-ಎಸ್ ಮಂಜುನಾಥ್
ತಮ್ಮ ಜೀವಯಾನ ಕೃತಿಗೆ ಬರೆದ ಮಾತುಗಳಿಂದ ಆಯ್ದದ್ದು
ಸಾಮಾಜಿಕವಾಗಿ ದಲಿತರದವರ ಮಾತು ಬಂತು. ಶ್ರೀ ದೇವನೂರು ಮಹಾದೇವ ಅವರ ಕೃತಿ ‘ಒಡಲಾಳ’ವನ್ನು ಮೊದಲ ಬಾರಿಗೆ ಓದಿದಾಗ ನಾನು ಚಿಕ್ಕವನು-20ವರ್ಷ ವಯಸ್ಸು. ಆಗಲೂ ನನಗೆ ಅದು ಅನುಭವದಿಂದ ಬೆಚ್ಚಿಸಲಿಲ್ಲ. ನನಗೂ ಅಂಥದೊಂದು ಬರೆಯಲಿಕ್ಕಿದೆ ಎಂಬಂತೆ ಆಪ್ತವಾಯಿತು. ಆದರೆ ಆಗಲೇ ನಾನು ನನ್ನ ಮನಸ್ಸಿನೊಳಗಿನದನ್ನು ಬರೆದುಬಿಡಬಹುದಾದಷ್ಟು ಕಲಾವಂತಿಕೆಯನ್ನು ಪಡೆದವನಾಗಿರಲಿಲ್ಲವೆಂದು ಮೊದಲೇ ತಿಳಿಸಿದ್ದೇನೆ. ಅಂದರೆ ಈಗ ಕವಿತೆಯಲ್ಲಿ ಅಂಥ ಕೃತಿಯನ್ನು ಬರೆದುಬಿಟ್ಟಿದ್ದೇನೆ ಎಂದೇನು ನಾನು ಸೂಚಿಸುವುದಿಲ್ಲ. ಆದರೆ ಈ ಕವಿತೆಯನ್ನು ಆಲಿಸಿದ ಕೆಲ ಮಿತ್ರರು ‘ಒಡಲಾಳ’ವನ್ನು ನೆನಪಿಸಿಕೊಂಡುದು ನನಗೆ ಅರ್ಥಪೂರ್ಣವೆನಿಸಿದೆ. ನಾನು ಬರೆದದ್ದು ಕನ್ನಡದ ಒಳಗೆ ಹಾಗೆ ಸೇರಿಸಿಕೊಳ್ಳಬೇಕೆಂಬುದು ನನ್ನ ಹೆಬ್ಬಯಕೆಯಾಗಿದೆ
ನವೆಂ 04, 2010 @ 12:25:06
ಎಲ್ಲಿಯ ಒಡಲಾಳ! ಎಲ್ಲಿಯ ಜೀವಯಾನ!! ಮಂಜುನಾಥರ ಮಾತಿಗೆ ನನ್ನ ಕನಿಕರವಿದೆ.
ಸಾಹಿತ್ಯ ಪ್ರಕಾರಗಳ ಅನನ್ಯತೆಯನ್ನು ಒಪ್ಪದ ಇಂಥ ಧೋರಣೆ ‘ಕವಿಯೆಂಬ ಅಹಮಿನ’ ಆತ್ಮ ವಂಚನೆ.
ಎಲ್ಲವನ್ನು ತನ್ನ ಕೃತಿಯೊಂದಿಗೆ ಹೋಲಿಸಿಕೊಳ್ಳುವ ಆತ್ಮ ರತಿ ಕೂಡ.
ಈ ಮಾತಿಗೆ ಮಹಾದೇವರೂ ನಕ್ಕು ಸುಮ್ಮನಾಗಿದ್ದಾರೆ.
ಕಾವ್ಯ ನಿರಪಾಯಕಾರಿ; ಕವಿ ಅಪಾಯಕಾರಿ.