ಕೂಚಿಪುಡಿ ಕಮ್ಮಟ

ಗೆಳೆಯರಿಬ್ಬರಿಗೆ ಶುಭ ಹಾರೈಕೆಗಳು..

ಪ್ರಜಾವಾಣಿಯ ಉಪ ಸಂಪಾದಕ ರಮೇಶ್ ಸೋಗೆಮನೆ ಹಾಗೂ ಈ ಟಿ ವಿ ಯ ಸುದ್ದಿವಾಚಕಿ ಬಿ ಎಸ್ ದಾಕ್ಷಾಯಿಣಿ ಮದುವೆಯಾಗುತ್ತಿದ್ದಾರೆ.

ರಮೇಶ್ ಸೋಗೆಮನೆ ಕಾಡುವ ಕವಿತೆಗಳನ್ನೂ, ಚುಟುಕು ಕಥೆಯಲ್ಲೇ ಆತ್ಮವನ್ನು ಅಲುಗಾಡಿಸಿದವನು. ಈ ಟಿ ವಿ ಯಲ್ಲಿದ್ದು ಅದಕ್ಕೆ ಒಳ್ಳೆ ಕೊಡುಗೆ ಕೊಟ್ಟು ಈಗ ಪ್ರಜಾವಾಣಿಗೆ ಬಂದಿದ್ದಾನೆ. ಈಗಾಗಲೇ ಪ್ರಜಾವಾಣಿ, ಮಯೂರ ಅಷ್ಟೇ ಅಲ್ಲದೆ ಸಂಚಯದಲ್ಲಿ ಈತನ ಕಲೆಗಾರಿಕೆಯೂ ಕಾಡುವಂತಿದೆ.

ಇನ್ನು ದಾಕ್ಷಾಯಿಣಿ. ಸ ಉಷಾ ಅವರ ಗರಡಿಯಲ್ಲಿ ಪಳಗಿದಾಕೆ. ಕನ್ನಡ ಸಾಹಿತ್ಯ ಓದಿ, ಅದನ್ನು ಸ್ಪಷ್ಟವಾಗಿ ಅರಗಿಸಿಕೊಂಡು, ನೇರ ನೋಟ ಹೊಂದಿರುವ ಹುಡುಗಿ ಈ ಇಬ್ಬರೂ ಸಾಣೆಹಳ್ಳಿಯಲ್ಲಿ ಅಲ್ಲಿನ ಗುರುಗಳ ಮುಂದಾಳತ್ವದಲ್ಲಿ ಮದುವೆಯಾಗುತ್ತಿದ್ದಾರೆ. ಇಬ್ಬರಿಗೂ ಮನಪೂರ್ವಕ ಹಾರೈಕೆಗಳು.

ಶುಭ ಹಾರೈಕೆಗೆ ಸಂಪರ್ಕ : 94812 01401

-ಜಿ ಎನ್ ಮೋಹನ್

ಮೀಡಿಯಾ ಫೋಟೋ ಪಾಲಿಸಿ: ಸಿಕ್ಕಾಪಟ್ಟೆ ಪ್ರತಿಕ್ರಿಯೆ

ಭೇಟಿ ಕೊಡಿ: ಮೀಡಿಯಾ ಮೈಂಡ್

ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ..

ಸಿ ಬಸವಲಿಂಗಯ್ಯ ‘ಮಲೆಗಲ್ಲಿ ಮದುಮಗಳು’ ನಾಟಕವನ್ನೂ ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ. ಯಾಕೆ ಇಂತಹ ಪ್ರಯೋಗ ಅವರಿಗೆ ಬೇಕಾಯಿತು? ನಮ್ಮ ಇನ್ನೊಬ್ಬ ಪ್ರಮುಖ ನಿರ್ದೇಶಕಿ ಎನ್ ಮಂಗಳ ಇಲ್ಲಿ ಬಸೂ ಜೊತೆ ಮಾತಿಗಿಳಿದಿದ್ದಾರೆ.
ಕರ್ನಾಟಕದ ರಂಗಾಯಣ  ರೆಪರ್ಟರಿ ಬಗ್ಗೆ ಹಲವಾರು ವಾದ ವಿವಾದಗಳಿರುವಂತಹ ಸಂದರ್ಭದಲ್ಲಿ, ರಂಗಾಯಣ ಸಂಕಷ್ಟದಲ್ಲಿರುವಾಗ, ರಂಗಾಸಕ್ತರೆಲ್ಲರೂ ತಮ್ಮ ಬಾಯಲ್ಲಿ ರಂಗಾಯಣವನ್ನು ಎಲೆ ಅಡಿಕೆಯಂತೆ ಜಗಿಯುತ್ತಿರುವಾಗ, ರಂಗಾಯಣದ ಮಾಜಿ ನಿರ್ದೇಶಕರಾಗಿದ್ದ
ಸಿ. ಬಸವಲಿಂಗಯ್ಯನವರು ‘ಮಲೆಗಳಲ್ಲಿ ಮದುಮಗಳು’ ಮೂಲಕ ರಂಗಾಯಣದ ಕಲಾವಿದರ ಜೊತೆ ದೊಡ್ಡ ಸಾಹಸಕ್ಕೆ ಕೈ ಹಾಕಿ, ಯಶಸ್ವಿಯಾಗಿ , ಆಡುವ ಬಾಯಿಗಳಿಗೆ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.
ಅವರನ್ನು ಈ ಸಂದರ್ಭದಲ್ಲಿ ಭೇಟಿಯಾದಾಗ ಹಂಚಿಕೊಂಡ ಮಾತುಗಳು ಇವು...
ರಂಗಾಯಣಕ್ಕೀಗ 21 ರ ಹರೆಯ….
ನಾನು NSD  ಮುಗಿಸಿ ವಾಪಸ್ಸು ಬೆಂಗಳೂರಿಗೆ ಬಂದಾಗಲೇ ನಿರ್ಧರಿಸಿದ್ದೆ. ರಂಗಮಂದಿರಗಳು ಇಲ್ಲದ ಜಾಗದಲ್ಲಿ ಹೋಗಿ ಕೆಲಸ ಮಾಡಬೇಕು ಅಂತ. ಓದಿ
ಬೆಳೆದಿದ್ದೆಲ್ಲ ಬೆಂಗಳೂರೇ ಆದರೂ ಬೆಂಗಳೂರಿನ ಆಚೆ ಕೆಲಸ ಮಾಡಲು ಪ್ರಾರಂಭಿಸಿದೆ.  ರಂಗಭೂಮಿಯಲ್ಲಿ ರಂಗಮಂದಿರಗಳೇ ಎಲ್ಲ ಅಲ್ಲ. ನಾವು alternative ಆದ  theatre space ಹುಡುಕಬೇಕು ಅಂತ ಅನ್ನಿಸೋದು.
ಈ ಸಂಬಂಧಿಯಾಗಿ ಮೇಷ್ಟ್ರು ತುಂಬ ಪ್ರಯೋಗಗಳನ್ನು ಮಾಡಿದಾರೆ. ಭೂಪಾಲ್ ಆಗಬಹುದು, ರಂಗಾಯಣ ಆಗಬಹುದು. ಇಲ್ಲಿ ಮೈಸೂರಿನಲ್ಲಿ ಇಷ್ಟು ದೊಡ್ಡ ಕಲಾಮಂದಿರ ಇದ್ದರೂ ಕಾರಂತರು ಅದರ ಹಿತ್ತಿಲಲ್ಲಿ ರಂಗಾಯಣವನ್ನು ಪ್ರಾರಂಭಿಸಿದರು. ವನರಂಗ ಸೃಷ್ಟಿಯಾಯಿತು. proscenium theatre ಗಳಿಗೆ ಹಿತ್ತಿಲು ಇರೋದಿಲ್ಲ . ಆದರೆ ರಂಗಭೂಮಿಯ ಕೆಲಸಕ್ಕೆ ಹಿತ್ತಿಲು ಬೇಕು ಅಂತ ನನಗನ್ನಿಸಿತು. ನಾನೇನು proscenium ವಿರೋಧಿ ಅಲ್ಲ.  ಆದರೆ ಬೇರೆ ಬೇರೆ ರೀತಿಯ  ಆವರಣ ಹುಡುಕುವುದು ನನ್ನ text ನ ಜರೂರಿ ಕೂಡ ಅಂತ ನನಗನ್ನಿಸತ್ತೆ.. ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ. ಯಾಕಂದರೆ ನಮ್ಮ ಮನೆಗಳ ಹಿತ್ತಿಲಿಗೇ ಚೋಮನಂತಹವರನ್ನು ಬಿಟ್ಟುಕೊಳ್ಳದೆ ಇರುವವರು ನಾವು. ಇನ್ನು ಕಲಾಕ್ಷೇತ್ರದ ಮೆಟ್ಟಿಲು ಹೇಗೆ ಹತ್ತಿಸೋಕೆ ಸಾಧ್ಯ? ಅದು ನನಗೆ ಅಣಕ ಅಂತ ಅನ್ನಿಸತ್ತೆ. space ಅನ್ನುವುದು ಕೇವಲ ನನ್ನ ಆಯ್ಕೆ ಅಲ್ಲ. ಅದು ನನ್ನ intepretation ಕೂಡ.  ನಾನು ರಂಗಾಯಣದಲ್ಲಿ ಕುಸುಮಬಾಲೆ ಮಾಡಿದ ಮೇಲೆ ನನಗೆ ನನ್ನ ವಿಚಾರಗಳಲ್ಲಿ ಇನ್ನೂ  clarity ಸಿಗ್ತಾ ಹೋಯಿತು.
ಇನ್ನು  ರಂಗಾಯಣದ ವಿಷಯಕ್ಕೆ ಬರೋದಾದರೆ, ರಂಗಾಯಣ ನನಗೆ ಹೊಸದಲ್ಲ. ಇಲ್ಲೆ ಇದ್ದವನು, ದುಡಿದವನು ಮತ್ತು ನಿದರ್ೆಶಕನಾಗಿ 6 ವರ್ಷ ಕಾಲ ನಿಭಾಯಿಸಿದವನು. ನನಗೆ ಇಲ್ಲಿನ ಕಲಾವಿದರ body and mind ಎರಡರ ಪರಿಚಯ ಚೆನ್ನಾಗಿ ಗೊತ್ತು. ಅಲ್ಲದೆ ರಂಗಾಯಣ ಈ ಹಿಂದೆ ಬಹಳಷ್ಟು ಪ್ರಯೋಗಗಳಗೆ ಒಡ್ಡಿಕೊಂಡಿದೆ.  ಅತ್ಯಂತ ಕ್ಲಿಷ್ಟವೆನಿಸಿದ ಅಡಿಗರ ಭೂಮಿಗೀತ, ಕನ್ನಡಕ್ಕೆ ಅನುವಾದಿಸಿ ಅಂತ ಅನ್ನಿಸಿಕೊಂಡ ದೇವನೂರರ ಕುಸುಮಬಾಲೆ, ಕಿಂದರಿಜೋಗಿ, ಮೂಕನಮಕ್ಕಳು ಎಂಬ ನೀಳ್ಗವಿತೆ, ತಿರುಕನ ಕನಸು, ಬೇಳೆ ಕಾಳಿನ ಪ್ರಸಂಗ ಎಂಬ ಮುಖವಾಡ ಪ್ರದರ್ಶನ- ಹೀಗೆ ಎಷ್ಟೊಂದು. ಇವು ಯಾವುದೂ ನಾಟಕವಲ್ಲ.  ಆದರೆ ರಂಗಾಯಣ ಅದನ್ನು ನಾಟಕವಾಗಿ ಮಾಡಿತು. ಅಲ್ಲದೆ ರಂಗಾಯಣ ನಾಟಕಗಳನ್ನೂ ಮಾಡಿದೆ. ನಾಟಕ ಮಾಡೋದು ರಂಗಾಯಣದ ಧರ್ಮ. ಜೊತೆಗೆ ನಾಟಾಕೇತರ ಸಾಂಸ್ಕೃತಿಕ ವಿವರಗಳನ್ನು ವಿಸ್ತರಿಸುವುದು ಇದೆಯಲ್ಲ, ಅದು ಕೂಡ ನಮ್ಮೆಲ್ಲರ ಸಾಂಸ್ಕೃತಿಕ ಜವಾಬ್ಡಾರಿ. ರಂಗಭೂಮಿಯನ್ನು ಕಟ್ಟಬೇಕು. ನಾಟಕವನ್ನಲ್ಲ.  ಹೊಸದನ್ನು ಕಟ್ಟಬೇಕು ಮತ್ತು ಅದನ್ನು ಮುರಿಯಬೇಕು. ಇದು
ಮೇಷ್ಟೃ ನಮ್ಮೆಲ್ಲರಿಗೂ ಕಲಿಸಿದ ಪಾಠ.  ಈ ರೀತಿಯ ಹೊಸ ದರ್ಶನಕ್ಕೆ ಹಾತೊರೆಯುವುದು ಮತ್ತು ಅದಕ್ಕಾಗಿ ಕೆಲಸ ಮಾಡುವುದು ಇಲ್ಲಿನ ಕಲಾವಿದರಿಗೆ
ಸಾಧ್ಯ. ಆ ಕಾರಣಕ್ಕೆ ಇಂಥ ಸಾಹಸವನ್ನು ನಾನು ಇವರ ಜೊತೆ ಮಾಡುವುದಕ್ಕೆ ನಿರ್ಧರಿಸಿದೆ.
ಇನ್ನು ಕೃತಿಯ ಬಗ್ಗೆ ಹೇಳೋದಾದರೆ ಮಲೆಗಳಲ್ಲಿ ಮದುಮಗಳು ನಮ್ಮ ಕಾಲದ ಅದ್ಭುತ ಕೃತಿ.  ಈ ಕೃತಿಗೂ ಚೌಕಟ್ಟು ಅನ್ನೋದು ಇಲ್ಲ. ಇದರ ಗುರಿಯೇ ಪಯಣ. ಇದು ಎಲ್ಲೂ ಪ್ರಾರಂಭಗೊಳ್ಳುವುದಿಲ್ಲ, ಮೊದಲಿಲ್ಲ, ತುದಿಯಿಲ್ಲ, ಎಲ್ಲೂ ನಿಲ್ಲುವುದೂ ಇಲ್ಲ, ಕೊನೆ ಮುಟ್ಟುವುದೂ ಇಲ್ಲ. ನನಗೆ ಗೊತ್ತಿತ್ತು, ಇದು ತುಂಬಾ ಸಂಕೀರ್ಣವಾದ ಚೌಕಟ್ಟಿಗೆ ಸಿಲುಕದ ವಸ್ತು ಅಂತ. ತುಂಬಾ ಕಷ್ಟ ಅನ್ನುವುದರ ಅರಿವೂ ಇತ್ತು. ಆದರೂ 15 ಜನ ನಟ ನಟಿಯರಿರುವ ರಂಗಾಯಣದ ಕಲಾವಿದರು ಶ್ರೇಷ್ಟರೆಂಬ ಬಲವಾದ ನಂಬಿಕೆಯಿತ್ತು. 150 ಪಾತ್ರಗಳಿರುವ ಕೃತಿಗೆ 60 ಜನ ಹೊಸ ಹುಡುಗರನ್ನು ಆರಿಸಿಕೊಂಡೆ. ದ್ವಾರಕೀ ವಿನ್ಯಾಸದ ಕೆಲಸ ಮಾಡೋಕೆ ಶುರು ಮಾಡಿದರು. ಚೀನಿ ಅಂತೂ ದೆವ್ವ ಬಂದವರ ಹಾಗೆ ಕೆಲಸ ಮಾಡಿದ್ದಾರೆ. ನಾರಾಯಣಸ್ವಾಮಿ script ಮೇಲೆ ಕೆಲಸ ಮಾಡೋಕೆ ಪ್ರಾರಂಭಿಸಿದರು. ಹೊಸ 60 ಜನ ಹುಡುಗರಿಗೆ 15 ಜನ ಹಿರಿಯ ಕಲಾವಿದರು marshal trainers ತರಹ ನಿಂತರು.  ನಾನು ಈ ನಾಟಕಕ್ಕೆ blocking ಅಂತ ಏನೂ ಮಾಡಲಿಲ್ಲ.  script ಇತ್ತು.  space ಇತ್ತು. ಎಲ್ಲಿ ಬೇಕಾದರೂ ಓಡಾಡಿ ಅಂದೆ. ಗುಂಪುಗಳಲ್ಲಿ 62 ಅಧ್ಯಾಯಗಳನ್ನು  ಅಶುವಿಸ್ತರಣೆ ಮೂಲಕ ನಾಟಕವನ್ನು ಕಟ್ತಾ ಹೋದೆವು. ಹೊಸ ಹುಡುಗರಿಗೆ  theatre orientation ಬೇಕಿತ್ತು.  ಹಿರಿಯ ಕಲಾವಿದರ ಜೊತೆಗೆ
ಹೊಂದುಕೊಳ್ಳುವ ಹಾಗೆ ಅವರನ್ನು ತಯಾರು ಮಾಡಬೇಕಾಗಿತ್ತು. ಆ ಕೆಲಸವನ್ನು ನಾನು ಮಾಡಿದೆ.  ರಂಗಾಯಣದ ಕಲಾವಿದರಿಗೆ ನಿದರ್ೆಶನ ಮಾಡಬೇಕಾದ ಅಗತ್ಯವೇ ಇಲ್ಲ. ಅವರಿಗೆ ಗೊತ್ತು, ನನಗೆ ಏನು ಬೇಕು ಅಂತ. ಅವರು ಮಾಡ್ತಾರೆ. ಅದಕ್ಕೆ ನಾನು ಹೇಳ್ತಿರೋದು ರಂಗಾಯಣಕ್ಕೀಗ 21 ರ ಹರೆಯ ಅಂತ. ಎಲ್ಲರೂ
ರಂಗಾಯಣ ಕಲಾವಿದರ ದೇಹ ನೋಡ್ತಿದಾರೆಯೇ ಹೊರತು ಅವರ ಪ್ರತಿಭೆ, ಭೌದ್ಧಿಕತೆ,ಪ್ರೌಢಿಮೆಗಳ ಬಗ್ಗೆ ಯಾರಿಗೂ ಗಮನವೇ ಇಲ್ಲ. ನಾನಂತು ಅದನ್ನು
ಕಂಡುಕೊಂಡಿದ್ದೇನೆ. ಅದಕ್ಕಾಗಿಯೇ ಈ ದೊಡ್ಡ ಸಾಹಸವನ್ನು ಇವರ ಜೊತೆ ಮಾಡಿದೆ. ಅಲ್ಲದೆ ಕಾ.ತ.ಚಿಕ್ಕಣ್ಣ ಅವರಂತ ಒಳ್ಳೆ ಅಧಿಕಾರಿ ನಮ್ಮ ಜೊತೆ ಇದ್ದಿದ್ದಕ್ಕೆ
ಇದು ಸಾಧ್ಯವಾಯಿತು.
ನನ್ನ ಮುಖ್ಯ ಉದ್ದೇಶ ಒಟ್ಟು ರಂಗಭೂಮಿಯ ಸಿದ್ಧ ಚೌಕಟ್ಟನ್ನು ಎಲ್ಲ ಅರ್ಥಗಳಲ್ಲೂ ಒಡೆಯುವುದಾಗಿತ್ತು. space ಆಗಬಹುದು, ನಾಟಕ ಕೃತಿಯಾಗಬಹುದು, ಸಂಗೀತವಾಗಬಹುದು. frame ಅನ್ನು ಒಡೆಯೋಕೆ ಹೊರಟಿರುವ ನಾನು  pre condition ಆಗಿರುವ mindset ಅನ್ನು ಒಡೀತೀನಿ.  ತಯಾರಿಯ ಸಂಧರ್ಭದಲ್ಲಿ ಎಲ್ಲರೂ ತಮಾಷೆ ಮಾಡ್ತಿದ್ದರು. ನಗ್ತಾ ಇದ್ದರು. 9 ಗಂಟೆ ನಾಟಕ ಯಾರು ನೋಡ್ತಾರೆ? ಬಸು ಮತ್ತು lighting ನವರು ಮಾತ್ರವೇ ಕೊನೇಗೆ ಉಳಿದಿರ್ತಾರೆ ಅಂತ.  ಆದರೆ ಜನ ಎಲ್ಲವನ್ನು ಸುಳ್ಳು ಮಾಡಿಬಿಟ್ಟರು.ಈಗ ಎಲ್ಲರಿಗೂ ಗೊತ್ತು. ಜನ ಹೇಗೆ ನಾಟಕ ನೋಡ್ತಿದಾರೆ ಅಂತ.  ಈ ರೀತಿ ನಾಟಕ ನೋಡೋಕೆ  ಟಿಕೆಟ್ ಗಾಗಿ ಪರದಾಡಿದ್ದು ಎಲ್ಲೂ ಇಲ್ಲ. ಇದೊಂದು ನಿಜವಾಗಿಯೂ ಅಚ್ಚರಿಯ ಸಂಗತಿ. ನಾವೇನೂ ಇಲ್ಲಿ ದೊಡ್ಡ ಪವಾಡ ಮಾಡಿಲ್ಲ. ಆದರೆ ಇಡೀ ತಂಡ ಒಟ್ಟಿಗೇ ಕೆಲಸ ಮಾಡಿ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೆ ಜನ ನೋಡೇ ನೋಡ್ತಾರೆ ಅಷ್ಟೆ.
ಎನ್ನುತ್ತಾ ಬಸು ಮಾತಾಡುತ್ತಲೆ ಇದ್ದರು. ಅವರೊಳಗಿನ ಮಾತು ಇನ್ನೂ ಮುಗಿದಿರಲಿಲ್ಲ.

ನಾನೂ ನನ್ನ ಕನಸೂ..ಸಂವಾದ ನೋಟ

ಸಿದ್ದು ಬರೆದ ‘ಸೋತ ಗುಲಾಮನ ಸಾಲುಗಳು’

-ಸಿದ್ದು ದೇವರಮನಿ

ಅವರು ತಮ್ಮ ಕಣ್ಣ ಇಶಾರೆಯಲ್ಲಿ

ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು

ಹಾಗೆ ಅಳಿಸಬಲ್ಲರೂ ಕೂಡ..

ಹೌದು,

ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ.

ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು

ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?.

ಅವರು ತಮ್ಮಗಳ ಹೆಸರು ಬರೆಯಲು ಆಶಿಸಿದರು

ಉಸಿರ ಉತ್ಪತ್ತಿಸುವ ನನ್ನದೆಯ ಕವಾಟುವಿನ

ನೂರು ನರಗಳು ಅವರೆಸರ ಆಕಾರ ಹೊತ್ತಿದ್ದವು.

ಮನಸ ಪುಟ ಓದದ ಅನಕ್ಷರಸ್ತರು

ನಾನು ಬರೆದ ಹಾಳೆ ಅಕ್ಷರಗಳನಷ್ಟೇ ಓದಿದರು.

ಅವರೆಲ್ಲರ ಕಷ್ಟ ನನಗಷ್ಟೇ ಕೊಡಬೇಕು ಎ೦ಬ

ಕರಾರಿನೊ೦ದಿಗೆ ನಾನು ಧರೆಗಿಳಿದಿದ್ದೆ.

ಕಾಲದೊ೦ದಿಗೆ ತಿರುತಿರುಗಿ ಇಲ್ಲಿ ಎಲ್ಲ ತಿರುಗ ಮುರುಗ

ನಾವೆಲ್ಲ ಒ೦ದೇ ಅನ್ನುವ೦ತಿಲ್ಲ.. ಒಟ್ಟಾಗಿ ಕೂತು ಉಣ್ಣುವ೦ತಿಲ್ಲ..

ಮನಸು ರಸ್ತೆಗೆ ಬಿದ್ದ ಹದಿನಾರಣೆ ಚೂರು,ಚಿಲ್ಲರೆ.

ಹಗೆತನ ಸಾಧಿಸ ಹೊರಟವರು ಅದೆಷ್ಟು ಜನ್ಮದ

ಇ೦ಡೆ೦ಟ್ ಪಡೆದಿದ್ದಾರೋ ?

ಅವರು ತಮ್ಮ ಅಜ್ಞಾನವನೆಲ್ಲಾ ಕೂಡಿಸಿ

ಮದುವೆಯ ಮೊದಲ ಉಡುಗೊರೆಯಾಗಿ ಕಳಿಸಿ ಕೊಟ್ಟರು..

ಹ..ಹ..

ನಗುವುದಲ್ಲ, ಇಲ್ಲಿ ಉಸಿರಾಡುವುದು ನಿಷಿದ್ಧ.

ಅವರು ಹೂ ಮನಸ್ಸಿನ ನನ್ನ ಚಿತ್ರಕ್ಕೆ

ಬಲವ೦ತದ ಶವಪೆಟ್ಟಿಗೆ ತಯಾರಿಸಿ

ಕೊನೆಯ ಮೊಳೆ ಹೊಡೆದಿದ್ದಾರೆ.

ದೊಡ್ಡವರಾದ೦ತೆ ಬೇರೆ ಬೇರೆ ಅನ್ನುವುದಾದರೆ

ನಾನು ಸಣ್ಣವನಾಗಿ ಸಾಯಬಯಸುತ್ತೇನೆ.

ಅವರಲ್ಲಿ ಒ೦ದು ವಿನ೦ತಿ:

ಕೊನೆಗೂ

ಒ೦ದು ದಿವ್ಯ ನಗುವಿನ ಖಾಯ೦ ಗೆಳೆತನ ನಿಮ್ಮದಾಗಲಿ…

ಈ ಧರೆಯ ಬಹು ಅಪರೂಪದ ವಸ್ತು “ಪ್ರೀತಿ” ಗಾದರೂ ಸೋತುಬಿಡಿ.

ಅದಕ್ಕಿ೦ತ ಹೆಚ್ಚಾಗಿ

ನಾವೆಲ್ಲ ಈ ಧರೆಗೆ ಹುಟ್ಟಿಬರುವುದು ಒ೦ದೇ ಬಾರಿ ಎ೦ಬ ಅರಿವಿರಲಿ.

ಇಲ್ಲಿದೆ ಮಮತಾ, ಪುಷ್ಪಮಾಲಾ ಸಾಹಸ

ಚಿತ್ರ ಸಮೂಹದ ಆಶ್ರಯದಲ್ಲಿ ಒಂದು ಭಿನ್ನ ಪ್ರಯೋಗ ನಡೆಯಿತು. ಮಮತಾ ಜಿ ಸಾಗರ ಹಾಗೂ ಎನ್ ಪುಷ್ಪಮಾಲ ಅವರು ನಂಜನಗೂಡು ತಿರುಮಲಾಂಬ ಅವರ ವ್ಯಕ್ತಿತ್ವ ಹಾಗೂ ಬರಹಗಳನ್ನು ಭಿನ್ನವಾಗಿ ಕಟ್ಟಿಕೊಟ್ಟರು. ಮಾತು, ಕವಿತೆ ಒಂದಿಷ್ಟು ಅಭಿನಯ ಸೇರಿದ್ದ ಈ ಪ್ರದರ್ಶನಕ್ಕೆ ಕಿಕ್ಕಿರಿದ ಜನ.

ಅದರ ನೋಟ ಇಲ್ಲಿದೆ-

%d bloggers like this: