ಕಾಸು ಕುಡಿಕೆ:ಜರಾಸಂಧನ ಕ್ರೆಡಿಟ್ ಕಾರ್ಡ್…

ಕಾಸು ಕುಡಿಕೆ -27

-ಜಯದೇವ ಪ್ರಸಾದ ಮೊಳೆಯಾರ

The best way to get credit is to get into a position of not needing any!. . . Anon

ಸಾಲ ಪಡೆಯುವ ಅತ್ಯಂತ ಉತ್ತಮ ಮಾರ್ಗವೆಂದರೆ ಅದು ಅಗತ್ಯವಿಲ್ಲದ ಸ್ಥಿತಿಗೆ ಬರುವುದು!. . . ಅನಾಮಿಕ.

ಸಾಲದ ಬಗ್ಗೆ ಮಾತನಾಡುತ್ತ ಇರುವಾಗ ಕ್ರೆಡಿಟ್ ಕಾರ್ಡ್ ಬಗ್ಗೆ ಮಾತನಾಡದೆ ಮಾತು ಮುಗಿಸುವಂತೆಯೇ ಇಲ್ಲ. ಅದರ ಹೆಸರೇ ಸೂಚಿಸುವಂತೆ ಅದೊಂದು ಸಾಲದ ಕಾರ್ಡ್ – ಕಳೆದ ಶತಮಾನದ ಒಂದು ಅತ್ಯಂತ ಉಪಯುಕ್ತ ವಿತ್ತೀಯ ಅನ್ವೇಷಣೆ. ಇದರ ಉಪಯುಕ್ತತೆಯ ಬಗ್ಗೆ ಕಾಲಿಗೆ ಗಾಲಿಕಟ್ಟಿದಂತೆ ವಾರಗಟ್ಟಲೆ ತಿರುಗಾಡುವ ನನ್ನಂತವರು ಚೆನ್ನಾಗಿ ತಿಳಿದಿದ್ದಾರೆ. ಊರೂರು ಸುತ್ತಾಡುವಾಗ ಸಾವಿರಾರು ರೂಪಾಯಿಯ ನಗದು ದುಡ್ಡನ್ನು ತೆಗೆದುಕೊಂಡೂ ಹೋಗುವುದು ಬಲುಕಷ್ಟ. ಅದೆಲ್ಲದರ ಬದಲು ಒಂದೇ ಒಂದು ಕಾರ್ಡ್ – ಕ್ರೆಡಿಟ್ ಕಾರ್ಡ್ ಮೂಲಕ ಎಲ್ಲಾ ಪಾವತಿಗಳನ್ನೂ ಮಾಡಬಹುದಾಗಿದೆ.

ನೀವು ಒಂದು ಬ್ಯಾಂಕಿನ ಮೂಲಕ ನಿಮ್ಮ ಎಲ್ಲಾ ಆದಾಯದ, ಅರ್ಥಿಕ ಸ್ಥಿತಿಗತಿಗಳ ವಿವರಗಳನ್ನು ನೀಡಿ ಅದಕ್ಕಿರುವ ಪ್ರವೇಶ, ವಾರ್ಷಿಕ ಶುಲ್ಕ ನೀಡಿ ಒಂದು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತೀರಿ.

ಅಂತಹ ಕಾರ್ಡ್‌ಗಳನ್ನು ಸ್ವೀಕರಿಸುವಂತಹ ಅಂಗಡಿಗಳಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಡನ್ನು ಕೌಂಟರಿನಲ್ಲಿ ಕೊಡುತ್ತೀರಿ. ಕೌಂಟರಿನಲ್ಲಿ ಕುಳಿತ ವ್ಯಕ್ತಿ ನಿಮ್ಮ ಕಾರ್ಡನ್ನು ಒಂದು ಮೆಶೀನಿನಲ್ಲಿ ಉಜ್ಜಿ (swipe) ಬ್ಯಾಂಕಿಂಗ್ ವ್ಯವಸ್ಥೆಯ ಕಂಪ್ಯೂಟರಿಗೆ ಡಯಲ್ ಮಾಡುತ್ತಾನೆ.

ಆ ಕಂಪ್ಯೂಟರ್ ನೀವು ಕೊಡಬೇಕಾದ ದುಡ್ಡನ್ನು ಆ ಅಂಗಡಿಯವರ ಖಾತೆಗೆ ನೀಡಿ ಅಷ್ಟು ದುಡ್ಡನ್ನು ಬ್ಯಾಂಕು ನಿಮಗೆ ಕೊಟ್ಟ ಸಾಲ ಎಂದು ನಿಮ್ಮ ಖಾತೆಯಲ್ಲಿ ನಮೂದಿಸುತ್ತದೆ.

ಅಷ್ಟು ದುಡ್ಡನ್ನು ನೀವು ಅದರ ಮಾಸಿಕ ಬಿಲ್ ದಿನಾಂಕದಿಂದ ಸುಮಾರು ೨೦ ದಿನಗಳಲ್ಲಿ (due date) ಕೊಡಬೇಕಾಗುತ್ತದೆ. ಅಂದರೆ ಯಾವುದೇ ತಿಂಗಳಿನುದ್ದಕ್ಕೂ ಮಾಡಿದ ಖರ್ಚಿನ ಮರುಪಾವತಿಗೆ ಒಟ್ಟು ೨೦-೫೦ ದಿನಗಳವರೆಗೆ ಫ್ರೀ ಸಮಯ ಸಿಕ್ಕಂತಾಯಿತು. ಆ ಅವಧಿಯೊಳಗೆ ಪಾವಿತಿ ಮಾಡಿದಲ್ಲಿ ನಿಮ್ಮಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡಲಾಗುವುದಿಲ್ಲ.

ಬದಲಿಗೆ ಅಂಗಡಿಯವನಿಂದ ಈ ಸೇವೆಗಾಗಿ ಸ್ವಲ್ಪ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆ ಫ್ರೀ ಅವಧಿಯನ್ನು ಮೀರಿದರೆ ಮಾತ್ರ ಅದಕ್ಕೆ ಹೇರಳವಾದ ತಡಪಾವತಿಯ ಶುಲ್ಕ, ಬಡ್ಡಿದರ, ತೆರಿಗೆಗಳು ಇತ್ಯಾದಿ ಚಾರ್ಜುಗಳು ಬೀಳುತ್ತವೆ.

‘ದಂಡಿಯಾಗಿ honeyಸುವ ದುಂಡಿ’ಯ ಪ್ರಕಾರ ದುಡ್ಡು ಎಂದಿಗೂ ನಗದು. ಅದಕ್ಕಾಗಿಯೇ ಬ್ಯಾಂಕಿನ ದುಡ್ಡುಕಿಂಡಿಗಳಲ್ಲೆಲ್ಲಾ ‘CASH ನಗದು’ ಎಂಬ ಬೋರ್ಡ್ ಹಾಕಿದ್ದಾರಂತೆ. ಹಾಗೆಯೇ, ಅಕ್ಕಸಾಲಿಗನ ಬಳಿ ಇರುವ ದುಡ್ಡೂ ಕೂಡಾ ನಗದ ದುಡ್ಡು. ಅದು ಕೂಡಾ ನಗುವುದೇ ಇಲ್ಲ. ಆದರೆ ನಮ್ಮ ಕಿಸಿಯಲ್ಲಿರುವ ಕ್ರೆಡಿಟ್ ಕಾರ್ಡ್ ಮಾತ್ರ ನಗುವ ದುಡ್ಡು. ಜೇಬು, ಎಕೌಂಟು ಎಷ್ಟೇ ಖಾಲಿಯಿದ್ದರೂ ಸ್ವೈಪ್ ಮಾಡಿದಾಕ್ಷಣ ನಗು ನಗುತ್ತಾ ಬರುವ ದುಡ್ಡು;

ನಿಮಗೂ ಕೂಡಾ ನಗೆಯೋ ನಗೆ! ಇಲ್ಲದ ದುಡ್ಡು ಪ್ರತ್ಯಕ್ಷವಾಗುವಾಗ ಯಾರಿಗೆ ತಾನೇ ನಗು ಬಾರದು? – well, ಅದರ ಬಿಲ್ ಮಾತ್ರ ತನ್ನ ಬಾಣಗಳೊಂದಿಗೆ ಬರುವ ವರೆಗೆ !!! ಮತ್ತೆ, Credit card billನ ಆ ಬಾಣಗಳೋ. . . ಆಹಾ, ಏನೆಂದು ಬಣ್ಣಿಸಲಿ? ಒಂದೊಂದು ಬಾಣಗಳೂ ದಿವ್ಯಾಸ್ತ್ರಗಳು! ಪ್ರತಿತಿಂಗಳು ನಮ್ಮ ಮನೆಗೆ ಅಂಚೆಯಲ್ಲಿ ಬರುವ ಆ ಬಿಲ್ಲನ್ನು ಅಳುಕುತ್ತಲೇ ಎತ್ತಿ ಹೆದೆಯೇರಿಸಿದಾಗ ಒಂದೊಂದೇ ಅಸ್ತ್ರಗಳ ಮುಖಪರಿಚಯವಾಗುತ್ತದೆ. ಉದಾಹರಣೆಗೆ,

More

‘ಸಹಮತ್’ ಚಿತ್ರ ಪ್ರದರ್ಶನ …

ಕಾಶ್ಮೀರದಲ್ಲಿ ಸೈನಿಕರು, ಹೆಂಗಸರು ಮತ್ತು ಮಕ್ಕಳ ಮೇಲೆ ಎಸಗುತ್ತಿರುವ ಕ್ರೌರ್ಯವನ್ನು ಪ್ರತಿಭಟಿಸಲು ಕಾಶ್ಮೀರಿ ಮೂಲದ ಕಲಾವಿದರು ‘ಸಹಮತ್’ ಬ್ಯಾನರ್ ಅಡಿಯಲ್ಲಿ ಆಯೋಜಿಸಿದ್ದ ಸೆಮಿನಾರ್ ನಲ್ಲಿ ಪ್ರದರ್ಶನಗೊಂಡ ಸ್ಲೈಡ್ ಮತ್ತು ಪೇಂಟಿಂಗ್ ಗಳ ಒಂದು ನೋಟ.

ಸಂದರ್ಭ:ನೀಲಿಮಾ ಶೇಖ್ ಅವರ “Each Night Put Kashmir In Your Dreams” ಚಿತ್ರಕಲಾಪ್ರದರ್ಶನ, ಆಗಸ್ಟ್ 23ರಿಂದ ಸೆಪ್ಟೆಂಬರ್ 4, 2010. ಸ್ಥಳ: ಲಲಿತ ಕಲಾ ಅಕಾಡೆಮಿ, ನವದೆಹಲಿ. ಆಯೋಜನೆ: ಸಹಮತ್, ನವದೆಹಲಿ.
28/08/2010 ರ ಸಂವಾದದಲ್ಲಿ ಭಾಗವಹಿಸಿದ ಕಲಾವಿದರು: ನೀಲಿಮಾ ಶೇಖ್ (ಕಲಾವಿದೆ), ಎಮ್ ಕೆ ರೈನಾ (ರಂಗನಟ, ನಿರ್ದೇಶಕ), ಸಾಇಮಾ ಇಕ್ಬಾಲ್ (ವಾಸ್ತುಶಿಲ್ಪಿ), ವೀರ್ ಮುನ್ಷಿ (ಕಲಾವಿದ), ಇಂದರ್ ಸಲೀಮ್ (ಕಲಾವಿದ), ಶೀಬಾ ಛಾಛಿ (ಕಲಾವಿದೆ), ಪಾರ್ಥಿವ್ ಷಾ (ಛಾಯಾಗ್ರಾಹಕ), ರಾಮ್ ರಹಮಾನ್ (ಛಾಯಾಗ್ರಾಹಕ
ನೀಲಿಮಾ ಶೇಖ್ ರ ಚಿತ್ರಕಲಾಪ್ರದರ್ಶನ ಇಷ್ಟರಲ್ಲೇ ಬೆಂಗಳೂರಿನಲ್ಲೂ ನಡೆಯಲಿದೆ
-ವಿ ಎನ್ ಎಲ್, ಮೈಸೂರು.

ಚಿತ್ರ :ಲಕ್ಷ್ಮೀನಾರಾಯಣ .ವಿ.ಎನ್


ಜಯಶ್ರೀ ಕಾಲಂ: ಸಂತೆಯಲ್ಲಿ ನಿಂತರೂನು …..

ರೇಡಿಯೋ ಸದ್ದು ….

ಸಾಮಾನ್ಯವಾಗಿ ಎಲ್ಲಾ ಕನ್ನಡ ಎಫೆಮ್ ಗಳಲ್ಲಿ ನಾನು ಗಮನಿಸಿದ ಒಂದು ಸಂಗತಿ ಅಂದ್ರೆ ಹಾಡುಗಳ ಪ್ರಸಾರ. ಅದರಲ್ಲಿ ಕೆಲವು ಹಾಡು ಕಾಮನ್ ಆದರೆ ಅದ್ಯಾಕೋ ಗೊತ್ತಿಲ್ಲ ಒಂದು ಎಫೆಮ್ ಹಾಗೂ ಮತ್ತೊಂದು ಎಫೆಮ್ ನಡುವೆ ಇರುವ ಹಾಡಿನ ಅಂತರ ಕೆಲವು ಅರ್ಧ ಸೆಕೆಂಡ್ ನಷ್ಟು ಮಾತ್ರ ಇರುತ್ತದೆ.

ಈಗ ಉದಾಹರಣೆ- ಸಂತೆಯಲ್ಲಿ ನಿಂತರೂನು .. ಮತ್ತೊಂದು ಎಫೆಮ್ನಲ್ಲಿಯು ಅದೇ ಹಾಡು ಅದೇ ಗಳಿಗೆಯಲ್ಲಿ ( ಅರ್ಧ ಸೆಕೆಂಡ್ ವ್ಯತ್ಯಾಸ ಆಗಿರ ಬಹುದು ) ಸಂತೆಯಲ್ಲಿ ನಿಂತರೂನು . ! ಬರ್ತಾ ಇರುತ್ತೆ. ಆದರೆ ಇದು ಯಾಕಾಗಿ ಹಾಗೆ ಆಗುತ್ತೆ ಅನ್ನುವುದೇ ಪ್ರಶ್ನೆ.

ಕೆಲವು ಕಾಮನ್ ಹಾಡುಗಳನ್ನು ಒಟ್ಟೋಟ್ಟೋಟ್ಟಿಗೆ ಕೇಳುವ ಸೌಭಾಗ್ಯ ಕೇಳುಗರಿಗೆ. ಇದೆ ರೀತಿ ನ್ಯೂಸ್ ಚಾನೆಲ್ನವರು ಮಾಡ್ತಾರೆ ಪ್ರಿಯಾರಿಟಿ ಹೆಸರಲ್ಲಿ.. ಈ ಹಿಂಸೆಗೆ ಪರಿಹಾರ ಇಲ್ವಾ ? ಈ ಎಫೆಮ್ಗಳು ಹಾಸ್ಯದ ಹೆಸರಿನಲ್ಲಿ ಮಾಡುವ ಅಸಹ್ಯ ಹಾಸ್ಯಗಳು ಚೀಫ್ಗಳ ಗಮನಕ್ಕೆ ಬಂದೆ ಇರುವುದಿಲ್ಲ ಅದೇ ನನಗೆ ಆಶ್ಚರ್ಯ ತರುವ ವಿಷ್ಯ ಯಾಕೆ ಹೀಗೆ ?

ಪೂರ್ಣ ಓದಿಗೆ ಮೀಡಿಯಾ ಮೈಂಡ್

ಕಾರ್ ಪೂ(ಫೂ)ಲಿಂಗ್…

-ಸಂದೀಪ್ ಕಾಮತ್

ಕಡಲತೀರ

ಐಟಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಂಠಮೂರ್ತಿಗಳು ದಿನಾಲೂ ತಮ್ಮ ಕಾರಿನಲ್ಲಿ ಟೆಕ್ ಪಾರ್ಕಿನ ಕೆಲವು ಉದ್ಯೋಗಿಗಳನ್ನು ಜೊತೆಯಲ್ಲಿ ಕರೆದೊಯ್ದು ಕಾರ್ ಪೂಲಿಂಗ್ ಮಾಡಿದ್ದಕ್ಕೆ ’ಐಟಿ ಕಾರ್ ಪೂಲಿಂಗ್ ಸಂಘ’ದವರು ಸಾವಿರ ರೂ.ನ ಸೊಡೆಕ್ಸೊ ಕೂಪನ್ ಕೊಟ್ಟು ಸನ್ಮಾನ ಮಾಡಿದರು.

ಅದೇ ಟೆಕ್ ಪಾರ್ಕ್ ನಲ್ಲಿರೋ ಕಾಲ್ ಸೆಂಟರ್ ನ ಕ್ಯಾಬ್ ಡ್ರೈವರ್ ಕೃಷ್ಣಪ್ಪ ,ಖಾಲಿ ಕಾರ್ ನಲ್ಲಿ ಹೋಗೋ ಬದಲು ಕೆಲವರನ್ನು ಪಿಕಪ್ ಮಾಡಿದ್ದಕ್ಕೆ ಹೆಬ್ಬಾಳ ಪೋಲಿಸರು ಐನೂರು ರೂ ದಂಡ ವಿಧಿಸಿದರು

‘ಮಳೆ ಹಬ್ಬ’…

“ಸಂವೇದನ” ಬೆಂಗಳೂರು, ದಿ ಇಂಡಿಯನ್  ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಏರ್ಪಡಿಸಿದ್ದ ‘ಮಳೆ ಹಬ್ಬ’ ಕಾರ್ಯಕ್ರಮದ ಒಂದು ನೋಟ. ಈ ಕಾರ್ಯಕ್ರಮದಲ್ಲಿ ಡಾ. ಜಿ. ಬಿ. ಹರೀಶ್, ಹಿಂದುಸ್ತಾನಿ ಗಾಯಕ ಓಂಕಾರನಾಥ ಹವಾಲ್ದಾರ್  ಪಾಲ್ಗೊಂಡಿದ್ದರು.

%d bloggers like this: