ಸುದ್ದಿಯ ಸುತ್ತ ಸೂತ್ರಧಾರ…

-ಸೂತ್ರಧಾರ ರಾಮಯ್ಯ

ದೇಶ ಅಂದರೆ ಸಮಸ್ಯೆಗಳ ಸಂತೆ. ಸಮಸ್ಯೆಗಳ ಸುಳಿಗೆ ಸಿಕ್ಕ ಸಂತ್ರಸ್ತರನ್ನು ಸಂತೈಸಲೋ ಎಂಬಂತೆ ಸಂತರು ಹುಟ್ಟಿಬರುತ್ತಿದ್ದರು
ಅಂದ ಕಾಲತ್ತಿಲೆ. ಆದರೆ ಈಗ ಸಂತರ ಸ್ಥಾನದಲ್ಲಿ ಬುದ್ಧಿ ಜೀವಿಗಳು, ಗಡ್ಡ-ದ ಮೇಲೆ ‘ಕೈ’ ಹೊತ್ತ ಚಿಂತಕ ಮಂಥಕರುಮಿಂಚುತ್ತಾರೆ.
ವಿವಾದಗಳ ಸುಳಿಗೆ ದುಮುಕುತ್ತಾರೆ, ಅದಿಲ್ಲದಿದ್ದರೆ(ವಿವಾದಗಳು) ಹುಟ್ಟುಹಾಕುತ್ತಾರೆ.ಮಾಧ್ಯಮಗಳ ಮೂಲಕ ಕ್ಲಾಸ್’ತೆಗೆದುಕೊಂಡು ಮಹಾಶಯರಗುತ್ತಾರೆ, ಗುಡುಗುತ್ತಾರೆ-ಮಿಂಚುತ್ತಾರೆ; ವೆದರ್ ಇಟ್ ಹೋಲ್ಡ್ಸ್ ‘ವಾಟರ್’ ಆರ್ ನಾಟ್; ಕ್ಲಾಸ್ ತಗೋತಾರೆ.

ತಮ್ಮ ಪ್ರಭಾ(ವ)ವಳಿಯನ್ನು ರಿನ್ಯೂ ಮಾಡ್ಕೊಳ್ತಾರೆ. ಇವರ ಕ್ಲಾಸ್ ಗಳನ್ನ ಆಸ್ಥೆಯಿಂದ ಕೇಳೋದು ಅಗೇನ್ ಮಿಡ್ಲ್ ಕ್ಲಾಸೇ. ಹೊಸ ಹೊಸ (ನ್ಯೂ) ವಿಚಾರ ವಿವಾದಗಳ್ನ ‘ಟನ್ ‘ಗಟ್ಲೆ ಮಾಧ್ಯಮಗಳ ಮೂಲಕ ಅವರು ತಂದು ಸುರಿಯೋಕು ‘ಎನರ್ಜಿ’ ಪ್ರಾಪ್ತ ಆಗೋದೂ MC ಸ್ಕ್ವೇರ್ ನಲ್ಲೆ.

ಐ ಮೀನ್ ಮಿಡ್ಲ್ ಕ್ಲಾಸ್ ನವರ ಚಾವಡಿ-ಚೌಕಗಳಲ್ಲಿ. ಮೇಲ್ ವರ್ಗದ ಜನಕ್ಕೆ ವ್ಯಾಪಾರ ವ್ಯವಹಾರದ ಬ್ಯಾಲೆನ್ಸ್ ಶೀಟ್ ಓದೋಕು ಸಮಯವಿರೋದಿಲ್ಲ. ಪಾಪ, ಕೆಳವರ್ಗದವರಿಗೆ ದೈಹಿಕ ದುಡಿಮೆಯಿಂದ ವರ್ಗಾವಣೆಯೇ ಇಲ್ಲ! ಇನ್ನು ಉಳಿದಿರೋರು; ಬಿಗ್ ಬೀಗಳ ಅರ್ಥಾತ್ ಬೆಲೆಯೇರಿಕೆ,ಭ್ರಷ್ಟ ಆಚಾರಗಳ ಹಿಂಸೆಯ ನಡುವೆಯೂ pop ಫಿಲಾಸಫರ್ ಗಳ ನಿ-ವೇದನೆ ಗಳನ್ನು ಕೇಳುವುದಕ್ಕೆ ಸಿಗುವವರು  ಎಮ್.ಸಿ ಗಳು,ಐ ಮೀನ್ ಮಧ್ಯಮರು ಮತ್ತು ಮಾಧ್ಯಮರು ಮಾತ್ರ.

ಉದಾ: ಏನಕೇನ ಪ್ರಕಾರೇಣ ಅಂದ ಹಾಗೇ, j ನ k ನ ಪ್ರಕರಣ ಹಿಡಿದು, ಐ ಮೀನ್ ಜಮ್ಮು ಮತ್ತು ಕಾಶ್ಮೀರದ ಸಮಸ್ಯೇನ   ಅತಿ ಮಾಡ್ತಾ ಪ್ರಸಿದ್ಧ ಪುರುಷ-ರಾಗ ಹೊರಟಿರುವ ಅರುಂಧತಿ ರಾಯ್ “ಕೊಟ್ಟು ಬಿಡಿ ಕಾಶ್ಮೀರವ” ಅನ್ನುವ ಮೂಲಕ  ಅಂತರಾಷ್ಟ್ರೀಯ ಗಮನವನ್ನುಸೆಳೆದಿದ್ದಾರೆ.

ಅದೇ ರಾಗದಲ್ಲಿ , ಇಡೀ ಸಮಸ್ಯೆಯ ಬಗೆಗಿನ ಅರಿವಿಲ್ಲದ ಜ್ಞಾನ ಪಿಟಿ ಗಳು ಅಥವಾ ವಿವಾದ ಹಿಡಿದು ಹೆಸರು ಮಾಡಿಕೊಳ್ಳುವವರು, ಜಾಣ ಪೀಟಿಕೆಗಳನ್ನು ಮಾಧ್ಯಮದಲ್ಲಿ ತೇಲಿ  ಬಿಟ್ಟಿದ್ದಾರೆ; ಸಂವಿಧಾನದ ಮೂಲ ಭೂತ ಹಕ್ಕುಗಳು ಅತಿಯಾದಲ್ಲಿ ಪ್ರಚೋದನೆ ಗಳಿಂದ ವಿವಾದ  ಐ.ಪಿ.ಸಿ ಯ ದಂಡೆ ಹಿಡಿಯುತ್ತದೆ ಎಂದು ತಿಳಿದೂ!

ಒಂದು ದೇಶದ ಸಾಮಾಜಿಕ ವ್ಯವಸ್ತೆ ಬರಿ ಸಂವಿಧಾನವೇ ಅಲ್ಲಾ; ಅನೇಕ ವಿಧಾನಗಳಿಂದ ಕಟ್ಟಲ್ ಪಟ್ಟಿರುತ್ತದೆ, ಅಡಿಪಾಯದ ಒಂದು ಕಲ್ಲು ಅಲುಗಾಡಿದರು , ದೇಶ ಎಲ್ಲೂ ನಿಲ್ಲುವುದಿಲ್ಲ ಎಂಬ ವಿಚಾರ ತಿಳಿದೂ, ಸಂತ್ರಸ್ತರೆಂದು ಇವರೇ ತೀರ್ಮಾನಿಸಿದ ಜನರನ್ನು ‘ಅಪ್ಪಿ’ ಅವರ ಕಷ್ಟಗಳನ್ನು(?) ಈಸ್   ಮಾಡುವ, ವಾಸ್ತವ ಸಂಗತಿಗೂ ಭ್ರಮೆಗೂ ನಡುವೆ trapeez ಮಾಡುವ ಸೆಲೆ-ಬ್ರಿಟಿಗಳು ವಾಸ್ತವ ನೆಲೆ-ಯಲ್ಲಿ ಜನರಿಗೆ ದಾರಿದೀಪವಾಗಲು ಪ್ರಯತ್ನಿಸಬಹುದಲ್ಲವೇ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: