ಅಕ್ಕ ಸಮ್ಮೇಳನ: ಚರ್ಚೆಗೆ ಸ್ವಾಗತ …

ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿರುವ ಬಗ್ಗೆ  ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ  ಅಮರನಾಥ ಗೌಡ  ಸ್ಪಷ್ಟನೆ ನೀಡಿದ್ದಾರೆ ಅದು ಇಲ್ಲಿದೆ . ಈ ಬಗ್ಗೆ ನಮ್ಮ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಸ್ವಾಗತ

ಸ್ವಯಂ ಪ್ರೇರಿತ ಕಾರ್ಯಕರ್ತರೇ ಅಕ್ಕ ಸಮ್ಮೇಳನದ ಜೀವಾಳ

ಸ್ವಯಂ ಸೇವಕರ ಸಮರ್ಥನೆ ಮತ್ತು ಹುರುಳಿಲ್ಲದ ಆರೋಪಗಳ ಖಡಾಖಂಡಿತ ತಿರಸ್ಕಾರ

ಆರನೆಯ ವಿಶ್ವ ಕನ್ನಡ ಸಮ್ಮೇಳನ ಈ ವರ್ಷ  ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ಅದ್ದೂರಿಯಿಂದ ನಡೆದ ಬಗ್ಗೆ ಎಲ್ಲರಿಗೂ ಗೊತ್ತಿರುವುದು ಸರಿಯಸ್ಟೆ. ಈ ಸಂಬಂಧ ಸಮ್ಮೇಳನದ ಮುಖ್ಯಾಂಶಗಳನ್ನು ತಿಳಿಸುತ್ತಾ ಹಾಗೂ ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿಗಳು ಮಾಡಿದ ಹುರುಳಿಲ್ಲದ ಆರೋಪಗಳನ್ನು ತಿರಸ್ಕರಿಸುವುದು ಈ ಪತ್ರಿಕಾ ಪ್ರಕಟಣೆಯ ಉದ್ದೇಶ.

ಕರ್ನಾಟಕದಿಂದ ಹೊರಗೆ ಕನ್ನಡಿಗರು ಆಯೋಜಿಸಿ ನಡೆಸುವ ಸಮಾರಂಭಗಳಲ್ಲಿ ಅಕ್ಕ ಸಮ್ಮೇಳನವು ಮುಂಚೋಣಿಯಲ್ಲಿ ನಿಲ್ಲುತ್ತದೆ. ಒಂದೇ ಚಾವಡಿಯ ಅಡಿಯಲ್ಲಿ ಶುಕ್ರವಾರದಿಂದ ಭಾನುವಾರದ ವರೆಗೆ ಸುಮಾರು ೨೫ ಸಾವಿರಕ್ಕಿಂತಲೂ ಹೆಚ್ಚು ಊಟಗಳನ್ನು ಸರಬರಾಜು ಮಾಡಿ ಇತಿಹಾಸವನ್ನು ನಿರ್ಮಿಸಿದ ಗೌರವಕ್ಕೆ ಅಕ್ಕ ಪಾತ್ರವಾಗುತ್ತದೆ.

ಮುಖ್ಯವಾಗಿ ಸಮಾರಂಭದ ಕಾರ್ಯಕ್ರಮಗಳು ಶುಕ್ರವಾರದಿಂದ ಆರಂಭವಾಗುವುದಿದ್ದರೂ ಸಹ ಹವಾಮಾನ ವೈಪರೀತ್ಯದಿಂದಾಗಿ ನ್ಯೂ ಜೆರ್ಸಿ ಪ್ರಾಂತ್ಯಕ್ಕೆ ಹರಿಕೇನ್ ಎಲ್ಲಿ ಬಂದು ಅಪ್ಪಳಿಸಿ ಸಮಾರಂಭದ ಕಳೆ ಕುಂದುವುದೋ ಎಂದು ಸಮ್ಮೇಳನದ ಆಯೋಜಕರು ಹಾಗೂ ನೂರಾರು ಕಾರ್ಯಕರ್ತರು ಹಗಲೂ ರಾತ್ರಿ ವಿಶ್ರಾಂತಿ ಇಲ್ಲದೇ ಕಾರ್ಯಕ್ರಮ ನಡೆಯುವ ಪ್ರದೇಶವನ್ನು ಸಜ್ಜುಗೊಳಿಸುವತ್ತ ಗಮನವಿಟ್ಟಿದ್ದು ವಿಶೇಷ ?.

ಎಂದಿನಂತೆ ಈ ಸಮ್ಮೇಳನವೂ ಸಹ ಸ್ವಯಂ ಸೇವಕರಿಂದಲೇ ನಡೆದಿದ್ದು, ಈ ಸಮ್ಮೇಳನದ ಯಶಸ್ಸಿನ ರೂವಾರಿಯಾಗಿ ಹಲವು ತಿಂಗಳಿನಿಂದ ಕಸ್ಪ ಪಟ್ಟು ದುಡಿದ ಕಾರ್ಯಕರ್ತರೇ ಆ ಕೀರ್ತಿಗೆ ಭಾಜನರಾಗುತ್ತಾರೆ ಎನ್ನುವುದು ಬಹಳ ಮುಖ್ಯವಾದ ವಿಚಾರ. ಈ ನಿಟ್ಟಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸಮ್ಮೇಳನಗಳನ್ನು ನಡೆಸಿಕೊಂಡು ಬಂದ ಕೀರ್ತಿ ಹಾಗೂ ಗೌರವಗಳಿಗೆ ಅಕ್ಕ ಪಾತ್ರವಾಗಿದೆ, ಹಾಗೂ ತನ್ನ ಒಡಲಾಳದಲ್ಲಿ ಅನೇಕ ಅನುಭವಗಳನ್ನು ಸಂಗ್ರಹಿಸಿದೆ.

ಕರ್ನಾಟಕದಿಂದ ದೂರವಿದ್ದೂ ನಾಡಿನ ಪರ ಚಿಂತನೆ ವಿಚಾರಗಳನ್ನು ತಾವು ಎಂದೂ ಕಡಿಮೆ ಮಾಡಿಕೊಳ್ಳೋದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಶುಕ್ರವಾರದ ಬಿಸಿನೆಸ್ ಫೋರಮ್ಮಿನ ಕಾರ್ಯಕ್ರಮಗಳು ಪ್ರಾರಂಭವಾದವು.

ಸಾಕಷ್ಟು  ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ನಾಡಿನ ಹಿರಿಯ ಉದ್ಯಮಿಗಳು. ಸರ್ಕಾರದ ಪ್ರತಿನಿಧಿಗಳು, ಮಂತ್ರಿ-ಮಹೋದಯರನ್ನೊಳಗೊಂಡ ಕಾರ್ಯಕ್ರಮಗಳಲ್ಲಿ ಉದ್ಯಮಗಳನ್ನು ಬೆಳೆಸುವ ನಿಟ್ಟಿನ ಜೊತೆಯಲ್ಲೇ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಚರ್ಚಿಸುವ ಅನೇಕ ಯೋಜನೆಗಳನ್ನೊಳಗೊಂಡಿತ್ತು.

ಈ ಕಾರ್ಯಕ್ರಮಗಳನ್ನು ಉದ್ಭಾಟಿಸಿ ಮಾತನಾಡಿ “…ಎಲ್ಲಿದ್ದರೂ ನಮ್ಮ ಬೇರುಗಳನ್ನು ನಾವು ಮರೆಯಬಾರದು, ನಮ್ಮ ಜೀವನದ ಅವಶ್ಯಕತೆಗಳಿನುಸಾರವಾಗಿ ಇಲ್ಲಿ ಬಂದು ನೆಲೆಸಿದ್ದು, ಆ ಮೂಲಕ ನಮ್ಮತನವನ್ನು ಮರೆಯಬಾರದೆನ್ನುವ ನಿಟ್ಟಿನಲ್ಲಿ ಈ ರೀತಿಯ ಸಮ್ಮೇಳನವನ್ನು

ಆಯೋಜಿಸಲಾಗಿದೆ…ಕರ್ನಾಟಕಕ್ಕೆ ಇನ್ನೂ ಹೆಚ್ಚು ಇಂಡಸ್ಟ್ರಿಗಳು ಹಾಗೂ ಉದ್ಯಮಗಳು ಬರಬೇಕು, ನಾವು ಕರ್ನಾಟಕದ ಜನರು ಹಾಗೂ ಕರ್ನಾಟಕದ ಸರ್ಕಾರ ಎಂದೂ ಈ ಬಿಸಿನೆಸ್ಸಿನ ಆಲೋಚನೆಗಳನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತೇವೆ. ಈ ರೀತಿ ಜ್ಯೋತಿ ಬೆಳಗುವುದರ ಮೂಲಕ ಸಾಂಕೇತಿಕವಾಗಿ ಆರಂಭವಾದ ಕಾರ್ಯಕ್ರಮಗಳು ನಾವು ಎಲ್ಲರೂ ಸಂಘಟನೆಗೊಂಡು ಕತ್ತಲನ್ನು ತಳ್ಳಿ ಬೆಳಕನ್ನು ಆಹ್ವಾನಿಸಿದ ಹಾಗೆ ಹೊಸ ಆಲೋಚನೆಗಳು ಈ ಮೂಲಕ ಮೂಡಿಬರಲಿ…” ಎಂದು ಶಂಕರಮೂರ್ತಿಯವರು ಹಾರೈಸಿದಿದ್ದುದನ್ನು ನಾವು ಯಾರೂ ಮರೆಯಲಾರೆವು.

ಇದಕ್ಕೆ ವ್ಯತಿರಿಕ್ತವಾಗಿ ಶುಕ್ರವಾರದ ಬಿಸಿನೆಸ್ ಫೋರಮ್ಮಿನಲ್ಲಿ ಬಲವಂತದಿಂದ ಭಾಗವಹಿಸಿದಂತೆ ಕಂಡು ಬಂದ ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಕೇವಲ ಅಲ್ಲಿದ್ದ ಇಡ್ಲಿ, ವಡೆ, ಉಪ್ಪಿಟ್ಟನ್ನು ತಿನ್ನಲು ಬಂದವರಂತೆ ಕಂಡುಬಂದುದು ಅತಿಶಯವಲ್ಲ. ಮುಖ್ಯಮಂತ್ರಿಗಳು ಮತ್ತು ಕೈಗಾರಿಕೆ ಸಚಿವರು ಕೊನೆ ಘಳಿಗೆಯಲ್ಲಿ ಬರಲಿಲ್ಲವೆಂದು ಗೊತ್ತಾದ ತಕ್ಷಣ ಈ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದೂ ಅಲ್ಲದೇ ಬಿಸಿನೆಸ್ ಫೋರಮ್ಮಿನಲ್ಲಿ ಮಾತನಾಡಿ ಎಂದು ಕಾರ್ಯದರ್ಶಿ ಮತ್ತು ನಿರ್ದೇಶಕರಿಬ್ಬರನ್ನು ನಾವು ಎಷ್ಟು  ಮನವಿ ಮಾಡಿಕೊಂಡರೂ, ಮಾತನಾಡಲು ಅಂಶಗಳನ್ನು ಬರೆದುಕೊಡುತ್ತೇವೆಂದರೂ, ಕೊನೆಗೂ ಇವರು ಮಾತನಾಡಲು ಒಪ್ಪಿಕೊಳ್ಳಲಿಲ್ಲ.

More

ಇಂದು ಅವರು ಅಲ್ಲಿ ಇಲ್ಲವಾದರು…

ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು ಇನ್ನಿಲ್ಲ …

ವಿಶ್ವೇಶ್ವರ ಭಟ್ ಅವರ ‘ಬಾನಯಾನ’ …

ವಿಶ್ವೇಶ್ವರ ಭಟ್ ಅವರು ಅನುವಾದಿಸಿರುವ ಕ್ಯಾಪ್ಟನ್ ಗೋಪಿನಾಥ್  ಅವರ ‘ಬಾನಯಾನ’ ಪುಸ್ತಕವನ್ನು ನಾಳೆ ಬೆಳಗ್ಗೆ  ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ .ಅಂಕಿತ ಪುಸ್ತಕ ಪ್ರಕಾಶನ  ಈ ಪುಸ್ತಕವನ್ನು ಪ್ರಕಟಿಸಿದೆ .

ಮಣಿಕಾಂತ್ ಬರೆಯುತ್ತಾರೆ:ಚಿನ್ನದ ಬೊಂಬೆಯಲ್ಲ…

ಚಿನ್ನದ ಬೊಂಬೆಯಲ್ಲ...

ಚಿತ್ರ: ಸಮಯದ ಗೊಂಬೆ. ಗೀತೆ ರಚನೆ: ಚಿ. ಉದಯಶಂಕರ್.

ಸಂಗೀತ: ಎಂ. ರಂಗರಾವ್. ಗಾಯನ: ಡಾ. ರಾಜ್‌ಕುಮಾರ್.

ಹೇ… ಲಲಲಲ… ಹಾ…. ಲಲಲಲ….. ಹೇ….ಹಾ…ಲಲಲಲ

ಹೇ… ಚಿನ್ನದ ಬೊಂಬೆಯಲ್ಲ ದಂತದ ಗೊಂಬೆಯಲ್ಲ

ಬುದ್ಧಿ ಇರುವ ಬೊಂಬೆಯೂ

ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ

ಆಡುವ ಸಮಯದ ಗೊಂಬೇ… ಮಾನವ,

ಆಡುವ ಸಮಯದ ಗೊಂಬೇ… ||ಪ||

ಹೇ… ಸಿಡಿಯುವ ರೋಷದಲಿ ಬಡಿಯುವ ಸೇಡಿನಲಿ

ದಿನವೂ ಹೋರಾಟವೇ

ಹಾ…. ನಲಿಯುವ ಪ್ರೀತಿಯಲಿ ನಗಿಸುವ ಮಾತಿನಲಿ

ಮನುಜ ಜೊತೆಯಾಗಿ ಒಂದಾಗಿ ಬಾಳುವ

ಅವನು ಸಂತೋಷ ಎಲ್ಲೆಂದು ಹುಡುಕುವ

ಬಿಸಿಲಲಿ ಮಳೆಯಲಿ ಚಳಿಯಲಿ ಬೆದರದೆ

ವಿನೋದವೋ ವಿಷಾದವೋ ಹೊಂದಿಕೊಳ್ಳುವಾ ||೧||

ಹೇ… ಜನಿಸಿದ ಊರೊಂದು ಬೆಳೆಯುವ ಊರೊಂದು

ಬದುಕೂ ಉಯ್ಯಾಲೆಯೂ

ಹಾ… ನಡೆಯುವ ನಾಡೊಂದು ಬೆರೆಯುವ ಮಣ್ಣೊಂದು

ಮನುಜ ಇರುವಲ್ಲೇ ಹಾಯಾಗಿ ಬಾಳುವ

ಸುಖದಾ ಕನಸಲ್ಲೇ ದಿನವೆಲ್ಲಾ ತೇಲುವಾ

ನೆನಪಿನ ಸುಳಿಯಲಿ ಮರೆವಿನ ಮರೆಯಲಿ

ವಿನೋದವೋ ವಿಷಾದವೋ ಹೊಂದಿಕೊಳ್ಳುವಾ ||೨||

ಎಲ್ಲರಿಗೂ ಗೊತ್ತಿರುವಂತೆ, ಒಂದು ಸಿನಿಮಾದಲ್ಲಿ ನಾಲ್ಕು ಅಥವಾ ಐದು ಹಾಡುಗಳಿರುತ್ತವೆ. ಹೆಚ್ಚಿನ ಸಿನಿಮಾಗಳಲ್ಲಿ ಒಂದು ಅಥವಾ ಎರಡು ಹಾಡುಗಳು ಜನಪ್ರಿಯವಾಗುತ್ತವೆ. ಕೆಲವು ಸಿನಿಮಾಗಳಲ್ಲಿ ಸಿನಿಮಾ ಮುಗಿವ ವೇಳೆಗೆ ಹಾಡುಗಳೂ ಮರೆತುಹೋಗಿರುತ್ತವೆ.

ಆದರೆ, ರಾಜ್‌ಕುಮಾರ್ ಅಭಿನಯದ ಚಿತ್ರಗಳಲ್ಲಿ ಹಾಗಾಗುತ್ತಿರಲಿಲ್ಲ. ಅಣ್ಣಾವ್ರ ಸಿನಿಮಾಗಳಲ್ಲಿ ಒಟ್ಟು ಐದು ಹಾಡುಗಳಿವೆ ಎಂದಾದಲ್ಲಿ ಅಷ್ಟೂ ಸೂಪರ್ ಹಿಟ್ ಆಗಿರುತ್ತಿದ್ದವು. ಈ ಹಾಡುಗಳ ಹಿಂದಿರುತ್ತಿದ್ದವರು ಗೀತೆರಚನೆಕಾರ ಚಿ. ಉದಯಶಂಕರ್.

More

‘ಸೂರ್ಯ ಶಿಕಾರಿ’…

– “ಅದಮ್ಯ” ರ೦ಗ ತಂಡ ಅಭಿನಯಿಸುವ ನಾಟಕ ‘ಸೂರ್ಯ ಶಿಕಾರಿ

ನಾಟಕ: ‘ಸೂರ್ಯ ಶಿಕಾರಿ’

ಮೂಲ ಲೇಖಕರು[ಹಿ೦ದಿ]: ಉತ್ಪಲ್ ದತ್ತ್.

ಕನ್ನಡ ಅನುವಾದ: ಎ೦.ಪಿ.ಪ್ರಕಾಶ್

ನಿರ್ದೇಶನ: ಶ್ರೀ ಮಾಲತೇಶ ಬಡಿಗೇರ್

ದಿನಾಂಕ: ಸೆಪ್ಟೆಂಬರ್ 23

ಸಮಯ: 6:30pm – 8:00pm

ಸ್ಥಳ: ರವಿಂದ್ರ ಕಲಾ ಕ್ಷೇತ್ರ  ಬೆಂಗಳೂರು

Fashion Photography workshop

ಜಯಶ್ರೀ ಕಾಲಂ: ಮಂತ್ರ ಹೇಳಿದಂತೆ ಮಾತಾಡ ಬ್ಯಾಡ್ರಿ.

ರೇಡಿಯೋ ಸದ್ದು…

98.3 ಎಫೆಮ್ ನಲ್ಲಿ ಮಧ್ಯಾನದ ಸಮಯದಲ್ಲಿ ಆರ್ಜೆ ಬಾಲ್ಕನಿ ಬಾದ್ಷಾ ಅವಿನಾಶ್ ಭಾರದ್ವಾಜ್ ಮಾತು ಕೇಳ ಬೇಕು..ಆತ ಸಿಕ್ಕಾಪಟ್ಟೆ ಸ್ಪೀಡು.ಪಟಪಟ ಮಾತು:-) ಆಹಾ ಆಹಾ !! . ಹಾಗಂತ ಮಾತಿನಮಲ್ಲ ಜಗ್ಗೇಶ್ ಅಲ್ಲವೇ ಅಲ್ಲ :-) . ಒಂದು ಪದಕ್ಕೂ ಮತ್ತೊಂದು ಪದಕ್ಕೂ ಜಾಗನೇ ಕೊಡಲ್ಲ. ರೀ ಭಾರದ್ವಾಜ್ ಮಂತ್ರ ಹೇಳಿದಂತೆ ಮಾತಾಡ ಬ್ಯಾಡ್ರಿ. ಕೇಳುಗರನ್ನು ಆಕರ್ಷಿಸುವುದಕ್ಕೆ ಕಷ್ಟ ಆಗುತ್ತೆ. ನೀವು ಹೇಳಿ ಕೇಳಿ ಮಧ್ಯಾನ ಅದೂ ಚೆನ್ನಾಗಿ ನಿದ್ದೆ ಬರುವ ವೇಳೆಯಲ್ಲಿ ಕಾರ್ಯಕ್ರಮ ನಡೆಸೋದು.ಎಷ್ಟು ಖುಷಿ ಹಂಚಿದರೆ ಅಷ್ಟು ಒಳ್ಳೆಯದು .ಜನರು ಮಂತ್ರಮುಗ್ಧರಾಗಿ ಕೇಳ್ತಾರೆ.ನೀವು ಉತ್ತಮ ಆರ್ಜೆ, ಆದರೆ ಈ ಅಂಶ ಸ್ವಲ್ಪ ತಿದ್ದಿ ಕೊಂಡ್ರೆ ನಾವು ಖುಷಿಯಿಂದ ಕೇಳ್ತೀವಪ್ಪ :-)

ಪೂರ್ಣ ಓದಿಗೆ ಮೀಡಿಯಾ ಮೈಂಡ್

ಕರ್ನಾಟಕ ಸಂಘ: ಸಾಂಸ್ಕೃತಿಕ ಉತ್ಸವ …

ಮುಂಬಯಿಯ ಮಾತುಂಗದ ವಿಶ್ವೇಶ್ವರಯ್ಯ  ಸಭಾಂಗಣದಲ್ಲಿ ಕರ್ನಾಟಕ ಸಂಘ ಹಮ್ಮಿಕೊಂಡಿರುವ ಸಾಂಸ್ಕ್ರತಿಕ ಉತ್ಸವದ ಉದ್ಘಾಟನಾ ಸಮಾರಂಭದ ಒಂದು ನೋಟ…

ಚಿತ್ರ ಕೃಪೆ : ಮನೋಹರ್ ನಾಯಕ್

ಯಾವತ್ತಿನವನೂ ಇವತ್ತು …

Previous Older Entries

%d bloggers like this: