ನ್ಯೂಸ್ ಚಾನಲ್ ಸ್ವಾಮಿ ಇದು ನ್ಯೂಸ್ ಚಾನಲ್ …

ಸುದ್ದಿವಾಹಿನಿಗಳು ತಿದ್ದಿಕೊಳ್ಳಬೇಕು

-ಎಚ್ .ಆನಂದರಾಮ ಶಾಸ್ತ್ರಿ

ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.

* ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರಗೊಂಡ ಅವರ ಸಂದರ್ಶನದಲ್ಲಿ ವಾಹಿನಿಯ ವರದಿಗಾರ್ತಿಯು ಜಿವೆಂ ಅವರಿಗೆ ಕೇಳಿದ ಪ್ರಶ್ನೆ ಹೀಗಿತ್ತು. “ಈಗ ನಿಮಗೆ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ, ಕನ್ನಡಕ್ಕೆ ಮುಂದೆ ಏನು ಕೆಲಸ ಮಾಡಬೇಕೂಂತಿದೀರಿ?”
ಕನ್ನಡಕ್ಕಾಗಿ ದುಡಿಯುತ್ತಲೇ 97 ವಸಂತಗಳನ್ನು ದಾಟಿರುವ ಹಿರಿಯ ಜೀವಕ್ಕೆ ಕೇಳುವ ಪ್ರಶ್ನೆಯೇ ಇದು? ಈ ಪ್ರಶ್ನೆ ಆಲಿಸಿ ಜಿವೆಂ ಅವರಿಗೆ ನಗು ಬಂತು.
ಅವರು, “ನನಗೀಗ 98ನೆಯ ವರ್ಷ. ಎಲ್ಲ ಕೆಲಸಗಳನ್ನೂ ನಿಲ್ಲಿಸಬೇಕೂಂತ ಇದ್ದೇನೆ”, ಎಂದು ಉತ್ತರಿಸಿದರಾದರೂ, ಬೆನ್ನಿಗೇ, “ಅಧ್ಯಕ್ಷ ಪದವಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ”, ಎಂದು ನುಡಿದು ಮುಂದಿನೆರಡು ವರ್ಷಗಳಲ್ಲಿ ತಾವು ಕೈಕೊಳ್ಳಬೇಕೆಂದಿರುವ ಕನ್ನಡದ ಕೆಲಸದ ಬಗ್ಗೆ ವಿವರಿಸಿ ಆ ವರದಿಗಾರ್ತಿಯ  ಬೆಲೆ ಉಳಿಸಿದರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: