ಚಿತ್ರ: ಸನಾದಿ ಅಪ್ಪಣ್ಣ . ಗೀತೆರಚನೆ: ಚಿ. ಉದಯಶಂಕರ್.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ : ಎಸ್. ಜಾನಕಿ.
ಕರೆದರೂ ಕೇಳದೆ……
ಸುಂದರನೇ ಏಕೆ … ನನ್ನಲ್ಲೀ ಈ ಮೌನಾ…
ಕರೆದರೂ ಕೇಳದೆ
ಸುಂದರನೇ ಏಕೆ … ನನ್ನಲ್ಲೀ ಈ ಮೌನಾ… ||ಪ||
ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೇ…. ಸೇರದೇ…..
ಏಕೆ … ನನ್ನಲ್ಲೀ ಈ ಮೌನಾ… ಕರೆದರೂ ಕೇಳದೆ…… ||೧||
ಈ ನನ್ನ ಅಂದ ಚೆಂದ ನೀ ಕಾಣಲೆಂದೆ
ಈ ನನ್ನ ಗಾನ ಧ್ಯಾನ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರ ಬಂದಾಗ
ಕಲ್ಲೆದೆ ನಿನ್ನದೇ… ಏಕೆ ನನ್ನಲ್ಲಿ … ಈ ಮೌನಾ
ಕರೆದರೂ ಕೇಳದೆ……
ಪರಶಿವನೆ ಏಕೆ … ನನ್ನಲ್ಲೀ ಈ ಮೌನಾ…
ಕರೆದರೂ ಕೇಳದೆ…… ||೨||
ಮಿಂ ಮಿಂ ಧ್ವನಿ ಮೃದಂಗ ಕೇಳದೆ
ಕೊರಳ ನಾಗ ನಲಿದಾಡಲು ನೋಡದೆ
ಮಾಘ ಮಾಮರಿ ಗರಗರ ಕಾಣದೆ
ಶರ ಖೂಲ ಡಮರುಗ ಮೆರೆದಾಡಿ
ಶಿವ ಚಂಚಂಚಂ ತತೋಂ
ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ. ಅವಳ ಮೇಲೆ ಊರಿನ ಸಾಹುಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಿನಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ, ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವುದು ಅವನ ಪ್ರೀತಿಯ ಕೆಲಸ. ಈ ಕಾರಣದಿಂದಲೇ ಊರ ತುಂಬಾ ಆತ ಸನಾದಿ ಅಪ್ಪಣ್ಣ ಎಂದೇ ಹೆಸರಾಗಿರುತ್ತಾನೆ. ಅವನ ಸನಾದಿಯ ನಿನಾದಕ್ಕೆ ತಲೆದೂಗದವರೇ ಇರುವುದಿಲ್ಲ. ಹೀಗಿದ್ದಾಗಲೇ, ಅಪ್ಪಣ್ಣನ ಸನಾದಿಯ ನಿನಾದದ ಜತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ ತನ್ನ ಮನೆಯಲ್ಲಿ ಹೇಳುತ್ತಾಳೆ. ಈ ಮಾತು ಕೇಳಿಸಿಕೊಂಡ ಸಾಹುಕಾರ, ಸೀದಾ ಅಪ್ಪಣ್ಣನ ಬಳಿ ಬಂದು-‘ನೋಡಪ್ಪಾ, ನಾನು ಎಲ್ಲಾ ರೀತಿಯ ಸಂಗೀತ ಕೇಳಿದ್ದೀನಿ. ಆದ್ರೆ ನಿನ್ನ ಕಹಳೆ ಸಂಗೀತ ಕೇಳಿಲ್ಲ. ನಮ್ಮ ಬಸಂತಿ ಗೊತ್ತು ತಾನೆ? ಅವಳ ನಾಟ್ಯಕ್ಕೆ ನೀನು ಸನಾದಿ ನುಡಿಸು. ಆಗ ನಿನ್ನ ಖ್ಯಾತಿ ಕೀರ್ತಿ ಶಿಖರ ತಲುಪುತ್ತೆ. ಅದು ಬಿಟ್ಟು ಯಾವಾಗಲೂ ದೇವಸ್ಥಾನದಲ್ಲಿ ನುಡಿಸ್ತಾ ಇದ್ರೆ ಏನು ಪ್ರಯೋಜನ?’ ಎನ್ನುತ್ತಾನೆ.
ಇತ್ತೀಚಿನ ಟಿಪ್ಪಣಿಗಳು