ವಂದನೆಗಳೊಂದಿಗೆ, ದೇವನೂರ ಮಹಾದೇವ

ಡಾ|| ನಲ್ಲೂರು ಪ್ರಸಾದ್  ಆರ್.ಕೆ.

ಅಧ್ಯಕ್ಷರು

ಕನ್ನಡ ಸಾಹಿತ್ಯ ಪರಿಷತ್ತು.

ಬೆಂಗಳೂರು ಇವರಿಗೆ.


ಮಾನ್ಯರೇ

ವಿಷಯ: ನೃಪತುಂಗ ಪ್ರಶಸ್ತಿ ಪಡೆಯಲೋಸುಗಉಲ್ಲೇಖ: ಕಸಾಪ/ದತ್ತಿ/ಬಿ.ಎಂ.ಟಿ.ಸಿ/2010-11/ 8-54
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾ ಈ ಸಂದರ್ಭದಲ್ಲಿ – ಒಂದು ವಿನಂತಿಯನ್ನು ತಮ್ಮ ಮುಂದಿಡುವೆ:ಉನ್ನತ ಶಿಕ್ಷಣದವರೆಗೂ ಕನ್ನಡಮಾಧ್ಯಮವಾಗುವುದನ್ನೇ ಹಂಬಲಿಸುತ್ತಾ ಅದನ್ನು ಕಾಣದೆ ಕಣ್ಮುಚ್ಚಿದ ಮಹಾಕವಿ ಕುವೆಂಪು ಅವರನ್ನು ನೆನೆಸಿಕೊಳ್ಳುತ್ತಾ, ಹಾಗೇ, ‘ಕನ್ನಡ ಶಿಕ್ಷಣಮಾಧ್ಯಮಕ್ಕಾಗಿ ಚಿಕ್ಕ ಹುಡುಗನಾಗಿದ್ದಾಗ ಪ್ಲೆಕಾಡರ್್ ಹಿಡಿದುಕೊಂಡು ಕೂಗಾಡುತ್ತಿದ್ದೆ. ಈಗ ವಯಸ್ಸಾದ ಮೇಲೆ ಕೋಲು ಹಿಡಿದುಕೊಂಡು ಅದೇ ಬೇಡಿಕೆ ಕೇಳುತ್ತಿದ್ದೇನೆ, ಪರಿಸ್ಥಿತಿಯಲ್ಲಿ ಏನೂ ವ್ಯತ್ಯಾಸವಾಗಲಿಲ್ಲ-ನನಗೆ ವಯಸ್ಸಾದದ್ದೊಂದನ್ನು ಬಿಟ್ಟು’ ಎನ್ನುತ್ತಿದ್ದ ಡಾ|| ಹಾ.ಮಾ. ನಾಯಕರ ಮಾತುಗಳೂ ಅವರೊಡನೇ ಕಾಲವಶವಾಗಿವೆ.

ಚಿತ್ರ ಕೃಪೆ: ಏನ್ ಗುರು ಕಾಫಿ ಆಯ್ತಾ

ಇಂದು ಕನ್ನಡದ ಪರಿಸ್ಥಿತಿಯನ್ನು  ನೋಡಿದರಂತೂ ಕನ್ನಡವು ಶಿಕ್ಷಣ ಮಾಧ್ಯಮವಾಗದೆ ಕನ್ನಡದ ಪಾದಗಳು ಶಕ್ತಿಹೀನವಾಗಿ,  ನಡೆಯಲು ಕಷ್ಟಪಡುತ್ತ ಕಂಕಳುಕೋಲು ಹಿಡಿದುಕೊಂಡು ಯಾತನಾಮಯವಾಗಿ ನಡೆಯುತ್ತಿರುವಂತೆ ಕಾಣುತ್ತದೆ. ಇಲ್ಲಿಯವರೆಗಿನ ಎಲ್ಲಾ ಸಕರ್ಾರಗಳೂ ಕನ್ನಡದ  ಬಗ್ಗೆ ಜುಟ್ಟಿಗೆ ಮಲ್ಲಿಗೆ ಹೂ ಮಾತಾಡಿಕೊಂಡೇ ಬಂದಿವೆ.

ಹೀಗಿರುವಾಗ- ಯಾವುದಾದರೂ ಕನ್ನಡಸಂಘವೋ ಅಥವಾ ಕನ್ನಡ ಸಾಹಿತ್ಯ ಪರಿಷತ್ತೋ ಕೊಡಮಾಡುವ ಯಾವುದೇ ಪ್ರಶಸ್ತಿ ಪಡೆಯುವುದು ಅಥವಾ ಅವು ನಡೆಸುವ ಯಾವುದೇ ಸಮ್ಮೇಳನಗಳಲ್ಲಿ ಭಾಗವಹಿಸುವುದು ನನಗೆ ಕಸಿವಿಸಿಯಾಗುತ್ತದೆ. ಇಂದಿನ ವ್ಯಾವಹಾರಿಕ ಕಾರಣಕ್ಕಾಗಿ  ಒಂದು ಭಾಷೆಯಾಗಿ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಅರ್ಥಮಾಡಿಕೊಳ್ಳಬಹುದು: ಆದರೆ  ಮಾಧ್ಯಮವನ್ನು ಮಾತೃಭಾಷೆಯನ್ನಾಗಿಸುವ ವಿಚಾರ ವಿವೇಕವಾಗದೆ ನಗೆಪಾಟಲಾಗಿರುವ ದುರಂತಕ್ಕೆ ಕಾರಣರು ಯಾರು?

ಆದ್ದರಿಂದ ನನ್ನ ಬೇಡಿಕೆ- ಈಗಲಾದರೂ ನಮ್ಮ ಸಕರ್ಾರ ಹೃತ್ಪೂರ್ವಕತೆ ಮತ್ತು ಇಚ್ಛಾಶಕ್ತಿ ಪಡೆದು- ‘ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ  ರಾಜ್ಯಭಾಷೆ ಅಥವಾ ಮಾತೃಭಾಷೆಯ ಶಿಕ್ಷಣಮಾಧ್ಯಮ ಜಾರಿಗೆ ತರುತ್ತೇನೆ’ ಎಂದು ಘೋಷಿಸಿದರೆ  ಅಥವಾ ಕನ್ನಡ ಸಾಹಿತ್ಯ ಪರಿಷತ್ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ  ರಾಜ್ಯಭಾಷೆ ಅಥವಾ ಮಾತೃಭಾಷೆಯ ಶಿಕ್ಷಣಮಾಧ್ಯಮವನ್ನು   ಜಾರಿಗೆ ತರುವವರೆಗೂ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸದೆ, ರಾಜ್ಯಭಾಷೆ ಅಥವಾ ಮಾತೃಭಾಷೆ  ಎಂದರೆ ಕನ್ನಡಶಿಕ್ಷಣಮಾಧ್ಯಮಕ್ಕಾಗಿ ಹೋರಾಡುತ್ತದೆ’ ಎಂದು ಘೋಷಿಸಿದ ನಾಳೆಗೇ ಕನ್ನಡಸಾಹಿತ್ಯ ಪರಿಷತ್ ಕಛೇರಿಗೆ ಬಂದು ನಾನು ಈ ಪ್ರಶಸ್ತಿ ಪಡೆಯುತ್ತೇನೆ, ಜೊತೆಗೇ ಕನ್ನಡ ಶಿಕ್ಷಣಮಾಧ್ಯಮದ ಹೋರಾಟದಲ್ಲಿ ನಾನೂ ನಿಮ್ಮೊಂದಿಗೆ ಜೊತೆಗೂಡುತ್ತೇನೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸುತ್ತೇನೆ. ಅಲ್ಲಿಯವರೆಗೂ

ಕ್ಷಮೆ ಇರಲಿ.

ಇತಿ

ವಂದನೆಗಳೊಂದಿಗೆ
(ದೇವನೂರ ಮಹಾದೇವ)

12 ಟಿಪ್ಪಣಿಗಳು (+add yours?)

  1. ವಿಜಯಶೀಲ
    ನವೆಂ 19, 2010 @ 08:06:12

    Mr. Ramachandra Deva has right in his argument, when he mentions two personalities in English language who studied first in Kannada.
    Those who think that English is medium is very important to achieve progress in the Universities and later in their Professions have totally a wrong notion and baseless belief.
    there are millions of others from all over the world, who first studied in their own mother tongue in their countries and later emigrated to America, England, Canada, etc and studied further and made research and practiced successful professions. For example thousands of Germans after finishing their studies at home went to England or America etc. Similarly Russians too.
    In my opinion, only people in Karnataka to a large extent think of English medium should be the only way for later successful higher studies and better professions, a totally foolish notion.
    I did my school education in Kannada medium and later studied successfully at the University. I am very glad that I am still quite good in Kannada Language. Please see my comment in Kannada above on 02.11.10. Not only that, I have learnt quite well English and German languages and gained acquaintance in French and Spanish to a little extent. In all these languages I have written poetry. Inspite of it I love Kannada abundantly.

    ಉತ್ತರ

  2. Ramachandra Deva
    ನವೆಂ 18, 2010 @ 14:42:16

    ಹೈಸ್ಕೂಲು ಕೊನೆಯ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ಜಗತ್ತಿನ ಇಂಗ್ಲಿಷ್ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿರುವ ಇಬ್ಬರನ್ನು ನಾನು ಹೆಸರಿಸಬಲ್ಲೆ. ಒಬ್ಬರು ಎ. ಕೆ. ರಾಮಾನುಜನ್, ಇನ್ನೊಬ್ಬರು ಸಿ. ಡಿ. ನರಸಿಂಹಯ್ಯ. ಇಬ್ಬರೂ ಇಂಗ್ಲಿಷಿನಲ್ಲಿ ಎಷ್ಟು ಮುಖ್ಯ ಕೆಲಸ ಮಾಡಿದ್ದಾರೆ ಎಂದು ವಿವರಿಸಬೇಕಿಲ್ಲ. ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದು ಮುಂದೆ ಇಂಗ್ಲಿಷ್ ಬಳಸಲು ಯಾವ ರೀತಿಯೂ ತೊಂದರೆಯಾಗುವುದಿಲ್ಲ ಎನ್ನುವುದಕ್ಕೆ ಇವರಿಬ್ಬರ ಉದಾಹರಣೆ ಸಾಕು.

    ಬದಲು, ಇಂಗ್ಲಿಷ್ ಮಾಧ್ಯಮ ಶಾಲೆಗಳ ಅಧ್ಯಾಪಕ, ಪ್ರಿನ್ಸಿಪಾಲರ ಇಂಗ್ಲಿಷನ್ನು ನಾನು ಜತನದಿಂದ ಆಲಿಸಿದ್ದೇನೆ, ಓದಿದ್ದೇನೆ. ಅವರಲ್ಲಿ ಬಹುತೇಕ ಜನ ತಪ್ಪು ಇಂಗ್ಲಿಷ್ ಬರೆಯುತ್ತಾರೆ, ತಪ್ಪು ಇಂಗ್ಲಿಷ್ ಮಾತಾಡುತ್ತಾರೆ. ಅವರ ಕೆಳಗೆ ಕಲಿತವರ ಇಂಗ್ಲಿಷೂ ಹಾಗೇ ಇರುತ್ತದೆ. ಆ ಮೇಲೆ ಅದನ್ನು ತಿದ್ದುವುದು ತುಂಬಾ ತುಂಬಾ ಕಷ್ಟ. ಸಾಧ್ಯವೇ ಇಲ್ಲ. ಬಹುತೇಕ ಜನರಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕೆನ್ನುವ ಆಸೆಯ ಹಿಂದೆ ಇರುವುದು ಇಂಗ್ಲಿಷ್ ಎಂದರೆ ಪ್ರೆಸ್ಟಿಜ್ ಎಂಬ ಪೊಳ್ಳು ಭ್ರಾಂತಿ.

    ಇಂದು ದೊಡ್ಡ ಹುದ್ದೆಗಳಲ್ಲಿರುವ ಎಷ್ಟು ಜನ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದಾರೆ, ಎಷ್ಟು ಜನ ಇಂಗ್ಲಿಷಿನಲ್ಲಿ ಎಂಬ ಬಗ್ಗೆ ಒಂದು ಸರ್ವೆ ಮಾಡಿದರೆ ನಿಜ ಸಂಗತಿ ನಿಖರವಾಗಿ ತಿಳಿಯುತ್ತದೆ.

    ರಾಮಚಂದ್ರ ದೇವ

    ಉತ್ತರ

  3. prakashchandra
    ನವೆಂ 03, 2010 @ 13:02:58

    Tamil Nadu thara Karnatakadalloo namma sarkara prathamika hanthadindale kannada kaddaya antha kanoonu jarige tharalu sadhyavillave..? Avarige sadhyavagiddu namage eke sadhyavagilla…? Englishgoo praadhaanya koduvudaralli thappilla. Adre namma mathru bhaashe modalu uliyabekallave…? Devanur avara abhipraya sariyagide.

    ಉತ್ತರ

  4. anasuya mr
    ನವೆಂ 02, 2010 @ 04:17:25

    ” Vandanegalondige devanooru mahadeva ” lekhanavu prastuta. Adare ka.sa.pa. antha horata maduvude ? sarkara kannada madhyamavannu jarige tandaru english vyamohi tande tayigalu courtge hogade bittareye? english kalitavaradondu mattu kannada kalitavaradondu varga huttikolluttirava endina dinagalli edu sadhyave ? nimma matugalu KA.SA.PA. ge savalugalagive.

    ಉತ್ತರ

    • ವಿಜಯಶೀಲ
      ನವೆಂ 02, 2010 @ 23:17:30

      ’ಅನಸುಯ ಮ್ರ್’ ಅವರಿಗೆ ಒಂದು ವಿನಂತಿ!
      ನಮಿಸುತ, ಶ್ರೀಮಾನ್ಯ ಅಥವ ಶ್ರೀಮತಿ!
      ಕನ್ನಡ ಬರಹ ತಂತ್ರಾಂಶ ದೇವರ ದಯೆಯಿಂದ ಅತಿ ಸುಲಬವಾದ ಲೇಖಕರ ಆಯುಧ.
      ಮೊದಲು ಸುಮ್ಮನೊಮ್ಮೆ ಪ್ರಯತ್ನಿಸಿ ನೋಡಿ.
      ಆದಲ್ಲದೆ, ಪ್ರತಿಯೊಬ್ಬ ಕನ್ನಡ ಹಾಗೂ ಮಾಟೃಭಾಷಾ ಪ್ರೇಮಿಗೆ ’ಬರಹ’ ಉಪಯೋಗಿಸುವ ಯೋಗ್ನ್ಯತೆ ಇರಲೇಬೇಕು.
      ಅದಿಲ್ಲದಿದ್ದರೆ ದೂರಭಾವನೆಯಲ್ಲಿ ರೂಪಕಾಲಂಕಾರದಲ್ಲಿ ಹೇಳಿದರೆ: ಅದೊಂದು ವಿಧವಾದ ಅಂಗವಿಕಲತೆಯಂತೆ.
      ಇಲ್ಲಿ ನೋಡಿ ನಿಮ್ಮ ವಾಕ್ಯ-ಪತ್ರ ಕನ್ನಡಕ್ಕೆ ಭಾಷಾಂತರಿಸಿದಾಗ ಹೊರಬರುವ ಕನ್ನಡ ಕುರೂಪ:
      *
      ಅನ್ದನೆಗಲೊನ್ದಿಗೆ ದೆವನೂರು ಮಹದೆವ ಲೆಖನವು ಪ್ರಸ್ತುತ. ಆದರೆ ಕ.ಸ.ಪ. ಅನ್ಥ ಹೊರತ ಮದುವುದೆ ? ಸರ್ಕರ ಕನ್ನದ ಮಧ್ಯಮವನ್ನು ಜರಿಗೆ ತನ್ದರು ಎನ್ಗ್ಲಿಶ್ ವ್ಯಮೊಹಿ ತನ್ದೆ ತಯಿಗಲು ಚೌರ್ತ್ಗೆ ಹೊಗದೆ ಬಿತ್ತರೆಯೆ? ಎನ್ಗ್ಲಿಶ್ ಕಲಿತವರದೊನ್ದು ಮತ್ತು ಕನ್ನದ ಕಲಿತವರದೊನ್ದು ವರ್ಗ ಹುತ್ತಿಕೊಲ್ಲುತ್ತಿರವ ಎನ್ದಿನ ದಿನಗಲ್ಲಿ ಎದು ಸಧ್ಯವೆ ? ನಿಮ್ಮ ಮತುಗಲು ಖಾ.ಶಾ.ಫಾ. ಗೆ ಸವಲುಗಲಗಿವೆ.
      *
      ’ಬರಹ’ದಲ್ಲಿ ಕನ್ನಡ ಬರೆಯುವ ಚಾಲಕ್ಕು ನಿಮಗೆ ಗಳಿಸಲೆಂದು ಆಶಿಸುತ್ತೇನೆ.
      ವಿಶ್ವಾಸದಲಿ – ವಿಜಯಶೀಲ, ಬೆರ್ಲಿನ್.

      ಉತ್ತರ

  5. ವಿಜಯಶೀಲ
    ನವೆಂ 02, 2010 @ 03:15:32

    ದೇವನೂರ ಮಹಾದೇವ’ರಿಗೆ ನಮಿಸುತ್ತಾ,

    ಕನ್ನಡ ಭಾಷೆಯ ಬಗ್ಗೆ ನಿಮ್ಮ ಅಮೋಘ ಪ್ರೀತಿ ಅತ್ಯುತ್ತಮವೆಂದು ಮೆಚ್ಚುತ್ತೇನೆ.
    ಕರ್ನಾಟಕದಲ್ಲಿ ಶೀಕ್ಷ್ಣಮಾದ್ಯಮ ಕನ್ನಡಾಭಾಷೆಯಾಗಿರಬೇಕೆಂಬ ಆಶಯ ನನಗೆ ಚೆನ್ನಾಗಿ ಅರ್ಥವಾಗುತ್ತದೆ.
    ವಿಶ್ವದ ಪ್ರಮುಖದೇಶಗಳಲ್ಲಿ, ಯೂರೊಫ್, ಅಮೇರಿಕ, ರಷ್ಯ, ಮತ್ತಿತರ ಎಲ್ಲಾ ದೇಶಗಳಲ್ಲಿ ತಮ್ಮ ಮಾತೃಭಾಷೆಯಲ್ಲೇ ಶೀಕ್ಷ್ಣಮಾದ್ಯಮ ನಡೆಯುವುದು. ಆದರೆ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಭಾಷೆಯ ಮತ್ತು ಶೀಕ್ಷಣ-ರಾಜಕೀಯದ ಪರಿಸ್ತಿತಿ ಆತ್ಯಂತ ಶಕ್ತಿಹೀನವಾದದ್ದು, ಕೀಳಾದದ್ದು.
    ಆದರಲ್ಲೂ ಕರ್ನಾಟಕದಲ್ಲಂತೂ ಭಾಷೆಯ ಪರಿಸ್ತಿತಿ ಮಿತಿಯಿಲ್ಲದೆ ಹಾಳಾಗಿರುವ ಸ್ಥಿತಿ. ಪ್ರಪಂಚದ ಯಾವ ಕೋಣೆಯಿಂದ ಬಂದರೂ ಸ್ವಲ್ಪ ಇಂಗ್ಲಿಷ್ ತಿಳೀದುಕೊಂಡಿದ್ದರೆ ಸಾಕು, ಕನ್ನಡಭಾಷೆಯ ಗಂಧವಿಲ್ಲದಿದ್ದರೂ ಕರ್ನಾಟಕದಲ್ಲಿ ಒಂದು ಹುದ್ಧೆಯನ್ನು ಪಡೆಯಬಹುದು.
    ಫ್ರಪಂಚದ ಯಾವದೇಶಕ್ಕಾದರೂ ಹೊಗಿ ಇರಲು ಆಯಾ ದೇಶಗಳ ರಾಜ್ಯಭಾಷೆ ಪರಿಙ್ಞಾನ ಇಲ್ಲದಿದ್ದರೆ ಆ ದೆಶದಲ್ಲಿ ಹೋಗಿರಲು ಅವಕಾಶ ಸಿಗುವುದಿಲ್ಲ.
    *
    ನಿಮ್ಮಲೇಖನದಡಿ ’ಬಾಲು’ ಎನ್ನುವರೊಬ್ಬರು ಇಂಗ್ಲಿಷ್ ಟೀಕೆಯಲ್ಲಿ ತಿಳಿಸುವ ಆಭಿಪ್ರಾಯ ಅಡಿಪಾಯವಿಲ್ಲದ್ದು.
    ಯಾವಿರೀತಿ ೧೦ ವರ್ಷಗಳು ಅವರು ಕಾಷ್ಟಪಟ್ಟರು ವಿವರಿಸಬೇಕಿತ್ತು.
    ನಾನೂ ಕೂಡ ಕನ್ನಭಾಷಾ ಮಾದ್ಯಮದಲ್ಲಿ ಶೀಕ್ಷಣ ಪಡೆದು ಸೈಂಟ್ ಜೋಸೆಫ಼್ ಕಾಲೇಜಿನಲ್ಲಿ ಇಂಗ್ಲಿಷ್ ಮಾದ್ಯಮದಲ್ಲಿ ವಿಧ್ಯಾಭಾಸ ಮುಂದುವರಿಸಿದಾಗ ಅದಾವ ದೊಡ್ಡ ಅಡಚಣೆ ಅಥವ ಮುಗ್ಗರಿಕೆ ಬರಲಿಲ್ಲ. ಅನಂತರ ಸರ್ಕಾರದ ಹುದ್ದೆಯಲ್ಲಿದ್ದಾಗಗಲೂ ಯಾವ ಭಾಷೆಯ ತೊಂದರೆ ಇರಲಿಲ್ಲ.
    ನನ್ನ ಸಹಪಾಟಿಗಳಾಗಿ ಕನ್ನಡಭಾಷಾ ಮಾದ್ಯಮದಲ್ಲಿ ಓದಿದ ಅನೇಕ ಸಹಪಾಟಿಗಳು ಪದವಿಧರರಾಗಿ ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಕ್ಯಾತರಾದರು.
    *
    ಆದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ರಾಜ್ಯಭಾಷೆ ಶೀಕ್ಷಣಭಾಷೆಯಾಗುವುದರ ಮೊದಲು, ಉತ್ತರ ಧೃವವು ದಕ್ಷಿಣ ಧೃವವಾಗಿ ದಕ್ಷಿಣ ಧೃವವು ಉತ್ತರ ಧೃವವಾಗುವುದು ನಿಸ್ಚಯವಾದ ವಿಷಯ.
    *
    ವಿಜಯಶೀಲ, ಬೆರ್ಲಿನ್.

    ಉತ್ತರ

  6. harsha
    ನವೆಂ 01, 2010 @ 13:02:02

    ಬಾಲು ಅವರೆ, ಇವತ್ತು ಕರ್ನಾಟಕದಲ್ಲರಿರುವ ಎಲ್ಲರಿಗೂ ಎಂಗ್ಲಿಷ್ ಕಲಿಸಿದರೂ ಲಭ್ಯ ಇರುವ ನೌಕರಿಗಳು ಅಲ್ಪ ಮಾತ್ರ. ಕೊನೆಗೂ ಶೇ.90 ಮಂದಿ ಖಾಲಿ ಇಂಗ್ಲಿಷ್ ಕಲಿತೂ ಖಾಲಿ ಕೈಯಲ್ಲಿ ಕೂತ್ಕೋ ಬೇಕು. ಆದರೆ ಈ ಇಂಗ್ಲಿಷ್ ನ ಕಾರಣಕ್ಕೆ ಲಕ್ಷಾಂತರ ವಿದ್ಯಾರ್ಥಿಗಳನ್ನು ಬಲಿಪಶು ಮಾಡೋದು ಎಷ್ಟು ಸರಿ? ಇಂಗ್ಲಿಷ್ ಬಾರದ ಒಂದೇ ಕಾರಣಕ್ಕೆ ‘ದಡ್ಡ’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೆಕಿರುವ ಪರಿಸ್ಥಿತಿ ಇನ್ನೂ ಎಷ್ಢು ದಿನ ಇರಬೆಕು. ನೀವು ಹೇಳಿರುವ ಸಮಸ್ಯೆಗೆ ಪರಿಹಾರ ಕನ್ನಡವನ್ನು ಓದಿದವರಿಗೂ ಕೆಲಸ ಸಿಗುವ ವಾತಾವರಣ ನಿರ್ಮಾಣ ಮಾಡುವುದರಲ್ಲಿ ಇದೆ. ನೆಗಡಿ ಬಂದರೆ ಮೂಗು ಕುಯ್ಕೊಳ್ಳಾಕ್ಕಾಗುತ್ತಾ ಬಾಲುರವರೇ? ಕುಯ್ಕೊಂಡ್ರೂ ನೆಗೆಡಿ ನಿಲ್ಲತ್ತಾ?

    ಉತ್ತರ

  7. Mahesh
    ನವೆಂ 01, 2010 @ 11:50:58

    ಉನ್ನತ ಶಿಕ್ಷಣ ಅದರಲ್ಲೂ ವಿಜ್ಞಾನ, ತಂತ್ತಜ್ಞಾನಗಳು ಕನ್ನಡದಲ್ಲಿದ್ದರೆ ನಾನು ಇಷ್ಟೊತ್ತಿಗಾಗಲೇ ಈಗಿನಕ್ಕಿಂತ ನೂರು ಪಟ್ಟು ಹೆಚ್ಚು ದುಡಿದಿರುತ್ತಿದ್ದೆ. ಈ ವಿಷಯಗಳು ಕನ್ನಡದಲ್ಲಿ ಇಲ್ಲದಿರುವದು ನನ್ನ ಪ್ರೊಡಕ್ಟಿವಿಟಿಗೆ ಬಹುದೊಡ್ಡ ಅಡ್ಡಿಯಾಗಿದೆ.

    ಉತ್ತರ

  8. kanam nagaraju
    ನವೆಂ 01, 2010 @ 11:14:37

    shikshana maadhyamakku aadalita vyavasthegu sambhandavide. prajaaprabhutvavu saphalagollabekaadare shikshana maadhyamavu maatrubhasheyaagirabembudu tatvasiddha. kendra mattu raajyagalalli aaluttiruvavarige haagu ellaa raajakaaranigalige prajaaprabhutvavu saphalagolluvudu bekaagilla. prajaaprabhutvavu nijavvada arthadalli saphalagondare intha raajakaaranigalu indina chunaavane emba kallatadalli geddubaruvudu asaadhya. haagaagi avaru devanooru anthavara pratibhataneyannu batteya mele hariyuva iruveyannu kodavidante kadeganisuttare. prativarsha aneka mandi(?) prashastigalannu galisuttale iddaare. yaaraadaru maadhyamada bagge maatannaadiddareye? pratibhatisiddaareye? mandiyalli oggattila, onde abhipraayavilla embudu nijavvagiruvudarinda prashasti koduvavaru aata aaduttaare. idu kooda prajaaprabhutvave taane?

    ಉತ್ತರ

  9. BALU
    ನವೆಂ 01, 2010 @ 10:26:27

    Sir,

    You are talking about kannada medium, will you please look what is the status about who studied kanndada medium, I am one amng the victim studied up to B.com in kannada medium and struggled almost 10+ years to make carrier just becaused had studied in kannda medium , nanna shathrugu nanu kannada medium all odhi antha helalare sir, I respect you but studiying in kannada medium is SUCIDEICAL SORRY ,love kannada , love kannada muvies , visited all over the world fought for kannada magaizine in PARIS FLISHT , but studiying kannda medium sorry please exucse

    ಉತ್ತರ

    • ಅಜಯ್
      ನವೆಂ 01, 2010 @ 20:21:04

      @Balu,

      (edited) ನೀವು ನಿಮ್ಮ ಒಬ್ಬರ ಉದಾಹರಣೆ ಕೊಟ್ಟು ಕನ್ನಡ ಮಾಧ್ಯಮ ಬೇಡ ಎನ್ನುತ್ತೀರಿ. ಆದರೆ ಕನ್ನಡ ಮಾಧ್ಯಮದಲ್ಲೇ ಓದಿ ಇವತ್ತು ಅತ್ಯಂತ ಒಳ್ಳೆಯ ಹುದ್ದೆಗಳಲ್ಲಿ ಇರುವ ಲಕ್ಷಾಂತರ ಜನರನ್ನು ತೋರಿಸಬಲ್ಲೆ. (edited).

      ಉತ್ತರ

    • Karuna P S
      ನವೆಂ 20, 2010 @ 01:18:15

      Nimma english nodidare ayyo paapa

      ಉತ್ತರ

Leave a reply to Ramachandra Deva ಪ್ರತ್ಯುತ್ತರವನ್ನು ರದ್ದುಮಾಡಿ