟಿ ನೋಡಿದರು. ಏನೂ ಪ್ರಯೋಜನವಾಗಲಿಲ್ಲ. ಕೋಪದಲ್ಲಿ ಸ್ವಿಚ್ ಆಫ್ ಮಾಡಿ ಪುನಃ ಆನ್ ಮಾಡಿ ನೋಡಿದರು. ಕಂಪ್ಯೂಟರ್ ‘ಟೂಂ ಟೂಂ’ ಅನ್ನುತ್ತಾ ಕರ್ಕಶವಾಗಿ ಹೊಡೆದುಕೊಳ್ಳತೊಡಗಿತು. ರಾಯರಿಗೆ ನಿಧಾನವಾಗಿ ಬೆವರಲಾರಂಭವಾಯಿತು. ಏನು ಅನಾಹುತ ಕಾದಿದೆಯೋ ಎಂಬ ಗಾಬರಿಗೆ ಬಿದ್ದರು. ಕಂಪ್ಯೂಟರ್ ತನ್ನ ಸದ್ದು ನಿಲ್ಲಿಸಲಿಲ್ಲ. ರಾಯರು ಗಾಬರಿಯಲ್ಲಿ ಕಂಪ್ಯೂಟರಿನ ವಯರ್ ಹಿಡಿದು ಜಗ್ಗಾಡಿದರು. ಟಪ್ ಅಂತ ವಯರ್ ಕಿತ್ತು ರಾಯರ ಕೈಯಲ್ಲಿ ಬಂತು. ಪಕ್ಕದಲ್ಲಿ ತೆಪ್ಪಗೆ ಕುಳಿತಿದ್ದ ಮೌಸ್ ಇವರ ಕೈತಾಗಿ ಹಾರಿ ಬಂದು ತಲೆ ಮೇಲೆ ಕುಳಿತುಬಿಟ್ಟಿತು. ಅಚಾನಕ್ಕಾಗಿ ನಡೆದ ಈ ಪ್ರಳಯಾಂತಕ ವಿದ್ಯಮಾನಗಳಿಗೆ ಹೆದರಿ ಹರಿಣಿಯಾದ ರಾಯರು ಕುಳಿತಲ್ಲಿಂದಲೇ ತಿರುಗಿ ಕುಚರ್ಿಬಿಟ್ಟು ಎದ್ದೋಡಲು ರೆಡಿಯಾದ ದೃಶ್ಯವನ್ನು ನಾನು ಏನೆಂದು ಬಣ್ಣಿಸಲಿ?

ಅದನ್ನು ನೀವು ಗೆಳೆಯ ನಾಗಾನಾಥ್ ಅವರ ಕುಂಚದಿಂದಲೇ ನೋಡಿ ಸವಿಯಬೇಕು.

**************************

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: