ಅವಧಿ recommends…

ಕಲಿಯೋಣ ಬನ್ನಿರಣ್ಣ …

ದೇಶಕಾಲ:ಚಿಂತೆ ಬಿತ್ತುವುದು ಬೇಡ; ಚಿಂತನೆ ಬೆಳೆಸೋಣ

-ಕೆ.ಎಲ್. ಚಂದ್ರಶೇಖರ್ ಐಜೂರ್,
ಮಂಜುನಾಥ್‌ಲತಾ
ಮಾನ್ಯರೆ,

’ದೇಶ ಕಾಲ’ ಎಂಬ ಪತ್ರಿಕೆಯ ಕುರಿತು ಇದುವರೆಗೆ ನಡೆದಿರುವ ಅಭಿಪ್ರಾಯ-ಭಿನ್ನಾಭಿಪ್ರಾಯ, ಅನ್ನಿಸಿಕೆಗಳ ವಿದ್ಯಮಾನವನ್ನು ತಾವೆಲ್ಲರೂ ಗಮನಿಸಿದ್ದೀರಿ. ಕಳೆದ ಎರಡು ತಿಂಗಳುಗಳಿಂದಲೂ ನಡೆದ ಈ ವೈಚಾರಿಕ ಪ್ರಕ್ರಿಯೆ ನಮ್ಮ ಕನ್ನಡ ಸಾಂಸ್ಕೃತಿಕ ಜಗತ್ತಿನ ಹಲವು ಬಗೆಯ ಮುಖಗಳ ’ದರ್ಶನ’ ಮಾಡಿಸಿದೆ.

ಈ ’ದೇಶ ಕಾಲ’ದ ನೆಪದಲ್ಲಿ ಹೊರಬಿದ್ದ ಅನೇಕ ಅಭಿಪ್ರಾಯಗಳಲ್ಲಿ ಹಲವು ನಮ್ಮೊಳಗಿದ್ದ ಆತಂಕವನ್ನು ಬೆಚ್ಚಿಬೀಳಿಸುವಂತೆ ಇದ್ದರೆ, ಮತ್ತೆ ಕೆಲವು ನಮ್ಮಲ್ಲಿ ಭರವಸೆ ಮೂಡಿಸುವಂತೆ ಇವೆ. ಈ ಸಂದರ್ಭದಲ್ಲಿ ನಮ್ಮನ್ನು ಕಾಡಿದ ಆತಂಕವನ್ನು ಕುರಿತೇ ನಾವು ಚರ್ಚಿಸುವುದು ಒಳ್ಳೆಯದೆಂದು ನಮಗೆ ಅನ್ನಿಸಿದೆ.

ಯಾಕೆಂದರೆ ನಮ್ಮ ಮುಂದಿರುವ ಆಶಾಭಾವನೆಗಳ ಕುರಿತು ನಾವು ಸಂತೋಷ ಪಡುವುದಕ್ಕಿಂತಲೂ ಮುಂಚೆ ನಮ್ಮನ್ನು ಮತ್ತಷ್ಟು ಆತಂಕಕ್ಕೆ ದೂಡುವ ಕ್ಷಣಗಳ ಕುರಿತು ಮಾತನಾಡುವುದು ಒಳ್ಳೆಯದು.

* ’ದೇಶ ಕಾಲ’ದ ಕುರಿತು ನಾವು ’ಆ’ ಭಾಷೆಯಲ್ಲಿ ಮಾತನಾಡಬೇಕಾಗಿದ್ದ ಅನಿವಾರ್ಯತೆ, ಸಂದರ್ಭದ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಆದರೆ ನಮ್ಮ ಅಂತಹ ಒಂದು ಹೊಸ ಚರ್ಚೆಯನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಹಿರಿಯರಾದ ಶ್ರೀ ಜಿ. ರಾಜಶೇಖರ್-ಶ್ರೀ ಕೆ. ಫಣಿರಾಜ್ ಜೋಡಿ ಹೆಣಗಾಡಿದ್ದು ನೋಡಿ ನಮ್ಮಲ್ಲಿ ಆತಂಕವಷ್ಟೇ ಬೆಳೆಯುತ್ತಾ ಹೋಯಿತು.

ಆಗ ನಮಗೆ ನೆನಪಾಗಿದ್ದು ಬಸವಣ್ಣ ಹೇಳಿದ ’ತಾಯ ಮೊಲೆ ಹಾಲೇ ನಂಜಾಗಿ ಕೊಲುವೆಡೆ ಯಾರಿಗೆ ದೂರುವೆ’ ಎಂಬ ವಿಷಾದದ ಮಾತು. ಯಾಕೆಂದರೆ ನಾವೆಲ್ಲರೂ ನಮ್ಮ ಪ್ರಗತಿಪರ ಚಿಂತನೆಗಳ ಸೂಕ್ಷ್ಮತೆಯನ್ನೆಲ್ಲ ಬಲ್ಲ ಮಾರ್ಗದರ್ಶಿಗಳು ಎಂದುಕೊಂಡ ಇಂತಹವರೇ ’ದೇಶಕಾಲ ಉಳಿಸಿ’ ಎಂಬ ಒಂದಂಶದ ಅಭಿಯಾನದ ಸಾರಥ್ಯ ವಹಿಸಿಕೊಂಡು, ಸದ್ಯಕ್ಕೆ ಅದೊಂದೇ ತಮ್ಮ ತುರ್ತಿನ ಕೆಲಸವೆಂಬಂತೆ ನಡೆದುಕೊಂಡಿದ್ದು ನಮ್ಮ ಎಲ್ಲಾ ಆಶಯಗಳನ್ನು ಬುಡಮೇಲು ಮಾಡುವಂತೆ ಮಾಡಿತು.

* ’ದೇಶಕಾಲವೇನೂ ವಿಮರ್ಶಾತೀತವಲ್ಲ’ ಎಂದು ತಮ್ಮ ಪ್ರತಿಕ್ರಿಯೆಗಳ ಕೊನೆಯಲ್ಲಿ ಒಂದು ಸಾಲು ಸೇರಿಸುತ್ತಲೇ ತಮ್ಮ ವಾದಗಳನ್ನು ಆರಂಭಿಸುತ್ತಿದ್ದ ಇವರು ಸ್ವತಃ ’ದೇಶಕಾಲ’ದ ಕುರಿತು ಗಂಭೀರವಾಗಿ ಅವಲೋಕಿಸುವ ಸಣ್ಣ ಪ್ರಯತ್ನವನ್ನೂ ತಮ್ಮ ಯಾವ ಪ್ರತಿಕ್ರಿಯೆಗಳಲ್ಲೂ ಮಾಡಲಿಲ್ಲ. ಬದಲಿಗೆ ನಮ್ಮ ಭಾಷೆಯನ್ನೂ, ಸಮರ್ಥನೆಯನ್ನೂ ನಿರಂತರವಾಗಿ ಖಂಡಿಸುತ್ತಾ ನಮ್ಮ ಧ್ವನಿಗಳನ್ನು ದಮನಿಸುವ ಪ್ರಯತ್ನದಲ್ಲಿ ತೊಡಗಿದ್ದು ನಿಜಕ್ಕೂ ಗಾಬರಿ ಹುಟ್ಟಿಸಿತು.

* ಉಳಿದ ಆಸಕ್ತರೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ ಹಾಗೆ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರ ಭಿನ್ನ ಧ್ವನಿಗಳನ್ನು ದಮನಿಸುವ ವ್ಯರ್ಥ ಸಾಹಸವನ್ನಷ್ಟೇ ಈ ಹಿರಿಯರು ಮಾಡಿದರು. ಅವರಿಗೆ ಮುಖ್ಯವಾಗಿ ಬೇಕಾಗಿದ್ದುದು ’ದೇಶ ಕಾಲ’ವನ್ನು ಯಾವ ವಸ್ತುನಿಷ್ಠತೆಯೂ ಇಲ್ಲದೆ ಸಮರ್ಥಿಸಿ ನಿಲ್ಲಬೇಕಾದ ಅನಿವಾರ್ಯತೆಯೇ ಹೊರತು, ಆ ಪತ್ರಿಕೆಯ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಕನ್ನಡ ಸಾಂಸ್ಕೃತಿಕ ಪರಂಪರೆಯ ಗಂಭೀರ ಅವಲೋಕನವಲ್ಲ.

More

ಜಯಶ್ರೀ ಕಾಲಂ: ನೇತ್ರಾ..ಅ..ಅ.. ಸಖತ್ತಾಗಿರುತ್ತೆ…ನಿಮ್ಮ ಮಂತ್ರಾ .. ಅ.. ಅ..

ರೇಡಿಯೋ ಸದ್ದು…

92.7 ಆರ್ಜೆ ನೇತ್ರ ಕಾರ್ಯಕ್ರಮ ಆಲಿಸ್ತಾ ಇದ್ದೆ. ಅದ್ಭುತವಾದ ಪಂಚ್ ಕೊಡುವ ಆರ್ಜೆ ಆಕೆ. ವಿಷಯ ಯಾವುದೇ ಆಗಿರಲಿ ಅದನ್ನು ವಿಶೇಷವಾಗಿ ತಿಳಿಸುತ್ತಾರೆ. ನನ್ನ ಗಮನ ಹೆಚ್ಚು ಹೆಚ್ಚು ಸೆಳೆಯುವುದು ಅಂದ್ರೆ ನಾನು ನೇತ್ರ ಅ.. ಅ.. ಅ… ತೋರಿಸ್ತೀನಿ ನನ್ ಮಂತ್ರಾ ..ಅ..ಅ… ;-) . ನಮಗೆಲ್ಲ ಮಂತ್ರ ಕೇಳಿ ಅಭ್ಯಾಸ ಆದ್ರೆ ಈ ಹೆಣ್ಣುಮಗಳು ಮಂತ್ರ ತೋರಿಸುವ ಜಾಣೆ. ಇಡೀ ಕಾರ್ಯಕ್ರಮದಲ್ಲಿ ಈಕೆ ತಿಳಿಸುವ ವಿಷಯ, ಅದನ್ನು ಹೇಳುವ ಸರಳ ವಿಧಾನ ಆರಾಮವಾಗಿ ಅರ್ಥ ಆಗುವಂತೆ ಖುಷಿ ಚುಮ್ಮಿಸುವಂತೆ ಇರುತ್ತದೆ. ನೇತ್ರಾ..ಅ..ಅ.. ಸಖತ್ತಾಗಿರುತ್ತೆ…ನಿಮ್ಮ ಮಂತ್ರಾ .. ಅ.. ಅ.. :-)

ಪೂರ್ಣ  ಓದಿಗೆ  ಮೀಡಿಯಾ ಮೈಂಡ್

ಓದಿನರಮನೆಯಲ್ಲಿ ಸುಗಮ ಸಂಗೀತ …

ವಿಶ್ವೇಶ್ವರ ಭಟ್ ಅವರ ‘ಬಾನಯಾನ …’

ಮತ್ತೆ ಶೇಕ್ಸ್ಪಿಯರ್…

%d bloggers like this: