‘ಕಿಂದರಿ ಜೋಗಿ’ ಎಂಬ ಒಳ್ಳೆಯ ಬ್ಲಾಗು

‘ಕಿಂದರಿಜೋಗಿ’ ಎನ್ನುವ ಒಂದು ಒಳ್ಳೆಯ, ಸದಭಿರುಚಿಯ ಬ್ಲಾಗ್ ಆರಂಭವಾಗಿದೆ. ನೀವೂ ಮಕ್ಕಳಾಗಬಹುದು ಎನ್ನುವ ಅವರ ನುಡಿಯೇ ಈ ಬ್ಲಾಗ್ ನಾಳೆಗೂ ಬೆಳೆದು ನಿಲ್ಲುವಂತಹದ್ದು ಎನ್ನುವುದನ್ನು ಸೂಚಿಸುತ್ತದೆ.

ಜಾಗತೀಕರಣದ ಬಿರುಗಾಳಿಯಲ್ಲಿ ನಮ್ಮೊಳಗಿನ ಮಗುವನ್ನು ಕಳೆದುಕೊಂಡಿರುವ, ನಮ್ಮೊಂದಿಗಿರುವ ಮಕ್ಕಳನ್ನೂ ನೋಡಲಾಗದ ಈ ಕಾಲದಲ್ಲಿ ಕಿಂದರಿ ಜೋಗಿ ಆ ಮಧುರ ಕಾಲಕ್ಕೆ ಕರೆದೊಯ್ಯಲು ಸಜ್ಜಾಗಿದೆ. ಕಿಂದರಿಜೋಗಿ ಬಗ್ಗೆ ಅವರೇ ಹೇಳಿಕೊಂಡ ಮಾತುಗಳು ಇಲ್ಲಿವೆ. ಕಿಂದರಿ ಜೋಗಿಯ ಸ್ಟೈಲ್ ಪರಿಚಯ ಮಾಡಿಕೊಡಲು ಇಲ್ಲಿ ಮೋಜಿನ ಗಣಿತವನ್ನೂ ಪ್ರಕಟಿಸಲಾಗಿದೆ.

ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ.

ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ?

ಮೋಜಿನ ಗಣಿತ

ಇವತ್ತಿನ ದಿನಾಂಕ ಏನು? ಇವತ್ತಿನ ವಾರ ಯಾವುದು? ಮುಂದಿನ ತಿಂಗಳಿನ ೧೭ನೇ‌ ತಾರೀಕು ಯಾವ ವಾರ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಗೊತ್ತಾಗಬೇಕು ಅಂದ್ರೆ ಕ್ಯಾಲೆಂಡರ್ ನೋಡ್ತೀವಿ. ಕ್ಯಾಲೆಂಡರ್ ಇಲ್ಲದೆ ಇರೋ‌ ಮನೆ ಹುಡುಕೋದು ಕಷ್ಟ. ಅದೇ ಕ್ಯಾಲೆಂಡರ್ ಇಟ್ಕೊಂಡು ನನಗೆ ಗಣಿತ ಕಬ್ಬಿಣದ ಕಡಲೆಯಲ್ಲ. ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸಲೀಸು ಅಂತ ಬೇರೆಯವರ ಮುಂದೆ ತೋರಿಸ್ಕೋಬೇಕಾ.. ಇಲ್ಲಿದೆ ನೋಡಿ ಎರಡು ಸುಲಭ ಸೂತ್ರಗಳು.

೧. ಕ್ಯಾಲೆಂಡರಿನಲ್ಲಿ ಯಾವುದೇ 3×3 ಚೌಕವನ್ನು ಆಯ್ಕೆ ಮಾಡಿಕೊಳ್ಳಿ.
ಆ ಚೌಕದಲ್ಲಿರುವ ಎಲ್ಲ 9 ಸಂಖ್ಯೆಗಳನ್ನು ಕೂಡಿದಾಗ ಬರುವ ಮೊತ್ತವು (ಚೌಕದ ಮಧ್ಯದ ಸಂಖ್ಯೆ)x 9 ಆಗಿರುತ್ತದೆ.
ಉದಾ:

ಮೇಲೆ ತೋರಿಸಿರುವಂತೆ ಚೌಕವನ್ನು ಆಯ್ಕೆ ಮಾಡಿದ್ದೆ ಆದರೆ
ಮಧ್ಯದ ಸಂಖ್ಯೆ 18
ಹಾಗಾಗಿ ಚೌಕದ ಒಳಗಿರುವ ಎಲ್ಲಾ ಸಂಖ್ಯೆಗಳ ಒಟ್ಟು ಮೊತ್ತ 18×9 = 162.
ಎಣಿಸೋಣ್ವಾ….
10+11+12+17+18+19+24+25+26=162

3 x 3 ಚೌಕದ ಬಗ್ಗೆ ಆಯ್ತು ಇದೇ 5 x 4 ರ ಚೌಕ ಆಯ್ಕೆ ಮಾಡಿದರೆ?

ಆಗ ಬರುವ ೨೦ ಸಂಖ್ಯೆಗಳ ಒಟ್ಟು ಮೊತ್ತ =((ಚೌಕದ ಅತಿ ಕಡಿಮೆ ಸಂಖ್ಯೆ) + ( ಚೌಕದ ಅತಿ ಹೆಚ್ಚಿನ ಸಂಖ್ಯೆ)) x 10
ಉದಾ:

ಮೇಲೆ ತೋರಿಸಿರುವಂತೆ ಚೌಕವನ್ನು ಆಯ್ಕೆ ಮಾಡಿದ್ದೆ ಆದರೆ
ಅತಿ ಕಡಿಮೆ ಸಂಖ್ಯೆ 3

ಅತಿ ಹೆಚ್ಚಿನ ಸಂಖ್ಯೆ 28

ಚೌಕದಲ್ಲಿನ ಸಂಖ್ಯೆಗಳ ಒಟ್ಟು ಮೊತ್ತ= (3+28)*10=310

ಗಣಿತ ಮೊದಲೇ ಕಷ್ಟ. ಅದರಲ್ಲೂ‌ ಗುಣಿಸುವುದು (multiplication) ಇನ್ನೂ‌ ಕಷ್ಟ. ಆದರೆ ಕೆಲವು ಸಂಖ್ಯೆಗಳು ಒಂದು ಮಾದರಿಯನ್ನನುಸರಿಸುತ್ತವೆ. ಅಂಥದ್ದೊಂದು ಇಲ್ಲಿದೆ.
1 x 1 = 1
11 x 11 = 121
111 x 111 = 12321
1111 x 1111 = 1234321
11111 x 11111 = 123454321
111111 x 111111 = 12345654321
1111111 x 1111111 = 1234567654321
11111111 x 11111111 = 123456787654321
111111111 x 111111111 = 12345678987654321

ಇದಕ್ಕೆ ಹೆಸರೂ‌ ಕೂಡ ಇದೆ ಗೊತ್ತಾ… ಏನಿರಬಹುದು ಹೇಳಿ? ನೋಡೋಕೆ ಹೇಗೆ ಕಾಣ್ತಿದೆ?

ತ್ರಿಕೋನದಂತೆ ಅಲ್ವಾ…. ಇದರ ಹೆಸರು ಪ್ಯಾಸ್ಕಲ್ ತ್ರಿಕೋನ

ಬರೆದವರು: ಇಂದು ಶ್ರೀ, ಬೆಂಗಳೂರು

4 ಟಿಪ್ಪಣಿಗಳು (+add yours?)

 1. ವಿಜಯ ಕುಮಾರ್
  ಡಿಸೆ 19, 2010 @ 09:55:04

  ಇದು ಬಹಳ ಒಳ್ಳೆಯ ಪ್ರಯತ್ನ. ಮಕ್ಕಳಿಗಾಗಿ ಇಂಟರ್ನೆಟ್ನಲ್ಲಿ ಬಹಳ ಒಳ್ಳೆ resource ಇದೆ. ಈ ತರಹದ ಒಂದು ಲಿಂಕ್ ಇಲ್ಲಿದೆ http://thehappyscientist.com

  ಉತ್ತರ

 2. ಆನಂದ ಕೋಡಿಂಬಳ
  ಡಿಸೆ 18, 2010 @ 23:52:16

  ಕಿಂದರಿ ಜೋಗಿ ತುಂಬ ಒಳ್ಳೆಯ ಪ್ರಯತ್ನ. ಸದಭಿರುಚಿಯನ್ನು ಮಕ್ಕಳಲ್ಲಿ ಇದು ಹೆಚ್ಚು ಹೆಚ್ಚು ಬೆಳೆಸಲಿ. ಅವಧಿಗೆ ಧನ್ಯವಾದಗಳು ಅಂತ ಹೇಳೋದು ಬರೆ ಔಪಚಾರಿಕವಾದೀತೇನೋ? ಅಂತೂ ಶುಭಾಶಯಗಳು.

  ಉತ್ತರ

 3. Dr. Azad
  ಡಿಸೆ 18, 2010 @ 13:29:16

  ಬಹಳ ಚನ್ನಾಗಿದೆ ಮತ್ತು ಮಾಹಿತಿಪೂರ್ಣ,,,
  This is very useful for the kids especially…..ನಿಮಗೆ ಶುಭಕೋರಿ ಕಿಂದರಿಯ ಇನ್ನೂ ಒಳ್ಲೆಯ ಪ್ರಯತ್ನಗಳೈಗೆ ಮತ್ತೂ ಒಳ್ಳೆಯ ಪರ್ತಿಕ್ರಿಯೆ ಸಿಗಲಿ ಎಂದು ಹಾರೈಸುತ್ತೇವೆ,

  ಉತ್ತರ

 4. savitri
  ಡಿಸೆ 18, 2010 @ 12:11:21

  Preethiya Avadhi,
  Kindarajogiyannu parichayisiddakke bahala dhanyavadagalu.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: