ಪ್ರಜಾಪ್ರಭುತ್ವ ಮತ್ತು ಬಿಜೆಪಿ: ಚಿಂತಕರ ಮಾತು…

‘ನಿರುಪಮ’ ಪತ್ರಿಕೆಗೆ ಈಗ ಮೂರರ ಹರಯ. ಅಂದರೆ ಮೂರು ವರ್ಷ ಖಂಡಿತಾ ಅಲ್ಲ. ಮೂರು ಸಂಚಿಕೆ ಮಾತ್ರ. ಆದರೆ ಇಷ್ಟು ಅಲ್ಪ ಅವಧಿಯಲ್ಲಿಯೇ ಅದು ಹಲವರನ್ನು ಕಾಡುವ ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದರ ಸಾರಥ್ಯ ವಹಿಸಿರುವವರು ಈ ಹಿಂದೆ ‘ಕನ್ನಡ ಟೈಮ್ಸ್’, ಮೈಸೂರಿನ ‘ಸಕಾಲ’ ಪತ್ರಿಕೆಯನ್ನು ರೂಪಿಸಿದ ಮಂಜುನಾಥ ಲತಾ ಅವರು. ಈಗ ನಿರುಪಮ ಸಾಹಸಕ್ಕೆ ಮುಂದಾಗಿದ್ದಾರೆ. ಈ ಪತ್ರಿಕೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪರ್ಕಿಸಿ- manjunathlatha@gmail.com

ಇವತ್ತು ಕರ್ನಾಟಕದ ರಾಜಕಾರಣ ತಲುಪಿರುವ ಸ್ಥಿತಿ ಕಂಡು ಏನನ್ನಿಸುತ್ತಿದೆ? ಚಳುವಳಿಗಳ ನಿಷ್ಕ್ರಿಯತೆಯಿಂದಾಗಿ ಬಿಜೆಪಿಯಂತಹ ಪಕ್ಷ ಕೊಬ್ಬಲು ಕಾರಣವಾಯಿತೆ? ಜನತೆಯನ್ನು ಎಚ್ಚರಿಸುವ ಕೆಲಸ ಮಾಡುವುದು ಹೇಗೆ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ನಿರುಪಮ ಪತ್ರಿಕೆಯು ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್, ಡಾ.ಸಿ.ಎಸ್. ದ್ವಾರಕಾನಾಥ್, ಎನ್.ಎಸ್.ಶಂಕರ್, ರಂಜಾನ್ ದರ್ಗಾ ಮತ್ತು ಪ್ರೊ.ಚಂದ್ರಶೇಖರ ಪಾಟೀಲರನ್ನು ಮಾತಿಗೆಳೆದಾಗ ಅವರು ಕೊಟ್ಟ ಉತ್ತರ ಇಲ್ಲಿದೆ.

ಮಾತನಾಡಿಸಿದವರು: ಕೆ.ಎಲ್.ಚಂದ್ರಶೇಖರ್ ಐಜೂರ್

ಕೋಮುವಾದವಲ್ಲ; ಕಳ್ಳಹಣ

ಡಾ. ಬಂಜಗೆರೆ ಜಯಪ್ರಕಾಶ್
ಇವತ್ತಿನ ಕರ್ನಾಟಕದ ರಾಜಕಾರಣದ ಸಂದರ್ಭದಲ್ಲಿ ಬಿಜೆಪಿಯನ್ನು ಕೋಮುವಾದದ ಪಕ್ಷ ಎಂದು ಕರೆಯುವುದಕ್ಕಿಂತ ಕಳ್ಳಹಣದ ಪಕ್ಷ ಎಂದು ಕರೆಯಬಹುದು. ತನ್ನ ಕೋಮು ಸಿದ್ಧಾಂತದಿಂದ ಬಿಜೆಪಿಗೆ ಒಬ್ಬ ಶಾಸಕನಿರಲಿ, ಒಬ್ಬ ಶ್ರೀಸಾಮಾನ್ಯನನ್ನು ಖರೀದಿ ಮಾಡಲು, ತನ್ನತ್ತ ಸೆಳೆಯಲು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದು ಕಳ್ಳಹಣದಿಂದ. ಪ್ರಜಾಪ್ರಭುತ್ವದ quಚಿಟiಣಥಿಯನ್ನು ಕಾಪಾಡಬೇಕಾದರೆ ಸಂಪತ್ತಿನ ಸಂಗ್ರಹ, ವಹಿವಾಟು, ಹಂಚಿಕೆ, ಒಡೆತನಗಳ ಮೇಲೆ ಕೆಲವು ಗಂಭೀರ ಮಿತಿಗಳನ್ನು ಒಡ್ಡಬೇಕು. ಈ ಹಿಂದೆ ಹಣವುಳ್ಳ ಟಾಟಾ, ಬಿರ‍್ಲಾ, ಅಂಬಾನಿಗಳು ನೇರ ರಾಜಕಾರಣಕ್ಕೆ ಇಳಿದವರಲ್ಲ. ಯಾವುದೇ ಪಕ್ಷದ ಯಾವುದೇ ಸರ್ಕಾರವಿರಲಿ ದುಡ್ಡು ಚೆಲ್ಲಿ ಸಲೀಸಾಗಿ ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ನಮ್ಮ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಹೇರಳವಾಗಿ ಕಪ್ಪುಹಣ ಹೊಂದಿದ ಸಮಾಜದ ಶ್ರೀಮಂತರು ಇವತ್ತು ನೇರ ರಾಜಕಾರಣಕ್ಕಿಳಿಯುತ್ತಿದ್ದಾರೆ.

ನಾವು ಮುಕ್ತ ಮಾರಕಟ್ಟೆಯ ಆರ್ಥಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಅಪಾರ ಧನ ಸಂಗ್ರಹದ ಮೇಲೆ ಪ್ರಭುತ್ವದ ನಿಯಂತ್ರಣವಿಲ್ಲದಿದ್ದರೆ ಪ್ರಜಾಪ್ರಭುತ್ವ ಕುಸಿಯುವ ಗಣಿಗಾರಿಕೆ, ರಿಯಲ್ ಎಸ್ಟೇಟ್ ದಗಾಕೋರರು ಸಮಾಜವನ್ನು ಕೊಳ್ಳುವ ಪರಿಸ್ಥಿತಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಹಣವಂತರು ಇಡೀ ಪ್ರಜಾಪ್ರಭುತ್ವವನ್ನೇ ಖರೀದಿ ಮಾಡಿ ತಮಗೆ ಬೇಕಾದ ರಾಜಕಾರಣ ಮಾಡುವ ಸಾಧ್ಯತೆಗಳು ಇಲ್ಲಿ ಕಾಣುತ್ತವೆ. ಅಕ್ರಮವಾಗಿ ೧೦೦೦ ಕೋಟಿ ರೂಪಾಯಿ ಹೊಂದಿರುವ ಒಬ್ಬ ಶ್ರೀಮಂತ ಸಲೀಸಾಗಿ ೧೦೦ ಶಾಸಕರನ್ನು ಖರೀದಿಮಾಡಿ ತನ್ನಿಚ್ಛೆಯ ರಾಜಕಾರಣ ಮಾಡಬಹುದಲ್ಲವೇ?

ಈ ಹಿಂದೆ ಜನಪರ ಹೋರಾಟಗಳ ಕಾವು ಹೇಗಿರುತ್ತಿತ್ತೆಂದರೆ: ಅನ್ಯಾಯವನ್ನು ಪ್ರತಿಭಟಿಸಲು ಹೋರಾಟಗಾರರು ಸಾಂಘಿಕ ಪ್ರಯತ್ನ ನಡೆಸುತ್ತಾ ಪ್ರಚಾರ, ಭಾಷಾ, ಮಾಧ್ಯಮದ ಮೂಲಕ ಚಳುವಳಿಗೆ ತೀವ್ರವಾಗಿ ಒಡ್ಡಿಕೊಳ್ಳುತ್ತಿರುವಾಗಲೇ ಅನಕ್ಷರಸ್ಥ ಜನ ಕೂಡ ಚಳುವಳಿಯೊಂದಿಗೆ ಸೇರಿಕೊಂಡು ಬಿಡುತ್ತಿದ್ದರು. ಎಲ್ಲೆ ಅನ್ಯಾಯ ಕಂಡರೂ ಅಲ್ಲಲ್ಲಿ ಸಣ್ಣ ಪ್ರತಿಭಟನೆಗಳು ಹುಟ್ಟಿಕೊಂಡು ನಂತರ ಅದು ರಾಜ್ಯವ್ಯಾಪಿ ಬೃಹತ್ ಹೋರಾಟವಾಗುತ್ತಿತ್ತು. ಅವತ್ತಿನ ನಾಯಕ ಸಮುದಾಯದ ಒಳಿತಿಗಾಗಿ ಚಳುವಳಿ ರೂಪಿಸುತ್ತಿದ್ದ. ಯಾವಾಗ ಚಳುವಳಿಗಳಿಗೆ ಲಾಭಕೋರತನ ಕಾಲಿಟ್ಟಿತೋ, ಸಮುದಾಯದ ಲಾಭಕ್ಕೆ ಹಪಿಹಪಿಸುತ್ತಿದ್ದ ನಾಯಕರು ಮರೆಯಾಗಿ ಆ ಜಾಗದಲ್ಲಿ ವೈಯಕ್ತಿಕ ಮತ್ತು ಕುಟುಂಬದ ಲಾಭ ನೋಡುವ ಲಾಭಕೋರ ನಾಯಕರು ಬಂದು ನಿಂತರು. ಚಳುವಳಿಯೊಂದು ತೀರಾ ವೈಯಕ್ತಿಕಗೊಂಡ ಕೂಡಲೆ ಅದು ನಾಶದ ಹಾದಿ ಹಿಡಿಯುತ್ತದೆ.

ಇವತ್ತು ಕಳ್ಳಹಣದ ವಹಿವಾಟಿಗೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನೇ ಖರೀದಿ ಮಾಡುವ ಶಕ್ತಿಯಿದೆ. ಇದನ್ನು ಹಿಮ್ಮೆಟ್ಟಿಸುವುದು ಹೇಗೆ? ಎಷ್ಟೇ ದುಡ್ಡು ಸುರಿದರು ಒಬ್ಬ ಶಾಸಕನನ್ನು, ಒಬ್ಬ ಮನುಷ್ಯನನ್ನು ಖರೀದಿ ಮಾಡುವುದು ಸಾಧ್ಯವಿಲ್ಲವೆಂದು ಗೊತ್ತಾಗುತ್ತದೋ ಆಗ ದುಡ್ಡುಬಾಕ ಜನ ಪ್ರಜಾಪ್ರಭುತ್ವದ ಮೇಲಿನ ತಮ್ಮ ಹಿಡಿತವನ್ನು ಸಡಿಲಗೊಳಿಸುತ್ತಾರೆ. ಈ ರಾಜಕಾರಣದ ಸತ್ಯವನ್ನು, ಕಪ್ಪುಹಣದ ಹಿಂದಿರುವ ವಾಸ್ತವವನ್ನು ನಾವು ಜನತೆಗೆ ಎಷ್ಟು ಸಾಧ್ಯವೋ ಅಷ್ಟು ಬಿಚ್ಚಿಡುತ್ತಾ ಹೋಗಬೇಕು. ಇಂತಹ ಪರಿಸ್ಥಿತಿಗಳಲ್ಲಿ ನಮ್ಮ ಸಣ್ಣಪುಟ್ಟ ಪ್ರಯತ್ನಗಳನ್ನು ಯಾವ ಕಾರಣಕ್ಕೂ ನಿಲ್ಲಿಸಬಾರದು.

ಪಾಪದ ಪಾಲುದಾರರ ಕಟಕಟೆಯಲ್ಲಿ ಜನತೆ

ಡಾ. ಸಿ.ಎಸ್.ದ್ವಾರಕಾನಾಥ್
ಇವತ್ತಿನ ಈ ಸರ್ಕಾರದಲ್ಲಿ ಖuಟe oಜಿ ಐಚಿತಿ ಅನ್ನೋದೇ ಮಾಯವಾಗಿದೆ. ಹಿಟ್ಲರ್, ಖೊಮೇನಿ, ಇದಿ ಅಮೀನ್ ಇವರ ಆಡಳಿತಗಳ ಬಗ್ಗೆ ಓದಿದ್ದೆವು ಈಗ ಖುದ್ದು ಕರ್ನಾಟಕದಲ್ಲಿ ಕಾಣುತ್ತಿದ್ದೇವೆ. ಇಂಥ ಭ್ರಷ್ಟ ಸರ್ಕಾರವನ್ನು ಆಯ್ಕೆ ಮಾಡಿದ ಪಾಪದ ಪಾಲುದಾರರ ಕಟಕಟೆಯಲ್ಲಿ ಈ ನಾಡಿನ ಜನತೆ ಕೂಡ ನಿಲ್ಲಬೇಕಿದೆ. ನಾವು ಸುಮ್ಮನಿದ್ದಷ್ಟು ಈ ಸರ್ಕಾರದ ನೀಚತನಗಳು ಕೊಬ್ಬುತ್ತಾ ಹೋಗುತ್ತಿವೆ. ಇವತ್ತು ಈ ನಾಡಿನ ಚಳುವಳಿಗಳು ಸಂಪೂರ್ಣ ನಿಷ್ಕ್ರಿಯೆಗೊಂಡಿರುವುದು ಕೂಡ ಫ್ಯಾಸಿಸ್ಟ್ ಶಕ್ತಿಗಳು ಬೆಳೆಯಲು ಕಾರಣವಾಗಿದೆ. ಇಂಥ ಬಲಪಂಥೀಯ ತತ್ವ ಪ್ರಣೀತ ಸರ್ಕಾರಕ್ಕೆ ಎದುರಾಗಿ ದಲಿತ, ರೈತ, ಎಡ ಪಂಥೀಯ ಚಳುವಳಿಗಳು ಒಟ್ಟಾಗಿ ನಿಲ್ಲಬೇಕಾದದ್ದು ಈ ಹೊತ್ತಿನ ಅನಿವಾರ್ಯ.

ಪೊಲೀಸು, ಕೋರ್ಟು, ಅಧಿಕಾರ ಶಾಹಿ ವರ್ಗಗಳು ಇವತ್ತು ಜನತೆಯ ಪರವಾಗಿ ನಿಲ್ಲುವ ವ್ಯವಸ್ಥೆಯ ಬುಡಕ್ಕೆ ಈ ಸರ್ಕಾರ ಕೊಡಲಿ ಪೆಟ್ಟು ನೀಡುತ್ತಿದೆ. ಜನರ ಪರ ನಿಲ್ಲಬೇಕಾದ ಸರ್ಕಾರಿ ಅಧಿಕಾರಿಗಳಂತೂ ಮಂತ್ರಿಗಳ ಮನೆಯಲ್ಲಿ ಜೀತಕ್ಕಿರುವವರಂತೆ ವರ್ತಿಸುತ್ತಿದ್ದಾರೆ. ಜನ ತಮ್ಮ ಅಸಹಾಯಕತೆಯನ್ನು, ಸಾತ್ವಿಕ ಸಿಟ್ಟನ್ನು ಯಾರಲ್ಲಿಯೂ ಹೇಳಿಕೊಳ್ಳದಂತಹ ಸ್ಥಿತಿಯನ್ನು ಈ ಸರ್ಕಾರ ನಿರ್ಮಿಸಿದೆ. ಭಾರತ ತನ್ನ ಇತಿಹಾಸದಲ್ಲಿ ಕಂಡ ಅತಿ ಕೆಟ್ಟ ಸರ್ಕಾರವೊಂದು ಆಳ್ವಿಕೆ ನಡೆಸುತ್ತಿರುವ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ.

ಫ್ಯಾಸಿಸಂ ಆವರಿಸುವ ಬಗೆ
ಎನ್.ಎಸ್.ಶಂಕರ್
ಒಂದು ಸ್ಪಷ್ಟ ರಾಜಕೀಯ ಉದ್ದೇಶವಿರದ ಈ ಸರ್ಕಾರದ ನಡೆಗಳ ಬಗ್ಗೆ ಮಾತನಾಡುವುದೇ ಇವತ್ತು ಸಿನಿಕತನದಂತೆ ಕಾಣುತ್ತಿದೆ. ಜನ ರಾಜಕೀಯದ ಬಗ್ಗೆ ಮಾತಾಡೋದೇ ಅಸಹ್ಯ ಅನ್ನಿಸುವಷ್ಟರ ಮಟ್ಟಿಗೆ ಈ ಸರ್ಕಾರ ಬಂದು ನಿಂತಿದೆ. ಕುಮಾರಸ್ವಾಮಿ, ಯಡಿಯೂರಪ್ಪ ಒಟ್ಟುಗೂಡಿ ಸರ್ಕಾರ ರಚಿಸುವ ಸಂದರ್ಭಗಳು ಬಂದಾಗಲೇ ಈ ನಾಡಿನಲ್ಲಿ ಕೋಲಾಹಲ ಆಗಬೇಕಿತ್ತು. ಒoಟಿeಥಿ is ಠಿoತಿeಡಿ, ಠಿoತಿeಡಿ is moಟಿeಥಿ ಅನ್ನುವ ಸಿದ್ಧಾಂತದ ಬೇರುಗಳ ಮೇಲೆ ಈ ಸರ್ಕಾರ ನಿಂತಿದೆ. ಎಷ್ಟೆಂದರೆ ಈ ಸರ್ಕಾರಕ್ಕೆ ದುಡ್ಡಿನ ಆದ್ಯತೆಯ ಮುಂದೆ ಪ್ರಜಾಪ್ರಭುತ್ವವನ್ನು ಬಲಿಕೊಡುವ ಕಲೆಗಳು ಗೊತ್ತು. ನಮ್ಮ soಛಿiಚಿಟ ಚಿಣmosಠಿheಡಿe ಹೇಗಿದೆ ನೋಡಿ: ಈ ಸರ್ಕಾರದ ಅಜೆಂಡಾಗಳಿಗೆ ತಕ್ಕಂತೆ ಇವತ್ತು ನಾವು ನೋಡುವ ಟಿ.ವಿ.ಗಳಲ್ಲಿ ಜ್ಯೋತಿಷ್ಯ, ಬ್ರಹ್ಮಾಂಡ, ವಾಸ್ತು, ಗುರು ರಾಘವೇಂದ್ರ ಮಹಿಮೆಗಳು ಟಿ.ಆರ್.ಪಿ. ಹೆಸರಿನಲ್ಲಿ ಕಾಲಿಕ್ಕಿವೆ. ಸಮಾಜವನ್ನು ಫ್ಯಾಸಿಸಂ ಆವರಿಸಿಕೊಳ್ಳುವ ಬಗೆ ಇದು. ಜನರಿಗೆ ಸಿಟ್ಟೇ ಬರುತ್ತಿಲ್ಲವೋ ಹೇಗೋ ಗೊತ್ತಾಗುತ್ತಿಲ್ಲ. ಬಿಜೆಪಿಯನ್ನು ಮೂಲೆಗೆ ಸರಿಸುವ ಅವಕಾಶಗಳು ಜನರ ಕೈಗೆ ಬಂದು ಹೋಗಿವೆ. ದುಡ್ಡು ದೊಡ್ಡಾಟ ಆಡುತ್ತಿರುವಾಗ ಈ ಜನತಾನೇ ಹೇಗೆ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ ಹೇಳಿ. ಇವತ್ತು ಈ ನಾಡಿನ ಜನತೆಯನ್ನು ದೇವರೇ ಕಾಪಾಡಬೇಕು.

ಚಳುವಳಿಗಳು ಕೊಂಚ ಎಚ್ಚರ ತಪ್ಪಿದರೆ ಎಂಥ ಹೊಲಸು ನಮ್ಮನ್ನು ಆವರಿಸಿಕೊಳ್ಳಲಿದೆ ಎಂಬುದು ನಮ್ಮ ಜನಪರ ಚಳುವಳಿಗಳ ನಾಯಕರಿಗೆ ಈಗ ಗೊತ್ತಾಗಿರಬಹುದು. ಇವತ್ತು ನಮ್ಮ ಚಳುವಳಿಗಳು ಅಧಿಕಾರ ರಾಜಕಾರಣದ ಹೊರಗೆ ನಿಂತು ಬಿಜೆಪಿಯಂತಹ ಪಕ್ಷವನ್ನು ಮಣಿಸಬೇಕಿದೆ. ನಮ್ಮ ಕಾಲದ ದುರಂತವೆಂದರೆ ಅಧಿಕಾರದಲ್ಲಿರುವ ಬಿಜೆಪಿ ಜನರ ಕಣ್ಣಿಗೆ ಖಳನಂತೆ ಕಾಣುತ್ತಿರುವಾಗಲೇ ವಿರೋಧ ಪಕ್ಷದಲ್ಲೊಬ್ಬ ಭರವಸೆ ಹುಟ್ಟಿಸಬಲ್ಲ ನಾಯಕ ಕಾಣುತ್ತಿಲ್ಲ. ನಮ್ಮ ಯಾವ ನಾಯಕನ ಮುಖದಲ್ಲೂ ಜನತೆಗೆ ವಿಶ್ವಾಸ ತುಂಬಬಲ್ಲ ಭರವಸೆಯ ಗೆರೆಗಳೇ ಕಾಣುತ್ತಿಲ್ಲ.

ಪ್ರಜಾಪ್ರಭುತ್ವದ ಮೇಲೆ ಗಾಯದ ಕಲೆಗಳು

ರಂಜಾನ್ ದರ್ಗಾ
Everybody stabbing democracy ಪ್ರಜಾಪ್ರಭುತ್ವವನ್ನು ಲೂಟಿ ಮಾಡುವುದರ ಜೊತೆಗೆ ಅದನ್ನು ಹರಿತ ಆಯುಧಗಳಿಂದ ಗಾಯವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಯಾವಾಗ ಜೆಡಿ(ಎಸ್) ಪಕ್ಷದ ಮುಖಂಡರು ಬಿಜೆಪಿಯೊಂದಿಗೆ ಕೈ ಮಿಲಾಯಿಸಿದರೋ ಅವತ್ತಿನಿಂದಲೇ ಈ ನಾಡಿನ ಪ್ರಜಾಪ್ರಭುತ್ವದ ಮೇಲೆ ಗಾಯದ ಕಲೆಗಳು ಮೂಡಿದವು. ಈಗ ಬಿಜೆಪಿಯಲ್ಲಿ ರಾಜಕಾರಣಿಗಳಿಲ್ಲ; ಬಂಡವಾಳಶಾಹಿಗಳು ರಾಜಕಾರಣದ ತೊಗಲು ತೊಟ್ಟಿದ್ದಾರಷ್ಟೆ.

ಇವತ್ತು ಪ್ರಜಾಪ್ರಭುತ್ವವನ್ನು ನಾವು ಈ ನವಲೂಟಿಕೋರರಿಂದ ಉಳಿಸುವ ಸಾಹಸಗಳಿಗೆ ಕೈ ಹಾಕಬೇಕು. ಚಳುವಳಿಯ ಕಾರ್ಯಕರ್ತರು ಸುಸ್ತಾಗಲಿಲ್ಲ ಬದಲಿಗೆ ಅದರ ನಾಯಕರ ಹೆಗಲ ಮೇಲೆ ಪ್ರಭುತ್ವದ ದೊರೆಗಳು ಕೈಯಿಟ್ಟು ಅವರನ್ನು ಪ್ರಾಧಿಕಾರ, ಪರಿಷತ್‌ಗಳಿಗೆ ಗಂಟು ಹಾಕಿದರು. ದಲಿತ, ಬಂಡಾಯ, ರೈತ, ಕನ್ನಡ ಚಳುವಳಿಗಳ ಯಾವುದೇ ನಾಯಕನನ್ನು ನೀವು ಗಮನಿಸಿ ಎಲ್ಲರೂ ಅಧಿಕಾರ ರಾಜಕಾರಣದಿಂದ ದೂರವಿದ್ದವರೇ. ಆದರೆ ಈಗ ಎಲ್ಲರೂ ಪ್ರಭುತ್ವದ ಹಾಲಿ-ಮಾಜಿ ಫಲಾನುಭವಿಗಳೇ.

ನಮ್ಮ ಪ್ರಜಾಪ್ರಭುತ್ವವನ್ನು ಬಿಜೆಪಿಯಂತಹ ಪಕ್ಷ ಎಷ್ಟು ಚೆನ್ನಾಗಿ ಗೇಲಿ ಮಾಡುತ್ತಿದೆ ಎಂದರೆ: ಮೊನ್ನೆ ಈ ಸರ್ಕಾರ ವಾಲ್ಮೀಕಿ ಜಯಂತಿ ನೆಪದಲ್ಲಿ ಸರ್ಕಾರಿ ರಜೆ ಘೋಷಿಸಿದ್ದು ಬೇಡ ಜನಾಂಗದ ಮೇಲಿನ ಪ್ರೀತಿಯಿಂದಲ್ಲ; ರಾಮಾಯಣದೆಡೆಗಿನ ತನ್ನ ಗುಪ್ತ ಅಜೆಂಡಾದಿಂದ. ವಾಲ್ಮೀಕಿ ಹೆಸರಿನಲ್ಲಿ ಬೇಡರನ್ನು ಖರೀದಿಸುವ ಕೆಲಸ ಇದು. ನಾಳೆ ವ್ಯಾಸನನ್ನು ಕೊಂಡಾಡಿ ಬೆಸ್ತರನ್ನು, ಕಾಳಿದಾಸ, ಕನಕದಾಸರ ಭಜನೆ ಕೀರ್ತನೆಗಳಲ್ಲಿ ಕುರುಬರನ್ನು ಖರೀದಿಸುವ ಪ್ರಯತ್ನಗಳಿಗೆ ಬಿಜೆಪಿ ಕೈ ಹಾಕಬಹುದು.

ದಲಿತ, ರೈತ, ಭಂಗಿ, ಮಹಿಳೆ, ಶ್ರಮಿಕರನ್ನೆಲ್ಲ ಒಳಗೊಂಡಿರುವ ಈ ದೇಶದಲ್ಲಿ ಭಾಗವಧ್ವಜ ಹಿಡಿದವರದ್ದು ಮಾತ್ರ ನಿಜವಾದ ದೇಶಪ್ರೇಮವೆಂದು ಕೋಮುಶಕ್ತಿಗಳು ಮುಗ್ಧ ಜನತೆಯನ್ನು ನಂಬಿಸುವ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಒಂದು ಕ್ರೌರ್ಯವನ್ನು ಎದುರಿಸಲಿಕ್ಕೆ ಇನ್ನೊಂದು ಕ್ರೌರ್ಯದ ಜೊತೆ ಸೇರುತ್ತೀನಿ ಅಂದರೆ ಆಗುತ್ತಾ? ಒಂದು ಭರವಸೆಯಿದೆ: ಅದು ಜನತೆಯ ಚಳುವಳಿ. ಇವತ್ತು ಹರಿದು ಛಿದ್ರಗೊಂಡಿರುವ ನಮ್ಮ ನಾಡಿನ ಯಾವುದೇ ಮನುಷ್ಯಪರ ಚಳುವಳಿಗಳಿರಬಹುದು, ಯಾವುದಕ್ಕೂ ರಕ್ತದ ಕಲೆಗಳು ಮೆತ್ತಿಕೊಂಡಿಲ್ಲ.

ಪ್ರಜ್ಞಾವಂತರ ಸೋಲು

ಪ್ರೊ.ಚಂದ್ರಶೇಖರ ಪಾಟೀಲ್
ಕರ್ನಾಟಕದ ಮಾನವಂತರು ರಾಜಕಾರಣದ ಬಗ್ಗೆ ಮಾತನಾಡಲು ಹೇಸಿಗೆ ಪಟ್ಟುಕೊಳ್ಳುವಂತಹ ಸಂದರ್ಭ ಇದು. ಬಿಜೆಪಿಯಂತಹ ಪಕ್ಷ ಅಧಿಕಾರಕ್ಕೆ ಬರಲು ಜನ ಕಾರಣ ಅಂಥ ನಾನು ಹೇಳುವುದಿಲ್ಲ. ಇಲ್ಲಿ ಜನತೆಯನ್ನು ದೂಷಿಸಿ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕದುದ್ದಕ್ಕೂ ಪ್ರಜ್ಞಾವಂತರಿದ್ದು ಬಿಜೆಪಿಯಂತಹ ಪಕ್ಷ ಪ್ರಭುತ್ವದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತೆಂದರೆ ಇದು ನಿಜಕ್ಕೂ ಪ್ರಜ್ಞಾವಂತರ ಸೋಲು. ವಾಚಕರ ವಾಣಿಗೆ ಪತ್ರ ಬರೆದ ಮಾತ್ರಕ್ಕೆ ರಾತ್ರೋರಾತ್ರಿ ದೊಡ್ಡ ಕ್ರಾಂತಿಯಾಗಿಬಿಡುವುದಿಲ್ಲ. ಈ ಮಣ್ಣಿನ ಪ್ರಜ್ಞಾವಂತರು, ನಮ್ಮ ಚಳುವಳಿಗಳು ಇವತ್ತು ನೇರ ಜನರನ್ನು ಮುಟ್ಟಬೇಕಿದೆ. ಇಂಥ ಪ್ರಯತ್ನಗಳು ಶಿವಮೊಗ್ಗ, ಮೈಸೂರಿನಲ್ಲಿ ಅಷ್ಟಿಷ್ಟು ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳ ಬಗ್ಗೆ ನಮ್ಮ ಜನ ಯಾವತ್ತೋ ನಂಬಿಕೆ ಕಳೆದುಕೊಂಡಿದ್ದಾರೆ. ಇಂಥ ಹೊತ್ತಲ್ಲಿ ಈ ನಾಡಿನ ಪ್ರಜ್ಞಾವಂತರು ಅಕ್ಷರ ವಂಚಿತ ಜನರಿಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬೇಕು.


6 ಟಿಪ್ಪಣಿಗಳು (+add yours?)

 1. williams
  ಡಿಸೆ 19, 2010 @ 08:25:56

  Komuvaadavalla Kalla Hana
  Good. I liked the opinions of 4 most popular thinkers. I do agree. We have never seen this type of fundamentalism focussed thieves before. But what we are doing ? Where is our rural people stand here. Why the most generous leaders coming forward to transform the reality to the rural people. ? Because most of our Urbans donot have time to read, discuss and most of them want easy go life and rurals are most busy in hand to mouth business. They are not interested except grabbing some money during election. Who else now ? May be the question arise “What I am doing” . The opinions really made me to think . THANKS to Nirupama

  ಉತ್ತರ

 2. subraya Hegade
  ನವೆಂ 12, 2010 @ 19:13:49

  brushtateya bagege duradaliteya bagege satvika krourya vyaktavagide.
  Adare yarannu nambabeeku, Yarannu puraskarisa beeku ennuvudee
  tiliyadanta Aayoomaya sandarbha idu. Iiga beekagiruvudu shudha
  pramanika Rajakeeyateeta sanghatane. Mattu prati bhatane.

  ಉತ್ತರ

 3. D.S.PRAKASH
  ನವೆಂ 11, 2010 @ 19:11:08

  ಕರ್ನಾಟಕ ರಾಜ್ಯದಲ್ಲಿನ ಬಿ.ಜೆ.ಪಿ. ಆಡಳಿತದ ಸರ್ಕಾರದ ಬಗ್ಗೆ ಕಿಡಿಕಾರಿರುವ ನಾಲ್ವರು
  ,ಇತರೆ ರಾಜ್ಯಗಳಲ್ಲಿ ಒಳ್ಳೆಯ ಆಡಳಿತ ನೀಡುತ್ತಿರುವುದರ ಬಗ್ಗೆ ತಿಳಿಸದೇ [ಉದಾ;ಗುಜರಾತ್ ]
  ಜಾಣ ತನ ಪ್ರದರ್ಶಿಸುತ್ತಾರೆ. ಈ ಸರ್ಕಾರ ಭ್ರಷ್ಟ ವಾಗಿದ್ದರೂ ಜೊತೆ ಜೊತೆ ಯಲ್ಲಿಯೇ ಅಭಿವೃಧಿ ಕಾರ್ಯಗಳೂ ನಡೆಯುತ್ತಿರುವುದೂ ಅಷ್ಟೇ ನಿಜ. ಇತರೆ ಪಕ್ಷಗಳು ತಿನ್ನುವುದಕ್ಕೆ ತಮಗೆ
  ಸಿಗುತ್ತಿಲ್ಲವಲ್ಲ ಎಂದು ಮೈ ಪರಚಿಕೊಳ್ಳುತ್ತಿವೆ.ಅವರು ಹೇಳುವುದೆಲ್ಲ ನಾಣ್ಯದ ಒಂದು ಮುಖ
  ಒಳ್ಳೆಯದನ್ನು ಹೊಗಳುವ ಕೆಲಸವನ್ನು ನೀವೇಕೆ ಮಾಡುತ್ತಿಲ್ಲ?
  ನಿಮಂತಹ ವರ ಮಾತನ್ನು ಆಷಾಡಭೂತಿಗಳ ಮಾತೆಂದು ನಮ್ಮ ಜನ ತಿಳಿಯದಷ್ಟು
  ಮೂರ್ಖರೆನಲ್ಲ.
  ಬೇಲೂರು ದ.ಶಂ.ಪ್ರಕಾಶ್.
  .

  ಉತ್ತರ

 4. Vithal Dalawai
  ನವೆಂ 11, 2010 @ 18:40:11

  Ee rajakiya vyavaste adhapatanada anchinallide. Adakkagi prajnavantaru ivattu janakke muttuvanta chalavali sangatisabekide. Nirupama patrike nirantara ee diseyalli nammannu kondoyyali.

  ಉತ್ತರ

 5. katte
  ನವೆಂ 11, 2010 @ 16:18:23

  ನಾವು ನೀವೆಲ್ಲಾ ಸೇರಿ ರಾಜಕೀಯಾನ ಶುಧಿಗೊಳ್ಸಾನ ತಗೋ ಮತ್ತೆ

  ಉತ್ತರ

 6. Mahesh
  ನವೆಂ 11, 2010 @ 11:21:15

  ಸಮಾಜವಾದ ಇನ್ನೊಬ್ಬರಿಗೆ ಉಪದೇಶ ಕೊಡುವದಕ್ಕೆ ಚಂದ. ಭ್ರಷ್ಟ ಸರಕಾರಗಳು ತೊಲಗಬೇಕು. ಅದರ ಬಗ್ಗೆ ಎರಡು ಮಾತಿಲ್ಲ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: