ಸೂರಿ -13:ರಾಯರ ಮುಂದಿನ ಮಾತಿಗೂ ಕಾಯದೇ ಕಾರು ಮುಂದೆ ಉರುಳಿತು

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 13

ಅಂದಾನಿ ಬಸವರಾಜಪ್ಪ ದಾವಣಗೆರೆಯ ಅಸಂಖ್ಯಾತ ವಕೀಲರಲ್ಲಿ ಒಬ್ಬರು. ವಕೀಲಿ ವೃತ್ತಿ ಮಾಡಲೇ ಬೇಕೂಂತೇನಿಲ್ಲ. ವಂಶಪಾರಂಪರ್ಯವಾಗಿ ಬಂದಿರ ಕಬ್ಣಾ ಸಿಮೆಂಟು ಸ್ಟೀಲು ವ್ಯಾಪಾರ ನೋಡ್ಕೊಂಡ್ರೆ ಸಾಕು. ಆದರೆ ಪಾಲಿಟಿಕ್ಸ್‌ಗೆ ಹೆಲ್ಪಾಗ್ತತೋ ಅಂತ ಅವರ ಚಿಗಪ್ಪ ಹೇಳಿದ್ದಕ್ಕೆ ವಕೀಲಿ ಪರೀಕ್ಷೆ ಪಾಸು ಮಾಡಿದ್ದರು. (ಚಿಗಪ್ಪ ಹೇಳಿದ್ದೂ ಸರಿ. ಮೋಸ್ಟಾಫ್‌ದ ಪೊಲಿಟೀಶಿಯನ್ಸ್ ಎಲ್ಲಾ ವಕೀಲ್ರೇ.)
ಶಾಸ್ತ್ರಕ್ಕೆ ಕರೀ ಕೋಟು ಹಾಕಿ ಕೋರ್ಟಿಗೂ ಹೋಗಿ ಬಂದು ಮಾಡ್ತಾಯಿದಾರೆ. ಇವರ ಲಾ ಕಾಲೇಜು ಕ್ಲಾಸ್‌ಮೇಟು ಹಳೇಬೀಡು ಸುಂದರರಾಯರು ಗೇಟಿನಾಕಡೆಗೆ ಇವರಿಗಾಗಿ ಕಾಯುತ್ತಿರುವ ಈ ಕ್ಷಣದಲ್ಲಿ ಬಸವರಾಜಪ್ಪ ಬೆಸ್ಟಾಫ್ ಥರ್ಟೀನ್ನಲ್ಲಿ ಒಂದೈನೂರತ್ತತ್ರ ಕಳಕೊಂಡು, ಒಂದೆರಡು ಆರ‍್ಸೀ ಏರಿಸಿ ಲೈಟಾಗ್ತಾಯಿದ್ದರು. ಇನ್ನೊಂದರ್ಧ ಗಂಟೇಲಿ ಮತ್ತೆ ಒಂದೈವತ್ತು ಕಳಕೊಂಡು ’ಇವತ್ತಿಗೆ ಸಾಕು’ ಅಂತ ಎದ್ರು. ಅಂದಾನಿ ಬಸವರಾಜಪ್ಪ ಆಂಡ್ ಪಾರ್ಟಿ ಎದ್ರೂ ಅನ್ನೋ ಸುದ್ದಿ ಗೇಟು ತಲುಪಿ ಹಳೇಬೀಡು ಸುಂದರರಾಯರು ತಯಾರಾದ್ರು.
More

ದೆಹಲಿಯಲ್ಲಿ ಕರ್ನಾಟಕ ರಾಜ್ಯೋತ್ಸವ ‘ ಆಚರಣೆ …

ನವದೆಹಲಿಯಲ್ಲಿ ದೆಹಲಿ ಕರ್ನಾಟಕ ಸಂಘ ‘ಕರ್ನಾಟಕ ರಾಜ್ಯೋತ್ಸವ’ವನ್ನು ದಿನವನ್ನು ಆಚರಿಸಿತು .  ಕೆ. ರೆಹಮಾನ್ ಖಾನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಆ ಕಾರ್ಯಕ್ರಮದ  ಒಂದು ನೋಟ ಇಲ್ಲಿದೆ…

ಜಯಶ್ರೀ ಕಾಲಂ:ಎಸ್.ಪಿ.ಬಿ ಇಷ್ಟ ಆಗೋದು ಈ ಕಾರಣಕ್ಕೆ…

ಹಿರಿಯ ಗಾಯಕ ಎಸ್ ಪಿ ಬಾಲ ಸುಬ್ರಮಣ್ಯಮ್ ಅವರನ್ನು ಕಂಡ್ರೆ ತುಂಬಾ ಇಷ್ಟಾ ಆಗೋದು ಈ ಕಾರಣಕ್ಕೆ! ಬದುಕಲ್ಲಿ ಎಷ್ಟೆಲ್ಲಾ ಸಾಧಿಸಿದ್ದಾರೆ, ಆದರೂ ಅವರು ದಿನೇದಿನೇ ತಮ್ಮ ವ್ಯಕ್ತಿತ್ವನ್ನು ಬೆಳಸಿ ಕೊಳ್ತಾ ಇದ್ದಾರೆ ವಿನಃ ಅಹಂಕಾರದಿಂದ  ಮುರುಟಿ ಹಾಕ್ತಾ ಇಲ್ಲ. ಅಮ್ಮ, ಅಯ್ಯ, ಮಹಾನುಭಾವ :-) ಎನ್ನುತ್ತಾ ವೀಕ್ಷಕರಿಗೆ ಆಪ್ತರಾಗುತ್ತಲೇ ಬಂದಿದ್ದಾರೆ.

ಅವರಿಂದ  ಸಾಕಷ್ಟು ಕಲಿಯುವುದಿದೆ ಸೆಲಬಿಗಳು ಅನ್ನಿಸಿಕೊಂಡವರು !!
ಮೊದಲು ತಿಳಿಸಿದ ಇಬ್ಬರು  ಮಹನೀಯರಂತಹವರನ್ನು  ಸಾಕುವ ವಾಹಿನಿಗಳು ಆರಂಭದಲ್ಲೇ ಅವರ ಜುಟ್ಟು ಕೈಲಿ ಇಟ್ಟು ಕೊಂಡಿರಬೇಕು. ಇಲ್ಲದೆ ಹೋದ್ರೆ ನಾವೆ-ನಮ್ಮಿಂದಲೇ ಎನ್ನುವ ಹುಂಬತನ ಆರಂಭಿಸುತ್ತಾರೆ :-) .

ಪೂರ್ಣ ಓದಿಗೆ : ಮೀಡಿಯಾ ಮೈಂಡ್

Next Newer Entries

%d bloggers like this: