ಓ..ಭೈರಪ್ಪ..!

“ಕವಲು” ನಂತರ ಭೈರಪ್ಪನವರ ಬಗ್ಗೆ ಸುಮಾರು ಎಷ್ಟು ಕಾಲಮ್ಮು ಸೆಂಟಿಮೀಟರ್ ಲೇಖನಗಳು (ಸುದ್ದಿ, ಸಂದರ್ಶನ, ವಿಮರ್ಷೆ ಎಲ್ಲವೂ ಸೇರಿದಂತೆ) ನಮ್ಮ ಪತ್ರಿಕೆಗಳಲ್ಲಿ ಬಂದಿರಬಹುದು? ಇದನ್ನು ಕೂತು ಲೆಕ್ಕಾ ಹಾಕಬೇಕು ಅನ್ನುವ ನನ್ನ ಮತ್ತು  ನನ್ನ ಸ್ನೇಹಿತರೊಬ್ಬರ ಪ್ರಾಜೆಕ್ಟು ನಮ್ಮ ಸೋಮಾರಿತನದಿಂದ ನಿಂತೇ ಹೋಗಿದೆ. ಸುದ್ದಿ ತಾಜಾ ಇದ್ದಾಗ ಇಂಥ ಕೆಲಸ ಮಾಡಿದರೆ ಇದಕ್ಕೊಂದು ಬೆಲೆ. ಇಷ್ಟು ದಿನ ಆಗಿ ಕಾದಂಬರಿ ಹುಲುಮಾನವರಿಗೆ ಎಣಿಸಲಾಗದಷ್ಟು ಮುದ್ರಣಗಳನ್ನು  ಕಂಡ ಮೇಲೆ ಮತ್ತೆ ಇದರ ಬಗ್ಗೆ ಬರೆಯಲಿಕ್ಕೆ ನ್ಯೂಸ್ ಪೆಗ್ ಆದರೂ ಏನುಂಟು ಅಂತ ನಮಗೆ ನಾವು ಹೇಳಿಕೊಂಡು ಸುಮ್ಮನಾಗಿದ್ದೇವೆ. (ನಿಮಗೆಲ್ಲ ಗೊತ್ತಿರುವ ಹಾಗೆ ಪತ್ರಕರ್ತರಿಗೆ ಪೆಗ್ಗು ಮತ್ತು ನ್ಯೂಸ್ ಪೆಗ್ಗುಗಳೆರಡೂ ತುಂಬ ಮುಖ್ಯ.)

ಆದರೆ, ಮೊದಲಿನಷ್ಟು ದಿನಕ್ಕೆರಡಲ್ಲದಿದ್ದರೂ ಭೈರಪ್ಪನವರ ಬಗ್ಗೆ ಲೇಖನಗಳು ಬರುವುದಂತೂ ನಿಂತಿಲ್ಲ. ಅವರ ಹುಟ್ಟುಹಬ್ಬ ಅಂತಲೋ, ಹಾಸನದ ಅವರ ಊರಿಗೆ ಹೋದರು ಅಂತಲೋ, ಶಿವಮೊಗ್ಗೆಯಲ್ಲಿ ರಸಾನುಭವದ ಬಗ್ಗೆ ಲೆಕ್ಚರ್ ಅಂತಲೋ… ಹೀಗೆ. ಕೊನೆಗೆ ನಾವೆಲ್ಲ ಸೇಬು ತಿನ್ನಬೇಕಾ ಅಥವಾ ಪೇರಳೆಹಣ್ಣು ತಿನ್ನಬೇಕಾ ಅನ್ನುವ ಲೇಖನದಲ್ಲಿಯೂ ಭೈರಪ್ಪನವರ ಪ್ರಸ್ತಾಪ ನಾವು ಕಾಣಬಹುದು. ನ್ಯೂಸ್ ಪೆಗ್ ಅಂತೆಲ್ಲಾ ಹೇಳೋದೂ ನಮ್ಮಂಥ ಸೋಮಾರಿಗಳ ಇನ್ನೊಂದು ಲಕ್ಷಣ ಅನ್ನುವುದಕ್ಕೆ ಈ ಲೇಖನಗಳ ಜಡಿಮಳೆಯೇ ಸಾಕ್ಷಿ.

ಪೂರ್ಣ ಓದಿಗೆ: ಬಾಗೇಶ್ರೀ

ಕೀ.ರಂ ನೆನಪಿನ ತೇರು…

ದಿಲಾವರ್ ರಾಮದುರ್ಗ

dilse

ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ

ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ...

ರಾತ್ರಿ 11ರ (ಆಗಸ್ಟ್ 7, 2010) ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮಾಡಿ ಕಿ.ರಂ ಹೋಗಿಬಿಟ್ರು ಎಂದ. ನಂಬೋಕಾಗಲಿಲ್ಲ. ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ ‘ನೀಗಿಕೊಂಡ ಸಂಸ’ ಬರೆದ ನಾಟಕಕಾರ, ವಿಮರ್ಶಕ ಸುಮ್ಮನೇ ಮಲಗಿದಂತೆ ಕಾಣಿಸಿದ. ಒಂದಷ್ಟು ಕ್ಷಣ ಮುಂದೆ ನಿಂತು ಮನದಲ್ಲೇ ಆಖರೀ ಸಲಾಂ ಹೇಳಿ ಅಲ್ಲೇ ಇದ್ದ ಗೆಳೆಯರ ಗುಂಪಿಗೆ ಸೇರಿದೆ. ನಾಗತಿಹಳ್ಳಿ ರಮೇಶ್ ವ್ಯಾನ್ ನಲ್ಲಿ ಕ್ರಮೇಷನ್ ಗೆ ಹೋಗೋಣ ನಡೆಯಿರಿ ಎಂದು ತಮ್ಮ ಪಟಾಲಂ ಸೇರಿಸಿದ. ನನ್ನನ್ನೂ ಕರೆದೊಯ್ದರು. ‘ಎಂದೂ ಎಲ್ಲೂ ನಿಲ್ಲದ, ಮಾತೇ ಮಾಣಿಕ್ಯ ಎಂದು ನಂಬಿದಂಥ, ದಾರಿಯುದ್ದಕ್ಕೂ ಆಶಯಗಳ ಸಾರುತ್ತ ಹೊರಟ ಸಾರೋ ಐನಾರನ ಹಾಗೆ, ಮೆಚ್ಚಿದ್ದನ್ನು, ಮೆಚ್ಚದೇ ಇದ್ದದ್ದನ್ನು ಏಕತಾರಿ ನಾದದಲ್ಲಿ ಹಾಡುತ್ತ ಹೊರಟ ಫಕೀರ, ದರವೇಶಿಯಂಥ.. ತನ್ನದೇ ಜ್ಞಾನದ ಧುನ್ ನಲ್ಲಿ ಮುಳುಗಿಹೋದ ಸೂಫಿಯಂಥ ಮನುಷ್ಯ ಹೊರಟು ಹೋದನಲ್ಲ…’ ಎಂದೆಲ್ಲ ವ್ಯಾಖ್ಯಾನಿಸಲೆತ್ನಿಸಿದೆ. ಹುಟ್ಟು-ಸಾವಿನ ನಿರಂತರ ಪ್ರಕ್ರಿಯೆಯ ಸತ್ಯದೆದುರು, ಒಬ್ಬ ಮನುಷ್ಯ ಇನ್ನಿಲ್ಲ ಎನ್ನುವ ಹೊತ್ತಲ್ಲಿ ಏನು ಹೇಳಿದರೂ ಏನು ಬಂತು!?

ಆ ಎಲೆಕ್ಟ್ರಿಕ್ ಶವಾಗಾರಕ್ಕೆ ನಾನು ಹೋಗಿದ್ದು ಮೊದಲ ಸಲ. ಕಿ.ರಂ ಶರೀರದ ಮುಂದೆ ಬ್ರಾಹ್ಮಣ ಜೋರು ದನಿಯಲ್ಲಿ ಮಂತ್ರಗಳನ್ನೋದಿದ. ತನ್ನ ಲೆಕ್ಕ ಚುಕ್ತಾ ಮಾಡಿಕೊಂಡು ಮತ್ತೊಂದು ಶವಸಂಸ್ಕಾರಕ್ಕೆ ಅವ ಹೊರಟು ಹೋದ. ಕಿ.ರಂ ದೇಹ, ಶವಾಗಾರದ ಬಾಯಲ್ಲಿತ್ತು. ‘ಇದೇ ಕಡೆಯ ದರ್ಶನ. ಈಗಲೇ ನೋಡೋರು ನೋಡಿಕೊಳ್ಳಿ’ ಎಂದು ಶವಾಗಾರದ ಆಧುನಿಕ ಹರಿಶ್ಚಂದ್ರನೊಬ್ಬ ಕೂಗಿ, ತನ್ನ ಕೆಲಸ ತಾನು ಮಾಡಿ, ಆ ನೆಕ್ಷ್ಟ್..ಎಂದ. ಬೆಂಕಿಯ ಕೆನ್ನಾಲಗೆ ಚಾಚಿಕೊಂಡು ಒಳಕ್ಕೆ ದೇಹ ಎಳೆದುಕೊಂಡಂತೆನಿಸಿತು. ಮೂರೇ ಮೂರು ನಿಮಿಷ ಕಿ.ರಂ ಎನ್ನುವ ದೇಹ ಬೂದಿಯಾಯ್ತು. ಅದೆಷ್ಟೋ ಉಳಿದ ಮಾತು, ಚಿಂತನೆ, ವಿಮರ್ಶೆ ಹೊಗೆಯಾಗಿ ಗಾಳಿಯಲ್ಲಿ ಚದುರಿಕೊಂಡಿತು.

ಮೇಲಿನ ಕವ್ವಾಲಿ ಸಾಲು ನೆನಪಾಯಿತು. (ಅರ್ಥ: ಆಳಾಗಲಿ, ಅರಸನಾಗಲಿ ಅಳಿದು ಹೋಗಲೇಬೇಕು, ಮರಳಿ ಮಣ್ಣ ಸೇರಲೇಬೇಕು.) ಹೀಗೆ ಒಂದಿನ ಎಲ್ಲರದೂ ಸರದಿ…

More

invitationsಗಾಗಿಯೇ ಒಂದು ಬ್ಲಾಗ್ …

ದಿನ ಬೆಳಗಾದರೆ ಬಟ್ಟೆಗಳಿಗೆ ಇಸ್ತ್ರಿ ಹಾಕಿ ಕತ್ತಿಗೊಂದು ಟೈ ಸಿಕ್ಕಿಸಿ ಬೈಕೋ, ಕಾರೋ , ಬಸ್ಸೋ ಹತ್ತಿ ಆಫೀಸ್ ಗೆ ಓಡಾಡುವ ದಿನಗಳು.

ಅದೇ ಆಫೀಸ್ , ಅದೇ ರಸ್ತೆ , ಅದೇ ವಾಹನಗಳ ಶಬ್ದ , ಧೂಳು, ಹೊಗೆ, ಟ್ರಾಫಿಕ್. ಈ ಗಡಿ ಬಿಡಿಯ ದಿನಗಳಿಗೆ ವಿಶ್ರಾಂತಿ ಸಿಗುವುದು ವಾರಾಂತ್ಯದ ರಜದ ದಿನಗಳಲ್ಲಿ . ಆ ರಜದ ದಿನಗಳಲ್ಲಿ  ಮನಸ್ಸಿನ ಸಂತೋಷಕ್ಕಾಗಿ ತಿರುಗಾಡುವುದಕ್ಕೆ ಪಿಜ್ಜಾ ಹಟ್, ಐಸ್ ಕ್ರೀಂ ಪಾರ್ಲರ್ ಗಳು  , ಮಾಲ್ ಗಳು ಹೀಗೆ ಹಲವಾರು ಅವಕಾಶಗಳು .  ಅದರೊಂದಿಗೆ ಕೆಲವರಿಗೆ , ಸಾಹಿತ್ಯ , ಯಕ್ಷಗಾನ, ಸಂಗೀತ , ಭರತನಾಟ್ಯದಂತಹ ಕಲೆಗಳು.

ಇವೆಲ್ಲವುಗಳ  ಹುಚ್ಹು ಹತ್ತಿಸಿಕೊಂಡವರಿಗೆ ಎಲ್ಲಿ ,ಏನೇನು ಕಾರ್ಯಕ್ರಮಗಳು ನಡೆಯುತ್ತವೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದು .ಹಾಗಾಗಿ ‘ನಿಮ್ಮ ಏರಿಯಾಲ್ ಒಂದಿನ’ ಏನೇನಾಗುತ್ತೆ ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ಏರಿಯಾಗೂ ಬನ್ನಿ ಅಂತ ಕರೆಯೋ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೆಂಗಳೂರು ಬಿಟ್ಟು ಎಲ್ಲೆಲ್ಲೋ ನಡೆಯೋ ಎಲ್ಲಾ ಕಾರ್ಯಕ್ರಮವೂ ಇಲ್ಲಿರುತ್ತೆ. ಅದೇ invitations blog

ಟಾಕಿಂಗೋ ಟಾಕಿಂಗು…

ನಿನ್ನೆ ಸುವರ್ಣ ನ್ಯೂಸ್ನಲ್ಲಿ ರಂಗನಾಥ್ ಸರ್-ಹಮೀದ್ ಪಾಳ್ಯ ಜೋಡಿ ಜುಗಲಬಂದಿ ಅಕ್ಕ ಸಮ್ಮೇಳನದಲ್ಲಿ ನಡೆದ ದುಃಖ-ದುಮ್ಮಾನಗಳ ಬಗ್ಗೆ ಚರ್ಚೆ ಮಾಡಿದ್ರು. ದಟ್ಸ್ ಕನ್ನಡ ಪತ್ರಿಕೆಯ ಸಂಪಾದಕ ಶಾಮ ಸುಂದರ, ಹಿರಿಯ ಸಾಹಿತಿ ದೊಡ್ಡರಂಗೇ ಗೌಡ್ರು, ಅಕ್ಕ ಮುಖ್ಯಸ್ಥರು ಎಲ್ಲರ ಟಾಕಿಂಗೋ ಟಾಕಿಂಗು.

ಅಮೇರಿಕಾದಲ್ಲಿ ನಡೆಯುವ ಅಕ್ಕ ಸಾಮಾನ್ಯವಾಗಿ ಸ್ವಲ್ಪ ಬೇಸರವನ್ನೇ ಕೊಟ್ಟಿದೆ . ಒಬ್ಬೊಬ್ಬರ ವಯುಕ್ತಿಕ ಅಭಿಪ್ರಾಯ ಒಂದೊಂದು ರೀತಿ ಇರ ಬಹುದು. ಯಾವುದೇ ಕಾರ್ಯಕ್ರಮ ನಡೆಸುವಾಗ ಆರ್ಗನೈಸ್ ಮಾಡುವ ಕೆಲಸ ಇದ್ಯಲ್ಲ ಅದರಷ್ಟು ಕಷ್ಟಕರ ಮತ್ತೊಂದಿಲ್ಲ, ಒಳ್ಳೆಯದರ ಬಗ್ಗೆ ಹೊಗಳುವುದಕ್ಕಿಂತ ಬೇಸರಗಳ ಬಗ್ಗೆ ಆಡಿಕೊಳ್ಳುವುದು ಸಾಮಾನ್ಯ ಸಂಗತಿ

ಪೂರ್ಣ ಓದಿಗೆ ಮೀಡಿಯಾ ಮೈಂಡ್

ನಿಮಗಾಗಿ ಒಂದು ಹಾಡು …

ಇಂದು ಲತಾ ಮಂಗೇಶ್ಕರ್ ಅವರ ಜನ್ಮದಿನ . ಹಾಗಾಗಿ ಅವರ ಒಂದು ಹಾಡು ನಿಮಗಾಗಿ…

‘ ಗೀತಾಂಜಲಿ ‘…

%d bloggers like this: