ಮದುವೆ ನಂತರದ ಮ್ಯೂಸಿಕ್….

-ಸೂತ್ರಧಾರ ರಾಮಯ್ಯ

ರಮಾದೇವಿ: ಸಂಗೀತ ಕಲಿತಿದ್ದೀಯಾ ತಾನೇ?
ಲಕ್ಷ್ಮೀದೇವಿ: ಕಲಿತಿದ್ದೇನೆ, ಆದರೆ ಇನ್ನೂ ಕಚೇರಿ ಕೊಟ್ಟಿಲ್ಲಾ. ಈ ತಬಲಾ, ಪಿಟೀಲು, ಮೃದಂಗ, ಮೊರ್ಚಿಂಗ್, ಘಟಗಳ
ಪಕ್ಕವಾದ್ಯ ಕೇಳಿದ್ರೆ ಒಂತರಾ ಅಲರ್ಜಿ! ಪರ್ಕಶನ್ ಅಂದ್ರೇ ಆಗಲ್ಲ ನನಗೆ.
ನರಸಿಂಹರಾಜು: ಆದ್ರೆ, ನಮ್ಮ ಮನೆಯಲ್ಲಂತೂ ಮದುವೆ ನಂತರದ ನಿನ್ನ ಸಂಗೀತ ಕಚೇರಿಗೆ ಪಕ್ಕಾವಾದ್ಯಗಳ ದಂಡಂತೂ ಇದೆ. ‘ಘಟಾ’ನುಘಾಟಿ ನಮ್ಮಮ್ಮ, ಮಾತು ಮಾತಿಗೂ ಗದರಿಸೋ ನಮ್ಮಪ್ಪನ ಮೃದಂಗ, ಕೀಟಲೆ ಚಾಡಿಗಳಲ್ಲಿ ಪಳಗಿದ ನನ್ನ ತಂಗಿಯರ ಮೋರ್ಚಿಂಗ್, ಜೊತೆಗೆ ಸ್ಟೇಟಸ್ ಸ್ಟೇಟಸ್ ಅಂತಾ ಜಂಬ ಹೊಡೆಯೋ ವಾರ್ ಗಿತ್ತಿ ,ಅರ್ಥಾತ್ ನಮ್ಮಣ್ಣನ ಹೆಂಡತಿಯ ಬ್ಯಾಂಗೋ, ಸಾಲದ್ದಕ್ಕೆ ಈ ನಿನ್ನ ಪ್ರಾಣ ಪ್ರಿಯನ ಶೃತಿ, ಮದುವೆಯ ನಂತರದ ರಿ-ಪರ್ಕಶನ್ನೇ ಬೇರೆ.

ಬೀಗರು – ಲಾಕರು

ನಮ್ಮ ಸಮಾಜದಲ್ಲಿ ಲೌವ್ ಮ್ಯಾ-ರೇಜ್ ಅಂದ್ರೇ ಟ್ರಬಲ್ಲು. ಹಾಗೇ ಮದುವೆಯಾದವರ ಬಾಳಲ್ಲಿ “ಪ್ಯಾರ್ ಕಿಯಾತೋ ಡರ್ ನಾ ಕ್ಯಾ” ಅನ್ನೋ ಮೊಗಲ್ ಎ ಅಜಾಮ್ ನ ಸೀನಂತು ಗ್ಯಾರಂಟಿ. ಇನ್ನು ಅರೇಂಜ್ಡ್ ಮ್ಯಾರೇಜ್ ಅಂದ್ರಂತೂ ಅರೇಂಜ್ಡ್ ಟ್ರಬಲ್ಲೆ?
ಮದುವೆಯೋ ಮನೆ ಹಾಳೋ ಅಂತಾ ಅ.ನ.ಕೃ ಹೇಳಿದ ಹಾಗೆ ವಿಪರೀತ ಟ್ರಬಲ್ summu! ವರದಕ್ಷಿಣೆ, ವರೋಪ್ ಚಾರ ಅಂತಾ
ಬೋಳಿಸಿಬಿಡ್ತಾರೆ ಹೆಣ್ಣಿನ ಮನೆ ಬೀಗ ಒಡೆಯೋ ಬೀಗ-ರು.

ಅನುರೂಪನಾದ ವರ?
ಶಿವರಾಮ್:
(ಮಗಳನ್ನು ತೋರಿಸುತ್ತ) ನೋಡಯ್ಯಾ ಅಲ್ಲಿ ಸ್ವಲ್ಪ ದಪ್ಪಗೆ ಕಾಣ್ತಾ ಇದ್ದಾಳಲ್ಲ, ಅವಳೇ ನನ್ನ ಮಗಳು. ಇಂಗ್ಲಿಷ್  ಎಮ್ಯೇ. ನಿಮ್ಮ ಪೈಕಿ ಯಾರಾದ್ರು ಗಂಡಿದ್ರೆ ಹುಡುಕಿಕೊಡಯ್ಯಾ.
ದ್ವಾರಕೀಶ್: ಓಹೋ, ಇಂಗ್ಲಿಷ್ ಎಮ್ಮ್ಯೇನೋ! ಆಯ್ತು. ಅನುರೂಪನಾದ ವರನನ್ನೇ  ಹುಡು-ಕೋಣ ಬಿಡು.

end ಗುಟುಕು :   ಅಪ್ಪು-ಒಪ್ಪು: ಅವರಿಬ್ಬರೂ ಅಪ್ಪಿಕೊಂಡಿದ್ದಾರೆ ಅಂದರೆ, ಪರಸ್ಪರ ಒಪ್ಪಿಕೊಂಡಿದ್ದಾರೆ ಅಂತಾ ತಾನೇ?
ಒನ್ ವೇ ಆದ್ರೆ ನೋವೇ:  ಹುಡ್ಗಾ ಹುಡ್ಗಿ ಉತ್ಕಟವಾಗಿ ಪ್ರೀತಿಸ್ದಾಗ ಒಲವೇ- ವಿಸ್ಮಯ!
ಇಬ್ಬರಲ್ಲಿ ಒಬ್ಬರು ಮಾತ್ರ ಪ್ರೀತಿಸ್ತಿದ್ದು, ಅಫೇರ್ ಒನ್ ವೇ ಆದ್ರೆ, ಒಲವೇ -ವಿಷಮಯ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: