ಇಂದಿನ ನಾಟಕ …

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ

ಅಭಿನಯ ತರಂಗ ಅಭಿನಯಿಸುವ

ಟೋಬಾ ಟೇಕ್ ಸಿಂಗ್

4-12-2010
ಸಮಯ : 6.30
ಮೂಲ : ಸಾದತ್ ಹಸನ್ ಮಂಟೋ

ಕನ್ನಡ ರೂಪ : ಜೆ. ಬಾಲಕೃಷ್ಣ

ನಿರ್ದೇಶನ  : ಚರಣ್ ಚನ್ನರಾಯ ಪಟ್ಟಣ

 

ಪಾತ್ರ ವರ್ಗ
ಮನು,
ಅರವಿಂದ್,
ದರ್ಶನ್ ಅಪೂರ್ವ,
ನಿರಂಜನ್,
ಕೃಷ್ಣಪ್ರಕಾಶ್,
ಕೃಷ್ಣ ರಾಜು,
ಅಶೋಕ್,
ಶಿವಶಂಕರ ನಾಯಕ್,
ಶಶಿಕುಮಾರ್,
ರವಿ ಕೆ.ಆರ್. ನಗರ,
ಬಾಲಮುರುಗ
ಪ್ರಿಯಾ ಕೆಸರೆ
ತಾಂತ್ರಿಕ ವರ್ಗ
ಸಂಗೀತ : ಅರುಣ್ ಸುಕುಮಾರ್. ಪ್ರಮಥ್ ಕಿರಣ್
ನಿರ್ದೇಶನ : ಸಿ.ಎಸ್. ಚರಣ್

ಕಥನ ನಾಟಕವನ್ನು ಕುರಿತು

ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯ ನಂತರದ ಸಂದರ್ಭದಿಂದ ಆರಂಭವಾಗುವ ಈ ಕಥೆಯು ಹುಚ್ಚರ ವಿನಿಮಯದ ವಿಷಯವನ್ನು ಕೇಂದ್ರವಾಗಿಸಿಕೊಂಡಿದೆ. ಲಾಹೋರ್ ನಲ್ಲಿನ ಹುಚ್ಚಾಸ್ಪತ್ರೆಗೆ ಹುಚ್ಚರ ವಿನಿಮಯದ ಸುದ್ದಿ ತಲುಪಿದಾಗ ಅಲ್ಲಿ ಇದು ಚರ್ಚೆಯ ವಿಷಯವಾಗಿ ಪರಿಣಮಿಸುತ್ತದೆ. ನಂತರ ಹುಚ್ಚರ ಸ್ಥಿತಿಯನ್ನು ಬಿಚ್ಚಿಡುತ್ತಾ ಮುಂದುವರೆಯುವ ಕಥೆಯು. ಕಥೆಯ ನಾಯಕ ಬಿಶನ್ ಸಿಂಗ್ ನ ತೊಳಲಾಟವನ್ನು ವ್ಯಕ್ತಪಡಿಸುತ್ತ ಅವನ ಸಾವಿನೊಂದಿಗೆ ಕೊನೆಗೊಳ್ಳುತ್ತದೆ. ಸಾದತ್ ಹಸನ್ ಮಾಂಟೊ ನ ಟೋಬಾ ಟೇಕ್ ಸಿಂಗ್ ಕತೆಯಲ್ಲಿನ ಭಾರತ ಪಾಕಿಸ್ತಾನ ವಿಭಜನೆಯ ಸನ್ನಿವೇಶದ ಪರಿಣಾಮವನ್ನೇ

ಕೇಂದ್ರವಾಗಿಟ್ಟುಕೊಂಡು, ವಿವೇಚನಾ ಶೂನ್ಯ ಅಸಂಭದ್ಧ ಸಮಕಾಲೀನ ಕ್ರಿಯೆ ಪ್ರಕ್ರಿಯೆ ಗಳನ್ನು ಹುಡುಕುವ ಒಂದು ಸಣ್ಣ

ಪ್ರಯತ್ನ ಈ ರಂಗ ಪ್ರಯೋಗ.

ತಂಡವನ್ನು ಕುರಿತು

ಕಳೆದ 30 ವರ್ಷಗಳಿಂದ ಒಂದು ವರ್ಷದ ಡಿಪ್ಲೊಮ ತರಗತಿಗಳನ್ನ ನಡೆಸುತ್ತಾ ಹೊಸ ಪ್ರತಿಭೆಗಳನ್ನು ನಾಟಕ ರಂಗಕ್ಕೆ ಕೊಡುತ್ತಾ ಬಂದಿರುವ ಅಭಿನಯ ತರಂಗದ ಈ ವರ್ಷದ ನಾಟಕಗಳು. ಕ.ವೆಂ. ರಾಜಗೋಪಾಲ್ ಅವರ ಕೊರಿಯೋಲೇನಸ್ ಮೂಲ: ಶೇಕ್ಸ್ಪಿಯರ್ ನಿ: ಪ್ರಕಾಶ್ ಬೆಳವಾಡಿ ಪ್ರಸನ್ನ ಅವರ ಮಹಿಮಾಪುರ ನಿ. ರಾಘು ಶಿವಮೊಗ್ಗ ಎ.ಎಸ್. ಮೂರ್ತಿ ಅವರ ಕಾಶಿ ಕಿಟ್ಟಿ ಕಂತೆ ಪುರಾಣ ಮೂಲ: ಸತ್ಯಜಿತ್ ರಾಯ್ ನಿ: ಜೋಸೆಫ್ ಈ ವರ್ಷದ ನಾಟಕ ಹಸನ್ ಮಾಂಟೊ ಅವರ ಕಥೆ ಟೋಬಾ ಟೇಕ್ ಸಿಂಗ್ ಅನು: ಜೆ. ಬಾಲಕೃಷ್ಣ ನಿ: ಸಿ.ಎಸ್. ಚರಣ್.

ನಿರ್ದೇಶಕರನ್ನು ಕುರಿತು

ಚರಣ್ ಸಿ.ಎಸ್.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಚರಣ್ ನೀನಾಸಂ ರಂಗ ಶಿಕ್ಷಣ ಕೇಂದ್ರ. ಎಸ್.ಜೆ.ಎಮ್. ನಾಟಕ- ಸಂಗೀತ ಶಾಲೆ ಚಿತ್ರದುರ್ಗ, ಆಟ್ಟಕಲರಿ ಸೆಂಟರ್ ಫಾರ್ ಮೂವ್ಮೆಂಟ್ಸ್ ಇವುಗಳಲ್ಲಿ ಡಿಪ್ಲೊಮ ಆರ್ಟಿಸ್ಟ್ಟ್ಸ ಜೂನಿಯರ್ ಮ್ಯೂಸಿಕ್, ಡಿಪ್ಲೊಮ ಇನ್ ಡ್ಯಾನ್ಸ್ ತರಬೇತಿಯನ್ನು ಮುಗಿಸಿದ್ದು, ಅಭಿನಯ, ಆಂಗಿಕ ಚಲನೆ, ಯೋಗ, ಸಮಕಾಲೀನ ನೃತ್ಯ, ಭರತ ನಾಟ್ಯ, ಕಲರಿಪಯಟ್ಟು ತಿಳಿದಿದ್ದು, ನೀನಾಸಂ ತಿರುಗಾಟ, ಲಂಡನ್ನಿನ ಡ್ರೀಮ್ ಕಂಪನಿ, ಜನಮ ದಾಟ, ಲೋಕಧರ್ಮಿ

ಮುಂತಾದ ತಂಡಗಳಲ್ಲಿ ನಟ, ತಂತ್ರಜ್ಞನಾಗಿ ರಾಷ್ಟ್ರೀಯ, ಅಂತರಾಷ್ಟ್ರೀಯ ನಾಟಕ, ನೃತ್ಯ, ನಿದರ್ೇಶಕರೊಂದಿಗೆ ಕೆಲಸ ನಿರ್ವಹಿಸುತ್ತ ಅನೇಕ ಕಾರ್ಯಾಗಾರದಲ್ಲಿ ಭಾಗವಹಿಸಿ, ಈಗ ನಟ, ನಿರ್ದೇಶಕ ನೃತ್ಯಗಾರ, ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: