ಮಾಧ್ಯಮದ ಮೇಲೊಂದು ಕಣ್ಣು …

ಮಾಧ್ಯಮದಲ್ಲಿ ಮಹಿಳೆಯ ಚಿತ್ರಣ ಕುರಿತಂತೆ ಜಗತ್ತಿನಾದ್ಯಂತ ನಡೆದ ಮಾಧ್ಯಮ ಸಮೀಕ್ಷೆಯ ವರದಿ- ಗ್ಲೋಬಲ್ ಮೀಡಿಯಾ ಮಾನಿಟರಿಂಗ್  ಪ್ರಾಜೆಕ್ಟ್ ಆಶ್ರಯದಲ್ಲಿ ಬಿಡುಗಡೆ ಮಾಡಲಾಯಿತು. ದಿ ಹಿಂದೂ ಪತ್ರಿಕೆಯ ಬೆಂಗಳೂರು ಆವೃತ್ತಿಯ ಸಂಪಾದಕಿ ಪಾರ್ವತಿ ಮೆನನ್, ಮಾಧ್ಯಮ ತಜ್ಞೆ ಅಮ್ಮು ಜೋಸೆಫ್, ಅಂಕಣಕಾರ ಜಿ ಎನ್ ಮೋಹನ್ ಕಾರ್ಯಕ್ರಮದಲ್ಲಿ ಮಾಧ್ಯಮದಲ್ಲಿ ಮಹಿಳೆ ಕುರಿತು ಮಾತನಾಡಿದರು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.

ಮತ್ತಷ್ಟು ಫೋಟೋಗಳು ಮೀಡಿಯಾ ಮೈಂಡ್

ಆವರ ಅಂಚೆ ವಿಳಾಸ ‘ಮೃತ್ಯುಂಜಯ ಬಂಗಲೆ,ಧಾರವಾಡ‘ ಅಂತಿರಬಹುದು…

ಮಲ್ಲಿಕಾರ್ಜುನ: ಸಂಗೀತದಲ್ಲಿ ಮನೆ ಮಾಡಿದ ಮಹನೀಯ.

ಪು ಲ ದೇಶಪಾಂಡೆಸುರೇಂದ್ರನಾಥ್ ಎಸ್.

ಮಲ್ಲಿಕಾರ್ಜುನ ಮನ್ಸೂರ್ ಸಂಗೀತದಲ್ಲಿ ಮನೆ ಮಾಡಿಕೊಂಡಿದ್ದಾರೆ. ಆವರ ಅಂಚೆ ವಿಳಾಸ ಮೃತ್ಯುಂಜಯ ಬಂಗಲೆ, ಧಾರವಾಡಅಂತಿರಬಹುದು. ಆದರೆ ಅವರು ವಾಸ ಮಾಡಿಕೊಂಡಿರೋದು ಸಂಗೀತ ಪ್ರಪಂಚದಲ್ಲಿ. ಬೆಳಿಗ್ಗೆ ತೋಡಿಅಸಾವರಿಯಲ್ಲಿ ಮನೆ ಮಾಡಿದ್ದಲ್ಲಿ, ಮಧ್ಯಾಹ್ನಗಳಲ್ಲಿ ಸಾರಂಗದ ನೆರಳಿನಲ್ಲಿ, ಸಾಯಂಕಾಲ ಪೂರಿಯಮಾರ್ವಾ ಚಪ್ಪರಗಳಡಿಯಲ್ಲಿ, ರಾತ್ರಿ ಯಮನ್ಭೂಪ್ಬಾಗೇಶ್ರಿ ಮನೆಗಳಲ್ಲಿ ಅವರ ವಾಸ.


ಅಣ್ಣ ಒಬ್ಬ ನಿಷ್ಠಾವಂತ ಸಂಸಾರಸ್ಥ. ಒಬ್ಬ ಹೆಂಡತಿಯನ್ನೂ, ಐದಾರು ಮದುವೆಯಾದ, ಮದುವೆಯಾಗದ ಹೆಣ್ಣುಮಕ್ಕಳನ್ನೂ, ಒಬ್ಬ ಮಗನನ್ನೂ, ಒಬ್ಬ ಸೊಸೆಯನ್ನೂ, ಹಲವಾರು ಮೊಮ್ಮಕ್ಕಳನ್ನು ಸಾಕಿ ಸಲಹುವ ಒಬ್ಬ ಗೃಹಸ್ಥ. ತಮ್ಮ ಜೀವಮಾನದ ಉಳಿತಾಯದಿಂದ ಧಾರವಾಡದಲ್ಲಿ ಒಂದು ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಅದರಲ್ಲಿರುವುದು ಒಬ್ಬ ತಂದೆ, ಒಬ್ಬ ಗಂಡ ಇತ್ಯಾದಿಗಳಾದ ಮಲ್ಲಿಕಾರ್ಜುನ ಮನ್ಸೂರ್. ಆ ತೆಳ್ಳಗಿನ ದೇಹದಲ್ಲಿ ಸಂಗೀತದಲ್ಲೇ ಮನೆ ಮಾಡಿಕೊಂಡಿರುವ ಮತ್ತೊಬ್ಬ ಮಲ್ಲಿಕಾರ್ಜುನ ಅಡಗಿದ್ದಾರೆ. ಈ ಮಲ್ಲಿಕಾರ್ಜುನ ಸಂಗೀತದಲ್ಲಿ ವಾಸ ಮಾಡಲು ತೊಡಗಿದಾಗ ಎಂಟು ವರ್ಷ ವಯಸ್ಸು. ಇವತ್ತು ಅವರಿಗೆ ಅರುವತ್ತೊಂದು. ಇನ್ನೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಈ ಸಂಗೀತಕ್ಕೆ ಅವರಿಗೆ ಯಾವುದೇ ಬಾಡಿಗೆ ಸಭಾಂಗಣದ ಅಗತ್ಯವಿಲ್ಲ. ಯಾವುದೋ ಸಂಗೀತ ಸಂಸ್ಧೆಯ ಕಾರ್ಯದರ್ಶಿಯ ಆಹ್ವಾನದ ಅಗತ್ಯವಿಲ್ಲ. ಒಂದು ಹಾರ್ಮೋನಿಯಂ ಅಥವಾ ತಬಲಾದ ಸಾಥ್ ಬೇಡ. ಅದಕ್ಕೆ ಪ್ರೇಕ್ಷಕರ ಅಗತ್ಯವೂ ಇಲ್ಲ. ಅಲ್ಲಿ ಸಂಗೀತ ಕೇಳುವ ಅಗತ್ಯವೂ ಇಲ್ಲ. ಅವರ ಕಣ್ಣಗಳನ್ನೇ ನೋಡಿ ಸಂಗೀತವನ್ನು ಅನುಭವಿಸಬಹುದು. ಅಣ್ಣ ತಮ್ಮ ಸ್ನೇಹಿತರ ಜೊತೆಯಲ್ಲಿದ್ದಾಗ ಅವರ ಜೊತೆ ಮಾತನಾಡುತ್ತಾರೆ, ಅವರ ಮಾತು ಕೇಳುತ್ತಾರೆ, ಅವರನ್ನು ನೋಡುತ್ತಾರೆ ಅಷ್ಟೇ. ಆದರೆ ನಿಜವಾಗಿಯೂ ಅವರು ಮಾತನಾಡುತ್ತಿಲ್ಲ, ಅವರ ಮಾತುಗಳನ್ನು ಕೇಳುತ್ತಿಲ್ಲ, ಅವರನ್ನು ನೋಡುತ್ತಿಲ್ಲ. ಎಲ್ಲೋ ಕಳೆದು ಹೋಗಿದ್ದಾರೆ. ಯಾವುದೋ ರಾಗದ ಸ್ವರಗಳನ್ನು ಹುಡುಕುತ್ತಿವೆ ಆ ಕಣ್ಣುಗಳು. ಇದ್ದಕ್ಕಿದ್ದ ಹಾಗೇ ಯಾವತ್ತೋ ಕಳೆದು ಹೋಗಿದ್ದ ಜೀಝ್ ಒಂದನ್ನು ಭೇಟಿಯಾದ ಸಂತೋಷ ಕಣ್ಣುಗಳಲ್ಲಿ ಮಿನುಗುತ್ತದೆ. ಮಾತುಕತೆಯ ನಡುವೆ ಸ್ವರಯಾತ್ರೆಯ ಒಬ್ಬ ಸಹಯಾತ್ರಿ ಸಿಕ್ಕಿದ ಕೂಡಲೇ ಆ ಯಾತ್ರಿಯ ಕೈ ಹಿಡಿದು, ಈ ಬಂಧಿಷ್ ಕೇಳುಎಂದು, ಅವನನ್ನು ನಿಜ ಜೀವನದಿಂದ, ಸಂಗೀತದ ಆ ಅದ್ಭುತ ಪ್ರಪಂಚಕ್ಕೆ ಕರೆದೊಯ್ಯುತ್ತಾರೆ. ಆ ಕೂಡಲೇ ಗಡಿಯಾರದ ಕೈಗಳು ನಿಶ್ಚಲವಾಗಿ ಬಿಡುತ್ತವೆ. ಕಾಲ ನಿಂತು ಬಿಡುತ್ತದೆ. ಸುತ್ತಲಿನ ಪ್ರಪಂಚ ಕರಗಿ ಆವಿಯಾಗುತ್ತದೆ. ಆ ಕ್ಷಣದಲ್ಲಿ ಅಲ್ಲಿ ಉಳಿಯುವುದು ಸ್ವರ ಲೀಲೆಯ ಒಂದು ಅದ್ಭುತ ಚಿತ್ರ.

ಚಿತ್ರ: ಎಸ್ ಜಿ ಸ್ವಾಮಿ

ನಾನು ಅಣ್ಣನ ಸಂಗೀತವನ್ನು ಸುಮಾರು ಮೂವತ್ತೈದು ಮೂವತ್ತಾರು ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ. ಅವರ ಸಂಗೀತಕ್ಕೆ ಹೇಗೋ ಹಾಗೇ ಅವರೊಂದಿಗಿನ ಒಡನಾಟಕ್ಕೂ ಹಾತೊರೆದಿದ್ದೇನೆ. ಸಂಗೀತದ ಹುಚ್ಚು ಹಚ್ಚಿಸಿಕೊಂಡ ಒಬ್ಬನಿಗೆ ಇರಬೇಕಾದ ಎಲ್ಲಾ ಧಾವಂತಗಳು ನನಗೆ ಚಿಕ್ಕಂದಿನಿಂದಲೂ ಇವೆ. ನನ್ನ ಸ್ನೇಹಿತ ಶಾರು ರೇಡ್ಕರ್ ಮತ್ತು ನಾನು, ಇನ್ನೂ ಶಾಲಾ ಬಾಲಕರು ನಾವು, ಅಣ್ಣನ ಬೈಠಕ್‌ಗಳನ್ನು ಬಾಗಿಲಲ್ಲಿ ಕೂತು ಕೇಳಿದ್ದೇವೆ. ದೇವರ ಪ್ರಸಾದ ಬೇಕೆಂದಲ್ಲಿ, ಸುತ್ತಲಿನವರನ್ನು ತಳ್ಳಿ, ಮೊಣಕೈಗಳಿಂದ ದೂಡಿ ಪೂಜಾರಿಯ ಎದುರು ನಿಲ್ಲುವುದನ್ನು ಕಲಿತಿರಬೇಕು. ಅವರಿವರು ಗದರಿದರೆ, ಗದರಿಕೊಳ್ಳಲಿ ಬಿಡಿ. ಒಬ್ಬ ಮಹಾನ್ ಗಾಯಕನ ಸಮೀಪ ಹೋಗಬೇಕೆಂದಿದ್ದಲ್ಲಿ, ಆ ಯುದ್ಧದ ಎಲ್ಲಾ ತಂತ್ರಗಳನ್ನೂ ಅರಿತಿರ ಬೇಕು. ಆ ಮಹಾನ್ ಗಾಯಕ ಟಾಂಗಾದಿಂದ ಇಳಿಯುತ್ತಿದ್ದಂತೇ ಅವರ ಕೈಯ್ಯಿಂದ ತಾನ್ಪುರವನ್ನು ಇಳಿಸಿಕೊಂಡು, ಬೈಠಕ್ಕಿನ ಮೊದಲ ಸಾಲಿನಲ್ಲಿ ಕೂಡುವ ತಂತ್ರವನ್ನು ಕರಗತಮಾಡಿಕೊಳ್ಳದವನಿಗೆ ಸಂಗೀತ ಸಮಾರಾಧನೆಯ ಸಾಗರದಲ್ಲಿ ಈಜುವ ಮೊದಲ ಪಟ್ಟೂ ತಿಳಿಯದಿಲ್ಲವೆಂದೇ ಹೇಳಬಹುದು. ಅನೇಕ ಮಹಾನ್ ಸಂಗೀತಗಾರರ ಸೇವೆಯನ್ನು ನಾನು ಹೀಗೆ ಮಾಡಿದ್ದೇನೆ. ಹಾಗಾಗಿ ಭಾರತದ ಸಂಗೀತ ಪ್ರಪಂಚಕ್ಕೆ ನನ್ನದೂ ಒಂದಿಷ್ಟು ಸೇವಾಕಾಣಿಕೆಯಿದೆ. ಎಲ್ಲರಿಗಿಂತ ಹೆಚ್ಚು ನಾನು ಅಣ್ಣನ ಸೇವೆ ಮಾಡಿದ್ದೇನೆ. ಬಹಳ ಸಲ. ಅವರೊಂದಿಗೆ ಹಾರ್ಮೋನಿಯಂ ನುಡಿಸುತ್ತಾ ಅವರ ತಾಳ್ಮೆಯ ಮಿತಿಗಳನ್ನೂ ಅನುಭವಿಸಿದ್ದೇನೆ.

More

‘ಹಂಗಾಮ’ ಕಾರ್ನರ್ ನಲ್ಲಿ ಹೌದೇನೆ?

ಅವಳ ಹೆಸರಿನಲ್ಲೀಗ ಕನಸುಗಳಿಲ್ಲ !...

-ಗಾನಾ ಜೋಯ್ಸ್

ಉಸಿರುಸಿರಿಗೂ ಹಸಿರು ಚೆಲ್ಲುವ ಮಲೆ ಮಧ್ಯದಲ್ಲಿ ಪುಟ್ಟ ಮನೆ . ಮಳೆಗೆ ನೆಂದ ಹೆಂಚಿನಿಂದ ಎಂಥದೋ ಪರಿಮಳದ ನೆಚ್ಹಿನಲ್ಲಿ ಬೆಚ್ಹಗೆ ಕಂಬಳಿ ಎಳಕೊಂಡೆಳಕೊಂಡು  ಮುಲುಗುತ್ತಾ ಮಲಗಿರುವ ಹದಿನೆಂಟರ ರತ್ನಿ ವಯಸ್ಸು ಹದಿನೆಂಟು -ಕನಸು ನೂರೆಂಟು.ಗಂಟೆ ಆರಾದರೂ ಕನಸಲ್ಲಿ ಬೈಕೇರಿ ಬರುವ ರಾಜಕುಮಾರನಿಗೆ ತಡೆಎಂಬುದಿಲ್ಲ. ಒಂಭತ್ತಕ್ಕೆಲ್ಲಾ ‘ಒಡೇರ ಮನೆ’ಗೆ ಮುಸುರೆ ತಿಕ್ಕಲು ಹೊರಡಬೇಕಿದ್ದ ರತ್ನಿ ಕನಸಲ್ಲಿ ತಾನೇ ಒಡತಿ.

ಒಡೇರ ಮನೆ ಅಂದ ಮೇಲೆ, ಹೋಗುವವರು-ಬರುವವರು ಹತ್ತಾರು ಮಂದಿ . ರತ್ನಿ -ಸುಂದರಿ . ಹತ್ತಾರು ಮಂದಿಯಲ್ಲೊಬ್ಬ ಹೃದಯವಂತ .ಕಣ್ ಬಿತ್ತು. ಕಣ್ಣುಗಳು ಕೂಡಿದವು . ಸಧ್ಯ! ಎರಡು ಮೂರಾಗುವುದರೊಳಗೆ ಪಂಚಾಯ್ತಿ ನಡೆದು ಹೋಯಿತು. ಹೃದಯವಂತನ ಅಪ್ಪ ಒಪ್ಪಿದ . ದೊಡ್ಡ ಸೋಶಿಯಲಿಸ್ಟು . ಅಮ್ಮ ಒಪ್ಪಿದಳು . ಅಪ್ಪನ ನೆರಳು! ಆದರು ಮದುವೆ ನಡೆಯದೆ ಹೋಯ್ತು. ರತ್ನಿಯೇ ಒಪ್ಪಲಿಲ್ಲ! ಉಹೊಂ… ಯಾವ ಸಿನೆಮಾ ಥರವೂ ಚಿಕ್ಕ ಒಡೆಯನ ಚಪಲ ಅವಳ ಬಗೆಗಿರಲಿಲ್ಲ.

ಇದ್ದದ್ದೆಲ್ಲಾ ಸಾವಿರಗಟ್ಟಲೆ ರತ್ನಿಯ ಅಪ್ಪನ ಸಾಲ . ಹೃದಯವಂತ ತೀರಿಸುವೆನೆಂದರು ಬಿಡಲಿಲ್ಲ . ಮನೆಯ ಜೀತದವಳು ಕಾರನ್ನೇರುವುದು ಅವರಿಗೆ ಬೇಕಿರಲಿಲ್ಲ . ರತ್ನಿಯ ಅಪ್ಪ-ಅಮ್ಮನಿಗೋ , ಒಡೆರು -ಸಾಕ್ಷಾತ್ ದೇವರು! ರತ್ನಿ … ಆ ದೇವರಿಗೆ ನರಬಲಿ!

ಅಣ್ಣನ ಎಳೆಮಗುವನ್ನು ಎದೆಗವಚಿಕೊಳ್ಳುತ್ತಾಳೆ . ಅವನ ನೆನಪಾಗುತ್ತದೆ. ಮಗುವಿನ ಕೆನ್ನೆ ಮೇಲೆ ಅವಳ ಕಣ್  ಮುತ್ತು ಟಪ ಟಪ  ಹನಿಯುತ್ತದೆ . ಏನೊಂದು ಅರಿಯದ ಮಗು ಕಿಲ ಕಿಲ ನಗುತ್ತದೆ .

ನೀನಾಸಂ ಸಂಸ್ಕೃತಿ ಶಿಬಿರ

INDIA should live not just in its past

Cartoon: sathish Acharya

Our country INDIA should live not just in its past, but in the present and future. Our children should get their space and time for their development. Religion is for tolerance and harmony. Let us maintain Peace and Harmony. Let us show to the world that India is a unique nation with multiple religions living harmoniously, and a country united and strong

-B A Viveka Rai

ಕವಿತೆಯೂ ಕವನವೂ ಅಕ್ಕಪಕ್ಕದಲ್ಲಿ ಕುಳಿತ ಹಾಗೆ..

ಶಾಂತಲಾ ಭಂಡಿ

ನೆನಪು ಕನಸುಗಳ ನಡುವೆ

ಮಧು ಕೃಷ್ಣಮೂರ್ತಿಯವರ ಮನೆಯಲ್ಲಿ ಮೊನ್ನೆ ಸಂಜೆ ಕವಿತೆ ಮತ್ತು ಕವನಗಳೆರಡೂ ಒಟ್ಟಿಗೆ ಕುಳಿತಹಾಗೆ ನನಗೆ ಅನ್ನಿಸ್ತಾ ಇತ್ತು. ಸ್ವಲ್ಪ ಹೊತ್ತಾದ ಮೇಲೆ ವಾಚನ ಮತ್ತು ಗಾಯನ ಒಂದಕ್ಕಿಂತ ಒಂದು ತೀರ ಭಿನ್ನವಾಗಿದ್ದೂ ಸಹ ಪರಸ್ಪರ ಬೆಸಕೊಂಡು ಕುಳಿತ ಹಾಗೆಯೂ ಅನ್ನಿಸೋಕೆ ಶುರುವಾಯ್ತು.

ಉತ್ತರಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿರೋ ಮಧು ಅವರ ಮನೆಯಲ್ಲಿ ಆವತ್ತು ಸಾಹಿತ್ಯ ಸಂಜೆ. ಆ ಸಂಜೆಗೆ ಬೆಳಕಾಗಿ ನಮ್ಮೆಲ್ಲರ ನೆಚ್ಚಿನ ಎಚ್.ಎಸ್.ವಿ ಮತ್ತು ಬಿ.ಆರ್. ಲಕ್ಷಣ್ ರಾವ್ ಅವರುಗಳು ನಮ್ಮ ಜೊತೆಯಲ್ಲಿದ್ದರು.

‘ಕಾವ್ಯ ಮತ್ತು ನಾವು’ ಅನ್ನುವ ವಿಷಯದ ಸುತ್ತ ಚರ್ಚೆ ನಡೆಯುವ ಮೊದಲಾಗಿ ಪ್ರೀತಿಯ ಕವಿ ಎಚ್.ಎಸ್.ವಿ ಅವರು ಪದ್ಯ ಮತ್ತು ಗದ್ಯದ ನಡುವಿನ ಅಂತರದ ಬಗ್ಗೆ ತುಂಬ ಸುಂದರ ವಿವರಣೆ ಕೊಟ್ಟರು. ನಂತರ ಕಾವ್ಯ ಮತ್ತು ನಾವು. ಕಾವ್ಯ ಸುತ್ತೆಲ್ಲ ಸುತ್ತಿಕೊಂಡು ಮತ್ತೆ ನಾವಿದ್ದಲ್ಲಿಗೇ ಬರುತ್ತಿತ್ತು. ಒಟ್ಟಿನಲ್ಲಿ ಚಂದದ ಗಳಿಗೆ.

ಬಿ.ಆರ್.ಲಕ್ಷ್ಮಣರಾವ್ ಅವರು ಹಾಡಿದ್ದನ್ನು ಕೇಳಿದ್ದೆ. ಆದರೆ ಆವತ್ತು ನನ್ನೆದುರೇ ಅವರು ಹಾಡಿದರು ಅನ್ನುವುದಕ್ಕಿಂತ ಅವರು ಹಾಡುವಾಗ ನಾನೂ ಸಹ ಅವರೆದುರಿಗಿದ್ದೆ ಅಂತ ನೆನಪಿಸಿಕೊಂಡರೆ ಖುಷಿಯಾಗುತ್ತೇನೆ ಮತ್ತೆ. ಅವರ ಹಾಡಿಗೆ ಸ್ಪೂರ್ತಿಯಾಗಿ ಸುಬ್ಬಾಭಟ್ಟರ ಮಗಳು ನಮ್ಮ ಜೊತೆಯಲ್ಲಿಯೇ ಇದ್ದರು.

ಇಂಥ ಒಂದು ಗಳಿಗೆ ಕಳೆದು ಮನೆಗೆ ಮರಳಿದ ಮೇಲೂ, ಮತ್ತೆರಡು ದಿನಗಳಾದ ಮೇಲೂ ಮತ್ತೆ ನೆನಪಾಗುವುದೆಂದರೆ ಮಾತಿನ ಕೊನೆಯಲ್ಲಿ ಕನ್ನಡದ ಅಳಿವು ಉಳಿವಿನ ಬಗ್ಗೆ ಹೇಳುತ್ತಾ ಎಚ್.ಎಸ್.ವಿ ನುಡಿದದ್ದು ‘ಕನ್ನಡ ಖಂಡಿತ ಉಳಿಯತ್ತೆ. ನಾವು ಕನ್ನಡದಲ್ಲಿ ಮಾತಾಡಲಿ ಬಿಡಲಿ ನಮಗಂತೂ ಭಯವಿಲ್ಲ. ನಮ್ಮ ಕನ್ನಡ ಉಳಿಯುತ್ತದೆ’ ಅಂತ ಎಚ್.ಎಸ್.ವಿ ಭಾವುಕರಾಗಿ ಹಸ್ತವನ್ನು ಹೃದಯಕ್ಕಿಟ್ಟುಕೊಂಡು ನುಡಿದದ್ದು.

ಮನೆಗೆ ಮರಳಿದ ಮೇಲೂ ಮತ್ತೆ ನೆನಪಾಗುವುದೆಂದರೆ ಎಚ್ ಎಸ್ ವಿ ಅವರ ಮಾತು ಮತ್ತು ಅದಕ್ಕೆ ಪೂರಕವಾಗಿ ಕನ್ನಡ ಉಳಿದ ಆ ಕಾಲಕ್ಕೆ ನಾವು ಹುಡುಕಿಕೊಂಡು ಹೋಗಬೇಕಾದ ಕನ್ನಡ ಪುಸ್ತಕಗಳೂ ಲಭ್ಯವಿರುವ ಲೈಬ್ರರಿಗಳು

%d bloggers like this: