ಸಮಯ ವಾಹಿನಿಯಲ್ಲಿ ವಾರ್ತೆಗಳನ್ನು ವೀಕ್ಷಿಸುವಾಗ ಕೆಲವು ಸಂಗತಿಗಳು ಸ್ಪಷ್ಟವಾಗಿ ಗೋಚರ ಆಗ್ತಾ ಇತ್ತು. ಮತ್ತೇನು ಇಲ್ಲ ಕಣ್ರೀ ವಾರ್ತಾವಾಚಕರ ವಿಶೇಷ ಶೈಲಿ. ಅದರಲ್ಲೂ ಹೆಣ್ಣುಮಕ್ಕಳ ಕಥೆ ಅಯ್ಯೋ ರಾಮ ರಾಮ :-). ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ . ಈಗ ಪುಟ್ಟರಾಜ್ ಗವಾಯಿಯಗಳ ಮರಣದಿಂದ ದುಃಖಸಾಗರದಲ್ಲಿ ಜನರು ಮುಳುಗಿದ್ದಾರೆ .ಇದು ಒಂದು ವಾಕ್ಯ .ಇದನ್ನು ಹೇಳುವ ರಭಸದಲ್ಲಿ ವಾರ್ತಾವಾಚಕಿ ದುಃಖಸಾಗರ ಪದಕ್ಕೆ ಪಾಸ್ ಕೊಟ್ಟು ಹೇಳಿದರು ,ಹೇಗೆಂದರೆ ದುಃಖ …. ಸಾಗರ. ನಮ್ಮಂತಹ ವೀಕ್ಷಕರು ಅರ್ಧಂಬರ್ಧ ವಾರ್ತೆಗಳನ್ನು ಕೇಳುವವರು ಇದ್ದಾರೆ ಕಣ್ರೀ ಬೇಕಾದಷ್ಟು :-). ಅವರ ಕಿವಿಗೆ ದುಃಖ ಅನ್ನುವ ಪದ ಬಿದ್ದರಲ್ಲ, ಬರೀ ಸಾಗರ ಅನ್ನುವ ಪದ ಮಾತ್ರ ಕೇಳಿರುತ್ತೇ :-). ಆಗ ನಾವೇನು ತಿಳಿದು ಕೊಳ್ತೀವಿ ಸಾಗರದಲ್ಲಿ ಜನ ಮುಳುಗಿದ್ದಾರೆ 🙂 .ಆಗ ಕಥೆ ಏನಾಗ ಬಹುದು ಕಣ್ರೀ? :-).
ಸಂಪೂರ್ಣ ಓದಿಗೆ- ಮೀಡಿಯಾ ಮೈಂಡ್
ಇತ್ತೀಚಿನ ಟಿಪ್ಪಣಿಗಳು