‘ ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ’

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಬರೆದ ‘ಮಡೆ ಸ್ನಾನ’ದ ಬಗೆಗಿನ ಲೇಖನ ಇಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ.

ಇದಕ್ಕೆ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ನೀವೂ ಭಾಗವಹಿಸಿ

ಪುರುಷೋತ್ತಮ ಬಿಳಿಮಲೆ, ನವದೆಹಲಿ

ಎಂಜಲು ಎಲೆಯ ಮೇಲೆ ಉರುಳುವ ದಯನೀಯ ಘಟನೆಯ ಬಗ್ಗೆ ಓದಿ ವಿಷಾದವಾಯಿತು. ನಾನು ಹುಟ್ಟಿದ ಊರು ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಪಂಜ ಎಂಬ ಹಳ್ಳಿ, ಓದಿದ್ದು ಸುಬ್ರಹ್ಮಣ್ಯದಲ್ಲಿ . ನಾನು ಚಿಕ್ಕವನಿದ್ದಾಗ ವಾಂತಿ ಮಾಡಿದೆ ಅಂತ ನನ್ನ ಅಮ್ಮ ಸುಬ್ರಹ್ಮಣ್ಯದಲ್ಲಿ .ಎಂಜಲು ಎಲೆಯ ಮೇಲೆ ಉರುಳುವ ಹರಕೆ ಹೇಳಿಕೊಂಡಿದ್ದರಂತೆ. ನಾನು ದೊಡ್ಡವನಾದಾಗ ಅಮ್ಮ ಅದನ್ನು ನೆನಪಿಸಿ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡೆಸೆದ ಎಂಜಲು ಎಳೆಯಲ್ಲಿ ಉರುಳಲು ಒತ್ತಾಯಿಸುತ್ತಿದ್ದರು. ನಾನು ಮೌನವಾಗಿ ಆದರೆ ದಿಟ್ಟವಾಗಿ ನಿರಾಕರಿಸಿದೆ. ನನ್ನ ಮೌನ ಮತ್ತು ಪ್ರತಿಭಟನೆ ಅಮ್ಮನ ಆತಂಕವನ್ನು ತೀವ್ರವಾಗಿ ಹೆಚ್ಚಿಸುತಿತ್ತು. ಕೊನೆಗೊಮ್ಮೆ ಅದು ತೀರ ಅತಿರೇಕಕ್ಕೆ ಹೋದಾಗ ನಾನು ಅಮ್ಮನಿಗೆ ‘ ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ’ ಎಂದೆ. ಅಮ್ಮ ಕೊನೆಗೂ ಮಗನನ್ನು ಆರಿಸಿಕೊಂಡರು. ಅಮ್ಮನ ಆಯ್ಕೆಯ ಮೂಲಕ ನಾನು ಬದುಕಿಕೊಂಡೆ.

ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಎಂಜಲು ಸೇವೆಯನ್ನು ಬಹಿಷ್ಕರಿಸಿ ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು

15 ಟಿಪ್ಪಣಿಗಳು (+add yours?)

 1. Poornapragna
  ಡಿಸೆ 16, 2010 @ 23:51:19

  ಹಿಂದು ಸಮಾಜದ ಉದ್ದಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಸ್ವಾಮಿಗಳು ಯಾಕೆ ತೆಪ್ಪಗೆ ಕೂತಿದ್ದಾರೆ? ಅವರಿಗೆ ಈ ರೀತಿಯ ಹೀನಾಯವಾದ ಪದ್ದತಿಗಳು ಇಷ್ಟವೇನೋ!!!

  ರುಕ್ಮಿಣಿ ಅವರು ಎಲೆಗಳ ಮೇಲೆ ಧಾರಾಳವಾಗಿ ಉರಳಾಡಲಿ. ಅದು ಅವರಿಗೆ ಬಿಟ್ಟದ್ದು. ಆದರೆ ಈ ಹೀನಾಯವಾದ ಪದ್ದತಿಯನ್ನು ದೇವರ ನೆಪ ಮಾಡಿ ಸಮರ್ಥಿಸಿಕೊಳ್ಳುವುದು ಅಷ್ಟೇ ಹೀನಾಯಕರವಾದದ್ದು ಯೆಂಬುದು ಅವರಿಗೆ ತಿಳಿದಿರಲಿ.

  ಉತ್ತರ

  • anand
   ಡಿಸೆ 17, 2010 @ 12:16:40

   ಹೀನಾಯ ಪದ್ಧತಿ ಅಂತ ನಿಮಗನಿಸಿದರೆ ನೀವು ದೂರ ಇದ್ದರೆ ಆಯಿತು. ಯಾರೂ ಬಲವಂತ ಮಾಡಿಲ್ಲ. ಬೇರೆಯವರು ಭಕ್ತಿ ನಂಬಿಕೆಯಿಂದ ಮಾಡುತ್ತಾರೆ. ನಮ್ಮ ‘ಸಮಾಜ ಉದ್ಧಾರಕರು’ ವಿರೋಧ ಮಾಡಲು ಹೋಗಿಯೇ ಕುಕ್ಕೆಯಲ್ಲಿ ಭಕ್ತರಿಂದ ಛೀಮಾರಿ ಹಾಕಿಸಿಕೊಂಡದ್ದು. ಎಲ್ಲರಿಗೂ ವಿವೇಚನೆ ಇದೆ. ಅದನ್ನು ವಿರೋಧಿಸಿ ಸ್ವಾಮಿಗಳು ಭಕ್ತರ ವಿರೋಧ ಕಟ್ಟಿಕೊಳ್ಳಬೇಕಾ? ಎಲ್ಲವನ್ನೂ ಸ್ವಾಮೀಜಿಗಳ ತಲೆಗೆ ಕಟ್ಟಲು ನೋಡುವುದು ಸರಿಯಲ್ಲ.

   ಉತ್ತರ

 2. RUKMINI S
  ಡಿಸೆ 16, 2010 @ 10:56:40

  namaste,

  I am very happy to read this article. I will very interest and confidence with
  my soul god Sri Kukke Subramanya. That is personal opinion of individual people. None of them to obligations to other people. You do this program otherwise you dont interfear other persons confidence. That is in between
  relationship of God to Bhatka.

  Rukmini
  Rashtrotthana Parishat

  ಉತ್ತರ

 3. ಉಷಾಕಟ್ಟೆಮನೆ
  ಡಿಸೆ 14, 2010 @ 14:20:22

  ಮರೆತದ್ದು; ಅಲ್ಲಿ ’ಮೂಲೆ ಮಡೆಸ್ನಾನ’ ವೆಂಬ ಇನ್ನೊಂದು ಪದ್ದತಿಯೂ ಇದೆ, ದೇವಸ್ಥಾನದ ಮೂಲೆ,ಮೂಲೆಗಳಲ್ಲಿ ಹೊರಳಾಡುವುದೇ ಮೂಲೆ ಮಡೆಸ್ನಾನ. ಇದು ಸ್ವಲ್ಪ ಅನುಕೂಲಕರ ಭಕ್ತಿ!

  ಉತ್ತರ

 4. ಉಷಾಕಟ್ಟೆಮನೆ
  ಡಿಸೆ 14, 2010 @ 14:02:26

  ದೇವಸ್ಥಾನದ ಒಳಗೆ ಬ್ರಾಹ್ಮಣರು ಉಂಡೆದ್ದ ಎಲೆಗಳ ಮೇಲೆ ಹರಕೆ ಹೊತ್ತ ಭಕ್ತರು ಉರುಳು ಸೇವೆ ನಡೆಸುವುದರ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ.
  ಅಲ್ಲಿ ’ಬೀದಿ ಮಡೆ ಸ್ನಾನ’ವೆಂಬ ಇನ್ನೊಂದು ಪದ್ದತಿ ಇದೆ.ಬ್ರಾಹ್ಮಿ ಮುಹೂರ್ತದಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದಲೇ ಬೀದಿಯಲ್ಲಿ ಉರುಳುತ್ತಾ ಎರಡು ಮೈಲ್ ದೂರದ ದೇವಸ್ಥಾನವನ್ನು ತಲುಪಬೇಕು. ಒರಟು ಬೀದಿಯಿಂದ ದೇಹಕ್ಕೆ ತರಚು ಗಾಯಗಳಾಗಿ, ತೊಟ್ಟ ಬಟ್ಟೆ ಅಸ್ತವ್ಯಸ್ತವಾದರೂ ಅವರ ಭಕ್ತಿಪರವಶತೆಯನ್ನು ನಾವು ಪ್ರಶ್ನಿಸುವಂತಿಲ್ಲ.
  ತುಳು ಭಾಷೆಯಲ್ಲಿ ’ಮಡೆ’ ಅಂದರೆ ಎಂಜಲು. ಅಲ್ಲಿ ದೇವಸ್ಥಾನದ ಒಳಗೆ ನಡೆಯುವುದು ಬ್ರಾಹ್ಮಣರ ಊಟದ ಉಚ್ಛಿಷ್ಟ’ಮಡೆ ಸ್ನಾನ’ ಬೀದಿಯಲ್ಲಿ ನಡೆಯುವುದು ಅದಕ್ಕಿಂತಲೂ ಕಷ್ಟಕರವಾದ ಸಾರ್ವಜನಿಕರ ಸರ್ವ ಉಚ್ಛಿಷ್ಟ ’ಬೀದಿ ಮಡೆಸ್ನಾನ’ .ಅದು ಒಂದೆರಡು ಘಂಟೆಗಳಲ್ಲಿ ನಡೆದು ಹೋಗುತ್ತದೆ.ಇದು ಬಿರುಬಿಸಿಲಿನಲ್ಲಿಯೂ ಮುಂದುವರೆಯುತ್ತದೆ.
  ಕುತೂಹಲದ ಸಂಗತಿಯೆಂದರೆ ನನಗೆ ತಿಳಿದಂತೆ ಈ ಮಡೆಸ್ನಾನವೆಂಬುದು ನಾಗರಾಧನೆಗೆ ಪ್ರಸಿದ್ಧವಾದ ತುಳುನಾಡಿನಲ್ಲಿ ಅದರಲ್ಲಿಯೂ ವಿಶೇಷವಾಗಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮಾತ್ರ ನಡೆಯುತ್ತಿದೆ. ಬಹುಶಃ ’ನಿನ್ನ ಹಾಗೆ ನಾನು ಕೂಡಾ ಹೊರಳಾಡುತ್ತಾ ನಿನ್ನ ಸನ್ನಿದಿಗೆ ಬರುತ್ತೇನೆ’ ಎಂಬುದೇ ಈ ಆಚರಣೆಯ ಮೂಲವಿರಬಹುದೇ? ನಾನು ವಿದ್ಯಾರ್ಥಿಯಾಗಿದ್ದಾಗ ಜಾತ್ರೆ ಸಮಯದಲ್ಲಿ ಇದನ್ನು ನೋಡುತ್ತಲೇ ಬಂದಿದ್ದೇನೆ.
  ದೇವಸ್ಥಾನದೊಳಗಿನ ಮಡೆಸ್ನಾನವನ್ನು ವಿರೋಧಿಸುವವರು ಬೀದಿ ಮಡೆಸ್ನಾನವನ್ನು ಯಾಕೇ ವಿರೋಧಿಸುವದಿಲ್ಲ? ಬದುಕಿಗೊಂದು ನಂಬಿಕೆ ಬೇಕು. ಆ ನಂಬಿಕೆಯೇ ದೇವರು.ಅದನ್ನು ಮೀರಲೆತ್ನಿಸುವ ಅಲ್ಪಸಂಖ್ಯಾತರು ಒಂದು ತುದಿಯಲ್ಲಿದ್ದರೆ ಬಹುಸಂಖ್ಯಾತರು ಇನ್ನೊಂದು ತುದಿಯಲ್ಲಿದ್ದಾರೆ. ಎಲ್ಲೋ ಒಂದು ಕಡೆ ಸಂದಿಸುತ್ತಾ ಮಾನವೀಯರಾಗಲು ಪ್ರಯತ್ನಿಸಬೇಕು. ’ಲಂಚ ಪಡೆಯುವುದು ಎಷ್ಟು ಅಪರಾಧವೋ ಲಂಚ ನೀಡುವುದು ಕೂಡ ಅಷ್ಟೇ ಅಪರಾಧ’! ಇದೆಲ್ಲಾ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಪಟ್ಟ ವಿಷಯವೇ ಹೊರತು ಒಂದು ಜಾತಿಯ ನಿಂದನೆಗೆ ಸಂಬಂಧಿಸಿದ್ದಲ್ಲ
  ಉಷಾಕಟ್ಟೆಮನೆ

  ಉತ್ತರ

 5. Ramachandra Deva
  ಡಿಸೆ 14, 2010 @ 10:51:44

  ಅಲ್ಲಿ ಉರುಳುವುದು ಬ್ರಾಹ್ಮಣರ ಎಂಜಲೆಲೆಗಳ ಮೇಲೆ ಮಾತ್ರವಾ ಅಥವಾ ಎಲ್ಲಾ ಜಾತಿಯವರು ಉಂಡ ಎಂಜಲೆಲೆಗಳ ಮೇಲಾ? ಉರುಳುವವರು ಬ್ರಾಹ್ಮಣೇತರರು ಮಾತ್ರವಾ ಅಥವಾ ಬ್ರಾಹ್ಮಣರೂ ಸೇರಿದಂತೆ ಎಲ್ಲಾ ಜಾತಿಯವರಾ?
  ರಾಮಚಂದ್ರ ದೇವ

  ಉತ್ತರ

 6. Santhosh Shetty
  ಡಿಸೆ 14, 2010 @ 10:03:44

  ಗಣೇಶ್ ರವರ ಅಭಿಪ್ರಾಯವು ಸರಿಯಾಗಿಯೇ ಇದೆ. ಆ ಆಚರಣೆಯಲ್ಲಿ ಭಾಗವಹಿಸುವವರಿಗೆ ತೊಂದರೆ ಇಲ್ಲ, ಇವರಿಗೇನು ತೊಂದರೆ ಎಂಬುದೇ ಅರ್ಥವಾಗುವುದಿಲ್ಲ.

  ಉತ್ತರ

  • Arun
   ಡಿಸೆ 15, 2010 @ 17:52:50

   ಹಾಗಾದರೆ ಸತಿ ಸಹಗಮನವನ್ನು ಏಕೆ ವಿರೋಧಿಸುವಿರಿ? ಪ್ರಾಣಿ ಬಲಿಯನ್ನು, ವಾಮಾಚಾರ ತಂತ್ರಗಳಿಗೆ ಮುಗ್ದ ಮಕ್ಕಳನ್ನು ಬಲಿಕೊಡುವದನ್ನು, ಬೆತ್ತಲೆ ಸೇವೆಯನ್ನು? .. .. ..

   ನೀವು ಆಚರಿಸುವ ಪದ್ಧತಿ ಎನೇ ಆಗಿರಬಹುದು, ನಿಮ್ಮ ಭಕ್ತಿಯನ್ನು ಯಾರೂ ಪ್ರಶ್ನೆ ಮಾಡುವ ಹಕ್ಕು ಇಲ್ಲದಿರಬಹುದು, ಆದರೆ ಒಟ್ಟು ಸಾಮಾಜಿಕ ನೆಲೆಯಲ್ಲಿ ಮತ್ತು ಇಂದಿನ ಕಾಲಯುಗದ ಈಗಿನ ಬಿಂದುವಿನಲ್ಲಿ ನಿಂತು ನೋಡಿದಾಗ ಅದರ ಪರಿಣಾಮಗಳೇನು ಎಂಬುದು ಮುಖ್ಯ ಅಲ್ಲವೇ?

   ಉತ್ತರ

   • Santhosh Shetty
    ಡಿಸೆ 16, 2010 @ 12:24:41

    ಅಲ್ರಿ ಅರುಣ್

    ಸತಿ ಪದ್ಧತಿ, ಪ್ರಾಣಿ ಬಲಿ, ವಾಮಾಚಾರಗಳಿಂದ ಜೀವಹಾನಿಯಾಗುತ್ತೆ, ಅದಕ್ಕೆ ಯಾರಾದರೂ ವಿರೋಧಿಸುತ್ತಾರೆ. ಎಂಜಲೆಲೆಯ ಮೇಲೆ ಹೊರಳಾಡುವುದು, ಪ್ರಾಣಿ ಬಲಿನೀಡುವುದು ಎರಡೂ ಒಂದೇನಾ? ಅಲ್ಲಿ ಹೊರಳಾಡುವುದರಿಂದ ಯಾರಾದ್ದಾದರೂ ಜೀವ ಹೋಗುತ್ತೆ ಅಂತಾದರೆ ಅವರೂ ಅದರ ಮೇಲೆ ಹೊರಳಾಡಲ್ಲ, ಅದನ್ನು ಯಾರೂ ಸಪೋಟ್ð ಮಾಡಲ್ಲ, ಎಲ್ಲಿಂದ ಎಲ್ಲಿಗೆ ಸಂಬಂಧ ಕಲ್ಪಿಸುತ್ತೀರಾ? ಅದು ಅತಾರ್ಕಿಕವಾಗಿ

    ಉತ್ತರ

 7. shashidharabharighat
  ಡಿಸೆ 13, 2010 @ 23:07:44

  endige namma janagalige buddi barabahudu?mowdyakke endu kone?samarthanege nooraaru daarigalannu hudukuttaare.mattashtu mooddhanambikegalannu huttuhaakuttaare.adoo hightech moodhanambikegalu.

  ಉತ್ತರ

 8. ಜಿ.ಎನ್.ಅಶೋಕವರ್ಧನ
  ಡಿಸೆ 13, 2010 @ 23:06:44

  ಸಮಾಜ ಎನ್ನುವುದು ಪ್ರಕೃತಿ ವಿಧಿಸಿದ ಕೂಟ ಅಲ್ಲ. ಆದರೆ ಇದು ಪ್ರಕೃತಿ ಅನುಸಾರಿಯಾಗಿರುವಷ್ಟೂ ಕಾಲ ಆರೋಗ್ಯಪೂರ್ಣವಾಗಿ ವೃದ್ಧಿಸುತ್ತದೆ, ಇಲ್ಲವೇ ನಾಶವಾಗಿ ಹೋಗುತ್ತದೆ. ಇಲ್ಲಿ ಪ್ರದರ್ಶನ ಮತ್ತು ಪ್ರಚಾರಕ್ಕೆ ಬರುವ ವೈಯಕ್ತಿಕ ನಂಬಿಕೆಗಳನ್ನು ಸಾಮಾಜಿಕ ಹಿನ್ನೆಲೆಯಲ್ಲಿ, ಹಾಗೇ ಸಾಮಾಜಿಕ ಆಚರಣೆಗಳನ್ನು ಪ್ರಾಕೃತಿಕ ಔಚಿತ್ಯದ ದೃಷ್ಟಿಯಲ್ಲಿ ಕನಿಷ್ಠ ವಿಚಾರವಂತರಾದರೂ ನೋಡಿ, ವಿಮರ್ಶಿಸುವುದು ಅವಶ್ಯ. ನಂಬಿಕೆಗಳ ಹೆಸರಿನ ನರಬಲಿ, ಪ್ರಾಣಿ ಹಿಂಸೆ, ಸತಿ, ಅಸ್ಪೃಶ್ಯತೆ ಇತ್ಯಾದಿಗಳನ್ನು ಸಮಾಜ ತಿರಸ್ಕರಿಸಿದ ರೀತಿಯಲ್ಲೇ ಮಡೆಸ್ನಾನವನ್ನೂ ಬಹಿಷ್ಕರಿಸಲೇಬೇಕು. ಆಷ್ಟಕ್ಕೂ ಬಿಳಿಮಲೆಯವರು ತಾನು ಯಾವುದೇ ಎಂಜಲಿನ ಮೇಲೆ ಹೊರಳಲಾರೆ ಎನ್ನುವುದನ್ನು ಸ್ಪಷ್ಟಪಡಿಸುವಲ್ಲಿ ಪ್ರಾಸಂಗಿಕವಾಗಿ ಬ್ರಾಹ್ಮಣರ ಎಂಜಲು ಎಂದಿದ್ದಾರೆಯೇ ಹೊರತು ಗಣೇಶರು ಭ್ರಮಿಸಿದ ಬ್ರಾಹ್ಮಣ ದ್ವೇಷದಿಂದ ಅಲ್ಲ. ಬಡತನ, ಕಷ್ಟ, ಮನೋವ್ಯಾಕುಲಗಳಿಗೆ ಹೊಲಸಿನ ಮೇಲೆ ಹೊರಳುವುದು ಮದ್ದಾಗದು, ಯಾವ ದೇವರಿಗೂ ಪ್ರೀತಿಯಾಗದು.
  ಅಶೋಕವರ್ಧನ

  ಉತ್ತರ

 9. ganesh
  ಡಿಸೆ 13, 2010 @ 16:35:55

  ನಮ್ಮ ಪ್ರಗತಿಪರರಿಗೆ ಬರೀ ಬ್ರಾಹ್ಮಣರೇ ಯಾಕೆ ಕಾಣುತ್ತಾರೆ ಅಂತ? ಬ್ರಾಹ್ಮಣರನ್ನು ಹೀಗಳೆಯುವುದು ಸುಲಭ ಅಂತವಾ ಅಥವಾ ಹೀಗಳೆದರೆ ಬ್ರಾಹ್ಮಣ ಸಮುದಾಯ ಯಾವುದೇ ಪ್ರತಿರೋಧ ತೋರುವುದಿಲ್ಲ ಅಂತವಾ? ಅಲ್ಲ ಸ್ವಾಮಿ, ಎದೆಯನ್ನು ಬ್ಲೇಡಿನಿಂದ ಕೊರೆದುಕೊಳ್ಳುವುದು, ಸಿಡಿ ಏರುವುದು, ನಾಲಿಗೆಯಲ್ಲಿ-ಗಲ್ಲದಲ್ಲಿ ಚಾಕು ಚೂರಿ ತೂರಿಸಿಕೊಳ್ಳುವುದು ಮಾನವ ಘನತೆಗೆ ಆಗುವ ಅವಮಾನವಲ್ಲವೆ? ಮಕ್ಕಳಾಗದವರ, ಮಗನ ಬುದ್ಧಿಭ್ರಮಣೆಯಾಗಿರುವ, ಮಗಳು ವಯಸ್ಸಿಗೆ ಬಂದರೂ ಮದುವೆಯಾಗದಿರುವವರ ಕಷ್ಟ ಪ್ರಗತಿಪರರಿಗೇನು ಗೊತ್ತು ಸ್ವಾಮಿ? ಕಷ್ಟದಲ್ಲಿರುವ ಮನುಷ್ಯ ಎಂಜಲೆಲೆಯ ಮೇಲೆ ಯಾಕೆ, ಹೇಸಿಗೆಯ ಮೇಲೆ ಬೇಕಾದರೂ ಉರುಳಾಡಿಯಾನು. ಬದುಕಲ್ಲಿ ನೋವುಂಡವರಿಗೆ, ನೋವು ಉಣ್ಣುತ್ತಿರುವವರಿಗೆ ಸಮಾಧಾನವಾಗುವ ಹಾಗಿದ್ದರೆ ಏನಾದರೂ ಮಾಡಿಕೊಳ್ಳಲಿ. ಉಳಿದವರು ಬಾಯಿ ಮುಚ್ಚಿಕೊಂಡಿರಲಿ. ಇನ್ನು ಮಡೆ ಸ್ನಾನ ವಿರೋಧಿಸುವವರು, ಮಡೆಸ್ನಾನದಲ್ಲಿ ಪಾಲ್ಗೊಂಡವರ ಕಷ್ಟಗಳನ್ನು ಪರಿಹರಿಸಿಕೊಟ್ಟರೆ, ಇದರ ವಿರುದ್ಧ ಮಾತನಾಡುವ ನೈತಿಕ ಹಕ್ಕು ಅವರಿಗಿದೆ.

  ಉತ್ತರ

 10. B. T. Jahnavi
  ಡಿಸೆ 13, 2010 @ 16:30:00

  ಭೇಷ್ ಮಾಡೀರ್ರೀ ಸರ್. ಅಲ್ಲಿ ಯಾರು ಯಾರನ್ನೂ ಹೊತ್ಗಂಡು ಹೋಗಿ ಉರುಳ್ಸಲ್ಲ ಅನ್ನದಂತು ಗ್ಯಾರಂಟಾತು.

  ಉತ್ತರ

 11. kanam
  ಡಿಸೆ 13, 2010 @ 16:09:40

  hai,
  naanu idannu kelidde,nodiralilla. tv moolaka noduva bhagya doretu puneetanaade. keliddu namma nantanobbaninda. aata mattu aatana maneyavarella tumbaa vidyaavantaru. yaake heege maaduttaare
  endu kelidaaga adu avaravara nambike endu heliddallade idarinda yaarigenu nashta endu muka sindarisikondu helidda. avara oorinalli brahmanara enjala eleya mele brahmanare urulaaduttaarante. vidyaavantanaada avana makkalu kooda uralaadiddannu hemmeyinda
  helikondidda. intavaru iruvaaga yaarige taane enu helalu sadhya? kaala idakkella uttara kodaballadu, khandita.
  kanam

  ಉತ್ತರ

  • ರುಕ್ಮಿಣಿ
   ಡಿಸೆ 16, 2010 @ 11:22:55

   ನನಗೆ ಮಡೆ ಸ್ನಾನದ ಬಗ್ಗೆ ಪ್ರತಿಕ್ರಿಯೆ ಓದಿ ಖುಷಿಯಾಯಿತು. ಭಕ್ತರು ತಮ್ಮ ಮನಗಳ ನೋವನ್ನು
   ದೇವರಲ್ಲಿ ಅಪರ್ಿಸಿ ಅಳಲನ್ನು ಹೋಗಲಾಡಿಸಿಕೊಳ್ಳುತ್ತಾರೆ. ಅದಕ್ಕೆ ಜಾತಿ ಮತಗಳ ಭೇದ ಏಕೆ
   ಬೇಕು. ನೋವುಗಳೇನು ಜಾತಿ ಮತಗಳನ್ನು ನೋಡಿಕೊಂಡು ಬರುತ್ತವಾ? ಅವರವರ ಮನಗಳ
   ನೋವನ್ನು ನಿವಾರಿಸಿಕೊಳ್ಳುವುದರಲ್ಲಿ ನಮ್ಮಗಳ ಅಲ್ಲಗಳೆಯುವ ಮಾತಿನ ಅಗತ್ಯವಿಲ್ಲ ಎಂದೆನಿಸುತ್ತದೆ.
   ಇದು ಅವರವರ ಮನಸ್ಸುಗಳ ನಂಬಿಕೆ. ಇದು ದೇವರು ಮತ್ತು ಭಕ್ತನ ನಡುವಿನ ಸಂಬಂಧ. ಇದಕ್ಕೆ
   ಬೇರೆಯವರು ಅಂದರೆ ಭಕ್ತರ ಕéಷ್ಟಗಳನ್ನು ನಿವಾರಿಸಲು ಸಾಡ್ಯವಾಗದಿದ್ದವರು ನಾವ್ಯಾಕೆ ಮಾತಾಡ ಬೇಕು

   ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: