ಬ್ರೇಕಿಂಗ್ ನ್ಯೂಸ್: ವೈಶಾಲಿ ಕಾಸರವಳ್ಳಿ ನಿಧನ

ವೈಶಾಲಿ ಕಾಸರವಳ್ಳಿ ;

ಹುಟ್ಟಿದ್ದು ಗುಲ್ಬರ್ಗ ದಲ್ಲಿ.

ತಂದೆ: ಡಾ. ವೆಂಕಟರಾವ್ ಚಿಟಗೋಪಿ

ತಾಯಿ : ನಿರ್ಮಲಾ ಚಿಟಗೋಪಿ

ದಿನಾಂಕ 12. 04.1952.

ಡಾ ವೆಂಕಟರಾವ್ ಚಿಟಗೋಪಿಯವರು ವೃತ್ತಿಯಲ್ಲಿ ಡಾಕ್ಟರರಾದರೂ ನಾಟಕ ಸಿನೆಮಾ ಕ್ಷೇತ್ರವೆಂದರೆ ಅವರಿಗೆ ಬಹಳ ಅಕರಾಸ್ಥೆ. ಹೈದರಾಬಾದ್ ಸಂಸ್ಥಾನದಲ್ಲಿನ ಅಧಿಕಾರಿಯೊಬ್ಬರ ಮಗನಾಗಿದ್ದ ಅವರು ಸಿನಿಮಾದ ಗೀಳು ಹಿಡಿಸಿ ಕೊಂಡು ಕೊಲ್ಲಾಪುರಕ್ಕೆ 1940ರ ಸುಮಾರಿಗೆ ಹೋಗಿ ವಿ.ಶಾಂತಾರಾಂ ರ ಒಂದು ಸಿನಿಮಾಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ನಂತರ ಗುಬ್ಬಿ ಕಂಪನಿಯ ಸಂಪರ್ಕ ಬಂದು ಆ ಕಂಪನಿಯ ರೆಸಿಡೆಂಟ್ ಡಾಕ್ಟರ್ ಆಗುತ್ತಾರೆ. ನಾಟಕಗಳಲ್ಲಿ ಪಾತ್ರವಹಿಸಲೂ ಆರಂಭಿಸುತ್ತಾರೆ. ಆಗ ಕುಂದಾಪುರದ ನಿರ್ಮಲಾ ರ ಪರಿಚಯವಾಗಿ ಅವರನ್ನು ಮದುವೆಯಾಗುತ್ತಾರೆ. ಅವರ ಏಕಮಾತ್ರ  ಪುತ್ರಿ ವೈಶಾಲಿ.

ನಿರ್ಮಲಾ ಅವರು ಉತ್ತಮ ಹಾಡುಗಾರ್ತಿಯಾಗಿದ್ದರು. ಆಗ ಗುಬ್ಬಿ ಕಂಪನಿಯಲ್ಲಿ ಪಾತ್ರ ಮಾಡುತ್ತಿದ್ದ ಬಿ,ವಿ.ಕಾರಂತರು ಇವರ ಮನೆಗೆ ಬರುತ್ತಿದ್ದರು. ಚಿಕ್ಕ ಬಾಲಕಿ ವೈಶಾಲಿಗೆ ಅವರೇ ಪ್ರಥಮ ಗುರು. ಅಕ್ಷರಾಭ್ಯಾಸ ಮಾಡಿಸಿದ್ದೂ ಅವರೇ. ಸಂಜೆ ಪಾಠ ಮಾಡುತ್ತಿದ್ದುದೂ ಅವರೇ. ವೈಶಾಲಿ ಚಿಕ್ಕವಳಿದ್ದಾಗ ಗುಬ್ಬಿ ಕಂಪನಿಯ ಚಿಕ್ಕ ಚಿಕ್ಕ ಪಾತ್ರಗಳನ್ನೂ ಮಾಡುತ್ತಿದ್ದರು. ಕುರುಕ್ಷೇತ್ರ ನಾಟಕದಲ್ಲಿ ಬಿ.ಜಯಶ್ರೀ ಹಾಗೂ ವೈಶಾಲಿ ವಟುಗಳ ಪಾತ್ರ ಮಾಡುತ್ತಿದ್ದರು.

ಮಗಳು 8 ವರ್ಷದವಳಾಗಿದ್ದಾಗ ತಾಯಿ ನಿರ್ಮಲಾ ರವರು ಮಗಳನ್ನು ಓದಿಸುವ ಉದ್ದೇಶದಿಂದ ಕಂಪನಿ ಜೊತೆಗೆ ತಿರುಗಾಟ ನಿಲ್ಲಿಸಿ ಎಲ್ಲಾದರೂ ಮನೆ ಮಾಡಿ ಎಂದು ಒತ್ತಾಯ ಮಾಡಿದಾಗ ಡಾ ಚಿಟಗೋಪಿಯವರು ಆರಿಸಿ ಕೊಂಡ ಊರು ತಮ್ಮ ಹುಟ್ಟೂರಾದ ಚಿಟಗೋಪಾದ ಹತ್ತಿರದ ಗುಲ್ಬರ್ಗಾ. ವೈಶಾಲಿಯವರ ಶಿಕ್ಷಣವೆಲ್ಲಾ ನಡೆದ್ದ್ದು ಗುಲ್ಬರ್ಗಾದಲ್ಲೇ. ಶರಣ ಬಸಪ್ಪಾ ಶಾಲೆ ಪ್ರಾಥಮಿಕ ಶಿಕ್ಷಣ, ನೂತನ ಮಹಿಳಾ ವಿದ್ಯಾಲಯದಲ್ಲಿ ಬಿ.ಎ ಮುಗಿಸಿದರು. ಶಾಲಾ ದಿನಗಳಲ್ಲೇ ನಾಟಕ, ಏಕ ಪಾತ್ರಾಭಿನಯ ದಲ್ಲಿ ಅಭಿನಯಿಸಿ ಅನೇಕ ಪಾರಿತೋಷಕ ಪಡೆದಿದ್ದರು. ವೈಶಾಲಿ ಅಭಿನಯಿಸಿದರೆ ಬೇರಾರಿಗೂ ಪಾರಿತೋಷಕ ಬಿಟ್ಟು ಕೊಡುವುದಿಲ್ಲ ಎನ್ನುವ ಮಾತು ಶಾಲಾ ದಿನಗಳಲ್ಲಿ ಚಾಲ್ತಿಯಲ್ಲಿತ್ತು.

1967ಕ್ಕೆ ಡಾ ಚಿಟಗೋಪಿಯವರು ಬೆಂಗಳೂರಿಗೆ ಬಂದು ನೆಲೆಸಿದರು. ವೈದ್ಯ ವೃತ್ತಿಯೊಂದಿಗೇ ಕನ್ನಡ ಸಿನಿಮಾದ ಸಂಪರ್ಕ ಬಂತು. ಕೆ.ಸಿ.ಎನ್ ಮೂವೀಸ್, ವೀರಾಸಾಮಿಯವರ ಈಶ್ವರಿ ಪಿಕ್ಚರ್ಸ್ ಸಂಸ್ತೆಯ ಕೆಲವು ಚಿತ್ರಗಳಲ್ಲಿ ದುಡಿದರು. ಡಾ. ಚಿಟಗೋಪಿಯವರಿಗಿದ್ದ ಇಂಗ್ಲೀಷ್,ಹಿಂದಿ ಹಾಗೂ ಮರಾಠಿ ಮೇಲಿನ ಪ್ರಭುತ್ವ ಅವರಿಗೊಂದು ವಿಶೇಷ ಸ್ಥಾನ ದೊರಕಿಸಿ ಕೊಡುವಲ್ಲಿ ಸಹಕಾರಿಯಾಗಿತ್ತು. ಕೆಲವು ಮರಾಠಿ ಸಿನಿಮಾಗಳ ಹಕ್ಕನ್ನು ಪಡೆಯುವಲ್ಲಿಯೂ ಅವರ ನೆರವು ವಿಶೇಷವಾಗಿತ್ತು.

More

ದೇಸಿ ಸೀರೆ …

‘ ವರ್ತಮಾನ ಮುಖಾಮುಖಿ ‘ …

ನಲ್ನುಡಿ ಕಥಾಸ್ಪರ್ಧೆ-2010..

ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷಾಂಕವನ್ನು ಹೊರತರುತ್ತಿದ್ದು, ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಿದೆ.

ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕಥೆಗಳನ್ನು ಕಳುಹಿಸಲು ಕಡೆಯ ದಿನಾಂಕ ಅಕ್ಟೋಬರ್ 20.ಪ್ರಥಮ ಬಹುಮಾನ 25,೦೦೦ ರೂ., ದ್ವಿತೀಯ ಬಹುಮಾನ15,೦೦೦ ರೂ., ತೃತೀಯ ಬಹುಮಾನ 1೦,೦೦೦ ರೂ. ಕನ್ನಡದ ಶ್ರೇಷ್ಠ ವಿಮರ್ಶಕರ ತಂಡವೊಂದು ಕಥಾಸ್ಪರ್ಧೆಯ ತೀರ್ಪು ನೀಡಲಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಮೆಚ್ಚುಗೆ ಪಡೆದ ಕಥೆಗಳನ್ನು ‘ನಲ್ನುಡಿ ಮಾಸಿಕದಲ್ಲಿ ಪ್ರಕಟಿಸಲಾಗುವುದು.

ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದ ಕಥೆಗಳನ್ನು ಸಂಪಾದಕರು, ನಲ್ನುಡಿ ಕಥಾಸ್ಪರ್ಧೆ-೨೦೧೦, ಕರವೇ ನಲ್ನುಡಿ ಮಾಸಪತ್ರಿಕೆ, ಕನಸು ಕ್ರಿಯೇಷನ್ಸ್, ನಂ.೬/೨, ಶಿವಾನಂದ ವೃತ್ತ, ಕುಮಾರಕೃಪ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಕಳುಹಿಸ ಬೇಕು

ಹೆಚ್ಹಿನ ಮಾಹಿತಿಗಾಗಿ 080-2234 1762 ಗೆ ಸಂಪರ್ಕಿಸಬಹುದು

ಬಂದಿದೆ ಹೊಸ ಮೀಡಿಯಾ ಮಿರ್ಚಿ …

‘ಢಂ’ ಎಲ್ಲಿಂದಲೋ ಒಂದು ಸದ್ದು ಕೇಳಿ ಬಂತು. ಅದರ ಬೆನ್ನು ಹತ್ತಿ ಒಂದು ಮಗು ಜೋರಾಗಿ ಅಳುವ ಸದ್ದು. ಅದನ್ನು ಹಿಂಬಾಲಿಸಿ ಆತಂಕಗೊಂಡ ತಾಯಿಯ ದನಿ.

ಪಕ್ಕದ ಬೀದಿಯಲ್ಲಿ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತಿದ್ದವರು ತಕ್ಷಣ ಮಾತು ನಿಲ್ಲಿಸಿದರು. ಆ ಶಬ್ದ ಬಂದದ್ದೆಲ್ಲಿಂದ ಅಂತ ತಮ್ಮ ಕಿವಿ ಒಂದಿಷ್ಟು ಉದ್ದ ಮಾಡಿದರು. ಅರೇ ಅದು ಆ ಪಾರ್ಕ್ ಇರುವ ಕಡೆಯಿಂದ ಅಲ್ಲವೇ ಎಂದು ಗೊತ್ತುಮಾಡಿಕೊಂಡರು. ಪಕ್ಕದ ಇನ್ನೊಂದು ರಸ್ತೆಯಲ್ಲಿ ಓಡಾಡುತ್ತಿದ್ದವರು ಒಂದು ಕ್ಷಣ ನಿಂತರು. ಶಬ್ದ ಅವರಿಗೂ ಕೇಳಿಸಿತ್ತು. ಅದು ಪಾರ್ಕಿನಿಂದ ಬಂದ ಶಬ್ದ ಎಂದು ಅವರಿಗೂ ಗೊತ್ತಾಯಿತು.

ಆ ಪಾರ್ಕಿನ ಎದುರೇ ಒಂದು ದೇವಸ್ಥಾನ ಇದೆ ಎನ್ನುವುದೂ ಗೊತ್ತಾಯಿತು. ಆತ ಇನ್ನೊಬ್ಬನಿಗೆ ಅದನ್ನು ಹೇಳಿದ. ಹೌದಲ್ಲ ದೇಗುಲ ಇದ್ದ ಕಡೆಯಿಂದ ಒಂದು ಶಬ್ದ, ಮಗು ಅಳುತ್ತಿದೆ, ಇನ್ನೊಬ್ಬರ ಆತಂಕ ಎಲ್ಲವೂ ಒಂದಕ್ಕೊಂದು ಸೇರಿತು. ಆ ಶಬ್ದಕ್ಕೆ ಇನ್ನಷ್ಟು ಕೈಕಾಲು ಬಂತು

ಪೂರ್ಣ ಓದಿಗೆ ಮೀಡಿಯಾ ಮೈಂಡ್

ಪ್ರೇಮಿಸುವ ಸುಂದರ ಸಂಗತಿ …

ರೇಡಿಯೋ ಸದ್ದು…

ನಾನು ಕೇಳಿದಂತೆ ರೇಡಿಯೋ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಜನ ಪ್ರಿಯ ಕಾರ್ಯಕ್ರಮ 91 .1 ಎಫೆಮ್ ನ ಲವ್ ಗುರು ಒಂದಾಗಿದೆ..ರಾತ್ರಿ ದಿನದ ಜಂಜಾಟಗಳು ಮುಗಿದಿರುತ್ತದೆ, ವಿನೋದ-ವಿಷಾದಗಳು ಜೊತೆಯಾಗಿರುವ ವೇಳೆ.

ದಣಿದ ಮನಗಳು ಗಮನ ಕೊಡುವಂತೆ ಮಾಡುವ ಕಾರ್ಯಕ್ರಮ. ಇಲ್ಲಿ ಲವ್ ಕ್ರೈಂ ವಿಷಯವೇ ಹೆಚ್ಚಾಗಿ ಕಾಣೋದು. ಅವನಿಗೆ ಅವಳು ಮೋಸ ಮಾಡಿದ್ದು, ಅವನಿಂದ ಅವಳು ಮೋಸ ಹೋಗಿದ್ದು, ಅದರ ನಡುವೆ ಸಣ್ಣ ಪುಟ್ಟ ಮುನಿಸಿನ ಕಥೆ, ವಿಸ್ಮಯ ರೀತಿಯಲ್ಲಿ ಪ್ರೇಮಿಸುವ ಸುಂದರ ಸಂಗತಿ :-) . ಎಲ್ಲವೂ ಸತ್ಯ.ಲವ್ಗುರು ಸಹ ತುಂಬಾ ಚೆನ್ನಾಗಿ ಈ ಕಾರ್ಯಕ್ರಮ ಮುನ್ನಡೆಸ್ತಾರೆ .

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಜಿ.ಕೆ. ಮಧ್ಯಸ್ಥ – ಇವು ಪತ್ರಿಕೋದ್ಯಮ ಲೋಕಲ್ಲಿ ತುಂಬಾ ಮೇಗೆ ಹೋಯಿದವು

ಜಿ.ಕೆ.ಮಧ್ಯಸ್ಥ ಅವರ ‘ಪದೋನ್ನತಿ’ ಪದ ಕೋಶ ಪುಸ್ತಕ ಬಿಡುಗಡೆ ಸಮಾರಂಭದ ಫೋಟೋಗಳಿಗಾಗಿ ಭೇಟಿ ಕೊಡಿ ಓದು ಬಜಾರ್ ಮತ್ತು  ಮೀಡಿಯಾ ಮೈಂಡ್

oppanna

ಶ್ರೀ ಜಿ.ಕೆ. ಮಧ್ಯಸ್ಥ – ಇವು ಪತ್ರಿಕೋದ್ಯಮ ಲೋಕಲ್ಲಿ ತುಂಬಾ ಮೇಗೆ ಹೋಯಿದವು.

ವಿಜಯಕರ್ನಾಟಕ ಪೇಪರಿಲಿ ಉನ್ನತ ಹುದ್ದೆಲಿ ಇದ್ದುಗೊಂಡು, ನಿತ್ಯವೂ ಜೆನರಿಂಗೆ ಅತ್ಯುತ್ತಮ ಗುಣಮಟ್ಟದ ಪತ್ರಿಕೆ ಕೊಡ್ಳೆ ಕಾರಣ ಆಯಿದವು.

ಅವು ಪೇಪರಿನ ಗುಣಮಟ್ಟ ನೋಡಿಗೊಂಬದರೊಟ್ಟಿಂಗೆ ಮತ್ತೊಂದು ಕಾರ್ರ್ಯವನುದೇ ಮಾಡಿಗೊಂಡು ಇದ್ದವು

– ಅದೆಂತರ?

“ಪದೋನ್ನತಿ” ಹೇಳ್ತ ಹೆಸರಿಲಿ ಒಂದು ಅಂಕಣ ಬರದು, ಅದರ ಮೂಲಕ ಓದುರಿಂಗೆ ಪ್ರತಿನಿತ್ಯ ಒಂದು ಶೆಬ್ದದ ಸಾರಾರ್ಥ ಹೇಳ್ತ ಕಾರ್ಯ ಮಾಡಿಗೊಂಡು ಇದ್ದವು.

ಅವರ ಅಕ್ಷರ ಸೇವೆಯ ಗುರುತಿಸಿ, ಮೊನ್ನೆ ಆಯಿತ್ಯವಾರ ಬೆಂಗುಳೂರಿಲಿ ಅವಕ್ಕೆ ಸಮ್ಮಾನ ಮಾಡಿದವು.

ಅದರೊಟ್ಟಿಂಗೆ, ಅಂಕಿತಪುಸ್ತಕ ಹೇಳ್ತ ಅಂಗುಡಿಯೋರು ಅವರ ಶಬ್ದಾರ್ಥಂಗಳ “ಪದೋನ್ನತಿ” ಸಂಗ್ರಹವ ಪುಸ್ತಕ ಮಾಡಿ ಹೆರತಯಿಂದು.

ನಮ್ಮ ಬೈಲಿನ ಪತ್ರಿಕೋದ್ಯಮ ಹಿರಿಯರಾದ ಶ್ರೀ ಮಧ್ಯಸ್ಥ ರ ನಮ್ಮ ಬೈಲಿಂಗೆ ಪರಿಚಯ ಮಾಡ್ತದು “ನಮ್ಮೂರು-ನಮ್ಮೋರು” ಅಂಕಣಕ್ಕೆ ಹೆಮ್ಮೆ.

ಸಮ್ಮಂದಲ್ಲಿ ಹೇಳ್ತರೆ, ನಮ್ಮೆಲ್ಲರ ಪ್ರೀತಿಯ ಸುವರ್ಣಿನಿ ಅಕ್ಕಂಗೆ ಇವು ಸೋದರಮಾವ!

ಸೋದರಮಾವನ ಪರಿಚಯ ನಮ್ಮೆಲ್ಲರಿಂಗೆ ಸುವರ್ಣಿನಿ ಅಕ್ಕ ಮಾಡಿ ಕೊಡ್ತವು.

ಓದಿ, ಮಧ್ಯಸ್ಥರ ಮುಂದಾಣ ದಾರಿಯೂ ಯಶಸ್ಸುಗಳಿಂದ ಕೂಡಿರಲಿ ಹೇಳ್ತ ಆಶಯ ನಮ್ಮೆಲ್ಲದಾಗಿರಲಿ.

More

ನಾನು ಇಂದು ನೋಡಿದ ದೆಹಲಿ ನಿಜಕ್ಕೂ ಚೇತೋಹಾರಿ

ದೆಹಲಿಯೆಂಬ ಬೆರಗು

-ಶಿವರಾಂ ಪೈಲೂರು

ರಾಜಧಾನಿಯಲ್ಲಿ ಒಂದೇ ಸಮನೆ ಸುರಿಯುತ್ತಿದ್ದ ಮಳೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಯಮುನೆ, ತಾಸುಗಟ್ಟಲೆ ಟ್ರಾಫಿಕ್ ಜಾಮ್. ಸುತ್ತೆಲ್ಲ ಡೆಂಘಿ, ಚಿಕೂನ್ ಗುನ್ಯಾ, ಜತೆಗೆ ಕಣ್ಣುಜ್ವರ. ಅತ್ತ ಕಾಮನ್ವೆಲ್ತ್ ಮುಖ್ಯ ಸ್ಟೇಡಿಯಂ ಎದುರು ನಿರ್ಮಾಣಗೊಳ್ಳುತ್ತಿದ್ದ ಕಾಲ್ಸೇತುವೆ ಮುರಿದು ಬಿತ್ತು. ಇತ್ತ ಜಾಮಿಯಾ ಮಸೀದಿ ಎದುರು ತೈವಾನಿಗರಿಗೆ ಗುಂಡೇಟು. ಆಕಾಶವೇ ದೆಹಲಿಯ ತಲೆಮೇಲೆ ಬಿತ್ತೋ ಎಂಬಂತಿರುವ ವರದಿಗಳು ಚಾನೆಲ್ಲುಗಳಲ್ಲಿ ಎಡೆಬಿಡದೆ ಪ್ರಸಾರಗೊಳ್ಳುತ್ತಿದ್ದವು. ಒಂದು ಚಾನೆಲ್ ಅಂತೂ ’ಗೇಮ್ಸ್ ರದ್ದುಮಾಡುವುದೊಂದೇ ನಮಗಿರುವ ದಾರಿ; ಇನ್ನೇನು ಗೇಮ್ಸ್ ರದ್ದಾಗಿಯೇ ಬಿಡುತ್ತದೆ’ ಎನ್ನುತ್ತಿತ್ತು. ಮಿಂಚಂಚೆಯಲ್ಲಿ ಜೋಕ್ಸ್ ಮಹಾಪೂರ. ವಿದೇಶಗಳಲ್ಲಿರುವ ನಮ್ಮ ಜನರಿಂದ ಫೇಸ್ ಬುಕ್ ನಲ್ಲಿ ’ಭಾರತದಲ್ಲೇನಾಗುತ್ತಿದೆ?!’ ಎಂಬ ಪ್ರಶ್ನೆಗಳು. ಅದಕ್ಕೆ ಇಲ್ಲಿನವರ ಉತ್ತರ ’ಶೇಮ್ ಶೇಮ್’. ನಮ್ಮದು ಇದೇ ಜಾಯಮಾನ!!’

ಈ ಮಧ್ಯೆ, ಕಾಮನ್ವೆಲ್ತ್ ವಿಲೇಜಿಗೆ ಬಂದ ಮೊದಲ ತಂಡ ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚಿ ಮಾತನಾಡಿದ್ದು ಪತ್ರಿಕೆಯ ಮೂಲೆಯೊಂದರಲ್ಲಿ ಸಣ್ಣದಾಗಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲೆ ಸೇನಾ ಇಂಜಿನಿಯರುಗಳು ಕಾಲ್ಸೇತುವೆಯನ್ನು ನಾಲ್ಕೇ ದಿನಗಳಲ್ಲಿ ಕಟ್ಟುತ್ತಾರಂತೆ ಎಂಬ ವರದಿಯೂ ಬಂತು. ಎಲಾ ಅಂದುಕೊಂಡೆ.

ಸುಮಾರು ದಿನಗಳ ಬಳಿಕ ಇಂದು ದೆಹಲಿಯಲ್ಲಿ ಬೆಚ್ಚಗಿನ ಬಿಸಿಲು. ನಾನು ಮಧ್ಯಾಹ್ನ ಊಟ ಮುಗಿಸಿದವನೇ ದೆಹಲಿಯೊಳಕ್ಕೆ ನಡೆದುಬಿಟ್ಟೆ. ಕತ್ತಲಾಗಿ ನಸು ಹಳದಿಯ ದೊಡ್ಡ ಚಂದಿರ ಕಾಣಿಸಿಕೊಳ್ಳುವಾಗ ಮಿಂಟೋ ರೋಡಿಗೆ ವಾಪಸಾಗಿ ಬರೆಯಲು ಕೂತಿದ್ದೇನೆ.

ನಾನು ಇಂದು ನೋಡಿದ ದೆಹಲಿ ನಿಜಕ್ಕೂ ಚೇತೋಹಾರಿ. ಎಲ್ಲ ಟೀಕೆಗಳಿಗೂ ಉತ್ತರಿಸುವ ತವಕದಲ್ಲಿ ದೆಹಲಿ ಮೈಗೊಡವಿ ಎದ್ದಿತ್ತು. ಕಾನಾಟ್ ಪ್ಲೇಸಿನ ಎಂಪೋರಿಯಾದ ಎದುರು ಉದ್ದಕ್ಕೂ ಕುಶಲಕರ್ಮಿಗಳು ಬಿದಿರಿನಿಂದ ನಾನಾಬಗೆಯ ರಚನೆಗಳನ್ನು ರೂಪಿಸುತ್ತಿದ್ದರು. ಒಂದೊಂದೂ ವೈಶಿಷ್ಟ್ಯಪೂರ್ಣ. ನಾನು ಅಂತಹ ರಚನೆಗಳನ್ನು ಈ ವರೆಗೆ ನೋಡಿಯೇ ಇಲ್ಲ. ನಾಲ್ಕಾರು ಎಂಪೋರಿಯಂಗಳ ಒಳಹೊಕ್ಕೆ. ಗೇಮ್ಸ್ ಬ್ಯಾಡ್ಜಿನ ಮಂದಿ ಆಗಲೇ ಖರೀದಿಯಲ್ಲಿ ತೊಡಗಿದ್ದರು. ರಾಜಸ್ತಾನದ ಮಳಿಗೆಯಲ್ಲಿ ವಸ್ತ್ರಗಳ ವರ್ಣವೈವಿಧ್ಯ ನೋಡುತ್ತ ಅವರು ಎಷ್ಟೊಂದು ಖುಷಿಪಡುತ್ತಿದ್ದರು!

More

%d bloggers like this: