ಸಮುದಾಯ,
ಕಾವ್ಯಮಂಡಲ,
ರಂಗ ನಿರಂತರ,
ಕಾವ್ಯಭೂಮಿ
ಸಂಯುಕ್ತ ಆಶ್ರಯದಲ್ಲಿ
ಯುವ ಸಾಹಿತ್ಯಾಸಕ್ತರಿಗಾಗಿ
ಕರ್ನಾಟಕದಾದ್ಯಂತ
ಕಿ.ರಂ.ಕಮ್ಮಟಸಾಲೆ
ಪ್ರೊ|| ಕಿ.ರಂ. ಎಂಬ ಸಾಕ್ಷಿಪ್ರಜ್ಞೆಯು ನಮ್ಮೆಲ್ಲರಲ್ಲಿ ಕ್ರಿಯಾಶೀಲವಾಗಿದೆ. ಕಿರಂ ನಮ್ಮ ನಡುವೆ ಇಲ್ಲ ಎಂಬ ಸಂತಾಪದ ಮಾತುಗಳಿಗಿಂತ ಅವರ ಚಿಂತನೆಯ ಪ್ರಖರತೆ ನಮ್ಮ ಸಂಸ್ಕೃತಿ ಸಾಹಿತ್ಯದ ಓದಿನ ನಡುವೆ ಇದೆ ಎಂಬುದು ನಮ್ಮ ತಿಳುವಳಿಕೆ. ಇದನ್ನು ಇನ್ನೂ ಸಾತತ್ಯಗೊಳಿಸುವ ದೃಷ್ಟಿಯಿಂದ ಕಿ.ರಂ ಕಮ್ಮಟಸಾಲೆಯನ್ನು ನಡೆಸುವ ಉದ್ದೇಶವನ್ನು ಕಿ.ರಂ. ಬಳಗದ ಳೆಯರೆಲ್ಲ ಆಲೋಚಿಸಿದ್ದೇವೆ. ಈ ಕಮ್ಮಟಸಾಲೆಯನ್ನು ನಾಡಿನಾದ್ಯಂತ ಆಯ್ದ ಹದಿನಾರು ಕಡೆ ನಿಯತವಾಗಿ ನಡೆಸುವ ಯೋಜನೆ ನಮ್ಮದು.
ಈ ಕಮ್ಮಟ ವಿದ್ಯಾರ್ಥಿ ಯುವಜನರಲ್ಲಿ ಮುಖ್ಯವಾಗಿ ಒಳಗೊಂಡು, ಸಮಕಾಲೀನ ಸಾಂಸ್ಕೃತಿಕ, ಸಾಹಿತ್ಯಿಕ ಹಾಗು ರಾಜಕೀಯ ಸನ್ನಿವೇಶಗಳನ್ನು ಕುರಿತಂತೆ ವಿವೇಚಿಸುವ, ಶೋಧಿಸುವ ಒಂದು ಅಭ್ಯಾಸ ಮಾಲಿಕೆಯಾಗಿರುತ್ತದೆ. ನಾಡಿನ ಖ್ಯಾತ ಸಂಸ್ಕೃತಿ ಚಿಂತಕರು, ಸಾಹಿತ್ಯ ವಿಮರ್ಶಕರು, ಕಲಾವಿದರು ಈ ಕಮ್ಮಟವನ್ನು ನಡೆಸಿಕೊಡಲಿದ್ದಾರೆ.
ರಾಜ್ಯದ ವಿಶಿಷ್ಟ ಸಾಂಸ್ಕೃತಿಕ – ಐತಿಹಾಸಿಕ ಮಹತ್ವದ ಕೇಂದ್ರಗಳಲ್ಲಿ ಈ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಕೈವಾರ, ಶಿಶುನಾಳ, ಕಾಗಿನೆಲೆ, ಉಳವಿ, ಗದಗ, ಚಕ್ಕಾಲ್ದೂರು, ಕೂಡಲ ಸಂಗಮ, ತಿಪಟೂರು, ಹಾಸನ, ಗುಲ್ಬರ್ಗಾ, ಚಿತ್ರದುರ್ಗ, ಮಂಡ್ಯ, ರಾಯಚೂರು, ಹಂಪಿ, ಕುಪ್ಪಳಿ, ಈ ಸ್ಥಳಗಳಲ್ಲಿ ಈ ಕಮ್ಮಟಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಈ ಕಮ್ಮಟದ ಉದ್ಘಾಟನೆ ಹಾಗು ಕಿ.ರಂ. ನೆನಪು ಕಾರ್ಯಕ್ರಮವು ಅಕ್ಟೋಬರ್ ೧ ರಂದು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದ ಹಿಂಬದಿ ಇರುವ ಸಂಸ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ನಡೆಸಲಾಗುವುದು.
ಈ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಪ್ರಸನ್ನ, ಕವಿ ಎಚ್.ಎಸ್.ಶಿವಪ್ರಕಾಶ್, ಚಿಂತಕರಾದ ಡಾ|| ಕೆ.ವಿ.ನಾರಾಯಣ ಅವರು ಭಾಗವಹಿಸುತ್ತಿದ್ದಾರೆ.
ಈ ಸಾಲಿನ ಮೊದಲ ಕಮ್ಮಟ ಅಕ್ಟೋಬರ್ 2 ಮತ್ತು 3 ರಂದು ಬೆಂಗಳೂರು ನೃಪತುಂಗ ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅಕ್ಟೋಬರ್ ಎರಡು ಮತ್ತು ಮೂರರಂದು ನಡೆಯುತ್ತದೆ. ಡಾ||ಕೆ.ವಿ.ನಾರಾಯಣ ಅವರು ಕಮ್ಮಟದ ನಿರ್ದೇಶಕರಾಗಿರುವರು.
ಈ ಕಮ್ಮಟದಲ್ಲಿ ಭಾಗವಹಿಸಲು ಉತ್ಸುಕ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಈ ಕೆಳಕಂಡವರುಗಳನ್ನು ಸಂಪರ್ಕಿಸಬಹುದು.
ಪ್ರೊ.ಎಸ್.ಜಿ.ಸಿದ್ಧರಾಮಯ್ಯ- 94489 49737
ಅಧ್ಯಕ್ಷರು, ಸಮುದಾಯ
ರವೀಂದ್ರನಾಥ ಸಿರಿವರ – 98441 09706
ಕಾರ್ಯದರ್ಶಿ ಸಮುದಾಯ
ಸೆಪ್ಟೆಂ 28, 2010 @ 17:40:23
kiram sir avrige needuva gourava idu. avara ella vidyarthigalige tappade tilisi.
ಸೆಪ್ಟೆಂ 28, 2010 @ 17:04:13
ಮೇಸ್ಟ್ರ ಹೆಸರಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ನಿಜಕ್ಕೂ ಸಂದರ್ಭೋಚಿತವಾದುದು. ನಿಮಗೆ ಅಭಿನಂದನೆಗಳು.
ಈ ಪೈಕಿ ನೀವು ಮಂಗಳೂರಿನಲ್ಲಿಯೂ ಕಾರ್ಯಕ್ರಮ ಮಾಡುವುದು ಸಾಧ್ಯವೇ?
ಸಾಧ್ಯವಿದ್ದರೆ ಇಲ್ಲಿ, ಏನು ವ್ಯವಸ್ಥೆ ಮಾಡಬೇಕು.
ತಗುಲಬಹುದಾದ ಖರ್ಚುವೆಚ್ಚದ ಕುರಿತು ತಿಳಿಸಿ.
ಸೆಪ್ಟೆಂ 27, 2010 @ 17:09:29
ಕಿ ರಂ ಅವರ ಕುರಿತಾದ ವಿಚಾರ ಸಂಕೀರ್ಣ ನಿಜಕ್ಕೂ ಸ್ತುತ್ಯಾರ್ಹ. ಅದರಲ್ಲೂ ಹದಿನಾರು ಆಯ್ದ ಊರುಗಳಲ್ಲಿ ಆಯೋಜಿಸಿರುವುದು ವಿಶೇಷ. ಸಂತೋಷ.
ಸೆಪ್ಟೆಂ 27, 2010 @ 11:45:11
sir
mangalore na asupasenali kammata karayakrama madabuvda sir thilisi
Mb -9448834502