ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ..

ಇದು ಪೆನ್ನು, ಆದರೆ ಪೆನ್ನಲ್ಲ, ಇದು ಬರೆಯುತ್ತೆ, ಆದರೂ ಪೆನ್ನಲ್ಲ, ರೀಫಿಲ್ ಇದೆ, ಉಹುಂ ಪೆನ್ನಲ್ಲ. ನೋಡಲು ಆಕಾರ ಅದೇ, ಜೋಬಲ್ಲಿ ಸಿಕ್ಕಿಸಿಕೊಳ್ಳಬಹುದು ಉಹುಂ, ಉಹುಂ ಖಂಡಿತಾ ಇದು ಪೆನ್ನಲ್ಲ,  ಹಾಗಾದರೆ ನಾನು ಯಾರು? ಅಂತ  ಒಗಟೇನಾದರೂ ಕೇಳಿದರೆ ನಾನು ಕೊಡುವ ಉತ್ತರ  ’ಸ್ಪೈ ಕ್ಯಾಮರಾ!!’

ಇದು ಟೋಪಿ ಆದರೆ ಟೋಪಿಯಲ್ಲ. ಜೀನ್ಸ್ ಬಟ್ಟೆಯಿಂದ ಮಾಡಿದೆ, ಆದರೂ ಟೋಪಿಯಲ್ಲ, ತಲೆಯ ಮೇಲೆ ಏರಿಸಿಕೊಳ್ಳಬಹುದು  ಉಹುಂ ಟೋಪಿಯಲ್ಲ,  ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು ಆದರೂ ಟೋಪಿಯಲ್ಲ. ಹಾಗಾದರೆ ನಾನು ಯಾರು. ‘ಸ್ಪೈಕ್ಯಾಮರಾ!!’

ಇದು ಶರ್ಟ್ ನ ಗುಂಡಿ, ಆದರೆ ಗುಂಡಿಯಲ್ಲ. ಹೊಲಿಗೆ ಹಾರಬಹುದು, ಆದರೂ ಗುಂಡಿಯಲ್ಲ. ಇದು ಬೆಲ್ಟ್, ಆದರೆ ಬೆಲ್ಟ್ ಅಲ್ಲ. ಖಂಡಿತಾ ಪ್ಯಾಂಟಿಗೇರಿಸಬಹುದು ಆದರೂ ಬೆಲ್ಟ್ ಅಲ್ಲ, ಇದು ಟೈ, ಆದರೆ ಟೈ ಅಲ್ಲ. ಠಾಕುಠೀಕಾಗಿ   ಕುತ್ತಿಗೆಗೆ ಬಿಗಿದುಕೊಳ್ಳಬಹುದು, ಆದರೂ ಟೈ ಅಲ್ಲ. ಇದು ವಾಚ್, ಉಹುಂ ವಾಚಲ್ಲ. ಸಮಯ ತೋರಿಸುತ್ತದೆ ಆದರೂ ವಾಚಲ್ಲ, ಕೈಗೆ ಕಟ್ಟಿಕೊಳ್ಳಬಹುದು  ಆದರೂ ವಾಚಲ್ಲ ಹಾಗಾದರೆ ನಾನು ಯಾರು ಎಂಬ ಎಲ್ಲಾ ಪ್ರಶ್ನೆಗೂ ಒಂದೇ ಉತ್ತರ – ‘ಸ್ಪೈ ಕ್ಯಾಮರಾ’…

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

ಹಾಡಲು ಹೊಸ ಹಾಡು ಸಿಗುತ್ತಿಲ್ಲ..

ಇನ್ನಷ್ಟು ಮತ್ತಷ್ಟು ಫೋಟೋಗಳು- ಓದು ಬಜಾರ್ ನಲ್ಲಿ

ವಸುಧೇಂದ್ರ ಲೋಕ ಛಂದ

ಛಂದ ಪ್ರಕಾಶನದ ಪುಸ್ತಕಗಳೂ ಛಂದ, ಅದರ ಕಾರ್ಯಕ್ರಮಗಳೂ ಛಂದ. ಒಂದು ಭಿನ್ನ ಲೋಕಕ್ಕೆ ಕರೆದೊಯ್ಯುವ, ಇದ್ದಷ್ಟೂ ಹೊತ್ತು ಒಂದು ಆತ್ಮೀಯತೆಯ ಸ್ಪರ್ಶ ನೀಡುವ ವಸುಧೇಂದ್ರರ ಆ ಲೋಕವೇ ಚನ್ನ.

ಆ ಚಂದದ ಲೋಕದ ಕಾರ್ಯಕ್ರಮವನ್ನು ಹರಿಪ್ರಸಾದ್ ನಾಡಿಗ್ ಕಂಡದ್ದು ಹೀಗೆ.

ಇನ್ನಷ್ಟು ಮತ್ತಷ್ಟು ಫೋಟೋಗಳು- ಓದು ಬಜಾರ್ ನಲ್ಲಿ

ಜಯಂತ್ ಮಾಯಾಲೋಕದಲ್ಲಿ

ತಟ್ಟು ಚಪ್ಪಾಳೆ...ಯ ಬೊಳುವಾರು

ಗಣ್ಯ ಮಕ್ಕಳು

ಸುಧನ್ವ ಉವಾಚ..

%d bloggers like this: