ಜಾನಪದ ಕಥಾ ಚಿತ್ರ ಸ್ಪರ್ಧೆ

ಹೀಗೇನೆ..

-ರಾಘವೇಂದ್ರ ಜೋಶಿ

ಮಧ್ಯರಾತ್ರಿಯಲ್ಲಿ

ಎದ್ದುಹೋದ ಬುದ್ಧ,

ಗೆದ್ದರೂ ಕ್ಷಣದಲ್ಲಿ

ಬಿದ್ದುಹೋದ ಗೊಮ್ಮಟ.

ಆಕಾಶ ನೋಡಲು

ದುರ್ಬೀನು ಬೇಕೇ?

ಬಟ್ಟಬಯಲಲ್ಲಿ

ಖಾಲಿಖಾಲಿಯಾಗುವದೆಂದರೆ ಹೀಗೇನೆ..

*

ಅಪ್ಪನ ಕೈಯಿಂದ

ಗಾಳಿಯಲ್ಲಿ ಹಾರಿದ ಮಗು.

ಮತ್ತೇ ಹಿಡೀತಾನೆ ಬಿಡು

ಅಂತ ನಗುತ್ತಿತ್ತು.

ಗಾಳಿಗೂ ವಿಚಿತ್ರ

ಮುಲಾಜು.

ಸತ್ತು ಹೋಗುವಷ್ಟು

ನಂಬುವದೆಂದರೆ ಹೀಗೇನೆ..

*

ತೇಲಿಸಿದಳು ಕುಂತಿ

ತೆಪ್ಪದಲಿ ಮಗನನ್ನು;

ತುಪ್ಪದ ಭಾಂಡಲೆಯಲ್ಲಿ

ನೂರೊಂದು ಮಕ್ಕಳು.

ಹುಟ್ಟಿಸಿದ ದೇವರು

ಹುಲ್ಲು ಮೇಯುತ್ತಿದ್ದ.

ಕತ್ತಲೂ

ಕೂಡ ಮಿಂಚುವದೆಂದರೆ ಹೀಗೇನೆ..

*

ಸುತ್ತಲೂ ಕರ್ಕಶ

ಆದರೂ ಕೇಳಿಸದು.

ಎಲ್ಲೋ ನಿಡುಸುಯ್ಯುತ್ತಿರುವ

ಲಬ್ ಡಬ್ಅವಳದೇನಾ?

ಆದಷ್ಟು ಬೇಗ

ವೈದ್ಯರನ್ನು ಕಾಣಬೇಕು.

ಶಬ್ದದೊಳಗೆ

ನಿಶ್ಶಬ್ದವಾಗುವದೆಂದರೆ ಹೀಗೇನೆ..

*

ಸಡಗರದಿ ನಾರಿಯರು

ಹಡೆಯುವಾಗ ಸೂಲಗಿತ್ತಿ;

ಅಡವಿಯೊಳಗೆ ಹೆರುವ

ಮೃಗವ ಹಿಡಿದು

ರಕ್ಷಿಸುವರ್ಯಾರು?

ಯಾರು?

ಗೊತ್ತಿಲ್ಲ.

ಆದರೆ

ದಾಸರು ನೆನಪಾಗುವದೆಂದರೆ ಹೀಗೇನೆ…

ಕಲಿಗಣನಾಥ ಗುಡದೂರಿಗೆ ಬಹುಮಾನ

`ವಿಕ್ರಾಂತ ಕರ್ನಾಟಕ’ ವಾರಪತ್ರಿಕೆಯ ಸಂಸ್ಥಾಪಕ ರವಿ ಕೃಷ್ಣಾ ರೆಡ್ಡಿ ನಡೆಸಿದ ಗಾಂಧಿಜಯಂತಿ ಕಥಾ ಸ್ಪರ್ಧೆ ಫಲಿತಾಂಶ ಇಲ್ಲಿದೆ.

ಗಾಂಧೀಜಿಯ ಮೌಲ್ಯವನ್ನಾಧರಿಸಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ, ಅದೇ ಸಮಯದಲ್ಲಿ ಕಲಾತ್ಮಕವಾಗಿರುವ, ಸಮಕಾಲೀನ ವ್ಯವಸ್ಥೆಯನ್ನು ಭವಿಷ್ಯಕ್ಕೂ ಕಟ್ಟಿಕೊಡುವ ಕತೆಗಳಿಗೆ ಬಂದ ಸ್ಪಂದನ ಇದು.

ಡಾ.ನಟರಾಜ್ ಹುಳಿಯಾರ್, ಕೃಷ್ಣ ಮಾಸಡಿ ಮತ್ತು ಅನಿತಾ ಹುಳಿಯಾರ್ ತೀರ್ಪುಗಾರರಾಗಿದ್ದರು.

ಬಹುಮಾನ ವಿಜೇತರು:

ಮೊದಲ ಬಹುಮಾನ ರೂ. 6000, ಬಹುಮಾನಿತ ಕತೆ- ಗಾಂಧಿಕಟ್ಟೆ- ಕತೆಗಾರರು- ಕಲಿಗಣನಾಥ ಗುಡದೂರು

ಎರಡನೆಯ ಬಹುಮಾನ ರೂ. 4000, ಬಹುಮಾನಿತ ಕತೆ- ವಂದೇಮಾತರಂ- ಕತೆಗಾರರು- ಭಾಗೀರಥಿ ಹೆಗಡೆ

ಮೂರನೆಯ ಬಹುಮಾನ ರೂ. 3000, ಬಹುಮಾನಿತ ಕತೆ- ಗಾಂಧಿ ವೇಷ- ಕತೆಗಾರರು- ವಿಶ್ವನಾಥ ಪಾಟೀಲ ಗೋನಾಳ

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೊ. ಕಿ.ರಂ. ನಾಗರಾಜ ಅವರು ಬಹುಮಾನ ವಿತರಣೆ ಮಾಡಿದರು. ವಿಕ್ರಾಂತ ಕರ್ನಾಟಕ ಪತ್ರಿಕೆಯ ರವೀಂದ್ರ ರೇಷ್ಮೆ, ಬಸವರಾಜು ಹಾಗೂ ಬಹುಮಾನವನ್ನು ಪ್ರಾಯೋಜಿಸಿದ ರವಿ ಕೃಷ್ಣಾ ರೆಡ್ಡಿಯವರು ಉಪಸ್ಥಿತರಿದ್ದರು

ಪರಿಸರ ದಿನಕ್ಕಾಗಿ..

%d bloggers like this: