ಪ್ರಪಾತ…..

ಕೋಟೆ ವಸಂತ ಕುಮಾರ್ ನೆನಪು

ಕಿ ರಂ ಮತ್ತು ಲಂಕೇಶ್: ಮರತೇನಂದಾರ ಮರೆಯಲಿ ಹ್ಯಾಂಗಾ…

‘ಜಾತ್ರೆಗೆ ಬಂದವರಿಗೆ ಬೀಜ ಪ್ರಸಾದ’…

-ವಿ ಗಾಯತ್ರಿ

ವಿ ಗಾಯತ್ರಿ ಸಹಜ ಸಾಗುವಳಿಯ ಸಂಪಾದಕರು. ಹೊಸ ಸಂಚಿಕೆ ಹೊರಬಂದಿದ್ದು ಅದರ ಆಯ್ದ ಒಂದು ಲೇಖನ  ಇಲ್ಲಿದೆ-

ಕಳೆದ ವರ್ಷ ಉಜ್ಜಿನಿಯ ಮರುಳು ಸಿದ್ದೇಶ್ವರನ ತೈಲಾಭಿಷೇಕದಂದು ೨೫ಕ್ಕೂ ಹೆಚ್ಚು ಗ್ರಾಮಗಳ ಎರಡು ಸಾವಿರಕ್ಕೂ ಮಿಕ್ಕಿ ಕುಟುಂಬಗಳು ಸಾಮೂಹಿಕವಾಗಿ ತರಕಾರಿ ಬೀಜ ಹಾಕಿ ಕೈತೋಟದ ಹಬ್ಬ ಆಚರಿಸಿದ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ಬರೆಯಲಾಗಿತ್ತು.

ನಂತರದ ದಿನಗಳಲ್ಲಿ ಪ್ರತಿಯೊಂದು ಕುಟುಂಬಗಳಿಗೂ ಅವರಿಗೆ ಲಭ್ಯವಿರುವ ಸಂಪನ್ಮೂಲ, ಜಾಗಗಳನ್ನು ಆಧರಿಸಿ ತಮ್ಮದೇ ಕೈತೋಟದ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಒತ್ತಾಸೆ ನೀಡಿದ ಪರಿಣಾಮವಾಗಿ ಪ್ರತಿ ಕುಟುಂಬಕ್ಕೂ ಕನಿಷ್ಟ ೬ ತಿಂಗಳು ತರಕಾರಿ ಪೂರೈಕೆಯಾಗಿತ್ತು.

ಅನೇಕರು ವ್ಯವಸ್ಥಿತ ಕೈತೋಟ ನಿರ್ಮಾಣ ಮಾಡಿಕೊಂಡು ವರ್ಷವಿಡೀ ಒಂದಲ್ಲಾ ಒಂದು ತರಕಾರಿ ಪಡೆದದ್ದೇ ಅಲ್ಲದೆ ಹೆಚ್ಚುವರಿ ತರಕಾರಿ ಮಾರಾಟ ಮಾಡಿ ಕೆಲ ಸಾವಿರ ರೂಪಾಯಿಗಳ ಆದಾಯವನ್ನೂ ಗಳಿಸಿದ್ದ ಕುರಿತು ಕೂಡ ಮುಂದಿನ ಸಂಚಿಕೆಗಳಲ್ಲಿ ಬರೆದಿದ್ದೆವು.

ವ್ಯವಸ್ಥಿತವಾಗಿ ತರಕಾರಿ ಬೀಜ ಸಂಗ್ರಹ ಮತ್ತು ಸಂಪರ್ಕ ಮಾಡಿದ್ದರ ಪರಿಣಾಮ ಒಂದೇ ವರ್ಷದಲ್ಲಿ ಈ ಪ್ರದೇಶದ ರೈತ ಕುಟುಂಬಗಳಲ್ಲಿ ಕಣ್ಮರೆಯಾಗಿದ್ದ ೨೫-೩೦ ಥರದ ಸೊಪ್ಪು ಮತ್ತು ತರಕಾರಿ ಬೀಜಗಳು ಪ್ರತಿಯೊಬ್ಬರಿಗೂ ದೊರೆತಿವೆ. ಈ ವರ್ಷ ೨೦೦ ಕೆಜಿಗೂ ಹೆಚ್ಚು ಬೀಜ ಸಂಗ್ರಹವಾಗಿ ಸುಮಾರು ೫೦೦೦ ಕುಟುಂಬಗಳ ನಡುವೆ ವಿನಿಮಯಗೊಂಡಿದೆ.

ತಾವು ಬೆಳೆದು ಸಂಗ್ರಹಿಸಿಕೊಂಡ ಬೀಜಗಳನ್ನು ತಮ್ಮ ಗ್ರಾಮದ ಇತರರಿಗೆ ಹಾಗೂ ಪರಊರುಗಳಲ್ಲಿರುವ ತಮ್ಮ ನೆಂಟರಿಷ್ಟರಿಗೆಲ್ಲ ಹಂಚಿ, ಅವರಿಗೂ ಬೀಜ ಹಾಕುವಂತೆ ಪ್ರೇರೇಪಿಸಿದ್ದರ ಪರಿಣಾಮವಾಗಿ ಈ ವರ್ಷ ೫೦೦೦ಕ್ಕೂ ಹೆಚ್ಚು ಕುಟುಂಬಗಳು ಮೇ ೧೯ರಂದು ನಡೆದ ಮರುಳುಸಿದ್ದೇಶ್ವರನ ತೈಲಾಭಿಷೇಕದಂದು ತರಕಾರಿ ಬೀಜ ಹಾಕಿ ಕೈತೋಟದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ಮಡಕೆ, ಬಕೇಟು, ಕಲ್ಲು ಪಿಚ್ಚಿಂಗ್ ಇತ್ಯಾದಿಗಳಲ್ಲಿ ಒಂದೊಂದು ಬೀಜ ಹಾಕಿ ಮನೆ ಮಾಡಿಗೆ, ಮರಗಳಿಗೆ, ಕೊಟ್ಟಿಗೆಗೆ, ಎರೆಹುಳು ತೊಟ್ಟಿಯ ಚಪ್ಪರಕ್ಕೆ ಬಳ್ಳಿ ಹಬ್ಬಿಸಿದವರಿಂದ ಹಿಡಿದು ಸಣ್ಣ ಸಣ್ಣ ಮಡಿಗಳು, ಹತ್ತು ಇಪ್ಪತ್ತು ಚದುರಡಿಗಳ ವ್ಯವಸ್ಥಿತ ಕೈತೋಟ ಮಾಡಿಕೊಂಡವರತನಕ ಪ್ರತಿಯೊಬ್ಬರದ್ದೂ ಒಂದೊಂದು ವಿನ್ಯಾಸವೇ.

More

ಕಾವ್ಯ ಮಾತು ಸಂಗೀತ …

ಸಂವೇದನ  ಬೆಂಗಳೂರು  ಪ್ರಸ್ತುತ ಪಡಿಸುತ್ತಿರುವ  ‘ಮಳೆ ಹಬ್ಬ :ಕಾವ್ಯ, ಮಾತು,ಸಂಗೀತ’ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ  ಓಂಕಾರನಾತ್  ಹಾಗು  ಡಾ ಜಿ.ಬಿ.ಹರೀಶ್ ಪಾಲ್ಗೊಳ್ಳಲಿದ್ದಾರೆ.

ದಿನಾಂಕ: ಸೆಪ್ಟೆಂಬರ್ 12

ಸಮಯ: 10:00am – 12:00pm

ಸ್ಥಳ :ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

%d bloggers like this: