ಹಂಗಾಮ ಕಾರ್ನರ್ ನಲ್ಲಿ ಹೌದೇನೆ ?

ಎದೆಯೆತ್ತರದ ವೇದವ್ಯಾಸ ಮಗನಲ್ಲವೇನೆ ?
-ಗಾನಾ ಜೋಯ್ಸ್
ಥಂಡಿ ತಣ್ಣನೆಯ – ಹಸಿವೇ ಇಲ್ಲದ ಮಲೆನಾಡು . ಶ್ರಾವಣದ ಜಿಟಿ ಪಿಟಿ . ಅಡಿಕೆ ತೋಟದ ನಡು ಮಧ್ಯದ ಮನೆಯಲ್ಲಿ ಭಾರೀ ಗೌಜು . ನಲವತ್ತೆರಡರ ಗಂಡು . ಇಪ್ಪತ್ತೈದರ  ಹೆಣ್ಣು . ಸಮಾಜ ಸುಧಾರಿಸಿದೆ ! ಮದುವೆಯಾದ ವಾರಕ್ಕೆ ವಿಧವೆಯಾದ ವಧುವಿಗೆ – ಹೆಂಡತಿ ಸತ್ತು ಐದು ವೈದಿಕ ಮುಗಿಸಿದ ವಿಧುರ ವರ .
ಮನೆ ತುಂಬಿತು . ಸೇರಕ್ಕಿ  – ಬೆಲ್ಲ ಒದ್ದು ಒಳನಡೆದಳು.
ದುರದೃಷ್ಟವೆಲ್ಲಾ ಬಾಗಿಲಾಚೆಗೆ ಉಳಿಯಿತೆಂದು ಸಂಭ್ರಮಿಸಿದಳು . ಅರೆ! ಮದುವೆಯಲ್ಲೆಲ್ಲು ಕಾಣದ ಇಪ್ಪತ್ತರ ಚುರುಕು ಚುರುಕು ತರುಣ! ಕವಡೆ ಯಾಡಲು ಹೊಸಾ ಸಾಥಿ !! ಅವನು ಅವಳ ಗಂಡನ ಮಗ. ಇದೀಗ ಅವಳಿಗೂ ..
ಹಳ್ಳಿಗೆ ಹಳ್ಳಿಯೇ ತುಂಬಿತ್ತು . ಅಲ್ಲಿ ಚಿಗರೆಗಣ್ಣಿನ ಚಿಗುರು ಮೀಸೆಯ ಮಗುವಿನ ಮುಖ ಬೊಗಸೆಯಲ್ಲಿ ಹಿಡಿದಳು . ಅವ ‘ಚಿಕ್ಕಮ್ಮಾ ‘ ಅಂತ ಕೊಸರಿದ . ತುಟಿ ಮೇಲೆ ಕೈಯಿಟ್ಟು ‘ಅಮ್ಮಾ’ ಅಂತಂದು , ಅನ್ನಿಸಿ , ಸುಖಿಸಿದಳು . ಹಳ್ಳಿ ಜನ ಹುಳ್ಳಗೆ ನಕ್ಕರು .
ತಂದೆಯಾಗಲಾರದವನ ಹೆಂದತಿಗೀಗ ಎದೆಯೆತ್ತರದ ಮಗ ! ಅಮ್ಮಾ ಅಮ್ಮಾ .. ಮನೆ ತುಂಬಾ ಕಲರವ . ಮಗ -ಮಗುವೇ ಆಗಿಬಿಟ್ಟ . ವಾತ್ಸಲ್ಯ ಭಾವಕ್ಕೆ ವಯಸ್ಸಿನ ಪಾಬಂದಿಯುಂಟೆ? ತಿನ್ನಿಸಿದಳು , ನಲಿಸಿದಳು, ಮುತ್ತಿಟ್ಟಳು . ಗೋಡೆ-ಕಂಬಗಳು ಮಾತಾಡ ತೊಡಗಿದವು . ಪಣತ -ಪತಾಸುಗಳು ‘ಉಶ್ -ಉಶ್ ‘ಅಂದವು .
ಜನ ಸುಧಾರಿಸಿಲ್ಲ ! ಕಾಮಾಲೆ ಕಣ್ಣಿಗೆ ಬೆಳಕು ಚುಚ್ಹ ತೊಡಗಿತು . ಕುರುಡರು ಆನೆ ತಡಕಿದಂತೆ- ಅನಿಸಿದ್ದೇ  ಆಡತೊಡಗಿದರು .
ತಂದೆ … ಅನುಮಾನಿಸಲಾರ ಮಗನನ್ನ . ಅವಮಾನಿಸಲಾರ ಹೆಂಡತಿಯನ್ನ . ಹಾದಿ – ಬೀದಿ ಮಂದಿಯ ಮಾತಿಗೆ ಮಮತೆ ನೊಂದಿತು . “ಮಗೂ… ವೇದವ್ಯಾಸ …” ಬಿಕ್ಕತೊಡಗಿದಳು ಸತ್ಯವತಿ .
ತಿಂಗಳಿಡಿ ಚೌಕಿ ಮನೆಯ ಮೂಲೆ ಮೂಲೆಯಲ್ಲೂ  ಕಣ್ಣ ಮುಚ್ಹಾಲೆ. ಅಮ್ಮನೆದುರು ಮಗನಿಲ್ಲ . ಮಗನೆದುರು ಅಮ್ಮನಿಲ್ಲ . ಕಾಲ – ಅವರಿಬ್ಬರಿಗೂ ಕಾಯಲಿಲ್ಲ .ಮಗ ಹೊರತು ನಿಂತ . ಓದಿನದ್ದೊಂದು ನೆವ .
ಜಲಪಾತವಾದಳು ಅಮ್ಮ . ನಿಟ್ಟುಸಿರಾದ ಅಪ್ಪ . ಕೊರಳುಬ್ಬಿ ಬಂದರೂ , ಅಳು ಡಬ್ಬಿ ಬಾಯ್ತುಂಬಾ ‘ಬರ್ತಿನಮ್ಮಾ’ ಅಂತಂದು ಹೊರಟೇ ಹೋದ ಮಗ .
ಗೆಳತೀ… ಯಾಕೆ ಇದೂ ಹೀಗೆ ? ಹೊಸದಾಗಿ ಹೊಸೆದುಕೊಳ್ಳುವ  ಸಂಬಂಧಗಳಿಗೆ ಬೆಲೆಯೇ? ಇಲ್ಲವೇನೆ ? ದಂಡ -ಕಮಂಡಲು , ಗಡ್ಡ -ಮೀಸೆಗಳ ಹೊತ್ತುಕೊಂಡೇ ಹುಟ್ಟಿದ ವೇದವ್ಯಾಸನಿಗೆ ತರುಣಿ ಸತ್ಯವತಿ ತಾಯಿಯಲ್ಲವೇನೆ ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: