ಕವಿಗೋಷ್ಟಿಯಲ್ಲಿ ಒಬಾಮಾ

ಅಣಕ

ಅಮೆರಿಕದ ಪುಣ್ಯಂ ಒಬಾಮ ರೂಪದೊಳ್ ಬಂದಂತೆ……!

ವಾರ್ತಾ ಭಾರತಿ

ಅಮೆರಿಕದ ಅಧ್ಯಕ್ಷ ಒಬಾಮ ಅವರು ಭಾರತಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಆವರಣದಲ್ಲಿ ಒಂದು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ ಕುಖ್ಯಾತ ಕವಿಗಳೆಲ್ಲ ಅದರಲ್ಲಿ ಆಸೀನರಾಗಿದ್ದರು. ಪ್ರಧಾನಮಂತ್ರಿ ಮನಮೋಹನ ಸಿಂಗರಿಂದ ಹಿಡಿದು, ಮಹಾಕವಿ ವೀರಪ್ಪ ಮೊಯ್ಲಿಯವರೆಗೆ ಎಲ್ಲ ಕವಿಗಳೂ ಅಲ್ಲಿ ನೆರೆದಿದ್ದರು. ಒಬಾಮ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಲಾಗಿತ್ತು. ಕಾರ್ಯಕ್ರಮ ನಿರ್ವಹಣೆಯ ಹೊಣೆಗಾರಿಕೆಯನ್ನು ಬೊಂಬಾಯಿ ಬಾಯಿಯ ಸುಷ್ಮಾ ಸ್ವರಾಜ್ ವಹಿಸಿಕೊಂಡಿದ್ದರು. ಕೊನೆಗೂ ಕವಿಗೋಷ್ಠಿ ಆರಂಭವಾಯಿತು. ಆರಂಭದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ಕವಿತೆಯನ್ನು ಓದಲೆಂದು ಎದ್ದು ನಿಂತರು.

ಮನಮೋಹನ್ ಸಿಂಗ್ ಒಬಾಮರನ್ನು ಓರೆಗಣ್ಣಲ್ಲಿ ನೋಡುತ್ತಲೇ ನಾಚಿ ತನ್ನ ದಷ್ಟಿಯನ್ನು ನೆಲದತ್ತ ಹಾಯಿಸಿದರು. ಪ್ರಿಯತಮನನ್ನು ನೋಡಿದ ಪ್ರೇಯಸಿಯ ಹಾಗೆ ಅವರು ಕಂಪಿಸುತ್ತಿದ್ದರು. ತನ್ನ ಜುಬ್ಬಾದಿಂದ ಕವಿತೆಯನ್ನು ಹೊರತೆಗೆದವರೇ ರಾಗ ಕಟ್ಟಿ ಹಾಡತೊಡಗಿದರು.

‘‘ನಮ್ಮದೆಲ್ಲ ನಿಮ್ಮದುನಿಮ್ಮದೆಲ್ಲ ನಿಮ್ಮದು
ಖಂಡವಿದೆಕೋ, ಮಾಂಸವಿದೆಕೋ
ನಮ್ಮದೆಲ್ಲ ನಿಮ್ಮದು…!!ಪಲ್ಲವಿ!!
ನನ್ನ ಮಾನವು ನಿಮ್ಮದು
ನನ್ನ ಶೀಲವು ನಿಮ್ಮದು
ನಿಮ್ಮ ಸೇವೆಯ ಮಾಡಲು
ನಮಗೆ ಅವಕಾಶ ನೀಡಿರಿ
ನಮ್ಮ ದೇಶವ ಕೊಳ್ಳೆ ಹೊಡೆಯಿರಿ
ನಮ್ಮ ರೈತರ ತಿಂದು ತೇಗಿರಿ
ನಮ್ಮದೆಲ್ಲವು ನಿಮ್ಮದುನಿಮ್ಮದೆಲ್ಲ ನಿಮ್ಮದು!!ಪಲ್ಲವಿ!!

ಎಂದು ಕವಿತೆಯನ್ನು ವಾಚಿಸಿ ಒಬಾಮರ ಮುಖವನ್ನು ಆತಂಕದಿಂದ ನೋಡಿದರು. ಒಬಾಮಗೆ ಖುಷಿಯಾಗಿದ್ದು ಕಂಡು, ಮನಮೋಹನ ಸಿಂಗ್ ನಿರಾಳರಾದರು. ನೆರೆದ ಸಭಿಕರು ಭಾರೀ ಚಪ್ಪಾಳೆ ತಟ್ಟಿದರು. ಈಗ ಬಿಜೆಪಿಯ ಮಹಾನಾಯಕ, ಅಟಲ್ ಬಿಹಾರಿ ವಾಜಪೇಯಿ ಕವಿತೆ ಓದಲು ಸಿದ್ಧರಾದರು. ಅಸ್ವಸ್ಥರಾಗಿದ್ದ ಕಾರಣ ಮಂಚದಲ್ಲಿ ಅವರನ್ನು ಮಲಗಿಸಲಾಗಿತ್ತು. ಮಲಗಿದಲ್ಲೇ ಅವರು ತಮ್ಮ ಕವಿತೆಯನ್ನು ವಾಚಿಸತೊಡಗಿದರು.

‘‘ಬಾಮಭಾರತದ ಪಾಲಿಗೆ ಶ್ರೀರಾಮ
ಕುಚೇಲನ ಮನೆಗೆ ಬಂದ ಕಷ್ಣ
ತೆಗೆದುಕೋ, ಕಿತ್ತುಕೋ ನಮ್ಮ ರೈತರ, ಕಾರ್ಮಿಕರ ತಟ್ಟೆಗಳಿಂದ ಅವಲಕ್ಕಿ!
ನಿನ್ನ ಆಗಮನದಿಂದ ನಾವು ತುಂಬಾ ಲಕ್ಕಿ
ಆದರೆ ನಾನು ಮತ್ತೆ ಪ್ರಧಾನಿ
ಸದಾ ನಿನಗೆ ಚಿರ ಋಣಿ….’’ ವಾಚಿಸುತ್ತಿದ್ದ ಹಾಗೆಯೇ ಉಬ್ಬಸದಿಂದ ಏದುಸಿರು ಬಿಡತೊಡಗಿದರು. ಅವರನ್ನು ಮತ್ತೆ ಮೆಲ್ಲಗೆ ಮಂಚದಲ್ಲಿ ಮಲಗಿಸಲಾಯಿತು.
ಈಗ ಮಹಾಕವಿ ವೀರಪ್ಪ ಮೊಯ್ಲಿ ಕವನ ವಾಚಿಸಲು ಎದ್ದು ನಿಂತರು.
‘‘
ಅಮೆರಿಕದ ಪುಣ್ಯಂ ಒಬಾಮ ರೂಪದೊಳ್ ಬಂದಂತೆ
ನಮ್ಮ ದೇಶದೊಳ್ ಕಾಲಿಟ್ಟ ಶೂದ್ರ ನಾಯಕನೇ
ನಿಮಗೆ ಕಾವ್ಯದೊಳ್ ಸುಸ್ವಾಗತಂ ಕೋರುವೆನ್
ಮಹಾಕವಿ, ಸರಸ್ವತಿ ವರಪುತ್ರ ವೀರಪ್ಪ!
ನಿನ್ನ ಕಪೆಯಿದ್ದರೆ ನನಗೆ ನೊಬೆಲ್ ಸಿಗುವದು
ನಿನ್ನ ಕಪೆಯಿದ್ದರೆ ನನಗೆ ಬೂಕರ್ ಒಲಿಯುದು
ನಿನ್ನ ಒಲವಿದ್ದರೆ ಮ್ಯಾಗ್ಸೆಸೆ ಆಗಮಿಸುವುದು
ನೀನು ಒಲಿದರೆ ನಾನ್ ರಾಷ್ಟ್ರಪತಿ ಆಗುವೆನ್
ನೀನು ಒಲಿದರೆ ನಾನ್ ಪ್ರಧಾನಿಯಾಗುವೆನ್
ಹರ ಹರ ಶ್ರೀ ಚೆನ್ನ ಒಬಾಮೇಶ್ವರ….’’

ವೀರಪ್ಪ ಮೊಯ್ಲಿ ತಮ್ಮ ಕಾವ್ಯವನ್ನು ಮುಗಿಸುತ್ತಿದ್ದಂತೆಯೇ, ಉಡುಪಿಯಲ್ಲಿ ಶ್ರೀಕಷ್ಣನು ಕನಕಕಿಂಡಿಯ ಮೂಲಕ ಹಲ್ಲುಕಿರಿದದ್ದನ್ನು ಪೇಜಾವರಶ್ರೀ ಕಂಡು ಮೂಕವಿಸ್ಮಿತರಾದರು. ಮಹಾಕಾವ್ಯಕ್ಕೆ ಮುನ್ನುಡಿ ಬರೆಯಲು ದಕ್ಷಿಣ ಕನ್ನಡದ ವಿದ್ವಾಂಸರು ಅದಾಗಲೇ ಪೈಪೋಟಿಗಿಳಿದಿದ್ದರು. ಮೈಸೂರಿನ ವಿದ್ವಾಂಸರು ಅದಾಗಲೇ ಕಾವ್ಯದ ಸೊಗಡನ್ನು ವಾಲ್ಮೀಕಿ ರಾಮಾಯಣ ದೊಂದಿಗಿಟ್ಟು ವ್ಯಾಖ್ಯಾನಿಸತೊಡಗಿದ್ದರು. ವೀರಪ್ಪ ಮೊಯ್ಲಿಯ ಮಗಳು ಕಾವ್ಯವನ್ನು ನತ್ಯರೂಪಕವಾಗಿಸಿ, ಅದಾಗಲೇ ಕಾಂಗ್ರೆಸ್ ಕಚೇರಿಯಲ್ಲಿ ನರ್ತಿಸತೊಡಗಿದ್ದರು.

ಇದೀಗ ಬಂಡಾಯ ಕವಿ, ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಕವಿತೆ ವಾಚಿಸಲು ಎದ್ದು ನಿಂತರು. ಅವರು ಎದ್ದು ನಿಂತದ್ದೇ, ಕರ್ನಾಟಕದಲ್ಲಿ ಬರಗೂರು ರಾಮಚಂದ್ರಪ್ಪಒಬಾಮ ಮತ್ತು ಬಂಡಾಯಎಂಬ ಚಿತ್ರವನ್ನು ಚಿತ್ರೀಕರಿಸಲು ಆರಂಭಿಸಿದರು. ಕಾರಟ್ ಅವರನ್ನು ಚಿತ್ರಕ್ಕೆ ನಾಯಕರನ್ನಾಗಿ ಮಾಡಿದರು. ‘ಕೆಂಪ ವಂದನೆ ಘೋಷಣೆಯೊಂದಿಗೆ ಕಾರಟ್ ತಮ್ಮ ಕವಿತೆಯನ್ನು ವಾಚಿಸತೊಡಗಿದರು.

‘‘ಕಪ್ಪು ಒಬಾಮನಿಗೆ ಕೆಂಪು ವಂದನೆ
ಕಾರ್ಲ್ಮಾರ್ಕ್ಸ್ ಹೊಸ ಅವತಾರವೇ
ನಿನಗೆ ಕೆಂಪು ವಂದನೆ
ಕೆಂಪು ಹಾಸು ಹಾಸಿದ್ದೇವೆ ಪಶ್ಚಿಮಬಂಗಾಳಕ್ಕೆ
ನಿನ್ನ ಪಾದವನ್ನು ಅದರ ಮೇಲಿಡು
ಕಾರುಗಳೊಂದಿಗೆ ಬಾಸೆಝ್ಗಳೊಂದಿಗೆ ಬಾ
ಉದ್ದಿಮೆಗಳೊಂದಿಗೆ ಬಾನಿನ್ನ ಕಚೇರಿಗಳಲ್ಲಿ
ನಮ್ಮ ಕೆಂಪು ಬಾವುಟ ಹಾರಲಿ
ಕಪ್ಪು ಒಬಾಮನಿಗೆ ಕೆಂಪು ವಂದನೆ….’’
ಕಾರಟ್ ಹಾಡಿಗೆ ಇಡೀ ಪಶ್ಚಿಮ ಬಂಗಾಳ ಕೋರಸ್ ಹಾಡಿತು. ನಂದಿಗ್ರಾಮದಲ್ಲಿ ಪೊಲೀಸರ ಗುಂಡಿಗೆ ಪ್ರಾಣತ್ಯಾಗ ಮಾಡಿದ ರೈತರ ಆತ್ಮಗಳೆಲ್ಲ ನರ್ತಿಸತೊಡಗಿತು.
ಅಷ್ಟರಲ್ಲಿ ರಾಷ್ಟ್ರೀಯ ಕವಿ ಪ್ರವೀಣ್ ತೊಗಾಡಿಯ ಎದ್ದು ನಿಂತರು. ಸಭೆಯಲ್ಲಿಶ್ರೀ ರಾಂಮೊಳಗಿತು. ತೊಗಾಡಿಯ ಎದ್ದು ನಿಂತವನೇ ಘರ್ಜಿಸತೊಡಗಿದ.
ಜಾಗತಿಕ ಶಕ್ತಿ ಒಬಾಮ
ಕೊಡು ನಿನ್ನ ಕ್ಷಿಪಣಿಅದನ್ನು ಹಾರಿಸಿ
ಪಾಕಿಸ್ತಾನವ ಧೂಳಿಪಟ ಮಾಡುವೆವು
ಕೊಡು ನಿನ್ನ ಬಂದೂಕು
ಅದನ್ನು ಮುಸ್ಲಿಮರ ಮೇಲೆ ಹಾರಿಸಿ
ದೇಶವ ಪುಣೀತಗೊಳಿಸುವೆವು
ಕೊಡು ನಿನ್ನ ಅಣ್ವಸ್ತ್ರ
ಅದನ್ನು ಬಳಸಿ ಶೂದ್ರ, ದಲಿತ, ಮ್ಲೇಚ್ಛರ ಮೇಲೆ ಹಾಕಿ
ಹಿಂದೂ ಧ್ವಜವ ಹಾರಿಸುವೆವು
ವಿಷ್ಣುವಿನ ಹನ್ನೊಂದನೇ ಅವತಾರ ಒಬಾಮ
ಬಾಗುವೆವು ನಿನಗೆ ಬಾಗುವೆವು…’’
ತೊಗಾಡಿಯಾ ಕುಳಿತದ್ದೇ ಶಾರುಕ್ ಖಾನ್ ಎದ್ದು ನಿಂತು ತಮ್ಮ ಎಂದಿನ ಶೈಲಿಯಲ್ಲಿ ಕವಿತೆ ವಾಚಿಸತೊಡಗಿದರು.
‘‘
ಮೈ ನೇಮ್ ಇಸ್ ಖಾನ್
ನಾನು ಉಗ್ರಗಾಮಿಯಲ್ಲ
ನಾನು ಭಯೋತ್ಪಾದಕನಲ್ಲ
ವಿಮಾನ ನಿಲ್ದಾಣದಲ್ಲಿ ನನ್ನ ತಪಾಸಣೆಯನ್ನೇಕೆ ಮಾಡುವಿರಿ?
ನಾನು ಮುಸಲ್ಮಾನ
ಆದರೆ ಅಮೆರಿಕಕ್ಕೆ ನನ್ನ ನಮನ
ಮೈ ನೇಮ್ ಇಸ್ ಖಾನ್
ನಾನು ಉಗ್ರಗಾಮಿಯಲ್ಲ
ಉಗ್ರ ಉಗ್ರನೆಂದು ಬೀಳುಗಳೆವಿರಿ ಯಾಕೆ
ನಾನು ಧರಿಸುತ್ತಿರುವುದು ಅಮೆರಿಕದ ಬಟ್ಟೆ
ಕುಡಿಯುತ್ತಿರುವುದು ಪೆಪ್ಸಿ
ನೆಕ್ಕುತ್ತಿರುವುದು ಅಮೆರಿಕದ ಕಾಲು
ಅಮೆರಿಕದ ಕಂಪೆನಿಗಳಿಗೆ ಮೋಡಲ್ ನಾನು
ಮೈ ನೇಮ್ ಇಸ್ ಖಾನ್
ನಾನು ಉಗ್ರಗಾಮಿಯಲ್ಲ…..’’
ಒಬಾಮಗೆ ತುಂಬಾ ಖುಷಿಯಾಯಿತು. ಹತ್ತಿರಬಂದವರೇ ಶಾರುಕ್ನನ್ನು ತಬ್ಬಿಕೊಂಡರು. ಒಬಾಮ ಹೇಳಿದರು ‘‘ನನಗೆ ಮನವರಿಕೆಯಾಗಿದೆ, ನೀನು ಉಗ್ರಗಾಮಿಯಲ್ಲ’’ ಶಾರುಕ್ ಖಾನ್ ಸಂಭ್ರಮದಿಂದ ಕುಣಿಯತೊಡಗಿದರು ‘‘ನಾನು ಉಗ್ರಗಾಮಿಯಲ್ಲ….ಒಬಾಮ ಹೇಳಿದರು ನಾನು ಉಗ್ರಗಾಮಿಯಲ್ಲ….’’

ಕವಿಗೋಷ್ಠಿಯ ನಂತರ ಒಬಾಮಗೆ ಭಾರತದ ಪುರಾತನ ಜೀವಿಗಳೆಂದು ಹೇಳುವ ರೈತನ ಪ್ರತಿಕತಿಯನ್ನು ಅರ್ಪಿಸಲಾಯಿತು. ಬಳಿಕ ನೆರೆದ ಕವಿಗಳೆಲ್ಲ ನಾ ಮುಂದು, ತಾಮುಂದು ಎಂದು ಒಬಾಮನನ್ನು ಸ್ಪರ್ಶಿಸಿ ಧನ್ಯರಾಗಲು ಮುನ್ನುಗ್ಗಿದರು.

 

 

3 ಟಿಪ್ಪಣಿಗಳು (+add yours?)

 1. anasuya mr
  ನವೆಂ 10, 2010 @ 23:07:05

  Vyangadinda kodida kalpane tumbaa chennagide.

  ಉತ್ತರ

 2. tadagalale surendra rao
  ನವೆಂ 10, 2010 @ 21:54:00

  baraha mattu krutiyalli haagoo kriyeyalli amerikaada neetigalannu virodhisuttiruva prakash karatrannu kaviyaagisi obamanannu hogaluvante maadiddu vaastavakke dooravaada kalpane!

  ಉತ್ತರ

 3. armanikanth
  ನವೆಂ 10, 2010 @ 18:48:54

  kavighosti enaadrooo aagiddidre khandita ee tharada ashayavannooo naavu nodabekaagtaa ittu…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: