ದೇವನೂರು ಕೇಳುತ್ತಾರೆ: ನಾಚಿಕೆ, ಸಾಕ್ಷಿಪ್ರಜ್ಞೆ ಎಲ್ಲಿ ಗಿರವಿಗೆ ಇಟ್ಟಿದ್ದಾರೆ?

ಕಡಿದಾಳು ಶಾಮಣ್ಣ ನವರ ಆ ದಶಕ ಕೃತಿ ಬಿಡುಗಡೆ ಸಮಾರಂಭದಲ್ಲಿ ದೇವನೂರು ಮಹಾದೇವ ಅವರ ಮಾತು ಇಲ್ಲಿದೆ. ಇದನ್ನು ಒದಗಿಸಿದ ಸುಬ್ರಮಣಿ ಅವರಿಗೆ ವಂದನೆಗಳು.

– ದೇವನೂರ ಮಹಾದೇವ

ನನಗೆ ಆಶ್ಚರ್ಯ ಕಾದಿತ್ತು -ನಾನು ಮನೆಗೆ ಬಂದಾಕ್ಷಣ ನನ್ನ ಪತ್ನಿ ಸುಮಿತ್ರಾ ”ಶಾಮಣ್ಣ ಫೋನ್ ಮಾಡಿದ್ದರು. ಅವರ ಪುಸ್ತಕದ ಬಿಡುಗಡೆ ಅಂತೆ. ಹೋಗಿದ್ದು ಬನ್ನಿ” ಅಂದರು. ನಾನು ಯಾವುದಾರೂ ಭಾಷಣಕ್ಕೆ ಒಪ್ಪಿ ಬಿಪಿ, ಷುಗರ್ ಹೆಚ್ಚಿಸಿಕೊಂಡು ನರಳುವುದನ್ನು ಕಣ್ಣಾರೆ ಕಾಣುತ್ತ ”ಯಾಕಾರು ಒಪ್ಪಿಕೊಳ್ಳುತ್ತಿ” ಅನ್ನುತ್ತಿದ್ದ ಸುಮಿತ್ರಾ, ನಮ್ಮ 35 ವರ್ಷಗಳ ದಾಂಪತ್ಯದ ಸವರ್ೀಸ್ನಲ್ಲಿ ” ಹೋಗಿದ್ದು ಬನ್ನಿ” ಎಂದು ಹೇಳಿದ್ದು ಇದೇ ಪ್ರಪ್ರಥಮ. ಆಗ ನನಗೆ ಅನ್ನಿಸಿಬಿಟ್ಟಿತು- ಈ ಕಡಿದಾಳು ಶಾಮಣ್ಣ ತುಂಬಾ ಪ್ರಭಾವಶಾಲಿ ಅಂತ. ಅಸಹಾಯಕನಾಗಿ ದುಸರಾ ಮಾತಾಡದೆ ಈಗ ಇಲ್ಲಿ ಬಂದು ನಿಂತಿದ್ದೇನೆ.

ಯಾವ ರೀತಿಯ ಪುಸ್ತಕ ಆಗುತ್ತದೆ ಇದು? ನಾನು ಅಂದುಕೊಂಡಿದ್ದೆ- ಕೆಲವು ಪತ್ರಗಳು, ಸಂದರ್ಶನ, ಪತ್ರಿಕಾ ವರದಿಗಳು ಸೇರಿ ಆಗುವ ಪುಸ್ತಕ ಪರಿಣಾಮಕಾರಿ ಆಗುವುದಿಲ್ಲವೇನೋ ಎಂಬ ಅನುಮಾನ ನನಗಿತ್ತು. ಇಲ್ಲೂ ನನಗೆ ಆಶ್ಚರ್ಯ ಕಾದಿತ್ತು. ಪುಸ್ತಕ ಓದಿದ ಮೇಲೆ ನನ್ನ ಅನಿಸಿಕೆ ಬುಡಮೇಲಾಯ್ತು. ಸರಳವಾಗಿ, ನೇರವಾಗಿ, ಸತ್ಯವಾಗಿ ಆ ದಶಕ ನನ್ನ ಕಣ್ಮುಂದೆ ಬಂತು. ಬಹುಶಃ ಇದಕ್ಕೆ ಕಾರಣ-ಇವು ಅಂತಃಕರಣದ ಸ್ಪಂದನಗಳಾಗಿದ್ದು ಇವು ಪ್ರಾಮಾಣಿಕತೆ ನಿಸ್ವಾರ್ಥತೆಯಿಂದ ಕೂಡಿರುವುದೇ ಕಾರಣವಾಗಿರಬಹುದು. ಮುಂದೆ-‘ರೈತರ ಗಾಂಧಿ ಕಂಬಿಕಿತ್ತ ಪ್ರಸಂಗ, ಚಂದ್ರಗುತ್ತಿ ಜಾತಿ ಕ್ರೌರ್ಯ, ಮಾರಮ್ಮನಿಗೆ ನೀರು ಕೊಡದ ಪ್ರಸಂಗ’- ಈ ವರದಿಗಳು ತಮ್ಮ ವರದಿತನವನ್ನು ಮೀರಿಕೊಂಡು ಉತ್ತಮ ಬರವಣಿಗೆಗೆ ಮಾದರಿಗಳಾಗಿ ನಿಲ್ಲುತ್ತವೆ.

ಒಂದು ದೃಶ್ಯ ಸದಾ ನನಗೆ ನೆನಪಾಗುತ್ತದೆ- ಶಾಮಣ್ಣನವರನ್ನು ರೈತಸಂಘದ ರಾಜ್ಯ ಸಮಿತಿಯಿಂದ ಹೊರಹಾಕಲಾಗಿತ್ತು. ಯಾವುದೋ ಒಂದು ಸಭೆ. ಸ್ಥಳ, ಸಂದರ್ಭ ಮರೆತುಬಿಟ್ಟಿದ್ದೇನೆ. ರಾತ್ರಿ. ಶಾಮಣ್ಣನವರು ತಮ್ಮ ಚೀಲವನ್ನು ತಲೆಗಿಟ್ಟ್ತುಕೊಂಡು ಶ್ರೀಕೃಷ್ಣ ಪರಮಾತ್ಮನು ದನ ಕಾಯುತ್ತ ಒಂದು ಮಂಡಿ ಎತ್ತರಿಸಿ ಅದರ  ಮೇಲೆ ಇನ್ನೊಂದು ಕಾಲಿಟ್ಟು ಮಲಗಿದ ಭಂಗಿಯಲ್ಲಿ ಇದ್ದಾರೆ. ಅವರ ಒಂದು ಕೈ ಕ್ಯಾಮೆರಾ ಹಿಡಿದಿದೆ. ಅವರ ಕಣ್ಣುಗಳು ಮುಚ್ಚಿವೆ. ಆದರೆ ಅವರಿಗೆ ನಿದ್ರೆ ಬಂದಿಲ್ಲ. ಅವರ ತಲೆ ಒಂದು ಕ್ಷಣವೂ ನಿಂತ ಕಡೆ ನಿಲ್ಲುತ್ತಿಲ್ಲ. ಎಡದಿಂದ ಬಲಕ್ಕೆ ಹೊರಳುತ್ತಿತ್ತು. ಬಲದಿಂದ ಎಡಕ್ಕೆ ಹೊರಳುತ್ತಿತ್ತು. ನಾನು ಅದನ್ನು ನೋಡುವುದು, ನೋಡುವುದಕ್ಕೆ ಕಷ್ಟವಾಗೊ ಅಥವಾ ನಿದ್ದೆ ಎಳೆಯುತ್ತಿದದ್ದುರಿಂದಲೋ ಕಣ್ಣುಮುಚ್ಚುತ್ತಿದ್ದೆ. ಕಣ್ಣುಮುಚ್ಚಿದರೂ ಕಷ್ಟವಾಗಿ ಕಣ್ಣು ತೆರೆಯುತ್ತಿದ್ದೆ. ಬಹುಶಃ ಬೆಳಗಿನ ಜಾವದವರೆಗೂ ಹೀಗೆ ಜರುಗಿದೆ.

ಈ ದೃಶ್ಯ ಆಗಾಗ ನನ್ನ ಕಣ್ಮುಂದೆ ನಿಲ್ಲುತ್ತದೆ. ಇತ್ತೀಚೆಗೆ ಅಲ್ಲಿ ಶಾಮಣ್ಣ ಇರುವುದಿಲ್ಲ. ಬದಲಾಗಿ ದಲಿತಸಂಘರ್ಷ ಸಮಿತೀನೋ, ರೈತಸಂಘವೋ ಅಥವಾ ಇನ್ನಾವುದೋ ಪ್ರಗತಿಪರ ಚಳವಳಿ ಒಟ್ಟಿನಲ್ಲಿ ನಾಡಿನ ಸಾಕ್ಷಿ ಪ್ರಜ್ಞೆ ಹೊರಳಾಡುತ್ತಿರುವಂತೆ ಕಾಣುವ ಭ್ರಮೆಗೆ ಒಳಗಾಗಿದ್ದೇನೆ ನಾನು. ನಾವು ಬೆಳೆದಂತೆ ವಯಸ್ಸಾದಂತೆ ಹೀಗೆಲ್ಲಾ ಯಾಕಾಯ್ತು? ಒಂದು ಸಂಘಟನೆ ಸಾಂಸ್ಥಿಕ ಆಗುತ್ತ ನಡೆದುದರ ಪರಿಣಾಮವೆ ಇದು? ‘ ಸಹನೆ ಮತ್ತು ಪ್ರೀತಿ ನನ್ನ ಧರ್ಮ’ ಇದು ಗಾಂಧಿಯವರ ಮಾತು. ಪ್ರೀತಿ ಇದ್ದ ಕಡೆ ಸಹನೆ ಇದ್ದೇ ಇರುತ್ತದೆ. ಆದರೆ ಸಹನೆ ಬೇಕಾಗಿರುವುದು-ನಾವು ಇಷ್ಟಪಡದ ವ್ಯಕ್ತಿ ಅಥವ ವಿಚಾರ ನಮ್ಮ ಕಣ್ಣಮಂದೆಯೆ ಇರಬಾರದು, ಅದುಧ್ವಂಸವಾಗಬೇಕು ಎಂಬ ಅಪೇಕ್ಷೆ ನಮ್ಮನ್ನು ಆವರಿಸಿದಾಗ. ಆಗ ನಮ್ಮನ್ನು ಕಾಪಾಡಬಹುದಾದದ್ದು ಸಹನೆ ಮಾತ್ರವೆ. ಅದೂ ಧರ್ಮಶ್ರದ್ಧೆಯ ತೀವ್ರತೆಯಲ್ಲಿ ನಮ್ಮ ಆಳಕ್ಕೆ ಇಳಿದಾಗ . ಈ ವಿವೇಕ ನಾವು ಏನನ್ನಾದರೂಕಟ್ಟುವಾಗಲೇ ಚಿಂತಿಸಿ ಈ ಸ್ವಭಾವದವರಿಗೆ ನಾಯಕತ್ವ ಒಪ್ಪಿಸಬೇಕಾದ ಎಚ್ಚರಿಕೆಯನ್ನು ಸಂಘಟನೆಯಲ್ಲಿ ಬಿತ್ತನೆ ಮಾಡುವಾಗಲೇ ಅತ್ಯಗತ್ಯವೇನೋ ಅನಿಸುತ್ತದೆ. ಈ ಸಂದರ್ಭದಲ್ಲೇ ವಚನಕಾರರನ್ನು ನೆನಪಿಸಿಕೊಳ್ಳುತ್ತೇನೆ.

ಸುಮಾರು ಜನ ಪ್ರತಿಭಾವಂತರು ಒಂದೇ ಕಾಲದಲ್ಲಿ ಒಟ್ಟಿಗೆ ಇದ್ದ ಅಪೂರ್ವ ಸಂದರ್ಭ. ಪ್ರತಿಯೊಬ್ಬರಿಗೂ ಅವರವರ ಇಷ್ಟದೈವ ಬೇರೆ. ವೃತ್ತಿಗಳೂ ಬೇರೆ ಬೇರೆ. ಇನ್ನೊಬ್ಬನ ಉಳಿಯುವಿಕೆಯು ತನ್ನ ಉಳಿಯುವಿಕೆಗೂ ಪೂರಕ ಎಂಬಂತೆ ಸಂವಾದ ಇಟ್ಟುಕೊಂಡಿದ್ದರು. ಅಹಂ ಇಲ್ಲಿ ವಿಜೃಂಭಿಸಲಿಲ್ಲ. ಎಷ್ಟೋ ಜನ ತಮ್ಮ ಅಂತರಂಗದ ವಿರುದ್ಧವೇ ಯುದ್ಧ ಮಾಡುತ್ತಿದ್ದರು. ಅವರದೊಂದು ಕುಟುಂಬವಾಗಿತ್ತು. ಮನೆಮಠ ಹೆಂಡತಿ ಮಕ್ಕಳನ್ನು ತೊರೆದು ಹಿಮಾಲಯಕ್ಕೆ ಹೋದವರು ಅಲ್ಲೂ ಜಗಳ ಮಾಡುವ ಉದಾಹರಣೆ ಇರುವಾಗ ಇದು ಹೇಗೆ ಸಾಧ್ಯವಾಯ್ತು? ಭೂಮಿ ಮೇಲೆ ಎಲ್ಲಾ ಕಡೆ ಹುಡುಕಿದರು ಸಿಗದ, ಆದರೆ ನಾವು ನಡೆದಾಡುತ್ತಿರುವ ನೆಲದಲದಲ್ಲೇ ಇರುವ ಈ ಅದ್ಭುತವನ್ನು ನಮ್ಮೊಳಗಿಟ್ಟುಕೊಂಡು ನಾವು ಬೆಳಕು ಕಾಣಬೇಕಾಗಿದೆ. ಈಗ ನಾವು ಬದುಕುತ್ತಿರುವ ಸಂದರ್ಭಕ್ಕೆ ಬಂದರೆ, ನಮ್ಮ ವ್ಯವಸ್ಥೆ, ಪ್ರಭುತ್ವ ದಿಗಿಲು ಹುಟ್ಟಿಸುವುದನ್ನುಬಿಟ್ಟು ಬೇರೇನೂ ಕಾಣಿಸುತ್ತಿಲ್ಲ. ಕಳ್ಳತನಕ್ಕೂ ಒಂದು ನೀತಿ ನಿಯಮ ನಾಚಿಕೆ ಇರುತ್ತದಂತೆ. ದರೋಡೆ, ರೌಡಿಸಂಗೂ ಒಂದು ನೀತಿ ನಿಯಮ ನಾಚಿಕೆ ಇರುತ್ತದಂತೆ. ಇಂದು ಈ ಕಳ್ಳತನ ದರೋಡೆಗಳು ತಮ್ಮ ನಾಚಿಕೆ ಬಿಟ್ಟು ಎಲ್ಲಾ ಕ್ಷೇತ್ರದಲ್ಲೂ ಕುಣಿದು ಕುಪ್ಪಳಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ನೇಣು ಬಿಗಿಯುವ ‘ಆಪರೇಷನ್ ಕಮಲ’ವನ್ನು ಸಮಥರ್ಿಸಿಕೊಂಡು ವಿಜೃಂಭಿಸುವುದರಲ್ಲಿ ಕಿಂಚಿತ್ತಾದರೂ ನಾಚಿಕೆ ಇದೆಯಾ? ಹತ್ತು ವರ್ಷಗಳಲ್ಲೆ ಹತ್ತಾರು ಸಾವಿರಕೋಟಿ ನಾಡಿನ ಸಂಪತ್ತು ನುಂಗಿದ ಗಣಿರೆಡ್ಡಿ ಪಟಾಲಂ ಆಡುವ ಮಾತುಗಳನ್ನು ಕೇಳಿದರೆ ತಪ್ಪುಮಾಡಿ ತಿದ್ದಿಕೊಳ್ಳಬಹುದಾದ ಮನುಷ್ಯರ ಮಾತುಗಳಂತೆ ಅವು ಕೇಳಿ ಬರುವುದಿಲ್ಲ. ಆಲಿಸಿ ನೋಡಿದ್ದೇನೆ, ನಿಜ- ಮನುಷ್ಯರಮಾತುಗಳಂತೆ ಅವರ ಮಾತುಗಳು ಕೇಳಿಬರುವುದಿಲ್ಲ. ಹಾಗೆ ಪ್ರವಾಹಕ್ಕೆ ಸಿಕ್ಕಿ ಉಸಿರು ಹಿಡಿದುಕೊಂಡು ಆಕಾಶ ನೋಡುತ್ತಿರುವ ಜನಸಮುದಾಯ ಕಂಡು ರಾಜ್ಯಪಾಲರು ” ಪರಿಹಾರ ಕಾರ್ಯ ವಿಳಂಬವಾಯ್ತು ಅಂದರೆ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು-” ವಿಳಂಬವಾಗಿಲ್ಲ ” ಅಂತ ಹೇಳುತ್ತಾರೆ. ಇಂಥವರು ನಮ್ಮನ್ನುಆಳುತ್ತಿದ್ದಾರೆ. ಇವರೆಲ್ಲಾ ತಮ್ಮ ನಾಚಿಕೆ ಸಾಕ್ಷಿಪ್ರಜ್ಞೆಯನ್ನು ಎಲ್ಲಿ ಗಿರವಿಗೆ ಇಟ್ಟಿದ್ದಾರೆ? ಅಥವಾ ಸಾಯಿಸಿಬಿಟ್ಟಿದ್ದಾರೋ ಹೇಗೋ? ಭೀತಿ ಆಗುತ್ತದೆ. ನಮ್ಮ ಚಿಂತನಕಾರರು ಹೆಚ್ಚಿರುವ ವಿಶ್ವವಿದ್ಯಾಲಯಗಳಿಗೆಬಂದರೂ ನಮ್ಮ ಭೀತಿ ಹೆಚ್ಚುತ್ತದೆಯೇ ಹೊರತು ಕಮ್ಮಿಯಾಗುವುದಿಲ್ಲ. ತಾರತಮ್ಯವನ್ನು ಮೌಲ್ಯವಾಗಿಸಿದ ಬ್ರಾಹ್ಮಣಿಕೆಯ ಅಪರಾಧಿ ಸ್ಥಾನವನ್ನು ಮರೆ ಮಾಚುವುದಕ್ಕಾಗಿಯೇ ಗೋಸುಂಬೆ ಸಿದ್ದಾಂತದ ಬಿತ್ತನೆ ಕೆಲಸದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಕೆಲ ಬುದ್ಧ್ದಿಜೀವಿಗಳು ಕಾರ್ಯನಿರತರಾಗಿದ್ದಾರೆ. ಗೆಳೆಯ ಡಿ.ಎಸ್. ನಾಗಭೂಷಣ ವೀರಭದ್ರ್ರಾವತಾರ ತಾಳಿ ಅಷ್ಟೋ ಇಷ್ಟೋ ತಡೆಗಟ್ಟುತ್ತಿದ್ದಾರೆ

. ಇನ್ನೊಂದು ಕಡೆ – ಅಲೆಮಾರಿ ಸಮುದಾಯ ಬುಡ್ಗಜಂಗಮ,ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿರುವಂತೆ ಲಿಂಗಾಯತ ಜಂಗಮರು ತಾವೂ ಬೇಡುವ ಜಂಗಮರೆಂದೂ ತಮಗೂ ಬೇಡ ಜಂಗಮರಿಗೂ ವ್ಯತ್ಯಾಸವಿಲ್ಲವೆಂದೂ ಹಾಗಾಗಿ ತಮ್ಮನ್ನೂಪರಿಶಿಷ್ಟ ಜಾತಿ ಮೀಸಲಾತಿಗೆ ಸೇರಿಸಬೇಕೆಂದೂ ಮಾನ ಮರ್ಯಾದೆ ನಾಚಿಕೆ ಬಿಟ್ಟು ಗದ್ದಲವೆಬ್ಬಿಸುತ್ತಿದ್ದಾರೆ. ದಲಿತ ಸಂಘಟನೆಗಳು ಒಂದಲ್ಲ ಹತ್ತಾರು ಇವ, ಇವು ಕಣ್ಮುಚ್ಚಿ ಕುಳಿತಿವೆ. ಈ ಲಿಂಗಾಯತ ಜಂಗಮರು ತಮ್ಮ ಬೇಡಿಕೆ ಈಡೇರಿಕೆಗಾಗಿ ಕೆಲವು ದಿನಗಳ ಹಿಂದೆ ಬೆಂಗಳೂರಲ್ಲಿ ಒಂದು ಬೃಹತ್ ಸಮಾವೇಶ, ಉಪವಾಸ ಸತ್ಯಾಗ್ರಹ ಇತ್ಯಾದಿಗಳ ಸಿದ್ಧತೆ ಮಾಡುತ್ತಿದ್ದು ಅದನ್ನು ಅವರ ಅದೃಷ್ಟಕ್ಕೆ ಮುಂದೂಡಿದರು. ಆ ಸಂದರ್ಭದಲ್ಲಿ ಬುಡ್ಗ ಜಂಗಮ ಸಮುದಾಯಕ್ಕೆ ಸೇರಿದ ಪ್ರಜ್ಞಾವಂತ ಗೆಳೆಯ ಬಾಲಗುರುಮೂತರ್ಿಯವರು ಅವರ ಆತಂಕವನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು – ” ಸಾರ್, ಲಿಂಗಾಯತ ಜಂಗಮರು ಸಾವಿರ ಸಾವಿರ ಸೇರ್ತಾ ಇದ್ದಾರೆ: ನಮ್ಮ ಬುಡ್ಗ ಜಂಗಮರು ನಿಂತ ಕಡೆ ನಿಲ್ಲಲ್ಲ. ಚೆಲ್ಲೋಗಿರುತ್ತಾರೆ. ಸೇರಿಸೋದು ಕಷ್ಟ. ಹೇಗೆ ಪ್ರತಿಭಟಿಸುವುದು ?” – ಇದು ಅವರ ತಲೆ ತಿಂತಿತ್ತು. ನನಗೂ ಹೊಳೆಯದೆ ಸುಮ್ಮನಿದ್ದಾಗ ನನಗೆ ಒಂದು ದರ್ಶನ ಆಯಿತು, ಅದನ್ನ ಅವರಿಗೆ ಹೀಗೆ ಹೇಳಿದೆ – ” ನೀವೇನೂ ಯೋಚನೆ ಮಾಡಬೇಡಿ, ಪ್ರತಿಭಟಿಸುವುದಕ್ಕೆ ಕೇವಲ ಬೆರಳೆಣಿಕೆ ಜನ ಸಾಕು . ನಾಡಿನ ಕೆಲ ಪ್ರಜ್ಞಾವಂತರೂ ಕೂಡುತ್ತಾರೆ.

ನಾನು ಬರುವೆ, ನಾವು ಇಷ್ಟು ವೂಡೋಣ -“ನಮ್ಮ ಬಂಧುಗಳಾದ ವೀರಶೈವ ಜಂಗಮರು ನಮ್ಮ ಜೊತೆ ಪರಿಶಿಷ್ಠ ಜಾತಿಗೆ ಸೇರಲು ಪಾಪ ಉಪವಾಸ ಕೂತಿದ್ದಾರೆ. ಅವರಿಗೆ ನಮ್ಮ ಸಂಪ್ರದಾಯದ ಪೂಜೆಯ ನೈವೇದ್ಯ- ತ್ವಾಡದ (ಗದ್ದೆ ಇಲಿ) ಬಾಡು ಹಾಗು ಹೆಂಡವನ್ನು ಉಣಬಡಿಸಿ ಏನೊ ನಮ್ಮ ಕೈಲಾದಷ್ಟು ಸೇವೆ ಮಾಡೋಣ”. -ಹೀಗೆಂದು ಹೇಳುತ್ತ ಟ್ರಾಫಿಕ್ಗೆ ತೊಂದರೆ ಆಗದಂತೆ ಒಂಟಿ ಸಾಲಿನ ಮೆರವಣಿಗೆಯಲ್ಲಿ ನಡೆಯೋಣ ಅಂದೆ.

ಆಮೇಲೆ ಹೇಳಿದೆ – ‘ ಹೇಗೂ ಪೋಲಿಸರು ಬಿಡಲ್ಲ. ನಿಮ್ಮ ಬುಡ್ಗ ಜಂಗಮರು ಹೇಗೊ ಎತ್ತೋ ನನಗೆ ಗೊತ್ತಿಲ್ಲ. ನನಗೂ ಸ್ವಲ್ಪ ಆಹಾರ ಪಾನೀಯ ಜೋಪಾನವಾಗಿ ಎತ್ತಿಟ್ಟಿರಿ!” ಎಂದಿದ್ದೆ. ಆ ಗೆಳೆಯ ಪಾಪ ಅಷ್ಟಕ್ಕೆ ಸಮಾಧಾನಗೊಂಡರು.

ಈ ಜಂಗಮರದಾದ ಮೇಲೆ ಭಾರತವನ್ನು ಪ್ರಕಾಶಿಸುತ್ತ ಇರುವ ಐ.ಟಿ ಕ್ಷೇತ್ರದ ನಿರ್ಲಜ್ಜತೆಯನ್ನು ಮುಟ್ಟಿ ಈ ನಿರ್ಲಜ್ಜತಾ ಪ್ರಕರಣ ಮುಗಿಸುತ್ತೇನೆ.

ಕತೆಯಾಗಿ ಚೆನ್ನಾಗಿರುವ ‘ಹಲೋ ಭಾರತಿ’ ಎಂಬ ವಸುಧೇಂದ್ರ ರ ಕತೆಯ ವಸ್ತು ಹೀಗಿದೆ. ಭಾರತದ ಒಂದು ಕಂಪೆನಿಗೆ ಪರದೇಶದಿಂದ ಒಂದು ಹೊರಗುತ್ತಿಗೆ ಕೆಲಸ ಸಿಗುತ್ತದೆ. ಕೆಲಸ ಇದು – ಭಾರತ ಕಂಪೆನಿಯ ಗೌರವಾನ್ವಿತ ನೌಕರರು ಹೊರ ದೇಶದ ಗ್ರಾಹಕರಿಗೆ ಫೋನ್ ಮೂಲಕ ಮಾತಾಡಿ – ಏನೆಂದರೆ, ಅಲ್ಲಿನ ಹೆಣ್ಣಿಗೆ ಇಲ್ಲಿನ ಗಂಡು ಕಾಮೋದ್ರೇಕದ ಮಾತಾಡಿ ಅವಳು ಸ್ಖಲಿಸುವಂತೆ ಮಾಡಬೇಕು . ಹಾಗೆ ಅಲ್ಲಿನ ಗಂಡಿಗೆ ಇಲ್ಲಿನ ಹೆಣ್ಣು ಕಾಮೋದ್ರೇಕದ ಮಾತಾಡಿ ಆತ ಸ್ಖಲಿಸುವಂತೆ ಮಾಡಬೇಕು. ಇದು ಉದ್ಯೋಗ. ಇದಕ್ಕಾಗಿ ಟ್ರಯಲ್ ಅಂಡ್ ಎರರ್ ಆಗುತ್ತದೆ. ಆಗಿ,ಈ ಕಾರ್ಯದಲ್ಲಿ ಭಾರತದ ಕಂಪೆನಿ ಯಶಸ್ವಿಯಾಗುತ್ತದೆ. ಈ ಯಶಸ್ಸಿಗೆ ಭಾರತದ ನೌಕರರು ಕುಣಿದು ಕುಪ್ಪಳಿಸುತ್ತಾರೆ. ಕುಣಿದು ಕುಪ್ಪಳಿಸಿದ್ದೇನು? ನಿರ್ಲಜ್ಜ ಕುಣಿತ. ಇವುಗಳೆಲ್ಲಾ ಅಭಿವೃದ್ಧಿ ಎನಿಸಿ ಬಿಟ್ಟಿದೆ. ಅಭಿವೃದ್ಧಿ ಎಂದರೆ ಇದು – ಅದು ನಿರ್ಲಜ್ಜತೆಯದು ಹಾಗೂ ಅಸಮಾನತೆಯದು ಮಾತ್ರ..

ಹೀಗೆ ನಾವು ಮುಳುಗುತ್ತಿರುವ ಈ ಸ್ಥಿತಿಯಲ್ಲಿ ಚಿಂತನೆಯ ಮಟ್ಟದಲ್ಲಾದರೂ ಕಾಣಬಹುದಾದ ಕನಸುಗಳು ಇವೆಯೆ ಎಂದಾದರೂ ತಡಕಾಡ ಬೇಕಾಗಿದೆ. ಈ ಗಳಿಗೆಯಲ್ಲಿ ನನಗೆ ಭೂತಾನ್ ರಾಷ್ಟ್ರ ಕಣ್ಣಿಗೆ ಬೀಳುತ್ತಿದೆ. ಭೂತಾನ್ ರಾಷ್ಟ್ರವೇ ನಮ್ಮ ಕಣರ್ಾಟಕದ ಒಂದೂವರೆ ಜಿಲ್ಲೆಯಷ್ಟಿರಬಹುದು. ಸಿಂಘೆಯಾಲ್ ವಾಂಗ್ಚುಕ್. ಈ ಚುಲ್ಟಾರಿ ದೇಶದ ಈ ಚುಲ್ಟಾರಿ ದೊರೆ ಜಗತ್ತಿಗೇ ಒಂದು ಸವಾಲು ಎಸೆದಿದ್ದಾದ್ದಾನೆ. ಈ ಸವಾಲು ಜಗತ್ತಿಗೆ ನುಂಗಲಾರದ ತುತ್ತ್ತಾಗಿದೆ. ಆತ ಹೇಳುತ್ತಾನೆ “ಒಂದು ದೇಶದ ಅಭಿವೃದ್ಧಿಯನ್ನು ಆ ದೇಶದ ನಿಜರ್ೀವ ಭೌತಿಕ ವಸ್ತುಗಳ ಉತ್ಪಾದನೆಯ ಮೇಲೆ ಲೆಕ್ಕ ಹಾಕಬೇಡಿ. ಬದಲಾಗಿ ಅಲ್ಲಿ ಜೀವಂತವಾಗಿರುವ ಜನರ ಸಂತೊಷದ ಮೇಲೆ ಹಾಗೂ ಸಮಾನತೆಯನ್ನು ಅಳತೆಗೋಲು ಮಾಡಿಕೊಂಡು ಲೆಕ್ಕ ಹಾಕಿ” ಅನ್ನುತ್ತಾನೆ. ಆಮೇಲೆ ಅವನು ” ಅಭಿವೃದ್ಧಿಯ ಪರಿಕಲ್ಪನೆಗೆ ಸಂತೋಷ ಸಮಾನತೆ ಸೇರ್ಪಡೆಯಾಗುವುದಾದರೆ ಭೂತಾನ್ ಎಂಬ ಈ ಬಡರಾಷ್ಟ್ರವೇ ಜಗತ್ತಿನಲ್ಲೇ ಮೊದಲ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿಲ್ಲುತ್ತದೆ. ಅಮೆರಿಕಾವೋ ಚೈನಾವೋ ಅಥವಾ ಇಂಗ್ಲೆಂಡೋ ಅಲ್ಲ”ಅನ್ನುತ್ತಾನೆ.- ಇದು ಎಲ್ಲರನ್ನೂ ದಿಕ್ಕೆಡಿಸಿದೆ. ಹೀಗೆ ದಿಕ್ಕೆಟ್ಟು. 25 ದೇಶಗಳ 90ಜನ ಪ್ರಜ್ಞಾವಂತ ಅರ್ಥಶಾಸ್ತ್ರಜ್ಞರು ಬ್ರೆಜಿಲ್ನಲ್ಲಿ ಈ ನವೆಂಬರ್ 20ನೇ ತಾರೀಖಿನಿಂದ 24ನೇ ತಾರೀಖಿನವರೆಗೂ ಚಚರ್ಿಸಿ ಸಂತೋಷ ಸಮಾನತೆಗಳನ್ನು ಅಭಿವೃದ್ಧಿಯ ಮಾನದಂಡ ಆಗಿಸಬಹುದಾದ ಸಾಧ್ಯತೆಯನ್ನು ಚಚರ್ಿಸುತ್ತಾ ತಲೆಕೆಡಿಸಿಕೊಂಡಿದ್ದಾರೆ.

ಈ ಎಳೆಯನ್ನು ಹಿಡಿದುಕೊಂಡು ನಾವು ಮುನ್ನಡೆಯ ಬಹುದಾದ ಸಾಧ್ಯತೆ ಇದೆಯೇ ? ಇರುವುದಾದರೆ ಅಭಿವೃದ್ಧಿಯ ಮಾನದಂಡಕ್ಕೆ ಸಮಾನತೆ ಮತ್ತು ಸಂತೋಷವನ್ನೂ ಸೇರ್ಪಡಿಸಲು ಸ್ಥಳೀಯವಾಗಿ ಜಾಗತಿಕವಾಗಿ ಅಭಿಪ್ರಾಯ ರೂಪಿಸಿ ಹೋರಾಡ ಬೇಕಿದೆ. ಈ ಹೋರಾಟಕ್ಕೆ “ನೈಸಗರ್ಿಕ ಸಂಪತ್ತು ಸಾರ್ವಜನಿಕ ಸಂಪತ್ತು ಮಾತ್ರ. ಎಂಬುದನ್ನು ಇಂದು ಕೂಗಿ ಕೂಗಿ ಹೇಳಬೇಕಾಗಿದೆ. ಈ ಹೋರಾಟಕ್ಕೆ ಬಾಳಿಕೆ ಬರಬೇಕಾದರೆ ಸಹನೆ ಮತ್ತು ಪ್ರೀತಿ ಧರ್ಮವಾದವರ ಕೈಲಿ ನಾಯಕತ್ವ ಇರಬೇಕಾಗುತ್ತದೆ.

ಓ ದೇವರೇ- ಈ ಗಳಿಗೆಯಲ್ಲಿ ನನಗೆ ಅನಿಸುತ್ತಿದೆ-ಭೂತಾನ್ಅನ್ನು ಆದರ್ಶ ಮಾಡಿಕೊಂಡು ಆಧುನಿಕತೆಯಿಂದ ಗೊಂದಲಕ್ಕೊಳಗಾಗಿರುವ ಇಸ್ಲಾಂ ಏನಾದರೂ ಈ ಮಾರ್ಗದಲ್ಲಿ ನಡೆಯುವದಾದರೆ ಅರ್ಧ ಜಗತ್ತು ಸುಂದರವಾಗಿ ಅದು ಇಡೀ ಭೂಮಂಡಲವನ್ನೆ ಪ್ರಭಾವಿಸಬಹುದೇನೋ. ಇದು ಇಸ್ಲಾಂಗೆ ಮಾತ್ರ ಸಾಧ್ಯ. ಇಲ್ಲಿ ಧಾಮರ್ಿಕ ಶ್ರದ್ಧೆ ಹೃದಯದ್ದು. ಇದರಿಂದಾಗಿಯೇ ಈ ಆಧುನಿಕತೆ ಅಭಿವೃದ್ಧಿ ಇತ್ಯಾದಿಗಳು ಇಸ್ಲಾಂನ ಅಸ್ತಿತ್ವವನ್ನು ತತ್ತರಿಸುವಂತೆ ಮಾಡಿವೆ. ಕ್ರಿಶ್ಚಿಯನ್ ಧರ್ಮ ಆಧುನಿಕತೆ ಹಾಗೂ ಹಾಲೀ ಅಭಿವೃದ್ಧಿಯ ಜತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಅದಕ್ಕೆ ಈ ಸಾಧ್ಯತೆ ಕ್ಷೀಣ. ಹಿಂದೂ ಧರ್ಮಕ್ಕೆ ಬಂದರೆ-ಈ ಧರ್ಮಕ್ಕೆ ಅಸಮಾನತೆಯೇ ಬುನಾದಿಯಾಗಿರುವುದರಿಂದ ಇದಕ್ಕೆ ಧಾಮರ್ಿಕವಾಗಿ ಸಮಾನತೆಯ ಕಡೆಗೆ ಚಲಿಸುವುದು ಬಿಲ್ಕುಲ್ ಸಾಧ್ಯವಾಗದ ಮಾತು. ಹೀಗಿರುವುದರಿಂದ ಇಸ್ಲಾಂ ಕಡೆ ನಾವು ಹೀಗೆ ನೋಡಬಹುದೇ ಅಂತ ಒಂದೊಂದು ಸಲ ಅನಿಸತೊಡಗುತ್ತದೆ. ಯಾಕೆಂದರೆ ಅಮಿತವಾದ ಧರ್ಮಶದ್ಧೆಯೊಂದಿಗೆ ತನ್ನ ಸಮುದಾಯದೊಳಗೆ ಸಹೋದರಭಾವವೂ ಇರುವುದರಿಂದ ಇರುವುದರಿಂದ ಹೀಗನಿಸುತ್ತಿದೆ

ನಮ್ಮಲ್ಲಿ, ಅಂದರೆ, ಜಾತಿ-ಅಸ್ಪೃಶ್ಯತೆಯ ಭಾರತದಲ್ಲಿ ಒಂದು ಆಂದೋಲನದ ಕ್ರಾಂತಿಕಾರತ್ವವನ್ನ್ವು ಮತ್ತು ಮಾನವೀಯ ಅಂಶವನ್ನು ಅಳತೆ ಮಾಡಲು ಒಂದು ಮಾನದಂಡ ಇಟ್ಟುಕೊಳ್ಳಲೇ ಬೇಕಾಗಿದೆ. ಅದೇ, ಗೆಳೆಯ ಡಿ.ಆರ್ ನಾಗರಾಜರ ಒಗಟಿನ ಮಾತು. – ಊರ ಒಳಗೆ ಅಂಬೇಡ್ಕರ್ ಊರ ಹೊರಗೆ ಗಾಂಧಿ. – ಈ ಒಗಟನ್ನು ಬಿಡಿಸಿ ಕೊಳ್ಳಬೇಕಾಗಿದೆ. ಯಾಕೆಂದರೆ ಭಾರತವು ಮೇಲುಜಾತಿ ಭ್ರಮಾರೋಗ- ಕೀಳುಜಾತಿ ಭ್ರಮಾರೋಗಕ್ಕೆ ತುತ್ತಾಗಿ ನರಳುತ್ತಿದೆ. ಈ ಹಳೆರೋಗ ಗುಣಪಡಿಸಲು ಕಷ್ಟ. ಯಾಕೆಂದರ ಈ ರೋಗವನ್ನು ನಾವು ರೋಗವೆಂದೇ ಅಂದುಕೊಂಡಿಲ್ಲ. ಇಂಥ ಮನಸ್ಥಿತಿಯಲ್ಲಿ ಊರ ಒಳಗೆ ಅಂಬೇಡ್ಕರ್ ಎಂದರೆ , ಮೇಲುಜಾತಿಯ ಭ್ರಮಾರೋಗಕ್ಕೆ ತುತ್ತಾದವರು ಅಸ್ಪೃಶ್ಯ ಅಂಬೇಡ್ಕರ್ ಸಮಾನತೆಯನ್ನು ಒಪ್ಪಿ ತಮ್ಮ ಮನೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಗೌರವಿಸುವುದಾದರೆ -ಕಲ್ಪಿಸಿಕೊಳ್ಳಿ-ಆ ವ್ಯಕ್ತಿಯ ಒಳಗೆ ಮತ್ತು ಹೊರಗೆ ಯಾವ ಬಗೆಯ ಯುದ್ಧ ಜರುಗ ಬಹುದು! ಮೇಲುಜಾತಿ ಭ್ರಮಾರೋಗಕ್ಕೆ ತುತ್ತಾದ ವ್ಯಕ್ತಿ ತನ್ನ ರೋಗ, ಅಂದರೆ ತನ್ನದೇ ರೋಗ ಕಳೆದುಕೊಂಡರೆ ತಂತಾನೆ ಉದಾತ್ತ ಮೌಲ್ಯದ ಮನುಷ್ಯನಾಗಿ ಮಾಪರ್ಾಡಾಗಿ ಬಿಡುತ್ತಾನೆ . ಹೀಗೇ ಒಂದು ಹಳ್ಳಿಯಾದರೆ ಅದು ಆರೋಗ್ಯವಂತ ಮನುಷ್ಯರಿಂದ ತುಂಬಿ ದ ಹಳ್ಳಿಯಾಗುತ್ತದೆ . ಅದಕ್ಕಾಗೇ ಒಂದು  ಸಮಾಜದ ಕ್ರಾಂತಿಕಾರತ್ವದ ನಿಜ ತಿಳಿಯ ಬೇಕಾದರೆ -ಊರೊಳಗೆ ಅಂಬೇಡ್ಕರ್ ಅಳತೆಗೋಲಾಗ ಬೇಕಿದೆ.

ಇದಕ್ಕೆ ವಚನ ಆಂದೋಲನದ ವಾತಾವರಣ ಬೇಕು. ಹಾಗೇ ಗಾಂಧಿ. ಮನುಷ್ಯ ಕೇಂದ್ರಿತ ಆಥರ್ಿಕತೆ ಹಾಗೂ ಜಗತ್ತು ಒಂದು ಕುಟುಂಬ ಎಂಬ ಕನಸನ್ನು ನನಸು ಮಾಡುವುದಕ್ಕಾಗಿ ಗಾಂಧಿಬೇಕು . ಅಂದರೆ ಗಾಂಧಿ ಅಂಬೇಡ್ಕರ್ ಮತ್ತು ವಚನಕಾರರ ಕಲಸು ಮೇಲೋಗರಕ್ಕೆ ಎಲ್ಲಾ ಸಮಾನತಾ ಆಶಯಗಳನ್ನು ಕೂಡಿಸಿ ಇದಕ್ಕಾಗಿ ಸ್ವಾತಂತ್ರ್ಯ ಹೋರಾಟದ ತೀವ್ರತೆಯಲ್ಲಿ ಹೋರಾಡಿದರೆ………. ಹೋರಾಡಲೇ ಬೇಕಾಗಿದೆ. ‘ಜಾಗತೀ ಕರಣ, ಖಾಸಗೀಕರಣ. ಉದಾರೀಕರಣಕ್ಕೆ ಅಂತಃಕರಣ ಇಲ್ಲ’್ಲ -ಇದು ಕಡಿದಾಳು ಶಾಮಣ್ಣನವರ ಮಾತು. ಇದು ಜಗತ್ತಿನ ಗೋಡೆ ಬರಹ ಆಗಬೇಕಾಗಿದೆ. ಅಂತಃಕರಣಕ್ಕಾಗಿ ಜಾಗತೀಕರಣ, ಅಂತಃಕರಣಕ್ಕಾಗಿ ಉದಾರೀ ಕರಣ ಅಂತಃಕರಣಕ್ಕಾಗಿ ಖಾಸಗೀಕರಣ- ಆಗಿಸುವತ್ತ ನಾವು ನಮ್ಮ ಹೆಜ್ಜೆಗಳನ್ನು ಇಡಬೇಕಾಗಿದೆ

6 ಟಿಪ್ಪಣಿಗಳು (+add yours?)

 1. Mahesh
  ನವೆಂ 01, 2010 @ 11:13:22

  ಸಮಾನತೆ ಎನ್ನುವದು ಒಂದು ಆದರ್ಶ. ತನ್ನ ಪ್ರಬಲತೆಗಾಗಿ ಹೋರಾಟ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿದೆ. ಮುಂದೆಯೂ ನಡೆಯುವದು. ಅದು ಮನೆಯಲ್ಲಾದರೂ ಇರಬಹುದು, ಊರಲ್ಲಾದರೂ ಇರಬಹುದು, ದೇಶದಲ್ಲಾದರೂ ಇರಬಹುದು. ಈ ಹೋರಾಟದಲ್ಲಿ ಎಲ್ಲರಿಗೂ ಸಮಾನ ನಿಯಮಗಳು ಅನ್ವಯಿಸಿದರೆ ಬಹುಶಃ ಅದನ್ನೇ ಸಮಾನತೆ ಎನ್ನಬಹುದು.

  ಉತ್ತರ

 2. bantamale
  ಡಿಸೆ 22, 2009 @ 18:45:13

  nannanthora tavka tallanada pratinidhika abhivyakti, devanurara matu. nanaginnu hope ide. every generation has a way of finding its roots.

  ಉತ್ತರ

 3. gundanna chickmagalur
  ಡಿಸೆ 22, 2009 @ 18:21:43

  bahaLa gaMbhIravaada bhaaShana.. kEvala shamannanavara pustaka bidugaDe kaaryakramadalli maadida bhaashanavalla idu.. sarvakaalakku oppigeyaaguva vichaaarada maatugaLu. svalpa samayadalli maaDida gatti maatugalu.. Devanoorara bhaashaNakke pratikriyisuva yOgyateyaagali, saamarthyavaagali nanagilla.. aadare, halavu harahugaLannu mmuTTiruva avara maatugaLu ellarannu jgrutagoLisa bEku..

  ಉತ್ತರ

 4. ಡಾ.ಬಿ.ಆರ್.ಸತ್ಯನಾರಾಯಣ
  ಡಿಸೆ 22, 2009 @ 11:33:43

  ಈಗ ತಾನೆ ಮಯೂರ ಮಾಸಪತ್ರಿಕೆಯಲ್ಲಿ ಈ ಲೇಖನ ಓದಿದ್ದೆ. ಅವಧಿಯಲ್ಲಿ ಮತ್ತೊಮ್ಮೆ ಮೆಲಕು ಹಾಕುವಂತಾಯಿತು. ನಿಜವಾಗಲೂ ಆ ದಶಕ ಒಂದು ಅಪೂರ್ವ ಪುಸ್ತಕ. ಇತಿಹಾಸವಾದರೂ ನಮ್ಮ ವರ್ತಮಾನವನ್ನು ಎಚ್ಚರಿಸಬಲ್ಲಂತಹ ಕೃತಿ. ಪತ್ರ, ಅಂಕಣ ಸಾಹಿತ್ಯ ಪ್ರಕಾರದ ಆಚೆಗೂ ನಿಲ್ಲಬಲ್ಲಂತಹ ಪುಸ್ತಕ ಎಂದು ನಾನು ಭಾವಿಸಿದ್ದೇನೆ. ರೈತ ಸಂಘ ಉತ್ಕರ್ಷದಲ್ಲಿದ್ದಾಗ ನಾನಿನ್ನೂ ಚಿಕ್ಕವನು. ಆದರೆ ಹಳ್ಳಿಯಲ್ಲಿ ಇದ್ದವನು. ಅದರ ಉತ್ಕರ್ಷಾವಸ್ತೆಯನ್ನು ಕಾನುತ್ತಲೇ ಬೆಳೆದವನು. ಆದರೆ ಈಗ ಅದು ಹರಿದು ಹಂಚಿ ಹೋಗಿ ಕರ್ನಾಟಕದ ರೈತರಿಗೆ ಒಂದು ವೇದಿಕೆಯೇ ಇಲ್ಲದಂತಾಗಿದೆ. ಈಗ ಮೊನ್ನೆ ದಾವಣಗೆರೆ ಮತ್ತು ಚಾಮರಾಜ ನಗರದಲ್ಲಿ ನಡೆದ ಲಾಠಿಚಾರ್ಜ್ ಆಗ ಏನಾದರೂ ನಡೆದಿದ್ದರೆ ಇಷ್ಟೊತ್ತಿಗೆ ಮುಖ್ಯಮಂತ್ರಿ ರೈತರ ಎದುರು ಮಂಡಿಯೂರಿ ಕುಳಿತುಕೊಳ್ಳುವಂತಹ ಹೋರಾಟ ರೂಪಗೊಳ್ಳುತ್ತಿತ್ತು. ಈಗ ನೋಡು, ಚಾಮರಾಜನಗರದ ರೈತಮುಖಂಡರಿಗೆ ಮುಖ್ಯಂತ್ರಿಯನ್ನು ತಮ್ಮ ಬಳಿಗೆ ಕರೆಸಿಕೊಳ್ಳುವ ಹೋರಾಟ ರೂಪಿಸುವ ಶಕ್ತಿ ಇಲ್ಲವಾಗಿದೆ. ಅವರೇ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ನಮ್ಮ ರೈತನಾಯಕರಲ್ಲೂ ಅವಕಾಶವಾದಿಗಳು, ಕೋಮುವಾದಿಗಳು, ಲಾಭಬಡುಕರು ಇರುವುದರಿಂದಲೇ ಈಗೆಲ್ಲಾ ಆಗಿದೆ ಎನ್ನಬಹುದು.

  ಉತ್ತರ

  • V.R.Carpenter
   ಡಿಸೆ 22, 2009 @ 18:35:58

   nijavagoo satya narayana avara matu chintisuvantaddu.
   raitara hesarinalli pramanavachana sveekarisida
   mukyamantri tamma kurchi poojege ade raitarannu
   bali padeyuttiddare. idu ee nadina durantavagi parinamiside.

   V.R.Carpenter

   ಉತ್ತರ

 5. Ram
  ಡಿಸೆ 22, 2009 @ 09:37:30

  Devanuru avara lekhana Thumba artha garbhitha vagide
  -ramapra

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: