ಕವಿತೆಯೂ ಕವನವೂ ಅಕ್ಕಪಕ್ಕದಲ್ಲಿ ಕುಳಿತ ಹಾಗೆ..

ಶಾಂತಲಾ ಭಂಡಿ

ನೆನಪು ಕನಸುಗಳ ನಡುವೆ

ಮಧು ಕೃಷ್ಣಮೂರ್ತಿಯವರ ಮನೆಯಲ್ಲಿ ಮೊನ್ನೆ ಸಂಜೆ ಕವಿತೆ ಮತ್ತು ಕವನಗಳೆರಡೂ ಒಟ್ಟಿಗೆ ಕುಳಿತಹಾಗೆ ನನಗೆ ಅನ್ನಿಸ್ತಾ ಇತ್ತು. ಸ್ವಲ್ಪ ಹೊತ್ತಾದ ಮೇಲೆ ವಾಚನ ಮತ್ತು ಗಾಯನ ಒಂದಕ್ಕಿಂತ ಒಂದು ತೀರ ಭಿನ್ನವಾಗಿದ್ದೂ ಸಹ ಪರಸ್ಪರ ಬೆಸಕೊಂಡು ಕುಳಿತ ಹಾಗೆಯೂ ಅನ್ನಿಸೋಕೆ ಶುರುವಾಯ್ತು.

ಉತ್ತರಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿರೋ ಮಧು ಅವರ ಮನೆಯಲ್ಲಿ ಆವತ್ತು ಸಾಹಿತ್ಯ ಸಂಜೆ. ಆ ಸಂಜೆಗೆ ಬೆಳಕಾಗಿ ನಮ್ಮೆಲ್ಲರ ನೆಚ್ಚಿನ ಎಚ್.ಎಸ್.ವಿ ಮತ್ತು ಬಿ.ಆರ್. ಲಕ್ಷಣ್ ರಾವ್ ಅವರುಗಳು ನಮ್ಮ ಜೊತೆಯಲ್ಲಿದ್ದರು.

‘ಕಾವ್ಯ ಮತ್ತು ನಾವು’ ಅನ್ನುವ ವಿಷಯದ ಸುತ್ತ ಚರ್ಚೆ ನಡೆಯುವ ಮೊದಲಾಗಿ ಪ್ರೀತಿಯ ಕವಿ ಎಚ್.ಎಸ್.ವಿ ಅವರು ಪದ್ಯ ಮತ್ತು ಗದ್ಯದ ನಡುವಿನ ಅಂತರದ ಬಗ್ಗೆ ತುಂಬ ಸುಂದರ ವಿವರಣೆ ಕೊಟ್ಟರು. ನಂತರ ಕಾವ್ಯ ಮತ್ತು ನಾವು. ಕಾವ್ಯ ಸುತ್ತೆಲ್ಲ ಸುತ್ತಿಕೊಂಡು ಮತ್ತೆ ನಾವಿದ್ದಲ್ಲಿಗೇ ಬರುತ್ತಿತ್ತು. ಒಟ್ಟಿನಲ್ಲಿ ಚಂದದ ಗಳಿಗೆ.

ಬಿ.ಆರ್.ಲಕ್ಷ್ಮಣರಾವ್ ಅವರು ಹಾಡಿದ್ದನ್ನು ಕೇಳಿದ್ದೆ. ಆದರೆ ಆವತ್ತು ನನ್ನೆದುರೇ ಅವರು ಹಾಡಿದರು ಅನ್ನುವುದಕ್ಕಿಂತ ಅವರು ಹಾಡುವಾಗ ನಾನೂ ಸಹ ಅವರೆದುರಿಗಿದ್ದೆ ಅಂತ ನೆನಪಿಸಿಕೊಂಡರೆ ಖುಷಿಯಾಗುತ್ತೇನೆ ಮತ್ತೆ. ಅವರ ಹಾಡಿಗೆ ಸ್ಪೂರ್ತಿಯಾಗಿ ಸುಬ್ಬಾಭಟ್ಟರ ಮಗಳು ನಮ್ಮ ಜೊತೆಯಲ್ಲಿಯೇ ಇದ್ದರು.

ಇಂಥ ಒಂದು ಗಳಿಗೆ ಕಳೆದು ಮನೆಗೆ ಮರಳಿದ ಮೇಲೂ, ಮತ್ತೆರಡು ದಿನಗಳಾದ ಮೇಲೂ ಮತ್ತೆ ನೆನಪಾಗುವುದೆಂದರೆ ಮಾತಿನ ಕೊನೆಯಲ್ಲಿ ಕನ್ನಡದ ಅಳಿವು ಉಳಿವಿನ ಬಗ್ಗೆ ಹೇಳುತ್ತಾ ಎಚ್.ಎಸ್.ವಿ ನುಡಿದದ್ದು ‘ಕನ್ನಡ ಖಂಡಿತ ಉಳಿಯತ್ತೆ. ನಾವು ಕನ್ನಡದಲ್ಲಿ ಮಾತಾಡಲಿ ಬಿಡಲಿ ನಮಗಂತೂ ಭಯವಿಲ್ಲ. ನಮ್ಮ ಕನ್ನಡ ಉಳಿಯುತ್ತದೆ’ ಅಂತ ಎಚ್.ಎಸ್.ವಿ ಭಾವುಕರಾಗಿ ಹಸ್ತವನ್ನು ಹೃದಯಕ್ಕಿಟ್ಟುಕೊಂಡು ನುಡಿದದ್ದು.

ಮನೆಗೆ ಮರಳಿದ ಮೇಲೂ ಮತ್ತೆ ನೆನಪಾಗುವುದೆಂದರೆ ಎಚ್ ಎಸ್ ವಿ ಅವರ ಮಾತು ಮತ್ತು ಅದಕ್ಕೆ ಪೂರಕವಾಗಿ ಕನ್ನಡ ಉಳಿದ ಆ ಕಾಲಕ್ಕೆ ನಾವು ಹುಡುಕಿಕೊಂಡು ಹೋಗಬೇಕಾದ ಕನ್ನಡ ಪುಸ್ತಕಗಳೂ ಲಭ್ಯವಿರುವ ಲೈಬ್ರರಿಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: