ಸವಿ ಸವಿ ನೆನಪು ಸಾವಿರದ ಐನೂರರ ನೆನಪು…

ಡಾ ನಾ ಸೋಮೇಶ್ವರ್ ನಡೆಸಿಕೊಡುವ ಕನ್ನಡದ ಅತ್ಯಂತ ಜನಪ್ರಿಯ ಷೋ ‘ಥಟ್ ಅಂತ ಹೇಳಿ’ ಈಗಾಗಲೇ ೧೫೦೦ ಎಪಿಸೋಡ್ ದಾಟಿ ಮುಂದೆ ಹೋಗಿದೆ. ರಘು ಐ ಡಿ ಹಳ್ಳಿ, ಎಚ್ ಎನ್ ಆರತಿ ನಿರ್ಮಿಸಿದ ದೂರದರ್ಶನದ ಈ ಕಾರ್ಯಕ್ರಮದ ಜನಪ್ರಿಯತೆ ಇನ್ನೂ ಕುಂದಿಲ್ಲ. ೧೫೦೦ ನೆ ಷೋ ಗೆ ಕೇಳಿದ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡಬೇಕು ಅನಿಸಿತು. ಇಲ್ಲಿದೆ ನೋಡಿ-

ಯಕ್ಷ ಪ್ರಶ್ನೆ

 

ಥಟ್ ಅಂತ ಹೇಳಿ – ೧೫೦೦ (೧)
೦೧ ‘ಫ್ರೆಂಚ್ ರೆವಲ್ಯೂಶನ್’ ಸಂದರ್ಭದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದ ರಾಜಕೀಯ ಸಂಘಟನೆಯ ಹೆಸರು ‘ಜಾಕೋಬಿನ್ ಕ್ಲಬ್’. ಯಾವ ಭಾರತೀಯ ಅರಸ ಇದರ ಸದಸ್ಯನಾಗಿದ್ದನು?
ಹೈದಾರಾಲಿ ಟಿಪ್ಪು ಸುಲ್ತಾನ್
ಶಿವಾಜಿ ಮಹಾರಾಜ್ ಮೊಹಮ್ಮದ್ ಕುಲಿ ಕುತುಬ್ ಷಾ
೦೨ ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಿ.
ಜೀ ಡಿ ಲ್ಲಿ ಗೈ ವ ಹಿ ಅಂ ಯ
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಕರವು ರಣದಲ್ಲಿ ಒಂದೂಗೂಡಿದಾಗ ಕರ್ನಾಟಕಹುಟ್ಟಿತು. 

೨. ಖೀರು ಮುಸಲ್ಮಾನ ಸನ್ಯಾಸಿಯಾದ

೩. ಒಂದರ ಹಿಂದೆ ಒಂದರಂತೆ…..

೦೪ ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ.
ಸುಧಾಕರ ಚತುರ್ವೇದಿ ಹೊ.ಶ್ರೀನಿವಾಸಯ್ಯ
ಎಸ್.ಕೆ.ಕರೀಂಖಾನ್ ರಾಮಚಂದ್ರ ಮುಕುಂದ ಪ್ರಭು
೦೫ ಈ ಅನುಭಾವಿ ಜುಲೈ ೩, ೧೮೧೯ರಲ್ಲಿ ಧಾರವಾಡದಲ್ಲಿ ಹುಟ್ಟಿದರು.
ಕುಂದಗೋಳದ ಹುಡುಗಿಯನ್ನು ಮದುವೆಯಾದ ಈ ಮಹಾನುಭಾವ ಕಾರಡಗಿಯಲ್ಲಿ ಶಾಲಾಮಾಸ್ತರನಾದನು.
ಇವರಿಗಿದ್ದ ಹೆಣ್ಣು ಮಗುವು ತೀರಿಕೊಂಡಿತು; ನಂತರ ಮಡದಿಯೂ ತೀರಿಕೊಂಡಳು
ಮಾರ್ಚ್ ೭, ೧೮೮೯ರಲ್ಲಿ ತೀರಿಕೊಂಡ ಈತನ ಅಂತ್ಯ ಸಂಸ್ಕಾರವನ್ನು ಹಿಂದು-ಮುಸ್ಲೀಮರಿಬ್ಬರೂ ಸೇರಿ ಮಾಡಿದರು.
ಥಟ್ ಅಂತ ಹೇಳಿ – ೧೫೦೦ (೨)
೦೧ ಒಲಿಂಪಿಕ್ ಪದಕಗಳಲ್ಲಿ ಕಂಡುಬರುವ ‘ವಿಜಯ ದೇವತೆ’ ಯ ಹೆಸರೇನು?
ಹೆರಾ ನೈಕ್
ಅಫ್ರೋದಿತೆ ಅಥೀನಾ
೦೨ ಈ ಕನ್ನಡ ಗಾದೆಯನ್ನು ಪೂರ್ಣಗೊಳಿಸಿ. 

ಬಿದ್ದ ಪೆಟ್ಟಿಗಿಂತ—————

ಎದ್ದ ನೋವು ಹೆಚ್ಚು ಅತ್ತ ನೋವು ಹೆಚ್ಚು
ಬೀಳದ ಪೆಟ್ಟು ಹೆಚ್ಚು ನಕ್ಕ ಪೆಟ್ಟು ಹೆಚ್ಚು
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಊರಿನ ಒಳಿತಿಗೆ ಬಲಿಯಾದ ಭಾಗೀರಥಿಯ ಕಥೆ 

೨. ಮೊರೆಯಿಡುವ ಸಮುದ್ರ

೩. ಕುದುರೆ ಸಂಚಾರ

೦೪ ಈ ದೇವಾಲಯವನ್ನು ಗುರುತಿಸಿ.
ಸೋಮೇಶ್ವರ ದೇವಾಲಯ, ಕೋಲಾರ ಯೋಗಾ ನರಸಿಂಹಸ್ವಾಮಿ ದೇವಾಲಯ, ತುಮಕೂರು
ಭೋಗಾ ನಂದೀಶ್ವರ ದೇವಾಲಯ, ಚಿಕ್ಕಬಳ್ಳಾಪುರ ಮಹಾಲಕ್ಷ್ಮೀ ದೇವಸ್ಥಾನ, ಗೊರವನಹಳ್ಳಿ, ತುಮಕೂರು
೦೫ ಭಾರತೀಯ ಸಂಭಾರ ಪದಾರ್ಥವಾದ ಈ ಮೂಲಿಕೆಯು ಕ್ಯಾನ್ಸರ್ ನಿಗ್ರಾಹಕ ಹಾಗೂ ಅಲ್ಜೈಮರ್ ರೋಗವನ್ನು ತಡೆಗಟ್ಟಬಲ್ಲುದು.
ನೆಲಕಾಂಡವನ್ನು ಹೊರತೆಗೆದು, ಬೇಯಿಸಿ, ಬಿಸಿ ಒಲೆಯಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಬಳಸುವರು.
ಈ ಗಿಡದ ನೆಲಕಾಂಡವನ್ನು ಆಹಾರ, ಔಷಧ, ಸೌಂದರ್ಯವರ್ಧಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಬಳಸುವರು.
ಈ ಗಿಡದ ಸತ್ವದ ಏಕಸ್ವಾಮ್ಯವನ್ನು ಪಡೆಯಲು ಅಮೆರಿಕವು ಯತ್ನಿಸಿದ್ದು ಒಮ್ದು ಜಾಗತಿಕ ಸುದ್ಧಿಯಾಯಿತು.
ಥಟ್ ಅಂತ ಹೇಳಿ – ೧೫೦೦ (೩)
೦೧ `ಬಂದರ್ ಸೆರಿ ಬೆಗವಾನ್’ ಯಾವ ಏಶಿಯನ್ ದೇಶದ ರಾಜಧಾನಿಯಾಗಿದೆ?
ಲಾವೋಸ್ ಸಲ್ತನೇಟ್ ಆಫ್ ಬ್ರೂನಿ
ಟೈವಾನ್ ವಿಯಟ್ನಾಮ್
೦೨ ‘ಲತಾಗೃಹ’ ಎಂಬ ನುಡಿಗಟ್ಟಿನ ಅರ್ಥವನ್ನು ಕೊಡುವ ‘ಕ’ ಅಕ್ಷರದಿಂದ ಆರಂಭವಾಗುವ ಮತ್ತೊಂದು ಕನ್ನಡ ಪದವನ್ನು ನೀಡಿ.
ಕುಂಜ ಕುಂಟ
ಕುಂಗ ಕುಂಟೆ
ಕುಂಟ=ಹೆಳವ’ ಕುಂಗ=ಮೀನುಗಾರ; ಕುಂಟೆ=ಹಳ್ಳದಲ್ಲಿ ನಿಂತ ನೀರು
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ವಿಜಯನಗರ ರಾಜಧಾನಿಯಲ್ಲಿ ನಡೆಯುವ ಹಬ್ಬ
೨. ಗಣಪನಿಗೆ ಪ್ರಿಯವಾದ ಬೇಲದ ಹಣ್ಣು
೩. ಅದಕ್ಕೆ ಸಮನಾದದ್ದು
೦೪ ಕರ್ನಾಟಕದ ಈ ಐತಿಹಾಸಿಕ ಕಟ್ಟಡವನ್ನು ಗುರುತಿಸಿ.
ರಂಗೀನ್ ಮಹಲ್, ಬಿದರೆ ಗಗನ ಮಹಲ್, ಬೀಜಾಪುರ
ಕಮಲ ಮಹಲ್, ಹಂಪಿ ಅಸರ್ ಮಹಲ್, ಬೀಜಾಪುರೆ
೦೫ ಇವರು ಪಂಜಾಬ್ ವಿವಿ, ಕೇಂಬ್ರಿಡ್ಜ್ ವಿವಿ ಹಾಗೂ ಆಕ್ಸ್‌ಫರ್ಡ್ ವಿವಿಯಲ್ಲಿ ಅಧ್ಯಯನ ಮಾಡಿ ಜವಾಹರ್ ನೆಹರು ವಿವಿ ದಲ್ಲಿ ಗೌರವ ಪ್ರಾಚಾರ್ಯರು.
‘ಭಾರತ ರಫ್ತು ನಿರ್ವಹಣೆ: ೧೯೫೧-೧೯೬೦: ರಫ್ತು ಸಂಭಾವ್ಯತೆ ಮತ್ತು ಸೂಚನೆಗಳು’ – ಇದು ಅವರ ಪಿ.ಎಚ್.ಡಿ ವಿಷಯವಾಗಿತ್ತು.
ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್, ಯೋಜನಾ ಇಲಾಖೆಯ ಉಪಾಧ್ಯಕ್ಷರಾಗಿ ಹಾಗೂ ಅರ್ಥಮಂತ್ರಿಯಾಗಿ ಕೆಲಸ ಮಾಡಿರುವರು.
ಇವರು ಭಾರತ ದೇಶದ ೧೪ನೆಯ ಪ್ರಧಾನ ಮಂತ್ರಿ.
ಥಟ್ ಅಂತ ಹೇಳಿ – ೧೫೦೦ (೪)
೦೧ ಮೊದಲ ಪ್ರಾಯೋಗಿಕ ಪರಮಾಣು ಬಾಂಬ್ ಸಿಡಿತವನ್ನು ನೋಡಿ ‘ದಿವಿ ಸೂರ್ಯ ಸಹಸ್ರ’ ಎಂದು ಉದ್ಗರಿಸಿದ ವಿಜ್ಞಾನಿ ಯಾರು?
ಆಲ್ಬರ್ಟ್ ಐನ್ ಸ್ಟೀನ್ ರಾಬರ್ಟ್ ಓಪನ್ ಹೀಮರ್
ಎನ್ರಿಕೋ ಫರ್ಮಿ ಅರ್ನ್ಸ್ಟ್ ರುದರ್ಫೋರ್ಡ್
೦೨ ಈ ಲೆಕ್ಕವನ್ನು ಪೂರ್ಣಗೊಳಿಸಿ
೧೮ ೧೬ ೧೦ ೧೬ = ೦೪
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಸಿಹಿಯಾದ ಹುಲ್ಲಿನ ರಸ
೨. ಕಬ್ಬನ್ನು ತಿನ್ನುತ್ತ ಕವನವನ್ನು ರಚಿಸುವವನು
೩. ಹಾರದಲ್ಲಿ ಹೊಡೆತ
೦೪ ಕರ್ನಾಟಕದ ಈ ಐತಿಹಾಸಿಕ ಕಟ್ಟಡವನ್ನು ಗುರುತಿಸಿ.
ಗಿರೀಶ್ ಕಾಸರವಳ್ಳಿ ಗಿರೀಶ್ ಕಾರ್ನಾಡ್
ಚಂದ್ರಶೇಖರ ಕಂಬಾರ ನಾಗಾಭರಣ
ನಾಯಿನೆರಳು
೦೫ ಜಗತ್ತಿನ ಬಹುಪಾಲು ದೇಶಗಳಲ್ಲಿ ಕಂಡುಬರುವ ಈ ಹಕ್ಕಿ, ಸಂಖ್ಯಾ ದೃಷ್ಟಿಯಿಂದ ಪ್ರಥಮ ಸ್ಥಾನವನ್ನು ಪಡೆದಿದೆ.
ಈ ಹಕ್ಕಿಯನ್ನು ಭಾರತೀಯರು ಮೊದಲು ಸಾಕಿದರು ಎನ್ನುವ ಮಾತಿದೆ.
ಭಾರತದಲ್ಲಿ ಸಾಮಾನ್ಯವಾಗಿ ಈ ಪಕ್ಷಿಯನ್ನು ಬಲಿ ನೀಡಲು ಬಳಸುವರು.
ಪಕ್ಷಿ ಹಾಗೂ ಅದರ ಮೊಟ್ಟೆಯನ್ನು ನಿತ್ಯ ಆಹಾರಕ್ಕೆ ಬಳಸುವರು.
ಥಟ್ ಅಂತ ಹೇಳಿ – ೧೫೦೦ (೫)
೦೧ ಎಲ್.ಪಿ.ಜಿ (ಲಿಕ್ವಿಫೈಡ್ ಪೆಟೋಲಿಯಮ್ ಗ್ಯಾಸ್) ಯಲ್ಲಿರುವ ಎರಡು ಪ್ರಧಾನ ಅನಿಲಗಳು ಯಾವವು?
ಬ್ಯುಟೇನ್-ಮೀಥೈಲ್ ಮೆರ್ಕ್ಯಾಪ್ಟನ್ ಬ್ಯುಟೇನ್-ಪ್ರೊಪೇನ್
ಈಥೇನ್-ಮೀಥೇನ್ ಅಸಿಟಲಿನ್-ಆಕ್ಸಿಜನ್
ಮೀಥೈಲ್ ಮೆರ್ಕ್ಯಾಪ್ಟನ್-ವಾಸನೆಗೆ;
೦೨ ಈ ಕನ್ನಡ ಒಗಟನ್ನು ಬಿಡಿಸಿ. 

ಆಡೆಂದರಾಡುವುದು| ಮಾಡವನೇರುವುದು

ಕೂಡದೆ ಕೊಂಕಿ ನಡೆಯುವುದು|

ಕಡಿದೊಡೆ ಬಾಡದು ನೋಡಿ ಸರ್ವಜ್ಞ||

ಮಳೆ ಕೂದಲು
ಕಬ್ಬು ಹುಲ್ಲು
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಗಾಳಿ ಬೀಸುವ ಮಾಸದಿ ಬಂದ ಢಂಬಾಚಾರಿ, ಮೋಸಗಾರ, ವಂಚಕ
೨. ಕಣ್ಣೀರಿಲ್ಲದ ದುಃಖ!
೩. ಭೂತದಲ್ಲಿ ಹುಟ್ಟಿದವನು
೦೪ ಕನ್ನಡದ ಈ ಪ್ರಗತಿಶೀಲ ಲೇಖಕರನ್ನು ಗುರುತಿಸಿ.
ನಿರಂಜನ ಬಸವರಾಜ ಕಟ್ಟೀಮನಿ
ಅ.ನ.ಕೃಷ್ಣರಾವ್ ರಾವ್ ಬಹಾದ್ದೂರ್
೦೫ ೧೮೯೮ ರಲ್ಲಿ ಬೆಂಗಳೂರನ್ನು ಕಾಡಿದ ಪ್ಲೇಗ್ ಪಿಡುಗಿನ ನಂತರ ರೂಪುಗೊಂಡ ಮೊತ್ತಮೊದಲ ಆಧುನಿಕ ಬಡಾವಣೆ.
ಈ ಬಡಾವಣೆಗೆ ಅಂಟಿಕೊಂಡಂತೆ ಸರ್ ಶೇಷಾದ್ರಿ ಅಯ್ಯರ್ ಅವರು ಒಂದು ದೊಡ್ಡ ಕೃತಕ ಕೆರೆಯನ್ನು ಕಟ್ಟಿಸಿದರು.
ಈ ಪ್ರದೇಶದಲ್ಲಿ ೧೬೬೯ ರಲ್ಲಿ ಛತ್ರಪತಿ ಶಿವಾಜಿಯ ಮಲತಮ್ಮ ಏಕೋಜಿ ಕಟ್ಟಿಸಿದ ಶಿವ ದೇವಾಲಯವಿದೆ.
ಈ ಬಡಾವಣೆಯಲ್ಲಿ ಸಂಗೀತ ಕಲಾ ನಿಧಿ ಚೌಡಯ್ಯ ಅವರ ನೆನಪಿಗಾಗಿ ನಿರ್ಮಾಣವಾದ ಒಂದು ಅದ್ಭುತ ಸಂಗೀತ ಭವನವಿದೆ

1 ಟಿಪ್ಪಣಿ (+add yours?)

 1. sughosh s. nigale
  ನವೆಂ 18, 2010 @ 11:02:07

  ಡಾ ನಾ ಸೋಮೇಶ್ವರ್, ರಘು ಐ ಡಿ ಹಳ್ಳಿ, ಎಚ್ ಎನ್ ಆರತಿ ಎಲ್ಲರಿಗೂ ಅಭಿನಂದನೆ… 🙂 ಅಂದಹಾಗೆ ನನ್ನ ಹೆಸರು ಏನು ಅಂತ ಥಟ್ ಅಂತ ಹೇಳಿ ನೋಡೋಣ….:-)
  1. ಸು
  2. ಘೋ
  3.ಷ
  4. ಮೇಲಿನ ಯಾವೂದು ಅಲ್ಲ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: