ಸೂರಿ -8: ಯಂತ್ರದ ಶಬ್ದ ಜೋರಾಗಿತ್ತು …

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 8

ಹಳೇಬೀಡು ಸುಂದರರಾಯರು ಬಂದ ಗಳಿಗೆ ಚೆನ್ನಾಗಿರಲಿಲ್ಲವೋ ಏನೋ, ತುಕ್ಕೋಜಿ ಕೊಂಚ ವ್ಯಗ್ರನಾಗಿದ್ದಂತಿತ್ತು. ಅವನ ವ್ಯಗ್ರತೆಗೆ ಕಾರಣ ಇಷ್ಟೇ. ಮದುವೇ ಸೀಸನ್ನು. ಹರುದೋಗಂಗೆ ಕೆಲಸ ವಪ್ಗಂಡಾಗಿದೆ. ನಿನ್ನೆಯಿಂದ ಈ ಹಾಳು ಸರೋಜಂದು ವಂದೇ ರಾಗ.
ಅದ್ಯಾರೋ ಸಮ್ಮಂದಿಕರ ಮದುವೆಗೆ ಶಿಮೊಗ್ಗಾಗೆ ಒಂದೆರಡು ದಿಸ ಹೋಗಿ ಬರ‍್ತಳಂತೆ. ಯಿಲ್ಲೋ ಹಗಲೂ ರಾತ್ರಿ ಹೊಲೀತಾ ಕೂತರೂ ಮುಗಿಯಲ್ಲ ಅಶ್ಟಿದೆ ಕೆಲಸ. ಯೇನು ಯೀ ಕೆಲಸಾ ನಂಗೊಬ್ನಿಗೇಂತ ವಪ್ಗೆಂಡಿದ್ದಾ. ಯೀಗ ಇವಳು ಹೋದ್ರೆ ಕೆಲಸದ ಗತಿಯೇನಾಗಬೇಡ. ವಪ್ಗೆಂಡಿರಾ ಕೆಲಸಯೆಲ್ಲಾ ನನ್ನೊಬ್ಬನ್ ಕೈನಗೆ ಆಗ್ತತಾ. ಮತ್ತೆ ಆ ಮದುವೇಯೇನು ಹತ್ರದ ಸಮ್ಮಂದಾನಾ? ಅಣ್ಣ-ತಮ್ಮ-ತಂಗೀ ಮಕ್ಳದಾ? ಅದೂ ಅಲ್ಲ. ಅದ್ಯಾರೋ ದೂರದ ಸಮ್ಮಂದ.
ಹೋದ್ರೂ ಕಣ್ಣಿಗೆ ಬೀಳಲ್ಲ ಯಿವಳು, ಹೋಗದೇಯಿದ್ರೂ ಲೆಕ್ಕಕ್ಕೆ ಸಿಗಲ್ಲ. ನಿನ್ನೆಯಿಂದ ವಂದೇ ಸಮ ಮುಸಮುಸ ನಡ್ಸಿದಳೆ. ನಿನ್ನೆಯಿಂದ ಬೇಕೂಂತ ಯಲ್ಲಾ ಕೆಲಸದಗೂ ಯಡವಟ್ಟು ಮಾಡ್ತಿದಳೆ. ಅಂತೂ ಇಂತೂ ಯಲ್ಲಾ ವಂದು ದಾರಿಗೆ ಬಂತೂ ಅನ್ನವಾಗ ತನ್ನ ಹಳೇ ಬಾಲ ಬಿಚ್ಚಿದ್ಲು ಮುಂಡೆ. ಗಾಂಚಾಲಿ ಮುಂಡೆ. ಸಿಟ್ಟಿನಲ್ಲಿ ಒಂದೇ ಸಮನೆ ಯಂತ್ರದ ಪೆಡಲ್ಲನ್ನು ಭರ್ರೋ ಅಂತ ತುಳಿದ.
ಅದೇ ಹೊತ್ತಿಗೆ ಸರಿಯಾಗಿ ಹಳೇಬೀಡು ಸುಂದರರಾಯರು ತಮ್ಮ ಬರವನ್ನು ಸೂಚಿಸಲೋ ಎಂಬಂತೆ ಕೆಮ್ಮಿದರು. ಯಂತ್ರದ ಗಲಾಟೆಯಲ್ಲಿ ತುಕ್ಕೋಜಿಗೆ ಕೇಳಲಿಲ್ಲ. ಅಲ್ಲದೆ ಸದ್ಯ ತನ್ನ ಸಮಸ್ಯೆಯಲ್ಲದೇ ಇನ್ನಾವುದಕ್ಕೂ ತಲೆ ಹಾಕುವ, ಯೋಚಿಸುವ ಮನಸ್ಸೂ ಇರಲಿಲ್ಲ. ಹಳೇಬೀಡು ಸುಂದರರಾಯರು ತುಕ್ಕೋಜಿ ತಮ್ಮತ್ತ ನೋಡುವುದನ್ನೇ ಕಾದರು.
ತಾವು ಕೆಮ್ಮಿದ್ದು ಕೇಳಲಿಲ್ಲವೋ, ಅಥವಾ ತಾವು ಕೆಮ್ಮಿದ್ದನ್ನು ಕೇಳಿಯೂ ತಮ್ಮನ್ನು ಅಲಕ್ಷ ಮಾಡುತ್ತಿದ್ದಾನೋ ಅನಿಸಿ ಇನ್ನೂ ಒಂದಷ್ಟು ಹೊತ್ತು ಕಾದರು. ತುಕ್ಕೋಜಿ ಇತ್ತ ನೋಡಲಿಲ್ಲ. ಒಳಗೆ ಕಾಲಿಡುವುದೋ, ಹಾಗೇ ಹಿಂತಿರುಗುವುದೋ ಎಂದು ಹುಯ್ದಾಡುತ್ತಿರುವಾಗಲೇ ತುಕ್ಕೋಜಿ ಇತ್ತ ಕಣ್ಣು ಹೊರಳಿಸಿದ. ಥಟ್ಟಂತ ಹಳೇಬೀಡು ಸುಂದರರಾಯರು ಕಂಡೂ ಕಾಣದಂತಹ ಒಂದು ನಗೆಯನ್ನು ಉದುರಿಸಿದರು. ತುಕ್ಕೋಜಿ ಬಟ್ಟೆ ಹೊಲೆಯುವುದನ್ನು ನಿಲ್ಲಿಸಿ ಇವರತ್ತ ನೋಡಿದ. ಹಳೇಬೀಡು ಸುಂದರರಾಯರು ಕೈಲಿದ್ದ ಚೀಲವನ್ನು ಮುಂದು ಮಾಡಿಕೊಂಡು ಒಳಗಡಿಯಿಟ್ಟರು.
ತುಕ್ಕೋಜಿಯ ಹೊಲಿಗೆ ಯಂತ್ರದಿಂದ ಒಂದೆರಡು ಅಡಿ ದೂರ ನಿಂತು ’ವಕೀಲ್ ನಾಗರಾಜರಾವ್ ಆಫೀಸ್ ನಾಗ್ಬೂಶಣ ಕಳಿಸಿದ್ರು’ ಅಂದರು. ತುಕ್ಕೋಜಿ ಇವರನ್ನೇ ನೋಡಿದ. ಹಳೇಬೀಡು ಸುಂದರರಾಯರು ಕೈಲಿದ್ದ ಚೀಲವನ್ನು ಮುಂಚಾಚಿದರು.
ಮುಂದುವರೆಯುವುದು….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: