ಮಾಹಿತಿಯು, (ಅ) ತಂತ್ರವು ,(ಅ) ಜ್ನಾನವೂ …

ಸೂತ್ರಧಾರ ರಾಮಯ್ಯ

ನರಸಿಂಹರಾಜು: ದಾಂಪತ್ಯಸೌಖ್ಯ ಅನ್ನೋ ಪರಿಕಲ್ಪನೆಯೇ ‘ಪಥ್ಯ’ವಾಗಿರೋ ಮಾಹಿತಿ ತಂತ್ರಜ್ಞಾನದ ಕಪಲ್ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಡೈವೋರ್ಸ್ ಅರ್ಜಿಯನ್ನು ಹಿಡಿದು ಕೋರ್ಟುಗಳ ಮೆಟ್ಟಿಲೇರುತ್ತಿರುವುದು ಆಶ್ಚರ್ಯ! ಅಲ್ಲಾ, ಸದಾ ಜಣಜಣದ ಹೊಳೆಯಲ್ಲಿ ಮಿಂದರೂ, ಸಂಸಾರ ಸಾಗರದಲ್ಲಿ ಸಂತೋಷದಿಂದ ಈಜಲಾರದೆ ಮುಳುಗುತ್ತಿರುವರಲ್ಲಾ…,ಇದೇನು ಮಿಸ್ಟರಿ ಅಂತೀನಿ!

ಬಾಲಕೃಷ್ಣ: ಮಿಸ್ಟರಿ ಏನು ಬಂತು ಮಣ್ಣು; ಲ್ಯಾಕ್ ಆಫ್ ಕೆಮಿಸ್ಟರಿ ಅನ್ನು. ಮಣ್ಣಿನಮೇಲೆ (ನೆಲದ) ನಿಂತು ಜೀವನವನ್ನು ‘ರಸ’ ಯಾತ್ರೆ ಮಾಡಿಕೊಳ್ಳೋ ಕೆಮಿಸ್ಟ್ರಿ( ರಾಸಾಯನಿಕ ) ಬದಲು, ಗಾಳಿಯಲ್ಲಿ ತೇಲುತ್ತ -ಟೆಕ್ ನಿಕ್, ಮ್ಯಾಥ್ಸ್ , ಕ್ಯಾಲ್-ಖುಲಾಸ್ ಗಳನ್ನೇ ವೈಯುಕ್ತಿಕ ಜೀವನಕ್ಕೂ ಅಪ್ಲೈ ಮಾಡಿಕೊಂಡ್ರೆ, ಸಂಬಂಜಾ ಅನ್ನೋದು ಖುಲಾಸ್ ಆಗದೆ ಇದ್ದೀತೆ? ಜಗತ್ತಿಗೇ ಮಾಹಿತಿ ನೀಡ್ತೀವಿ ಅಂತಾ ಬೀಗುವ ಜನಾ, ಐಯ್ ಮೀನ್ IT ಗಂಡ ಹೆಂಡ್ತಿ;

ತಮ್ಮ ನಡುವೆಯೇ ಸರಿಯಾದ ಮಾಹಿತಿಯನ್ನು ಸಕಾಲದಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳದೆ, ಕಮ್ಯುನಿಕೇಶನ್ ಗ್ಯಾಪ್ ( ಬಿರುಕು) ನಲ್ಲಿ ಸಿಕ್ಕು,ಏಗಲಾರದೆ, ಅತಂತ್ರರಾಗಿ, ಮಾಜಿ ಸತಿ ಪತಿಗಳಾಗೋದು, ಒಳ್ಳೆಯ ವರಮಾನ ಬಂದ್ರು,ಅದು ಹಳ್ಳೀಲಿ, ಐ ಮೀನ್ ‘ಗ್ಲೋಬಲ್ ವಿಲೇಜ್’ ನಲ್ಲಿ ಹೋಗ್ತಾ ಇರೋದು!
ಶಾಂತಂ ಪಾಪಂ ! ಒಟ್ಟಾ, ನಮಿಗ್ಯಾಕ್ ಬಿಡಪ್ಪಾ ಇನ್ನೊಬ್ಬರ ಸುದ್ದಿ;  ನಮ್ಮದೇ ‘ಚಿತ್ರಾ-ನ್ನ’ ಗಾಂಧಿ ನಗರದಲ್ಲಿ ಬೇಯ್ತಾ ಇರೋವಾಗ. ಬಯ್ ಬಾಯ್.
END ಗುಟುಕು : ಹತ್ತಿರವೇ ಇದ್ದು, ಸದಾ ದೂರುವ ಸಹೋದರ ಸಂಬಂಧಿಗಿಂತಾ, ದು ಬಾಯಿ ಯಲ್ಲಿರೋ ದೂರದ (ದೂರದಿರುವ)
ಸಂಬಂಧಿ ಮೇಲು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: