-ಜಯದೇವ ಪ್ರಸಾದ ಮೊಳೆಯಾರ
Success is simply a matter of luck. Ask any failure. . . . . Earl Wilson
ಸಫಲತೆಯು ಕೇವಲ ಅದೃಷ್ಟದ ವಿಷಯ; ಯಾವುದೇ ವಿಫಲಾತ್ಮನನ್ನು ಕೇಳಿರಿ. . . . . ಅರ್ಲ್ ವಿಲ್ಸನ್
ಕಾಕು-೨೮ ರಲ್ಲಿ ವಿಮಾ ಪಾಲಿಸಿಗಳ ಬಗ್ಗೆ ಪರಿಚಯಾತ್ಮಕವಾಗಿ ಬರೆದು ಅವುಗಳ ಮೇಲಿನ ರಿಟರ್ನ್ ಬಗ್ಗೆ ಕಾಕುನೋಟವನ್ನು ಮುಂದಿನ ವಾರ ಕೊಡುತ್ತೇನೆ ಎಂದಿದ್ದೆ. ಈಗ ಅದನ್ನು ನೋಡೋಣ:
ವಿಮೆಯಲ್ಲಿ ಅತಿಮುಖ್ಯವಾಗಿ ಮೂರು ವಿಧ:
೧. ಹೂಡಿಕೆಯಿಲ್ಲದ, ಯಾವುದೇ ರಿಟರ್ನ್ ಕೂಡಾ ಇಲ್ಲದ ಶುದ್ಧ ವಿಮೆ ಮಾತ್ರ ಆಗಿರುವ ಟರ್ಮ್ ಇನ್ಶೂರನ್ಸ್
೨. ಸಾಲಪತ್ರಗಳಲ್ಲಿ ಹಣ ಹೂಡುವ, ಬೋನಸ್ ರೂಪದಲ್ಲಿ ರಿಟರ್ನ್ ಸಿಗುವ With profits ಯೋಜನೆಗಳಾದ ಎಂಡೋಮೆಂಟ್, ಮನಿಬ್ಯಾಕ್ ಇತ್ಯಾದಿ.
೩. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ, ಮಾರುಕಟ್ಟೆಯಾಧಾರಿತ ರಿಟರ್ನ್ ನೀಡುವ Market linked Policies (ULIP,ULPP)
ಇದೋ ಈವಾರ, ವಿಮಾ ನಿಗಮದ ಶಾಸ್ತ್ರೀಯ ಸ್ಕೀಂ ಎಂದು ಪರಿಗಣಿಸಲಾಗುವ ಎರಡನೆಯ ನಮೂನೆಯ ವಿದ್ ಪ್ರಾಫಿಟ್ ಎಂಡೋಮೆಂಟ್ ಪಾಲಿಸಿಯ ಬಗ್ಗೆ ವಿಶ್ಲೇಷಣೆ:
ಮೊದಲೇ ತಿಳಿಸಿದಂತೆ ಎಂಡೋಮೆಂಟ್ ಪಾಲಿಸಿ ಎಂಬುದು ಪ್ಯೂರ್ ಟರ್ಮ್ ಪ್ಲಾನಿನ ವಿಮೆ ಮತ್ತು ಸಾಲ/ಡೆಟ್‌ಗಳಲ್ಲಿನ ಹೂಡಿಕೆಯ ಹೈಬ್ರಿಡ್. (ಎಲ್ಲೈಸಿಯು ಈ ಪಾಲಿಸಿಯ ನಿಧಿಯನ್ನು ಮುಖ್ಯವಾಗಿ ಸರಕಾರಿ ಸಾಲಪತ್ರಗಳಲ್ಲಿ ಹೂಡುತ್ತದೆ) ಹಾಗಾಗಿ ಎಲ್ಲೈಸಿಯ ಎಂಡೋಮೆಂಟ್ ಪಾಲಿಸಿಯನ್ನು ಇಲ್ಲಿ ಎಲ್ಲೈಸಿಯದ್ದೇ ಆದ ಅನ್ಮೋಲ್ ಜೀವನ್ ಎಂಬ ಟರ್ಮ್ ಪ್ಲಾನ್ ಹಾಗೂ ಸರಕಾರ ಸಾಲಪತ್ರಗಳಲ್ಲಿ ಹೂಡುವ PPಈ ಜೊತೆ ಹೋಲಿಸಲಾಗಿದೆ. ಅರ್ಥಾತ್, ಎಂಡೋಮೆಂಟ್ v/s ಟರ್ಮ್ ಪ್ಲಾನ್ + PPಈ
With profits ಸ್ಕೀಂಗಳಲ್ಲಿ ಪ್ರತಿವರ್ಷ ವಿಮಾಸಂಸ್ಥೆ ಸಾಲಪತ್ರಗಳಲ್ಲಿ ಮಾಡಿದ ತನ್ನ ಹೂಡಿಕೆಯ ಆಧಾರದಲ್ಲಿ ಬಂದ ಲಾಭವನ್ನು ವಿಮಾ ಮೊತ್ತದ (Sum assured) ಮೇಲೆ ಹಂಚುತ್ತದೆ. ಸಾವಿರಕ್ಕೆ ಇಂತಿಷ್ಟು ಅಂತ ಬೋನಸ್ ಹೆಸರಿನಲ್ಲಿ ಇದು ನಿಮ್ಮ ಪಾಲಿಸಿಯಲ್ಲಿ ಜಮೆಯಾಗುತ್ತದೆ. ಇದು ಸಾಕಷ್ಟು ಸೇಫ್ ಮತ್ತು ಊಹ್ಯವಾಗಿರುತ್ತದೆ. ನಾವು ಕಟ್ಟಿದ ಪ್ರೀಮಿಯಂಗೆ ಈ ಬೋನಸ್ಸೇ ಪ್ರತಿಫಲವಾದರೂ ಈ ಬೋನಸ್ ಎಂಬುದು ವಿಮಾ ಮೊತ್ತದ ಮೇಲೆಯೇ ಹೊರತು ಕಟ್ಟಿದ ಪ್ರೀಮಿಯಂನ ಮೇಲೆ ಅಲ್ಲ.
ಒಂದು ಟರ್ಮ್ ಪಾಲಿಸಿಯಲ್ಲಿ ಕೇವಲ ವಿಮೆಗಾಗಿ ಪ್ರೀಮಿಯಂ ಕಟ್ಟಲಾಗುತ್ತದೆ. ಅದು ಯಾವ ಕಾರಣಕ್ಕೂ ಹಿಂದಕ್ಕೆ ಬರುವುದಿಲ್ಲ. ಹೂಡಿಕೆಗಳಲ್ಲಿ ಜನಪ್ರಿಯವಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ( PPಈ) ನಾವು ವಾರ್ಷಿಕವಾಗಿ ಕಟ್ಟುವ ಕಂತಿಗೆ ಸರಕಾರಿ ನಿಗದಿತ ಬಡ್ಡಿದರವನ್ನು ವರ್ಷಾಂತ್ಯದಲ್ಲಿ (ಸಧ್ಯಕ್ಕೆ ೮%) ನೀಡುತ್ತದೆ. ಅದು ಆಗ ಅಸಲಿಗೆ ಸೇರಲ್ಪಟ್ಟು ಮುಂದಕ್ಕೆ ಅದರ ಮೆಲೆ ಚಕ್ರಬಡ್ಡಿ ಸಿಗುತ್ತದೆ.
ಕೆಳಗಿನ ಟೇಬಲ್ ನೋಡಿ ಯಾರೂ ಬೆಚ್ಚಿ ಬೀಳುವ ಅವಶ್ಯಕತೆ ಇಲ್ಲ. ಒಂದು ದೊಡ್ಡ ಆಕಳಿಕೆ ತೆಗೆದು ಪೇಪರನ್ನು ಎತ್ತಿ ಟೀಪೋಯ್ ಮೇಲೆ ಕುಕ್ಕಿ ಇನ್ನೊಂದು ಕಪ್ ಟೀ ಸಿಗುತ್ತದೆಯೋ ಎಂಬ ಆಸೆಯಲ್ಲಿ ಕಿಚನ್ ಕಡೆ ನೋಡಬೇಕಾಗಿಲ್ಲ. ಕಾಸು-ಕುಡಿಕೆಯ ಮಾತು ಮತ್ತು ಮ್ಯಾಟ್ಟರ್ ಎರಡನ್ನೂ ಅತ್ಯಂತ ಸಿಂಪಲ್ ಆಗಿ ಇಡುವುದು ನನ್ನ ಲಾಗಾಯ್ತಿನಿಂದ ಬಂದಂತಹ ಪರಿಪಾಠವಾಗಿದೆ.
ಇತ್ತೀಚಿನ ಟಿಪ್ಪಣಿಗಳು