ಬ್ರೇಕಿಂಗ್ ನ್ಯೂಸ್: ರಂಗ ನಿರ್ದೇಶಕ ಆರ್ ನಾಗೇಶ್ ಇನ್ನಿಲ್ಲ

ಖ್ಯಾತ ರಂಗ ನಿರ್ದೇಶಕ ಆರ್‌.ನಾಗೇಶ್ ತಮ್ಮ ನಿರ್ದೇಶನದ ನಾಟಕ ‘ಕೃಷ್ಣೇಗೌಡನ ಆನೆ’ಯ ನೂರನೇ ಪ್ರದರ್ಶನ ಆಗುತ್ತಿರುವಾಗಲೇ ನಮ್ಮನ್ನೆಲ್ಲಾ ಅಗಲಿದರು.

ಅವರಿಗೆ ಕಳೆದ ಕೆಲವು ದಿನದಿಂದ ಆರೋಗ್ಯ ಸರಿ ಇರಲಿಲ್ಲ. ಆದರೆ ನಮ್ಮನ್ನು ಬಿಟ್ಟು ಹೋಗುವಾಗಲು ತಮ್ಮ ನಾಟಕವನ್ನು ಜನ ನೋಡುವ ಸಮಯವನ್ನೇ ಆರಿಸಿಕೊಳ್ಳುವುದು ಎಂದರೆ..

-b suresh

ಕತೆಯ ಬಾಜೂ ಕೂತು:ಒಂದಿಡೀ ಪರಂಪರೆಯ ದುಃಖ…

-ಮಾಧವಿ ಪಟಗಾರ

ಅಲ್ಲೊಬ್ಬಳು ಬಡವೆ. ಮನುಷ್ಯತ್ವವೇ ಇಲ್ಲದ ಗಂಡನೊಂದಿಗೆ ಬಾಳುವೆ ನಡೆಸಬೇಕಾಗಿರುವ, ಎಲ್ಲ ಕಷ್ಟಗಳನ್ನೂ ’ನನ್ನ ಕರ್ಮ’ ಎಂದು ಒಪ್ಪಿಕೊಂಡು ಮೌನದಲ್ಲೇ ದುಃಖ ನುಂಗಿಕೊಳ್ಳುವ ಹೆಣ್ಣು. ಅವಳಿಗೊಬ್ಬ ಹಿತೈಷಿ ಸ್ನೇಹಿತ. ಅವಳ ಕಷ್ಟಕ್ಕೆ ಮರುಗುವವನು. ಅವಳಿಗಾಗಿ ಕಾಳಜಿ ವಹಿಸುವವನು.

ಆದರೆ ಬದುಕಿನ ಚಿತ್ರಗಳು ಯಾವಾಗಲೂ ಸುಂದರವಲ್ಲ. ಅವು ಆತನ ಸ್ನೇಹ ಭಾವವನ್ನೇ ಕಂಗೆಡುವಂತೆ ಮಾಡುವಂಥವು. ಅವನ ಮಾನವೀಯ ಹೆಜ್ಜೆಗಳಿಗೆ ಅಲ್ಲಿ ನೆಲವೆಂಬುದಿಲ್ಲ.

ಶ್ರೀಕೃಷ್ಣ ಆಲನಹಳ್ಳಿಯವರ ’ ಸಂಬಂಧ’ ಕತೆ ವಿನಾಕಾರಣ ಒಳ್ಳೆಯ ಜೀವವೊಂದು ಅನುಭವಿಸುವ ಅನ್ಯಾಯ ಮತ್ತು ತಲ್ಲಣಗಳನ್ನು ಮನ ಕರಗುವ ಹಾಗೆ ಹೇಳುತ್ತದೆ.

“ಇನ್ಮೇಲೆ ಎಲ್ಲೂ ಹೊರಗೆ ಹೋಗ್ಬಾರ‍್ದಂತೆ. ನಂಗೆ ಮದುವೆ ಮಾಡ್ತಾರಂತೆ. ಅದಕ್ಕೆ ಯಾರ ಜೊತೆಯೂ ಮನೆಗೆ ಬಂದರೂ ಮಾತಾಡಬಾರ‍್ದಂತೆ” ಸಂಪ್ರದಾಯಸ್ತ ಹಿರಿಯರ ಕಟ್ಟಳೆಗಳನ್ನು ಅಷ್ಟೊಂದು ವಿಧೇಯಳಾಗಿಯೇ ಪಾಲಿಸಿದವಳಿಗೆ ಸಿಕ್ಕಿದ್ದು ಅದೆಂಥ ಬದುಕು?

ಮನುಷ್ಯತ್ವದ ಗಂಧಗಾಳಿಯೂ ಇಲ್ಲದಂಥ ಏನಾದರೂ ಅವನ ಬಗ್ಗೆ ಕಿಂಚಿತ್ತೂ ಕೋಪಗೊಳ್ಳದ ಪ್ರೀತಿ. ಆದರೆ ಅದೆಲ್ಲವೂ ಆ ಗಂಡನೆಂಬುವನ ಸಣ್ಣತನದ ಮುಂದೆ ಯಾವ ಅರ್ಥವನ್ನೂ ಪಡೆಯದೇ ಹೋಗುತ್ತದೆ.ಎಂಟೇ ವರ್ಷಗಳ ಹಿಂದೆ ಯೌವನ ತುಂಬಿ ಉಕ್ಕುತ್ತಿದ್ದವಲ ಕಣ್ಣುಗಳಲ್ಲೀಗ ಅವತ್ತಿನ ಬಟ್ಟಲು ಕಂಗಳ ಬೆಳಕಿಲ್ಲ. ನಿಸ್ತೇಜಗೊಂಡ ಮುಖ ಒಂದು ದೊಡ್ಡ ಸ್ಥಿತ್ಯಂತರವೇ ಈ ಎಂಟು ವರ್ಷಗಳ ಅವಧಿಯಲ್ಲಿ ಆಗಿಬಿಟ್ಟಿರುವುದರ ಬಗ್ಗೆ ಹೇಳುತ್ತಿದೆ.

ಬಿರುಗಾಳಿಯಂಥದ್ದರ ಬೀಸಿಗೆ ಸಿಕ್ಕಂತಾಗಿ ನಲುಗಿದ ಲಲಿತೆ ಮಾತ್ರ ಈಗಿರುವುದು. ಈ ಕಾಲಾವಧಿಯಲ್ಲಿ ಆಕೆ ಐದು ಮಕ್ಕಳನ್ನು ಹೆತ್ತುದಾಗಿದೆ. ಒಂದು ಮಗು ಸತ್ತಿದೆ. ಮೂರನೇ ಮಗಳು ಎಲ್ಲೋ ಆಡಿಕೊಂಡಿದ್ದಾಗ ನಾಯಿ ಕಚ್ಚಿದ್ದರಿಂದ ಡಾಕ್ಟರಿಗೆ ತೋರಿಸಲೆಂದು ಆಸ್ಪತ್ರೆಗೆ ಕರೆ ತಂದಿದ್ದಾಳೆ. ಆಗಲೇ ಕಥಾನಾಯಕನಿಗೆ ಎದುರಾಗಿ ’ನಾನು ಲಲಿತ, ನೆನಪಾಗಲಿಲ್ಲವ’ ಎಂದದ್ದು ಅವಳು.

ಮಾರನೇ ದಿನ ಚಾಮುಂಡಿಪುರದ ಕೊಳಕು ಗಲ್ಲಿಯಲ್ಲಿದ್ದ ಅವಳ ಮನೆಯನ್ನು ಹುಡುಕಿಕೊಂಡು ಹೋದವನಿಗೆ ಅಲ್ಲಿ ನಾಲ್ಕು ಕಡೆಯೂ ಕಾಲೂರಿ ನಿಂತಿದ್ದ ಬಡತನ ಕಣ್ಣಿಗೆ ರಾಚುತ್ತದೆ,ಎದೆ ಕಲಕಿದಂತಾಗುತ್ತದೆ. ಅವಳ ಗಂಡನೆಂಥ ಸೌಜನ್ಯಹೀನನೆಂಬುದು ತಿಳಿಯುತ್ತದೆ.

ಆದರೆ ಅವಳ ಮನಸ್ಸು ಮಾತ್ರ ಹೂಶುದ್ಧ ” ಬೇಜಾರು ಮಾಡಿಕೋ ಬೇಡಿ, ಅವರ ರೀತಿಯೇ ಹಾಗೆ” ಎಂದು ಗಂಡನ ಅಸಜ್ಜನಿಕೆಗೆ ಕ್ಷಮೆ ಯಾಚಿಸುತ್ತಾಳೆ.ನಾಯಿಯಿಂದ ಕಚ್ಚಿಸಿಕೊಂಡ ಅವಳ ಮಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಇಲ್ಲಿನ ಡಾಕ್ಟರು ಹೇಳಿರುತ್ತಾರೆ. ಆದರೆ ಗಂಡನ ಉಪೇಕ್ಷೆ, ಮೃಗ ಮನಸ್ಸು ಮಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಬಿಡಲೇ ಇಲ್ಲ. ’ಅಷ್ಟು ಹಣ ಎಲ್ಲಿಂದ ತರೋದು, ಸ್ವಲ್ಪ ದಿನ ಹೀಗೆ ಕಿರಚ್ತಾ ಕಿರಚ್ತಾ ಹಾಗೇ ನಿಂತೋಗ್ತದೆ ಎಂದಿದ್ದನಂತೆ ಆತ.

More

Narendrapur-2010

ಹೆಚ್ಹಿನ ವಿವರಗಳಿಗೆ ಮೀಡಿಯಾ ಮೈಂಡ್

ಕೊಳಲು ವಾದನ …

ವಿದ್ವಾನ್ .ಕೆ.ಎಸ್. ಗೋಪಾಲಕೃಷ್ಣನ್ ಅವರ ಕೊಳಲು ವಾದನ ಕಾರ್ಯಕ್ರಮ.

ದಿನಾಂಕ : ಸೆಪ್ಟೆಂಬರ್  21

ಸಮಯ : 5:30pm – 8:00pm

ಸ್ಥಳ : ಸತೀಶ್  ಧವನ್  ಆಡಿಟೋರಿಯಂ , ಇಂಡಿಯನ್  ಇನ್ಸ್ಟಿಟ್ಯೂಟ್  ಆಫ್  ಸೈನ್ಸ್ , ಬೆಂಗಳೂರು .

ಜಿ.ಕೆ.ಮಧ್ಯಸ್ಥ ಅವರ ‘ಪದೋನ್ನತಿ’ …

ಜಾತಿ,ಮೀಸಲಾತಿ ಒಂದು ಸಂವಾದ…

ಅನನ್ಯ ನೃತ್ಯ ಸಿಂಚನ …

%d bloggers like this: