ಮಾಧ್ಯಮಗಳ ಫೋಟೋ ಪಾಲಿಸಿ ಸರಿಯೇ?

ಒಂದು ಚರ್ಚೆ ಆರಂಭವಾಗಿದೆ.

ಭೇಟಿ ಕೊಡಿ- ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ..

ಮೊನ್ನೆ ರಂಗಾಯಣದ ‘ದುಂಡುಕಣ’ದಲ್ಲಿ ಕುಳಿತಿದ್ದೆ. ಪಕ್ಕ ಹಿಂದಿನ ದಿನ ರಾತ್ರಿಯೆಲ್ಲಾ ಯಕ್ಷಗಾನ ಆಟ ನೋಡಲು ನಿದ್ದೆಗೆಟ್ಟಿದ್ದ, ಈ ದಿನ ಇನ್ನೊಂದು ರಾತ್ರಿ ನಿದ್ದೆಗೆಡಲು ತಯಾರಾಗುತ್ತಿದ್ದ ಮಂಗಳೂರಿನ ದೇವು ಹನೇಹಳ್ಳಿ, ಹಿಂದೆ ತಿರುಗಿದರೆ ಚಾಮರಾಜನಗರದಲ್ಲಿ ಬ್ಯಾಂಕ್ ಆಫೀಸರ್ ಆಗಿದ್ದು ಇಡೀ ದಿನ ಅಂಕಿ ಸಂಖ್ಯೆಗಳ ಲೋಕದಲ್ಲಿ ಕಳೆದು ಹೋಗುವ ಗಿರಿಧರ ಕಾರ್ಕಳ, ಇನ್ನಷ್ಟು ಕತ್ತು ತಿರುಗಿಸಿದರೆ ತುಮಕೂರು, ಗುಲ್ಬರ್ಗ, ಶಿರಸಿ, ಶಿವಮೊಗ್ಗ… ಹೀಗೆ ಕರ್ನಾಟಕದ ಭೂಪಟವೇ ಅಲ್ಲಿ ಬಿಡಿಸಿಕೊಂಡಿತ್ತು.

ಗೆಳತಿ ಕೆ.ಸುಶೀಲಾ ಜೊತೆ ಫೋನ್ ನಲ್ಲಿ ಮಾತನಾಡುವಾಗ ಆಕೆ ಉತ್ಸಾಹದಿಂದ ಕೊಟ್ಟ ಪಟ್ಟಿ ನೋಡಿ ಇನ್ನಷ್ಟು ಸುಸ್ತಾದೆ. ದೇವನೂರು ಮಹಾದೇವ, ಹಂಪನಾ, ಜಿಎಚ್ ನಾಯಕ್, ಜಿ ರಾಮಕೃಷ್ಣ, ಕಿ ರಂ ನಾಗರಾಜ್,  ಕೆ ವಿ ನಾರಾಯಣ್, ರಹಮತ್ ತರೀಕೆರೆ, ಕೆ ಮರುಳಸಿದ್ಧಪ್ಪ, ಜಿ ಕೆ ಗೋವಿಂದ ರಾವ್ , ಕ ವೆಂ ರಾಜಗೋಪಾಲ್, ವಿಜಯಮ್ಮ, ನಾಗಾಭರಣ, ಬಿ ಸುರೇಶ, ನಾ ದಾಮೋದರ ಶೆಟ್ಟಿ , ಕಡಿದಾಳು ಶಾಮಣ್ಣ,  ಪ್ರಕಾಶ್ ಕಡಿದಾಳ್ , ರಾಜೇಶ್ವರಿ ತೇಜಸ್ವಿ, ಎನ್ ಪುಷ್ಪಮಾಲ,  ಕಾಶೀನಾಥ ಅಂಬಲಗೆ.. ಹೀಗೆ ‘ಹೂ ಈಸ್ ಹೂ’ ಪಟ್ಟಿಯನ್ನೇ ಮುಂದಿಡುತ್ತಾ ಹೋದಳು. ಅಷ್ಟೇ ಅಲ್ಲ, ರಾಜಕಾರಣಿ ಮಹಿಮಾ ಪಟೇಲ್, ಮುರುಘಾ ಮಠದ ಸ್ವಾಮೀಜಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು.

ಪೂರ್ಣ ಓದಿಗೆ ಭೇಟಿ ಕೊಡಿ-ಮೀಡಿಯಾ ಮೈಂಡ್

ಆಕಾಶರಾಜ ತಂಬಾಕು ಉಗುಳುತ್ತಿದ್ದ

ಸುನಂದಾ ಬೆಳಗಾವಕರ ಅವರ ‘ಕಜ್ಜಾಯ’ ಓದಿ ಒಂದಷ್ಟು..

ರಮೇಶ್ ಗುರುರಾಜ ರಾವ್

ಏಕೋ ಈ ಬಾರಿ, ಬರೆಯುವುದು ಆತ್ಮೀಯ ಎನಿಸಿತ್ತು.. ಬಹುಷಃ ನಾನು ಕಂಡ ಸಂದರ್ಭಗಳು ಕಣ್ಣ ಮುಂದೆ ಬಂದದ್ದಕ್ಕೋ ಏನೋ

ನನ್ನ ತಾಯಿಯ ಕಾಕಾನ ಮನೆಯಲ್ಲಿ (ಧಾರವಾಡ, ಹುಬ್ಬಳ್ಳಿ ಹಾಗು ಶಿಸುವಿನಹಾಳ).

ಸುನಂದಾ ಬೆಳಗಾಂವಕರ  ಅವರು ಬರೆದ ಖಾದ್ಯಗಳ ಸವಿ ಉಂಡ ನೆನಪಾಯಿತು. ನನ್ನ ನೆನಪಿನಂಗಳಕ್ಕೆ ನಾನೇ ಮತ್ತೊಮ್ಮೆ ದಾಳಿ ಇಡುವಂತಾಯಿತು

ಕಜ್ಜಾಯದಷ್ಟೇ ಸಿಹಿ ಇಲ್ಲಿನ ನೆನಪುಗಳು… ಮನುಷ್ಯ ಮನುಷ್ಯ ಸಂಬಂಧಗಳು, ಸಣ್ಣ ಸಣ್ಣ ಮಾತುಗಳು, ಸಣ್ಣ ಸಣ್ಣವು ಎನಿಸಬಹುದಾದ ಆದರೆ ವಿಪರೀತ ಕೊನೆ ಕೊಡುವ ಘಟನೆಗಳು, ಧಾರವಾಡದ ಹವೆ, ಅಲ್ಲಿನ ತಿಂಡಿಗಳು, ತಿಂಡಿ ಮಾಡುವ ವಿಧಾನಗಳು, ಹೀಗೆ ಎಲ್ಲಾ ಕಜ್ಜಾಯ, ಕಜ್ಜಾಯ… ಅಲ್ಲಲ್ಲಿ ಕಜ್ಜಾಯ ಸೀದುಹೋಗಿ ಆ ಕಪ್ಪಿನ ಕಹಿ ಇರುವಂತೆ ನೋವಿನ ಎಳೆಗಳು ಫಟಕ್ಕನೆ ಕಾಣಿಸಿಕೊಳ್ಳುತ್ತವೆ. ಇಲ್ಲಿ ಲೇಖಕಿಯ ಉದ್ದೇಶ ಬರೀ ನೆನಪಿನಂಗಳದಲ್ಲಿ ಕುಂಟಾಬಿಲ್ಲೆ ಆಡುವುದು ಮಾತ್ರವಲ್ಲ ಎನ್ನುವುದು ಬಹಳ ಸ್ಪಷ್ಟ.

ಮಣ್ಣು, ಸ್ಮೃತಿ, ಕೆಂಪು ಡಬ್ಬಿ, ಹೀಗೆ ಸಾಮಾನ್ಯವಾದ ಕಜ್ಜಾಯದಂತೆ ಕಂಡರೂ ಒಂದೊಂದೂ ಡೈನಮೈಟ್.

ಎಲ್ಲಿ ನೋಡಿದರೂ, ಸಾಲು ಸಾಲಲ್ಲಿ, ಪದ ಪದಗಳಲ್ಲಿ ಧಾರವಾಡ, ಧಾರವಾಡ…

ನೀವು ಮಳೆಗಾಲದಲ್ಲಿ ಧಾರವಾಡ ನೋಡಬೇಕು… ಇದು ನನಗೆ ನೆನಪಿದ್ದಂತೆ ನಾನು ಕಂಡ ಮೊದಲ ಧಾರವಾಡದ ಚಿತ್ರ…. ಕೆಂಪು ಮಣ್ಣು ಕೆಸರು, ಜಿಟಿ ಜಿಟಿ ಮಳೆ, ಸಣ್ಣ ಸಣ್ಣ ಕಪ್ಪೆ ಮರಿಗಳು, ಇವೆಲ್ಲದರ ಮಧ್ಯೆ ಸಾಧನಕೇರಿ, ಬಾಬುಸಿಂಗ್ ಫೇಡ, ಹೀಗೆ ಹಲವಾರು ನೆನಪುಗಳು… ಬೆಂಗಳೂರಿನವನಾದ ನನ್ನ ಮನಸ್ಸಿನಲ್ಲೇ ಇಷ್ಟು ಅಲೆಗಳು ಎದ್ದಿರಬೇಕಾದರೆ, ಇನ್ನು ಅಲ್ಲಿಯವರೆ ಆದ ಸುನಂದಾ ಬೆಳಗಾಂವ್ಕರ್ ಅವರಿಗೆ ಸುನಾಮಿಯ ಅಲೆಯಂತೆ ಧಾರವಾಡ ನೆನಪಾಗಿದ್ದು ಅಚ್ಚರಿಯೇನಲ್ಲ. ಮೊದಲ ನಾಲ್ಕು ಸಾಲುಗಳಲ್ಲಿ ಅವರ ಮನಸ್ಸಿನ ಚಿತ್ರ ದಾಖಲಾಗುತ್ತದೆ.. “ಪಿಚ್ ಪಿಚ್ ಕೆಸರು ತುಳಿಯುತ್ತ ಕಾಲೇಜಿಗೆ ಹೊರಟಿದ್ದೆ… ಆಕಾಶರಾಜ ತಂಬಾಕು ಉಗುಳುತ್ತಿದ್ದ. ಕೆಂಪು ಕೆಂಪು ನೀರು ಹರಿಯುತ್ತಿತ್ತು. ಶ್ರಾವಣದ ಜಿಟಿಜಿಟಿ ಮಳೆ, ಧಾರವಾಡ ಮಣ್ಣು, ಜಡವಾದ ಚಪ್ಪಲಿಗಳು…….” . ಈ ತಂಬಾಕು ಉಗುಳುವ ಪರಿಕಲ್ಪನೆ ಅದ್ಭುತ.

More

%d bloggers like this: