‘ಮೇಷ್ಟ್ರಿರೋದು’…

-ನೀಲಿ ಗ್ಯಾನ

ಹೂವ ತುಂಬಿದ ಗಮಲು
ಕಾಣುವುದಿಲ್ಲವಲ್ಲಾ
ಎಂದವನ ಕಣ್ಣುಗಳನ್ನೆವೆಯಿಕ್ಕದೆ
ನೋಡಿ
‘ಪಾಪರೀ ಇವನಿಗೆ ಕಣ್ಣೇ ಇಲ್ಲ’
ಎಂದನುಕಂಪಿಸುವ;
ಮೂರ್ತಾನುಮೂರ್ತಗಳನ್ನು
ನಿಪ್ಪೊಳರಡಿ
ಅಲ್ಲಮನುಸುರಿಂದ ಉರುಬಿ
ಸುಡುಕೆಂಡದ ಬೆರಗು
ಕಣ್ಬೆಳಕು

ಆಕರಗಳನು ಈಡಾಡಿ
ನಿರಾಕಾರದಿ ಸಂಕರ
ಸಂಬಂಧಗಳ ಕಳಚಿ
ಸಂಬಂಜದೊಳಗುಳಿದ

ಆತ್ಮದೊಳೂ ಇಲ್ಲದೆ
ಅನಾತ್ಮನಲ್ಲೂ ಸಿಗದೇ
ಇದೆಂಥಾ ಆಟ
ಅಂಕ ಗಣಕ
ಸುಂಕ ಪದಕ
ಗುಣಾವಗುಣಗಳಿಗೂ ಎಟುಕದ
ಇದೆಂಥಾ ಕಣ್ಣಾಮುಚ್ಚಾಲೆಯಾಟ
‘ಹುಡುಕಿ’ ಇನ್ನೆಲ್ಲಿ ಹೋದಾರು
ವಿಧಾನಮಂಡಲದಲ್ಲೂ ಇಲ್ಲ
ಕಮಂಡಲದಲ್ಲೂ ಇಲ್ಲ
ಪರಿಷತ್ತಲ್ಲೂ ಇಲ್ಲ ಪ್ರಶಸ್ತಿಯಲ್ಲೂ ಇಲ್ಲ
ಆಹಾ..! ‘ಇಲ್ಲ’ದಲ್ಲಿರುವರಲ್ಲಾ
ಎಂಥಾ ಮೋಡಿಗಾರ

ಮುಗುದ ಮಣ್ಣು
ಜಲಸಂಸ್ಕೃತಿಗೆ ಹದವಾಗಿ
ತಿರುಗುವ ಕಾವ್ಯ ತಿಗರಿಯಿಂದ
ಮೂಡಿದ ಮೂಡಿದ
ಮೂಡಣದಿ ಪುದ್ಗಲನಾದ
ಪಡುವಣದಿ ಪುನರ್ಭವಿಸಿದ
ನೀರದೀವಿಗೆಯಲ್ಲಿ ಪಯಣಿಸುವ
ಇವನೆಂಥ ಜಲಗಾರ

ಇಲ್ಲೇ ಇದ್ದಾರೆ ಇರುವಲ್ಲೇ
ತಾಕುವ ಸ್ಪರ್ಶದಲ್ಲಿ
ಹಂಬಲದ ಅನಘದಲ್ಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: