ಸಾಣೇಹಳ್ಳಿಯಲ್ಲಿ ರಂಗ ಚಿಂತನೆ

ಕಾವ್ಯಶ್ರೀ ಯುವ ರಂಗ ನಿರ್ದೇಶಕಿ. ತಾಯಿ ಸರ್ವಮಂಗಳ ಬರೆದ ‘ಕಾಗೆ ಕಾಗೆ ಕವ್ವಾ’ ನಾಟಕವನ್ನು ರಂಗಕ್ಕೇರಿಸಿದ್ದಾರೆ. ಮೊನ್ನೆ ಸಾಣೆಹಳ್ಳಿಯಲ್ಲಿ ದೇಶದ ತುಂಬಾ ಸುದ್ದಿ ಆಗಬೇಕಾದ ಒಂದು ಮಹತ್ವದ ಚಿಂತನೆ ನಡೆಯಿತು. ದೇಶದ ಮಾತು ಬಿಡಿ, ಚಿತ್ರದುರ್ಗ ದಾಟಿ ಅದು ಆಚೆ ಸುದ್ದಿಯಾಗಲೇ ಇಲ್ಲ. ಕಾವ್ಯಶ್ರೀ ಮುತುವರ್ಜಿಯಿಂದ ಅದರ ಫೋಟೋ ದಾಖಲೆ ಮಾಡಿದ್ದಾರೆ. ನಿಮಗಾಗಿ ಕೆಲವು ಇಲ್ಲಿದೆ. ಥ್ಯಾಂಕ್ಸ್ ಕಾವ್ಯಶ್ರೀ..

‘ಮೀಡಿಯಾ ಮೈಂಡ್’ನಲ್ಲಿ ಏನೇನು?

ಭೇಟಿ ಕೊಡಿ- ಮೀಡಿಯಾ ಮೈಂಡ್

ಟಿ ಎಸ್ ಆರ್ ಹಾಗೂ ಛೂ ಬಾಣದ ಬಗ್ಗೆ ವಿಶ್ವೇಶ್ವರ ಭಟ್ ಅಂಕಣ

ಮಂಗಳೂರು ವಿಮಾನ ದುರಂತದ ಬಗ್ಗೆ ಸುಗತ ಹಾಗೂ ಪ್ರೀತೀಶ್ ನಂದಿ

‘ಗಾಂಧೀ ಬಂದ’ ಕೃತಿ-ರಂಗಕೃತಿ

ರಂಗಶಂಕರದಲ್ಲಿ ಮಾವಿನಹಣ್ಣು

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ “ಅಭ್ಯಾಸ”

ಬೆಳ್ಳಾಲ ಗೋಪಿನಾಥ ರಾವ್

ಕೃಪೆ: ಕನ್ನಡ ಬ್ಲಾಗರ್ಸ್

ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ “ಸ್ವಸ್ತಿಶ್ರೀ” ಯಲ್ಲಿ ಹಾಜರ್. ಭರ್ಜರಿ ಉಪಹಾರ ಸ್ವೀಕರಿಸಿ ಮತ್ತೊಮ್ಮೆ ಎಚ್ಚೆಸ್ವಿಯವರ ಎರಡನೇ ಅಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಿಕೊಂಡೆವು. ಅವರ ಅಖ್ಯಾನದ ಸೂಜಿಗಲ್ಲಿನ ಸೆಳೆತವೊಂದೆಡೆಯಾದರೆ , ಈ ಸಾರಿ ನಾನು ತಂದಿದ್ದ-ನನ್ನ ಟಾಕ್ ಬುಕ್ ಮತ್ತು ಕ್ಯಾಮರಾ – ಗುರುವರ್ಯರ ವಾಣಿಯನ್ನು ಸಾಕ್ಷಿಯಾಗಿಸಲು, ಅದೆಷ್ಟು ಪರಿಣಾಮಕಾರಿಯಾಗಿರಿಸಿದೆ ಎಂದು ನೀವುಗಳೇ ಹೇಳಬೇಕು. ನಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ನಾವೆಲ್ಲಾ ಮುಳುಗಿ ಹೋಗುತ್ತಾ ಯಾಂತ್ರಿಕವಾಗಿ , ನಮ್ಮ ಕರ್ತವ್ಯಗಳನ್ನೂಅದರಿಂದಾಗಿ , ನಮ್ಮ ನಮ್ಮನ್ನೇ ಮರೆಯುತ್ತಾ ಬದುಕುವ ಈ ದಿನಗಳಲ್ಲಿ ಗುರುಗಳ ಈ “ಅಭ್ಯಾಸ” ನಮ್ಮನ್ನು ಒಂದು ದಿನದ ಮಟ್ಟಿಗಾದರೂ ಮಾನವರನ್ನಾಗಿಸಿ ಬಿಡುವತ್ತ ಸೂಜಿಗಲ್ಲಿನಂತೆ ಆಕರ್ಷಿಸಿ
ಬಿಡುತ್ತದೆ. ಅವರೇ ತಿಳಿಸಿದಂತೆ ಈ ಒಂದು ದಿನದ ಪುಳಕ ನಮ್ಮೆಲ್ಲರನ್ನೂ ಕಾಲಯಾನದಲ್ಲಿ ಕನ್ನಡದ ಒಂದು ಸಾವಿರ ವರ್ಷದ ಹಿಂದೆ ತಲುಪಿಸಿ ಧನ್ಯರನ್ನಾಗಿಸಿ ಬಿಟ್ಟಿತು.

ನಾಡೋಜ ಪಂಪ ಸರಿ ಸುಮಾರು ಹತ್ತನೇ ಶತಮಾನದ ಕವಿ.( ೯೦೨ ರಿಂದ ೯೪೬) ಆಗೆಲ್ಲಾ ಪುರಾಣ, ಕಾವ್ಯಗಳು ಸಾಮಾನ್ಯ ಜನರ ಕಿವಿಗೂ ಬಿಳುತ್ತಿರಲಿಲ್ಲ, ಅದೇನಿದ್ದರೂ ರಾಜಾಶ್ರಯಗಳಲ್ಲಿ ಮಾತ್ರ.ಆದುದರಿಂದಲೇ ಜನಸಾಮಾನ್ಯರಿಂದ, ಅವರ ಚಿತ್ರಣಗಳು ಆರಿಸಿ,ಶೋಧಿತಗೊಂಡು ಹೊರಬಂದವುಗಳಾಗಿರುತ್ತಿದ್ದವು.ರಾಜ ಮಹಾರಾಜರುಗಳ ಮುಖವಾಣಿಗಳೇ ಆಗಿರುತ್ತಿದ್ದವು.ನಾಡೋಜ ಪಂಪ ಹಿಂದೂ ರಾಜ ೨ ನೆಯ ಅರಿಕೇಸರಿಯ ಅಸ್ಥಾನದಲ್ಲಿ ಒಬ್ಬ ಯೋಧ..ಈತನ ತಂದೆ ಅಭಿರಾಮ ದೇವ .( ಅಥವಾ ಭೀಮಪ್ಪಯ್ಯ, ತಾಯಿ ಅಬ್ಬನಬ್ಬೆ) ಮೂಲತ ಭ್ರಾಹ್ಮಣ,ನಂತರ ಜೈನ ಧರ್ಮ ಸ್ವೀಕರಿದ, ಈತನ ತಾಯಿ ಅನ್ನಿಗಿರಿ , ಮೂಲತ ಕರ್ನಾಟಕದವರು,
ಪಶ್ಚಿಮ ಘಟ್ಟದ ಬನವಾಸಿ, ದಟ್ಟ ಕಾಡುಗಳು ತುಂಬಿ ಹರಿವ ನದಿ, ಕೊಳ್ಳ,ಜಲಪಾತ, ಹಸುರು ಗಳಲ್ಲೇ ಕಳೆದ ಬಾಲ್ಯ ಪಂಪನ ಮೇಲೆ ಪ್ರಭಾವ ಬೀರಿದ್ದು ಅವನ ಕಾವ್ಯಗಳಲ್ಲಿ ಹೇರಾಳವಾಗಿ ಕಂಡು ಬರುತ್ತದೆ.  ಆರಂಕುಶವಿಟ್ಟೋಡಮ್ ನೆನೆವುದೆನ್ನ ಮನವು ಬನವಾಸಿ ದೇಸವಮ್ ಮತ್ತು  ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವದು ಬನವಾಸಿ ದೇಸದೋಳ್” ಆತನ ಪ್ರಾವೀಣ್ಯತೆ ಸಂಗೀತ, ಸಾಹಿತ್ಯ, ಕಲೆ, ವಾಣಿಜ್ಯ,ಮತ್ತು ವೈದ್ಯಕೀಯ, ನೃತ್ಯ, ಮತ್ತು ಕಾಮಸೂತ್ರ ಗಳಂತಹ ಪ್ರತಿಯೊಂದೂ ಕ್ಷೇತ್ರಗಳಲ್ಲಿದ್ದು, ಅವನ ಕಾವ್ಯಗಳಲ್ಲಿ ಬಿಂಬಿಸಿ ಅವನ ಕೃತಿಗಳನ್ನು ಮಹತ್ತರವಾಗಿಸಿವೆ. ಪಂಪನ ಮೊದಲೂ ಸಾಕಷ್ಟು ಕವಿಗಳಿದ್ದರೂ .ಅವನ ಕಾವ್ಯದ ಗುಣ ವಿಶೇಷಣ ಗಳು ಬೇರೆ ಯಾವುದೇ ಕಾವ್ಯದಲ್ಲಿರಲಿಲ್ಲ,ಕಾಲ ದೇಶದ ಐಕ್ಯತೆ ಅವನ ಬರವಣಿಗೆಯಲ್ಲಿ ಸಾಧ್ಯವಾಗುತ್ತದೆ, ಅದಕ್ಕೆಂದೇ ಅವನನ್ನು “ಆದಿಕವಿ” ಎಂದು ಕರೆಯುವರು.
More

%d bloggers like this: