‘ಶುದ್ಧಗೆ’ ನಾಟಕ

ವಿಜಯನಗರ  ಬಿಂಬದ ನಾಟಕ
ಡಾ ಎಸ್ ವಿ ಕಶ್ಯಪ್ ರಚಿಸಿದ

ಸುಷ್ಮಾ ಪ್ರಶಾಂತ್ ನಿರ್ದೇಶನದ
ಕನ್ನಡ  ಬಾಷಾ ಚರಿತ್ರೆಯ ಬಗೆಗಿನ
“ಶುದ್ದಗೆ ”
ಮಕ್ಕಳ ನಾಟಕ
ಇಂದು  6.30 ಕ್ಕೆ
ADA ರಂಗಮಂದಿರದಲ್ಲಿ
ನಾಟಕದ ಬಗ್ಗೆ ಎಸ್ ವಿ ಕಶ್ಯಪ್ ಹೀಗನ್ನುತ್ತಾರೆ-
Shuddage – a play about linguistic history of kannada language . It is one of my favourite plays. some times i feel surprised that i could write it.

12 ಟಿಪ್ಪಣಿಗಳು (+add yours?)

 1. SA.JAGANNATH
  ಡಿಸೆ 23, 2010 @ 10:45:06

  PANDITHAARAADHYA S IR NAATAKA NOODIDA MEELE THAMMA PRATIKRIYE EENU?

  ಉತ್ತರ

 2. test
  ನವೆಂ 19, 2010 @ 13:19:33

  ಮೊಬೈಲಿನಿಂದ ಕಳಿಸಿದ ಫೇಸ್‌ಬುಕ್ ಸಂದೇಶ ಎಂದು ಹೇಳಿದ ಮೇಲೂ ಅದರ ಕುರಿತು ಇಲ್ಲಿ ನಡೆದಿರುವ ಅನಗತ್ಯ ಚರ್ಚೆ ನೋಡಿ ಬೇಸರವಾಯಿತು. ಅಕಡೆಮಿಕ್ ಹಿನ್ನೆಲೆಯಿಂದ ಬಂದಿಲ್ಲದವರು ಕನ್ನಡದ ಕುರಿತು ಏನಾದರೂ ಕೆಲಸಮಾಡಲು ಹೊರಟರೆ ಅವರನ್ನು ಪ್ರೋತ್ಸಾಹಿಸುವ ಬದಲು ಈ ರೀತಿ ಅವಮಾನಿಸುವುದು ಹಿರಿಯರಿಗೆ ಶೋಭೆತರುವ ವಿಷಯವಲ್ಲ.

  ಉತ್ತರ

 3. ಡಾ.ಎಸ್.ವಿ.ಕಶ್ಯಪ್
  ನವೆಂ 19, 2010 @ 09:39:46

  ನಮಸ್ಕಾರ

  ಮೊದಲು ನಾನು ಅವಧಿ ಬ್ಲಾಗ್ ನ ರೂವಾರಿಗಳಾದ ಜಿ.ಎನ್.ಮೋಹನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು.
  ನಾಟಕವನ್ನು ಸ್ಮರಿಸಿ ಕೊಂಡ ಉಷಾ ಅವರಿಗೂ ನನ್ನ ಅಭಿನಂದನೆಗಳು.
  ಆದರೆ ಕೆಲವು ವಿಷಯಗಳನ್ನು ಇಲ್ಲಿ ವಿಶದ ಪಡಿಸಬೇಕಾದ ಅನಿವರ್ಯತೆ ಇದೆ ಆದ್ದರಿಂದ ಬರೆಯುತ್ತಿದ್ದೇನೆ.

  ಮಾನ್ಯ ಪಂಡಿತಾರಾಧ್ಯ ಅವರೆ,

  ತಮ ಪ್ರತಿಕ್ರಿಯೆ ನೋಡಿ ನನಗೂ ಸಖೇದಾಶ್ಚರ್ಯವಾಗುತ್ತಿದೆ.
  ಮನಸಗಂಗೋತ್ರಿಯಲ್ಲಿ ಕನ್ನಡದ ಪ್ರಾಧ್ಯಾಪಕರಾಗಿರುವ ನೀವು ಹಿಂದು ಮುಂದು ನೋಡದೆ ಹೀಗೆ ಒಬ್ಬ ಬಡ ನಾಟಕ ಕಾರನಮೇಲೆ ಹರಿಹಾಯ್ದಿರುವುದು ಸರಿಯೆ ಎಂದು ಯೋಚಿಸಿ ಸ್ವಾಮಿ.
  ನನ್ನ ಪರಿಚಯ ತಮಗೆ ಇಲ್ಲ ಎಂದು ಇದರಿಂದ ಚೆನ್ನಾಗಿ ತಿಳಿಯುತ್ತದೆ.

  ಪಂಡಿತಾರಾಧ್ಯಾವರೆ,
  ನಾನು ನಿಮ್ಮ ಮಾನಸಗಂಗೋತ್ರಿಯಲ್ಲೆ ಓದಿದ್ದು ಆದರೆ ಕನ್ನಡವನ್ನಲ್ಲ, ಬಿ.ಡಿ.ಎಸ್ – ದಂತವಿಜ್ಞಾನ. ಈಗಲೂ ನನ್ನದೆ ದಂತ ಚಿಕಿತ್ಸಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ.
  ಕನ್ನಡ ಕಾಳಗಿ ಇರದಿದ್ದರೆ ನಾನು ಮಕ್ಕಳ ನಾಟಕಗಳನ್ನು ಬರೆಯುವ ಗೋಜಿಗೆ ಹೋಗದೆ, ನನ್ನ ಪಾಡಿಗೆ ನಾನು ನನ್ನ ಚಿಕಿತ್ಸಾಲಯದಲ್ಲಿ ನಿರತನಾಗಿರಬಹುದಿತ್ತು.
  ಆದರೆ ಕನ್ನಡದ ಬಗೆಗಿನ ಅಸ್ಥೆ, ನಾನು ಕನ್ನಡ ಸ್ನಾತಕೋತ್ತರ ಪದವಿ ಮಾಡುವಂತೆ ಪ್ರೇರೇಪಿಸಿತು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಅದನ್ನು ಮಾಡಿಯೂ ಮಾಡಿದೆ.
  ಆಮೇಲೆ ಸುಮ್ಮನೆ ಕೂರದೆ ಕುಮಾರವ್ಯಾಸ ನನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಕುಮಾರವ್ಯಾಸ ಡಾಟ್ ಕಾಮ್ ಎಂಬ ಮಕ್ಕಳ ನಾಟಕ ಬರೆದೆ. ಗದುಗಿನ ಭಾರತ ಮಕ್ಕಳ ನಾಲಿಗೆಯ ಮೇಲೆ ನಲಿದಾಡಿತು.
  ಭಾಷಾಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸಬೇಕೆಂದು ಬರೆದ ನಾಟಕವೇ ಶುದ್ಧಗೆ,.
  ಆ ನಾಟಕವನ್ನು ಬರೆದು ೩ ವರ್ಷಗಳಾಯ್ತು. ಈಗ ಅದು ಪ್ರಕಟವಾಗುತ್ತಿದೆ ಎಂದಾಗ ಮನಸ್ಸಿನಲ್ಲಿ ಬಂದ ಸಣ್ಣ ಉದ್ಗಾರ ವನ್ನು ನನ್ನ ಸಂಚಾರಿ ದೂರವಾಣಿಯ ಮೂಲಕ ಫೇಸ್ ಬುಕ್ ನಲ್ಲಿ ಹಾಕಿದ್ದೆ.
  ನನ್ನ ಸಂಚಾರಿ ದೂರವಾಣಿಯಲ್ಲಿ ಕನ್ನಡ ಬಳಸಲು ಆಗುವುದಿಲ್ಲ ಸ್ವಾಮಿ .
  ಅದು ನನ್ನ ತಪ್ಪೆ.
  ಇಲ್ಲ ಸಂಚಾರಿ ದೂರವಾಣಿಯಲ್ಲಿ ಕನ್ನಡ ಬಳಸ ಬಹುದಾದರೆ ದಯ ಮಾಡಿ ಅದನ್ನು ನನಗೆ ತಿಳಿಸುವ ಕೃಪೆ ಮಾಡಿ.
  ಕನ್ನಡವನ್ನೆ ಬಳಸಿ ಎನ್ನುವ ತಮ್ಮ ಅಭಿಮತಕ್ಕೆ ನನ್ನ ಸಹಮತವೂ ಇದೆ.
  ಆದರೆ ಮ್ಲೊದಲ ಪ್ರತ್ರಿಕ್ರಿಯೆಯ ತಲೆ ಬರಹದಲ್ಲಿ ತಮ್ಮ ಹೆಸರು ಇಂಗ್ಲೀಷ್ ನಲ್ಲಿರುವುದು ಏತಕ್ಕೋ ?
  ಅದನ್ನು ನಾನು ಕೇಳಿದರೆ ನನ್ನಂಥಹ ಮೂರ್ಖ ಇನ್ನೊಬ್ಬ ನಿಲ್ಲ.
  ಅದು ತಾವು ಹೇಳಬೇಕೆಂದಿರುವ ವಿಷಯವೂ ಅಲ್ಲ , ಕನ್ನಡದ ಬಗ್ಗೆ ನಿರ್ಲಕ್ಷತೆಯೂ ಅಲ್ಲ.
  ಹಾಗೆಯೇ ನನ್ನ ಅ ಉದ್ಗಾರ.
  ಮತೇನಾದರು ಇದ್ದರೆ ನನಗೆ ನೇರವಾಗಿ ಸಂಪರ್ಕಿಸಿ – ನನ್ನ ದೂರವಾಣಿ ೯೮೪೪೧೫೨೯೬೭.
  ಅಥವ ಅವಧಿ ಯಲ್ಲಿ ಸಂಧಿಸೋಣ
  ಅಂದ ಹಾಗೆ,
  ನಿಮ್ಮ ವಿಳಾಸ ಕೊಡಿ ಸ್ವಾಮಿ
  ..
  ..
  ಪುಸ್ತಕ ಕಳಿಸುತ್ತೇನೆ
  ನಿಮ್ಮವ
  ಅಶೋಕ್ ಕಶ್ಯಪ್ ಅಲ್ಲ ಡಾ||ಎಸ್.ವಿ.ಕಶ್ಯಪ್

  ಉತ್ತರ

  • ಪಂಡಿತಾರಾಧ್ಯ
   ಡಿಸೆ 16, 2010 @ 05:34:52

   ಡಾ ಎಸ್ ವಿ ಕಶ್ಯಪ್ ಅವರಿಗೆ ನಮಸ್ಕಾರಗಳು.
   ನಿಮ್ಮ ಪ್ರತಿಕ್ರಿಯೆಯನ್ನು ಇಂದು ನೋಡಿದೆ. ನಾನು ಪ್ರತಿಕ್ರಿಯಿಸಲು ವಿಳಂಬವಾದುದಕ್ಕೆ ಕ್ಷಮೆ ಇರಲಿ.
   ನನಗೆ ನಿಮ್ಮ ಪರಿಚಯವಿಲ್ಲದಿದ್ದರೂ ಕನ್ನಡದ ಬಗ್ಗೆ ನಿಮಗಿರುವ ಆಸಕ್ತಿಯ ಬಗ್ಗೆ ಮೆಚ್ಚುಗೆ ಗೌರವಗಳಿವೆ. ನಾಟಕದ ಬಗ್ಗೆ ನೀವು ಇಂಗ್ಲಿಷಿನಲ್ಲಿ ಬರೆದಿರುವುದರ ಬಗ್ಗೆ ಆಕ್ಷೇಪಿಸಿದ್ದೇನೆ. ಅದು ಕೇವಲ ನಿಮ್ಮ ಬಗ್ಗೆ ಮಾತ್ರ ಅಲ್ಲ. ಇಂದು ವಿದ್ಯನ್ಮಾನ ಮಾಧ್ಯಮದಲ್ಲಿ ನಡೆಯುತ್ತಿರುವ ಕನ್ನಡಿಗರ ಸಾಮಾಜಿಕ ಸಂವಹನದ ಭಾಷೆ ಇಂಗ್ಲಿಷ್ ಆಗಿರುವುದರಬಗ್ಗೆ ನನ್ನ ಪ್ರತಿಕ್ರಿಯೆ.
   ಕನ್ನಡಿಗರ ಜೊತೆ, ಕನ್ನಡ ಭಾಷೆಯ ಬಗ್ಗೆ ಇಂಗ್ಲಿಷಿನಲ್ಲಿ ಮಾತನಾಡುವುದರ ಬಗ್ಗೆ ಆಕ್ಷೇಪ. ಹಲವು ವಿದ್ಯುನ್ಮಾನ ಉಪಕರಣಗಳಲ್ಲಿ ಕನ್ನಡ ಇಲ್ಲದಿದ್ದಲ್ಲಿ ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯಬಹುದು. ಕನ್ನಡ ನಮ್ಮ ಆಲೋಚನೆಯ ಭಾಷೆಯಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ಇಲ್ಲದಿದ್ದರೆ ಇಂಗ್ಲಿಷ್ ನಮ್ಮ ಮಾತೃಭಾಷೆಯಂತಾಗಿ ಕನ್ನಡ ನಾವು ಚರ್ಚಿಸುವ ಹೊರಗಿನ ಒಂದು ವಿಷಯ ಮಾತ್ರ ಆಗುವ ಸಾಧ್ಯತೆ ಇದೆ.
   ಕನ್ನಡದಲ್ಲಿಯೇ ಯೋಚಿಸಿ ಕನ್ನಡದಲ್ಲಿ ಬರೆಯುವುದು ಕನ್ನಡದ ಬಗ್ಗೆ , ಕನ್ನಡಿಗರ ಬಗ್ಗೆ ನಮಗಿರುವ ಗೌರವ, ಕಾಳಜಿಯನ್ನು ತೋರಿಸುತ್ತದೆ.

   ನಿಮ್ಮ ನಾಟಕವನ್ನು ದಯವಿಟ್ಟು ಕಳುಹಿಸಿ ಕೊಡಿ. ಓದುವ ಕುತೂಹಲವಿದೆ.
   ನನ್ನ ವಿಳಾಸ
   ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಮಾನಸಗಂಗೋತ್ರಿ ಮೈಸೂರು ೫೭೦ ೦೦೬
   ದೂರವಾಣಿ ೯೪೪೮೪೮೧೪೦೨
   ವಿ ಅಂಚೆ panditaradhya@gmail.com
   ವಿ ತಾಣ panditaputa.wordpress.com

   ಪ್ರೀತಿಯಿಂದ
   ಪಂಡಿತಾರಾಧ್ಯ

   ಉತ್ತರ

   • ಡಾ.ಎಸ್.ವಿ.ಕಶ್ಯಪ್
    ಡಿಸೆ 21, 2010 @ 23:20:30

    ನಿಮ್ಮ ಈ ಮಾತುಗಳ ಬಗ್ಗೆ ನನಗೆ ಸಂಪೂರ್ಣ ಸಹಮತವಿದೆ. ವ್ಯವಸ್ಥೆ ಯನ್ನು ದೂಷಿಸಬೇಕೋ.. ಅಥವ ನೀವು ಹೇಳಿದ ಹಾಗೆ ನಮ್ಮ ನಮ್ಮ ಮನೋಧರ್ಮಗಳ ಬಗ್ಗೆ ನಾವೆ ಜರಿದುಕೊಳ್ಳಬೇಕೋ ಗೊತ್ತಗುತ್ತಿಲ್ಲ. ಅದರೂ ಮೇಲೆ ಹೇಳಿದ ಎರಡನ್ನು ಮಾಡಿದರೂ ಕನ್ನಡಿಗರ ಅಸಹಾಯಕ ಸ್ಥಿತಿಗೆ ಬೇಸರವಾಗುತ್ತದೆ . ಯಾಕೆಂದರೆ ಇಂಗ್ಲೀಶಿನಲ್ಲಿ ಕನ್ನಡ ಬರೆಯುವುದು ( ಎಂದರೆ ಧ್ವನಿ ಲಿಪಿ ಬಳಸುವುದು) ಮನಸ್ಸಿಗೆ ಮುದ ನೀಡುವುದಿಲ್ಲ. ಕನ್ನಡದ ಲಿಪಿಯನ್ನು ಬಳಸುವ ಖುಷಿ ಕೊಡುವುದಿಲ್ಲ. ಅತ್ರುಪ್ತಿ ಕಟ್ಟಿಟ್ಟ ಬುತ್ತಿ ..

    ಆದರೆ ಒಂಡು ಖುಶಿಯ ವಿಶಯವೆಂದರೆ ಈ ನೆಪದಲ್ಲಾದರು ನಾವು ಸಂಧಿಸುವ ಹಾಗೆ ಅಯ್ತು.

    ನಮ್ಮ ನಾಟಕ ಶುದ್ಧಗೆಯನ್ನು ನೋಡಲು ತಾವು ಮೈಸೂರಿನಿಂದ ಆಗಮಿಸಿದ್ದು ನಿಮ್ಮ ಬಗ್ಗೆ ನನ್ನ ಗೌರವ ಹೆಚ್ಚಿಸಿದೆ. ಅಂದು ನಾಟಕ ಮುಗಿದ ಮೇಲೆ ತಮ್ಮನ್ನು ಸರಿಯಾಗಿ ಬೀಳ್ಕೊಡಲು ಅಗಲಿಲ್ಲ. ತಮ್ಮ ಅಭಿಪ್ರಾಯ ಸರಿಯಾಗಿ ತಿಳಿಯಲು ಬಯಸುತ್ತೇನೆ.

    ಇದಕ್ಕಾಗಿ ನಾನು ಅವಧಿ ಬ್ಲಾಗ್ ಅವರಿಗೆ ಹೃತ್ಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ.
    ಇಂತಿ
    ತಮ್ಮ ವಿಶ್ವಾಸಿ
    ಕಶ್ಯಪ.

    ಉತ್ತರ

 4. shobhavenkatesh
  ನವೆಂ 19, 2010 @ 01:23:05

  nataka thumba chennagi moodi bantu G VENKTASUBHIYA HAGOO M H KRISHNAIAHA avara munndi hagoo abhipraya indu bidugadeyada shuddage makkala nataka pustakadalli chennagi vivarisidare.2000 itihasada kannada basha chritre onduvare ganteyalli makkalu hagoo lekhakaru nirdeshakaru chennagi bimbisidaru. dental doctor gi kashyap bhasheyabagge abhimanadinda kannada MA MADI MAKKLIGE KUMARAVYSANA BAGGE baradiruva natakavu aneka makklige karanata kathamanjri pusthakavannu thiruvihakuvante madidare lekhakaru. makkalalii sahityaskti muudisuvalli kashyap yashasviyagiddre. avru barediruva yella makkala natakagalli namma manina vasane ide. aa kampu makklali haraduthide .

  ಉತ್ತರ

 5. ಉಷಾಕಟ್ಟೆಮನೆ
  ನವೆಂ 18, 2010 @ 14:35:41

  ನಾಟಕವೆಂಬುದು ದೃಶ್ಯ ಮಾಧ್ಯಮ. ಪಾಮರರೂ ಅರ್ಥ ಮಾಡಿಕೊಳ್ಳಬಹುದು.ಅದಕ್ಕೆ ಭಾಷೆಯ ಹಂಗಿಲ್ಲ. ಕನ್ನಡೇತರರೂ ಈ ನಾಟಕವನ್ನು ನೋಡಿ, ಕನ್ನಡದ ಅಕ್ಷರಮಾಲೆಯ ಚರಿತ್ರೆಯನ್ನು ತಿಳಿದುಕೊಳ್ಳಲಿ ಎಂಬುದು ನಾಟಕಕಾರರ ಉದ್ದೇಶವಿರಬಹುದೆನೋ!
  ನಾನು ಈಗಾಗಲೇ ಈ ನಾಟಕ ನೋಡಿದ್ದೇನೆ.ಒಳ್ಳೆಯ ಪ್ರಯತ್ನ.ಮಕ್ಕಳು ಲವಲವಿಕೆಯಿಂದ ಅಬಿನಯಿಸಿದ್ದಾರೆ.
  ಉಷಾಕಟ್ಟೆಮನೆ

  ಉತ್ತರ

  • panditaradhya
   ನವೆಂ 18, 2010 @ 19:02:44

   ಉಷಾ ಕಟ್ಟೆಮನೆಯವರಿಗೆ ನಮಸ್ಕಾರಗಳು.

   ನಾನು ನಾಟಕ ನೋಡಿಲ್ಲ. ನಾಟಕದ ಬಗ್ಗೆ ಪ್ರತಿಕ್ರಿಯಿಸಿಲ್ಲ.
   ತಮ್ಮ ಕನ್ನಡ ನಾಟಕದ ಬಗ್ಗೆ ಕನ್ನಡಿಗರಿಗೆ ಇಂಗ್ಲಿಷಿನಲ್ಲಿ ಹೇಳಿಕೊಂಡಿರುವ ನಾಟಕಕಾರರ ಮನೋಧರ್ಮದ ಬಗ್ಗೆ ಸಖೇದಾಶ್ವರ್ಯವಾಗಿದೆ.
   ಕನ್ನಡ ಬಾರದವರಿಗೆ ಕನ್ನಡದ ಬಗ್ಗೆ ಕಲಿಸುವುದು ಬೇರೆ ಮಾತಾಯಿತು.
   ಕನ್ನಡ ಭಾಷೆಯನ್ನು ಬಳಸುವಂತೆ ಕನ್ನಡಿಗರನ್ನೇ ಕೇಳಿಕೊಳ್ಳಬೇಕಾದ ದುಃಸ್ಥಿತಿಯ ಬಗ್ಗೆ ಬೇಸರವಾಗುತ್ತಿದೆ.

   ಕನ್ನಡಿಗರಿಗೆ ನನ್ನ ಮನವಿ
   ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
   ಕನ್ನಡ ಅಂಕಿಗಳನ್ನೇ ಬಳಸಿ
   ೦ ೧ ೨ ೩ ೪ ೫ ೬೭ ೮ ೯

   ಪ್ರೀತಿಯಿಂದ
   ಪಂಡಿತಾರಾಧ್ಯ

   ಉತ್ತರ

   • ಡಾ.ಎಸ್.ವಿ.ಕಶ್ಯಪ್
    ನವೆಂ 19, 2010 @ 09:43:43

    ದಯ ಮಾಡಿ ವಿಷಯ ತಿಳಿದು ಪ್ರತಿಕ್ರಯಿಸಿ
    ಧನ್ಯವಾದಗಳು
    ನಿಮ್ಮವ
    ಡಾ||ಎಸ್.ವಿ.ಕಶ್ಯಪ್

    ಉತ್ತರ

   • ಡಾ.ಎಸ್.ವಿ.ಕಶ್ಯಪ್
    ನವೆಂ 19, 2010 @ 09:44:53

    ಇಲ್ಲಿ ತಮ್ಮ ಹೆಸರು ಇಂಗ್ಲೀಷ್ ನಲ್ಲಿರುವುದು ಆಶ್ಚರ್ಯ !!!!!!!

    ಉತ್ತರ

 6. ಪಂಡಿತಾರಾಧ್ಯ
  ನವೆಂ 18, 2010 @ 06:34:34

  ಮಾನ್ಯರೆ,
  ಕನ್ನಡ ನಾಟಕ ಶುದ್ದಗೆಯ ಬಗ್ಗೆ ಅದರ ಲೇಖಕರು ಶುದ್ದ ಇಂಗ್ಲಿಷಿನಲ್ಲಿ ಹೇಳಿಕೊಂಡಿರುವುದು ವಿಚಿತ್ರವಾಗಿದೆ.
  ಕನ್ನಡದ ಬಗ್ಗೆ ಕನ್ಕನಡಿಗರೊಂದಿಗೆ ಕನ್ನಡದಲ್ಲಿ ಮಾತನಾಡಲಾರದಷ್ಟು ಕನ್ನಡಕ್ಕೆ ಪರಕೀಯರಾದವರು ಕನ್ನಡ ಶುದ್ದಗೆಯನ್ನು ಮಕ್ಕಳಿಗೆ ತಿಳಿಸುತ್ತೇವೆನ್ನುವುದು ವಿಚಿತ್ರವಾಗಿದೆ.

  ಉತ್ತರ

  • shobhavenkatesh
   ನವೆಂ 19, 2010 @ 01:41:16

   shuddage makkala nataka thumba chennagi moodi bantu. PROF G VENKATASUBAIAH avru nataka nodi heliruva abipraya indu bidugadeyada shuddage makkala puskadalli nijavenisitu . avare heliruvante 2000 varshda kannada basha chritre onduvare ganteya natakadalli chennagi moodi bandide endidare hiriyaru.M H KRISHANAIAH avara abhiprayavu thumba suktavagide enisitu modala prayatna nodihelida abhipraya idadre indina makkala nataka nodida DR SA SHI MARULAIAHA , DR VIJAYA,DR RAJARAM, MATTHU JOGI avrugala abhiprayavu santhasa vayithu.

   ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: