ಕೂಗಳತೆಯ ವಿಸ್ಮಯಗಳ ದಾಟದೇ.

-ಅಶೋಕ್ ಶೆಟ್ಟರ್

ಶಾಲ್ಮಲಾ

 

ವಿಸ್ಮಯಗಳ ಲೋಕಕ್ಕೆ ಲಗ್ಗೆ ಇಟ್ಟ ಮಿಂಚು ಕಣ್ಣಲ್ಲಿ ಮಿನುಗಿಸಿ
ತಾರೆ ನೀಹಾರಿಕೆ ತೋರಿ ಅಂಗೈಯ್ಯಲ್ಲಿ, ಬ್ರಹ್ಮಾಂಡ ಹರಡಿ ಎದುರು ಹೇಳಿದಾ ಹೇಳಿದಾ
ಎಷ್ಟು ದೂರ ಗೊತ್ತೇ ಆ ಸೂರ್ಯ?
ನಮ್ಮ ತಲುಪಲವನ ಬೆಳಕು ಎಂಟು ನಿಮಿಷ ಬೇಕು
ಬೆಳಕು ಪ್ರವಹಿಸುವ ವೇಗವೆಂಥದು ಗೊತ್ತೇ?
ಕ್ಷಣವೊಂದಕೆ ಲಕ್ಷದೆoಬತ್ತಾರು ಸಾವಿರ ಮೈಲು…

ಒಣಹುಲ್ಲು ತಿನ್ನುತ್ತ ನಿಂತ ಎತ್ತಿನ ಮೈಯ್ಯ ಮೇಲೆಲ್ಲಾ ಬಾಸುಂಡೆ ಎಬ್ಬಿಸಿದ ಕೈಯ್ಯ
ನರಗಳಲಿ ನರಹೊಟ್ಟೆಗಳ ಹಸಿವ ಬೆಂಕಿ, ಕಾಣುತ್ತಿತ್ತು ಅಲ್ಲೇ, ಕೊಂಚ ದೂರ ಎದುರಿಗೇ
ಗೊತ್ತೇ? ಗೊತ್ತೇ? ಕೇಳುತಲಿದ್ದ ವಿ-
ಜ್ಞಾನದ ಗದಡಿ ಬಿಚ್ಚುತ್ತಲೇ ಹೋದ
ಗೊತ್ತೆಂದೆ, ಪ್ರಶ್ನಾರ್ಥಕ ನೋಟ ಎಸೆದ
ಊರ್ಧ್ವಗಮನಕ್ಕೆ ಕೊನೆಯಿಲ್ಲವೆಂತೋ ಅಂತೇ ಅಧ:
ಪತನಕ್ಕೂ ಕೊನೆಯಿಲ್ಲ, ಅದೇ ಭಯ
ಮಾತಾಡುತ್ತಿದ್ದೆವು ಎರಡು ಬೇರೆ ಭಾಷೆಗಳಲ್ಲಿ ನಾವು- ನಾನೂ ಅವನೂ

ವಿಸ್ಮಯಗಳ ಕುರಿತ ಕುತೂಹಲಕೆ ಬರವಿಲ್ಲ ಇಲ್ಲ ಬೇಸರವೆನಗೆ
ಇನ್ನು ಹಲ ತಾರೆಗಳು ಅತಿದೂರ ಬಲುಸಾಂದ್ರ
ಅವು ಬಿಟ್ಟ ಬೆಳಕೆಲ್ಲ ಮುಟ್ಟಿದೆಯೋ ಭುವಿಯನ್ನು? ಗೊತ್ತಿಲ್ಲ.
ಗೊತ್ತು, ಬಾ ವಿಸ್ಮಯಗಳ ಮಾತಿವೆ ಇಲ್ಲಿಯೂ, ನೋಡು
ರಸ್ತೆಯಾಚೆ
ತಿಂಗಳಬೆಳಕಂಥ ನೆಲ ಅಲ್ಲಿ ಕಂಬಸಾಲು ಆ ತಂತಿಗಳೊಳಗೆ ಹರಿವ ಬೆಳಕು
ಆರು ದಶಕ ಸಂದವು, ರಸ್ತೆಯೀಚೆ ಈ ಕೇರಿಯ ಕತ್ತಲೆಗಿನ್ನೂ ತಲುಪಿಲ್ಲ
ಇಂದೂ ಬೆಳಗಿಲ್ಲ.

ನೆಲದ ವಾಸ್ತವದ ಹಂಗಿರಲಿಲ್ಲ
ಬ್ರಹ್ಮಾಂಡ ರಹಸ್ಯ ಬಿಚ್ಚುತ್ತಿದ್ದವ ಹೇಳಿದ:
“ಎಲ್ಲರ ಮನೆಗಳ ದೋಸೆಯೂ ತೂತೇ”..
ಅದೂ ಸುಳ್ಳು ಮಿತ್ರ, ಕೇಳು ಪೂರ್ಣಸತ್ಯ ಇಲ್ಲಿದೆ, ಇಲ್ಲಿ
ಹೆಚ್ಚಿನ ಮನೆಗಳ ಹೆಂಚಿಗೇ ತೂತು
ವಿಸ್ಮಯಗಳ ಮಾತಾಡುತ್ತ ಹೋದರೆ ಕೊನೆಯಿಲ್ಲವಯ್ಯ, ವಿಸ್ಮಯಕ್ಕೇನು
ಸಾಲು ಹೊಜೈರಿ ಅಂಗಡಿಗಾಜುಗಳಲ್ಲಿ ನೇತ ಮೊಲೆ
ಇಲ್ಲದ ಮೊಲೆಕಟ್ಟುಗಳೂ ಉದ್ರೇಕಿಸುತ್ತವೆ, ವಿಷಾದಕ್ಕೆ
ನಾಗರಿಕತೆಯ ಹಿತ್ತಲಲ್ಲೆಷ್ಟೊಂದು ಕಸ
ಭೂಮಿಯ ಮೇಲೇ ಎಷ್ಟು ಕಪ್ಪುರಂಧ್ರಗಳು… …!

5 ಟಿಪ್ಪಣಿಗಳು (+add yours?)

 1. जोगि
  ಡಿಸೆ 08, 2010 @ 10:38:36

  ವಿಸ್ಮಯಕ್ಕೇನು
  ಸಾಲು ಹೊಜೈರಿ ಅಂಗಡಿಗಾಜುಗಳಲ್ಲಿ ನೇತ ಮೊಲೆ
  ಇಲ್ಲದ ಮೊಲೆಕಟ್ಟುಗಳೂ ಉದ್ರೇಕಿಸುತ್ತವೆ, ವಿಷಾದಕ್ಕೆ
  ನಾಗರಿಕತೆಯ ಹಿತ್ತಲಲ್ಲೆಷ್ಟೊಂದು ಕಸ
  ಭೂಮಿಯ ಮೇಲೇ ಎಷ್ಟು ಕಪ್ಪುರಂಧ್ರಗಳು… …!

  ಸರ್, ಬೆಚ್ಚಿಬೀಳಿಸಿದ ಸಾಲುಗಳು. ಎಷ್ಟೊಂದು ಭ್ರಮೆ, ಏನೆಂಥ ಅಪಭ್ರಂಶ, ಏನಿದು ಆತ್ಮವಂಚನೆ. ಎಷ್ಟು ದಿನವಾಗಿತ್ತು ಇಂಥ ಕವಿತೆ ಓದಿ.

  ಉತ್ತರ

 2. ashok shettar
  ಡಿಸೆ 08, 2010 @ 09:41:03

  ThanQ Anand and Sunita for the feedback. ( to sunita two thanks, one each for her response in mysore and north karnataka style!)

  ಉತ್ತರ

 3. sunithabetkerur
  ಡಿಸೆ 05, 2010 @ 19:14:20

  shettara sir,
  nimma pdhya bhala chalo adari.

  ಉತ್ತರ

 4. sunithabetkerur
  ಡಿಸೆ 05, 2010 @ 19:13:09

  shettaraavre
  nimma kavana thumba chennagide

  ಉತ್ತರ

 5. Anand
  ಡಿಸೆ 04, 2010 @ 17:25:01

  ಸುಂದರ ಅತೀ ಸುಂದರ ವಾಹ್

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: