ಇಂದು ಬೆಂಗಳೂರಿನಲ್ಲಿ ಜರುಗಿದ ಸನ್ ಫೀಸ್ಟ್ ಓಟದ ನೋಟ ಇಲ್ಲಿದೆ. ಯಾವುದೇ ಸಮಯದಲ್ಲಿ ಮೀಡಿಯಾ ಕ್ಯಾಮೆರಾಗಳ ಕೆಲಸ ಹೇಗಿರುತ್ತದೆ ಎಂಬ ಚಿತ್ರಣ ಬೇಕೇ? ಎಂದಿನಂತೆ ನಮ್ಮ ವಿಶಿಷ್ಟ ಕಣ್ಣಿನ ಕ್ಯಾಮೆರಾ ಮ್ಯಾನ್ ಕೆ ಶಿವು ತೆಗೆದಿರುವ ಫಾತೋಗಳನ್ನು ನೋಡಲು ಭೇಟಿ ಕೊಡಿ-
ಜೋಗಿ ಬರೆವ ರೂಪ ರೇಖೆ: ವಿಶ್ವಾಮಿತ್ರ ಮೇನಕೆ ಡಾನ್ಸ್ ನೋಡೋದು ಏನಕೆ?
23 ಮೇ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಜೋಗಿಮನೆ
ವಿಶ್ವಾಮಿತ್ರಮೇನಕೆಡಾನ್ಸ್ ನೋಡೋದುಏನಕೆ?ಆಸ್ಕ್ ಮಿಸ್ಟರ್ವೈಯೆನ್ಕೆ!
ಕಾಸು ಕುಡಿಕೆ: ‘ಸತ್ಯಂ ವಧ, ಅಧರ್ಮಂ ಚರ. . . . . . .’
23 ಮೇ 2010 3 ಟಿಪ್ಪಣಿಗಳು
in ಕಾಸು ಕುಡಿಕೆ
ಕಾಸು ಕುಡಿಕೆ -೧೧
ಜಯದೇವಪ್ರಸಾದ ಮೊಳೆಯಾರ
In modern business, it is not the crook who is to be feared the most,
It is the honest man who doesn’t know what he is doing- William Wordsworth
ಆಧುನಿಕ ಉದ್ದಿಮೆಯಲ್ಲಿ ಅತಿ ಹೆಚ್ಚು ಹೆದರಬೇಕಾದ್ದು ಠಕ್ಕರಿಗಲ್ಲ,
ತಾನೇನು ಮಾಡುತ್ತಿದ್ದೇನೆಂಬ ಅರಿವಿಲ್ಲದ ಪ್ರಾಮಾಣಿಕನಿಗೆ- ವಿಲಿಯಮ್ ವರ್ಡ್ಸ್ವರ್ಥ್.
ಕಳೆದೆರಡು ವಾರಗಳಿಂದ ಅನಾವರಣಗೊಳ್ಳುತ್ತಿರುವ ಟೋಪಿ ವಿದ್ಯೆಯ ಎರಡು ಮುಖಗಳ ಪರಿಚಯ ಮಾಡಿಕೊಂಡ ಹಲವರಿಗೆ ಮೂರನೆಯ ಮುಖದ ಬಗ್ಗೆ ಅದಮ್ಯ ಕುತೂಹಲ. ನನಗೆ ಬಂದ ದೂರವಾಣಿ ಕರೆಗಳಲ್ಲಿ ಹೆಚ್ಚಿನವರು ಈ ಮೂರನೆಯ ಮುಖ ಯಾವುದೆಂಬ ಪ್ರಶ್ನೆಯನ್ನು ಕೇಳದಿರಲಿಲ್ಲ. ಆದರೆ ನಾನು ಯಾರಿಗೂ ಸತ್ಯವನ್ನು ಹೇಳದೆ ಬಾಯಿಗೆ ಬಂದ ಸುಳ್ಳು ಹೇಳಿದ್ದೇನೆ. ಯಾಕೆಂದರೆ ಮಾರ್ಕೆಟ್ನಲ್ಲಿ ಸುಳ್ಳು ಹೇಳಿ ದುಡ್ಡು ಮಾಡುವುದೇ ಈ ವಿದ್ಯೆಯ ಮೂರನೆಯ ಮುಖ!
ಆಂಧ್ರದ ಭೀಮಾವರಂ ಸಮೀಪದ ಒಂದು ಪುಟ್ಟ ಹಳ್ಳಿಯಿಂದ ಬಂದ ರಾಮಲಿಂಗ ರಾಜು ಅದ್ಯಾವ ಘಳಿಗೆಯಲ್ಲಿ ತನ್ನ ಸಾಫ್ಟ್ವೇರ್ ಕಂಪೆನಿಯನ್ನು ಹುಟ್ಟುಹಾಕಿದನೋ ದೇವರೇ ಬಲ್ಲ; ಅದಕ್ಕೆ ‘ಸತ್ಯಂ’ ಎಂದು ನಾಮಕರಣ ಕೂಡಾ ಮಾಡಿದ. ಆ ಕಂಪೆನಿಯು ದಿನದಿಂದ ದಿನಕ್ಕೆ ಬೆಳೆದುಕೊಂಡು ಹೋಗಿ ನಾಲ್ಕನೇ ಅತಿ ದೊಡ್ಡ ಹಾಗೂ ಭಾರತದ ಅತಿ ಪ್ರತಿಷ್ಟಿತ ಸಾಫ್ಟ್ವೇರ್ ಕಂಪೆನಿಗಳಲ್ಲೊಂದಾಗಿ ವಿಜೃಂಭಿಸತೊಡಗಿತು. ಶೇರು ಬಜಾರಿನಲ್ಲೂ ಉತ್ತಮ ಬೇಡಿಕೆಯೊಂದಿಗೆ ಬಿಕರಿಯಾಗುತ್ತಿತ್ತು. ಎಲ್ಲಾ ಫಂಡ್ ಹೌಸ್ ಹಾಗೂ ಹೂಡಿಕೆ-ಧುರೀಣರ ಖಾತೆಯಲ್ಲಿ ಸತ್ಯಂ ಶೇರು ಇದ್ದೇ ಇರುತ್ತಿತ್ತು. ಎಲ್ಲಾ ಟಿ.ವಿಯ ಅನಲಿಸ್ಟ್ಗಳೂ ಕೂಡಾ ಅದನ್ನು ಕೊಳ್ಳಲು ರೆಕಮಂಡ್ ಮಾಡುತ್ತಲೇ ಇದ್ದರು. ಆಂಧ್ರದ ಮಂತ್ರಿ ಮಂಡಲಕ್ಕೂ ಅತಿ ನಿಕಟವರ್ತಿಯಾಗಿದ್ದ ರಾಜು, ಒಬ್ಬ ಉತ್ತಮ ಬಿಸಿನೆಸ್ಮನ್ ಎಂದು ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದ.
ವಿಷಯ ಹಾಗಿರುವಾಗ ಒಂದು ಫೈನ್ ಡೇ; to be precise, ಜನವರಿ ೭, ೧೯೯೯ ರ ಬೆಳಗ್ಗೆ ಕಂಪೆನಿಯ ಚೇರ್ಮನ್ ರಾಮಲಿಂಗ ರಾಜು “ನಾನು ತಪ್ಪಿತಸ್ಥ, ತಪ್ಪು ಎಸಗಿದ್ದೇನೆ, ಈ ಕಂಪೆನಿಯ ಆದಾಯ, ಲಾಭದ ಅಂಕಿ ಸಂಖ್ಯೆಗಳೆಲ್ಲಾ ಬರೇ ಸುಳ್ಳು, ಸುಳ್ಳಿನ ಮೇಲೆ ಸುಳ್ಳು ಪೋಣಿಸುತ್ತಾ ಈ ಸಂಸ್ಥೆಯನ್ನು ನಡೆಸುತ್ತಾ ಬಂದಿದ್ದೇನೆ. ಈ ಕಂಪೆನಿಯ ಆಡಳಿತ ಎಂದರೆ ನನಗೆ ಹುಲಿಸವಾರಿ ಮಾಡಿದಂತೆ ಅನುಭವವಾಗಿದೆ. ಕೆಳಕ್ಕೆ ಇಳಿಯುವಂತಿಲ್ಲ. ಇಳಿದರೆ ಹುಲಿ ತಿಂದೇ ಹಾಕೀತು ಎಂಬ ಭಯ.” ಎಂದೆಲ್ಲ ತನ್ನ ಸುಳ್ಳು ಲೆಕ್ಕವನ್ನು ಸವಿವರವಾಗಿ ೪ ಪುಟದ ಒಂದು ಪತ್ರದಲ್ಲಿ ವಿವರಿಸಿ, ತನ್ನ ಸಹಿ ಹಾಕಿ ಕಂಪೆನಿಯ ಬೋರ್ಡಿಗೆ ಸಬ್ಮಿಟ್ ಮಾಡಿ ಸಾರ್ವಜನಿಕವಾಗಿಯೂ ಪ್ರತಿಯನ್ನು ರಿಲೀಸ್ ಮಾಡುತ್ತಾನೆ. “ಈಗ ಇದಕ್ಕೆಲ್ಲ ಇತಿಶ್ರೀ ಹಾಡಬಯಸುತ್ತೇನೆ. ತಪ್ಪೊಪ್ಪಿಕೊಂಡು ನಾನು ಈಗ ಕಾನೂನಿನ ಕ್ರಮಗಳನ್ನು ಎದುರಿಸಲು ತಯಾರಾಗಿದ್ದೇನೆ” ಎಂದು ಹೇಳಿ ಪೋಲೀಸರಿಗೆ ಶರಣಾದ ರಾಜು.
ಇತ್ತೀಚಿನ ಟಿಪ್ಪಣಿಗಳು