ಧನಂಜಯ ಕುಂಬ್ಳೆಗೆ ಕಣ್ಣೂರು ವಿ ವಿ ಡಾಕ್ಟರೇಟ್…

ಕವಿ, ವಿಮರ್ಶಕ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಧನಂಜಯ ಕುಂಬ್ಳೆ ಇವರಿಗೆ ಕಣ್ಣೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಅವರು ಕಾಸರಗೋಡಿನಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಅರುಣಾಬ್ಜ ಮತ್ತು ಕುಮಾರವ್ಯಾಸ : ತೌಲನಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿ ನೀಡಿದೆ. ಪ್ರಬಂಧವು ತುಳುವಿನ ಉಪಲಬ್ಧ ಮೊದಲ ಮಹಾಕಾವ್ಯ ಅರುಣಾಬ್ಜ ಕವಿಯ ‘ಮಹಾಭಾರತೋ’ ಕೃತಿಯ ವಿಸ್ತೃತ ಅಧ್ಯಯನವಾಗಿದ್ದು, ಕನ್ನಡ-ತುಳು ಕಾವ್ಯದ ಕುರಿತ ತೌಲನಿಕ ಸಂಶೋಧನೆಯ ಮೊದಲ ಪ್ರಯತ್ನವಾಗಿದೆ.

ಇವರು ಮೊದಲ ಪಾಪ, ಹಾಡು ಕಲಿತ ಹಕ್ಕಿಗೆ (ಕವನ ಸಂಕಲನಗಳು), ಪಾಲ್ಗಡಲ ಮುತ್ತುಗಳು (ಸಂಪಾದಿತ ಹನಿಗವನ ಸಂಕಲನ), ನಾನು ಮತ್ತು ಆಕಾಶ (ವಿಮರ್ಶೆ), ಕಜಂಪಾಡಿ ರಾಮ (ವ್ಯಕ್ತಿಚಿತ್ರ) ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕಾರ್ನಾಡು ಸದಾಶಿವರಾವ್ ಕಾವ್ಯ ಪ್ರಶಸ್ತಿ, ಸೃಜನಶೀಲ ಬರಹಗಾರ ಪ್ರಶಸ್ತಿ, ವರ್ಷದ ಸಾಧಕ ಪ್ರಶಸ್ತಿ ಮೊದಲಾದ ಗೌರವಗಳು ದೊರಕಿದೆ. ರಾಜ್ಯ , ವಿಶ್ವವಿದ್ಯಾಲಯ ಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.

ಮಾಹಿತಿ : ಈ ಕನಸು

6 ಟಿಪ್ಪಣಿಗಳು (+add yours?)

 1. Vidyarashmi Pelathadka
  ನವೆಂ 19, 2010 @ 12:14:24

  Hey, congrats sir………..

  -vidyarashmi

  ಉತ್ತರ

 2. usha
  ನವೆಂ 19, 2010 @ 11:19:19

  Abhinandanegalu!

  ಉತ್ತರ

 3. ವಸುಧೇಂದ್ರ
  ನವೆಂ 19, 2010 @ 08:58:44

  ಧನಂಜಯ ಕುಂಬ್ಳೆಯವರೆ,

  ಅಭಿನಂದನೆಗಳು.

  ವಸುಧೇಂದ್ರ

  ಉತ್ತರ

 4. Safiya Naeem
  ನವೆಂ 18, 2010 @ 20:13:23

  Congratulations Dhananjay Sir..!

  ಉತ್ತರ

 5. Santhosh Ananthapura
  ನವೆಂ 18, 2010 @ 19:12:15

  Hey Dhnau,

  Congratulations Kano !!! I wish you all the success in every walk of your life.

  Once again Congrats !!!

  -Santhosh Ananthapura

  ಉತ್ತರ

 6. prakashchandra
  ನವೆಂ 18, 2010 @ 17:46:31

  Ahinandanegalu Dhananjay kumble. Horanada kannadigaraagi nemma saadhane namage hemme untumaadide.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: