ನಾನು ಯಾರು? ಯಾವ ಊರು..?

ಜಿ ವಿ ಜಯಶ್ರೀ ಇದ್ದಕ್ಕಿದ್ದಂತೆ  ‘ಮೀಡಿಯಾ ಮೈಂಡ್’ ಹಾಗೂ ‘ಅವಧಿ’ಯಲ್ಲಿ ಕಾಣಿಸಿಕೊಳ್ಳತೊಡಗಿದ್ದೇ ತಡ, ‘ಯಾರವರು?’ ಎಂದು ಕೇಳಿ ಸಾಕಷ್ಟು ಮೇಲ್ ಗಳು ಬಂದವು. ಫೋನ್ ಕರೆಗಳಿಗಂತೂ ಲೆಕ್ಕವೇ ಇಲ್ಲ, ಹೋದ ಕಡೆ ಅದೇ ಕುತೂಹಲ..

ಮೊದಲನೆಯದಾಗಿ ಜಯಶ್ರೀ ಯಾರು ಎಂಬುದು ‘ಅವಧಿ’ ಬಳಗಕ್ಕೂ ಗೊತ್ತಿರಲಿಲ್ಲ. ಫೇಸ್ ಬುಕ್ ನಲ್ಲಿ ಪ್ರಕಟವಾಗುತ್ತಿದ್ದ ಮೀಡಿಯಾ ವಿಮರ್ಶೆ ಸಾಕಷ್ಟು ಬೋಲ್ಡ್ ಆಗಿತ್ತು, ಜೊತೆಗೆ ಫ್ಲರ್ಟಿಂಗ್ ಶೈಲಿ, ಕಿಕ್ಕಿಂಗ್ ಮಾತು.. ಹಾಗಾಗಿ ಜಯಶ್ರೀಗೆ ಒಂದು ಮೇಲ್ ಮಾಡಿದೆವು. ಫೇಸ್ ಬುಕ್ ನಲ್ಲಿ ಬರೆಯುತ್ತಿರುವ ನಿಮ್ಮ ಕಾಲಂ ನಾವು ಬಳಸಿಕೊಳ್ಳಬಹುದೇ ಅಂತ.

ಒಂದೆರಡು ಅಂಕಣ ಪ್ರಕಟವಾಯ್ತು ನೋಡಿ.. ಜಯಶ್ರೀ ಅವರಿಗೂ ಉಮೇದು ಬಂತು. ಪ್ರತಿಕ್ರಿಯೆಗಳಿಗಂತೂ ಬರವಿರಲಿಲ್ಲ. ಆದರೂ ಆಕೆ ಪತ್ರಕರ್ತೆ ಎಂದು ಅವರ ಫೇಸ್ಬುಕ್ ಪ್ರೊಫೈಲ್ ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಉಳಿದಂತೆ ಯಾವುದೇ ವಿವರ ಗೊತ್ತಿರಲಿಲ್ಲ.

ಬರಹವೇ ಮಾತನಾಡುತ್ತಿರುವಾಗ ವ್ಯಕ್ತಿಯ ಪರಿಚಯ ಏಕೆ ಎಂದು ನಾವೂ ಸುಮ್ಮನಾದೆವು. ಸುಘೋಷ್ ಒಮ್ಮೆ ಮಾತನಾಡಿ ಅವರು ಈಟಿವಿ ಯವರಲ್ಲವಾ..? ಅಂತ ಕೇಳಿದ್ದರು. ಹಾಗೆ ಅವರಿರಬಹುದು, ಇವರಿರಬಹುದು ಎಂದು ಊಹೆ ಮಾಡಿ ಕೇಳಿದರು ಸಾಕಷ್ಟು ಜನ. ಇನ್ನು ಕೆಲವರು ಊಹೆ ಮಾಡಲಿಲ್ಲ, ಅದು ಜಯಶ್ರೀ ಹೆಸರಿನ ನಾನೇ ಎಂದು ಷರಾ ಬರೆದು ಕೂತುಬಿಟ್ಟರು.

ಹಾಗಿರುವಾಗಲೇ ಮೇಫ್ಲವರ್ ಪ್ರಕಟಿಸಿದ  ‘ತುಂಗಾ’ ಕಾದಂಬರಿ ಬಿಡುಗಡೆ ಆಕೃತಿ ಮಳಿಗೆಯಲ್ಲಿ ಹಮ್ಮಿಕೊಂಡಾಗ ದಿಢೀರ್ ಎದುರಾದವರು ಜಯಶ್ರೀ. ವಿಶೇಷವೆಂದರೆ ಆ ದಿನ ಸುಘೋಷ್ ಸಹಾ ನಮ್ಮ ಜೊತೆಗೆ ಇದ್ದರು. ನಾನೇ ಎಂದು ಸಾಕಷ್ಟು ಮಂದಿ ಅಂದುಕೊಂಡದ್ದರಿಂದ  ‘ಅವರನ್ನು ಫೋಟೋದಲ್ಲಿ ದಾಖಲಿಸಿರಪ್ಪಾ..’  ಎಂದು ತಮಾಷೆ ಮಾಡಿದೆ. ಅವರ ಹಿರಿಯರೂ ಪತ್ರಿಕೋದ್ಯಮದಲ್ಲಿದ್ದವರೇ .

ಈ ಮಧ್ಯೆ ಜಯಶ್ರೀ ತಮ್ಮ ಬ್ಲಾಗ್ ನಲ್ಲಿ ಎಷ್ಟೋ ಮಂದಿ ಅವರ ಬರಹದ ಮೇಲೆ ನಾನು ಒತ್ತಡ ಹಾಕುತ್ತಿದ್ದೇನೆ ಎಂದು ಅಂದುಕೊಂಡ ಬಗ್ಗೆ ಬರೆದಿದ್ದರು. ಒತ್ತಡ ಹಾಕಿದ್ದೇನೆ-ಒಂದು ಬಾರಿ- ನನ್ನ ಬಗ್ಗೆ ಹೊನ್ನ ಶೂಲಕ್ಕೆರಿಸಿದ ಪ್ರಸಂಗ ಬಂದಾಗ. ದಯವಿಟ್ಟು ನನ್ನ ಬಗ್ಗೆ ಬೇಡ ಅಂತ.

ಆದರೂ ಜಯಶ್ರೀ ಅದನ್ನು ಬಿಟ್ಟಿಲ್ಲ ಏನು ಮಾಡುವುದು?

ಇರಲಿ, ಈ ಜಯಶ್ರೀ ಬ್ಲಾಗ್ ಗೆ ಒಂದು ವರ್ಷದ ಸಂಭ್ರಮ. ವಸುದೇವ ಅನ್ನುವ ಹೆಸರಿನ ಅವರ ಬ್ಲಾಗ್ ನೀವು ಓದಬೇಕು.  ಅವರ ಹೆಸರು ಜಿ ವಿ ಜಯಶ್ರೀ ಆದ್ದರಿಂದ ನಾನು ಅವರನ್ನು ‘ಜೀವಿ’ ಎಂದು ಕರೆಯುತ್ತಿದ್ದೆ. ಬ್ಲಾಗ್ ‘ಜೀವಿ’ಗೆ ತುಂಬು ಅಭಿನಂದನೆಗಳು. ಅವರು ಫೋಟೋ ಹಾಕಲು ಅವಕಾಶ ಕೊಟ್ಟ ದಿನ ಖಂಡಿತಾ ನಾವು ತೆಗೆದಿರುವ ಫೋಟೋಗಳು ಪ್ರಕಟವಾಗುತ್ತದೆ..

ಇಲ್ಲಿದೆ ಜಯಶ್ರೀ ಬ್ಲಾಗ್ ಗೆ ಒಂದು ತುಂಬಿದ ಕಾರಣಕ್ಕೆ ಬರೆದುಕೊಂಡದ್ದು

ಒಹ್ ! ನನ್ನ ಬ್ಲಾಗಿಗೆ ಮತ್ತೊಂದು ಹುಟ್ಟು ಹಬ್ಬ 🙂 . ನನ್ನ ಬದುಕಿನಲ್ಲಿ ಈ ದಿನ ಅತ್ಯಂತ ಸಂತೋಷ ನೀಡುವ ದಿನ. ಒಂದು ಸಲ ನನ್ನ ಬರಹ ಓದಿದ ಅವಧಿ-ಮೀಡಿಯ ಮೈಂಡ್ ಓದುಗರೊಬ್ಬರು ಈ ಎಲ್ಲದಕ್ಕೂ ನೀವು ಹೇಗೆ ಸಮಯ ಹೊಂದಿಸಿ ಕೊಳ್ತೀರಿ ಎಂದು ಪ್ರಶ್ನೆ ಮಾಡಿದ್ದರು . ಅವರು ಕೇಳಿದ್ದ ಈ ಪ್ರಶ್ನೆ ನನ್ನನ್ನು ಬಹಳಷ್ಟು ಮಂದಿ ಕೇಳಿದ್ದರು. ನಿಜ ಈಗ ನನ್ನ ಬ್ಲಾಗಿಂಗ್ ವಿಷ್ಯ ಸುಲಭ ಹಾಗೂ ಸರಳವಾದ ವಿಷ್ಯ ಆಗಿರಲಿಲ್ಲ. ಓದುಗರಿಗೆ ಅಯ್ಯೋ ಇದೂ ಒಂದು ಸಂಗತೀನ, ಆರಾಂಸೆ ಟೀವಿ , ನೋಡಿ ರೇಡಿಯೋ ಕೇಳಿದ್ರಾಯ್ತು ಅಂತ ಮೂಗು ಮುರಿಯ ಬಹುದು, ಆದರೆ ಅದರಷ್ಟು ಹಿಂಸೆ ( ಅನೇಕ ಬಾರಿ) ಆಗುವಷ್ಟು ಮತ್ತೊಂದು ಕೆಲಸಕ್ಕೆ ಆಗದು.ಮಾಮೂಲಿ ವೀಕ್ಷಣೆಗೂ ಹಾಗೂ ಬರೆಯುವ ಉದ್ದೇಶದಿಂದ ಮಾಡುವ ವೀಕ್ಷಣೆಗೂ ತುಂಬಾ ವ್ಯತ್ಯಾಸ ಇದೆ.

ಇನ್ನಷ್ಟು

ಯುಗ, ಪರಂಪರೆ, ಮತ್ತು ಸಮಕಾಲೀನತೆ …

ಜಯಶ್ರೀ ಕಾಲಂ: ಇದು ಭಿನ್ನ ಧಾರವಾಹಿ …

@@ ಸುವರ್ಣವಾಹಿನಿಯಲ್ಲಿ ಗುರು ರಾಘವೇಂದ್ರ ವೈಭವ ತುಂಬಾ ಅದ್ಭುತವಾದ ಧಾರವಾಹಿ. ರಾಯರು ಎಲ್ಲರ ಮೆಚ್ಚಿನ ಗುರುಗಳು.ಹಳೆಯ ಚರಿತ್ರೆಯ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಆದರೆ ಈ ಧಾರವಾಹಿ ಆರಂಭಿಕ ಹಂತದಿಂದಲೂ ತನ್ನ ಆಸಕ್ತಿಯನ್ನು ಉಳಿಸಿ ಕೊಂಡು ಬಂದಿದೆ.

ಹೀಗೆ ಒಬ್ಬರು ವೀಕ್ಷಕರು ಹೇಳ್ತಾ ಇದ್ರು, ಪ್ರತಿದಿನ ರಾತ್ರಿ ಕೊಲೆ ಸುಲಿಗೆ ನೋಡಿ ಮಲಗ ಬೇಕಾಗ್ತಾ ,ಆದರೆ ಈಗ ಅಂತಹ ಕಿರಿಕಿರಿ ಇಲ್ಲ. ನಿಜ ಅಂತಹ ಒಂದು ವಾತಾವರಣ ಈಗಿದೆ. ನಮ್ಮ ವಾಹಿನಿಗಳು ಈಗಾಗಲೇ ಅನೇಕ ಸೀರಿಯಲ್ಗಳನ್ನು ಪ್ರಸಾರ ಮಾಡಿದೆ, ಆದರೆ ಈ ಧಾರವಾಹಿ ತುಂಬಾ ಭಿನ್ನವಾಗಿದೆ.

ಇದೆ ರೀತಿಯ ಖುಷಿ ಹಂಚಿತ್ತು ಸ್ಟಾರ್ ಪ್ಲಸ್. ಶಿರಡಿ ಸಾಯಿ ಬಾಬ ಧಾರವಾಹಿ ಅತ್ಯಂತ ಖುಷಿ ಕೊಟ್ಟಿತ್ತು, ಅದರ ಜನಪ್ರಿಯತೆ ಹೇಗಿತ್ತು ಅಂದ್ರೆ ಆ ವಿಷಯವನ್ನು ತೆಗೆದುಕೊಂಡು ತೆಲುಗು,ಇತರ ಭಾಷೆಗಳಲ್ಲಿ ಸ್ಥಳೀಯ ಕಲಾವಿದರ ಬಳಸಿ ಸೀರಿಯಲ್ ತೆಗೆದರು. ಆದರೆ ಈ ಟೀಮ್ ನಷ್ಟು ಜನಪ್ರಿಯರಾಗಲಿಲ್ಲ ಬಿಡಿ !

ಪೂರ್ಣ ಓದಿಗೆ ಮೀಡಿಯಾ ಮೈಂಡ್

%d bloggers like this: