ಸಮುದಾಯ ಉತ್ಸವ ಹೀಗಿತ್ತು..

ಸಮುದಾಯ ರಂಗ ತಂಡಕ್ಕೆ ಈಗ ೩೫ ವಸಂತಗಳನ್ನು ಕಂಡಿದೆ. ಅದರ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಂಡಿತ್ತು.

ನ್ಯಾಷನಲ್ ಕಾಲೇಜಿನ ಹಿರಿಯ ಉಪನ್ಯಾಸಕರೂ, ಒಳ್ಳೆಯ ಛಾಯಾಗ್ರಾಹಕರೂ ಆದ ಎಚ್ ವಿ ವೇಣುಗೋಪಾಲ್ ಅವರು ಕಂಡಂತೆ ಉತ್ಸವದ ಮೊದಲನೆಯ ದಿನ ಹೀಗಿತ್ತು.

ನವಕರ್ನಾಟಕ ಪುಸ್ತಕಗಳು

ಜೋಗಿ ಬರೆವ ‘ರೂಪ ರೇಖೆ’:ಡಿ. ಆರ್.ಎಂಬ ಹೊಳೆದ ತಾರೆ

ಡಿ. ಆರ್.: ಉಳಿದ ಆಕಾಶದಲ್ಲಿ ಹೊಳೆದ ತಾರೆ

-ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ವೈದಿಕ ಕಲ್ಪನೆ ಮತ್ತು ಆಚರಣೆಯ ವಿಸ್ತರಣೆ ಎಂದು ಡಿ ಆರ್ ನಾಗರಾಜ್ ಹೇಳಿದರಂತೆ. ಈ ವಿಚಾರವಾಗಿ ಅವರಿಗೂ ಅನಂತಮೂರ್ತಿಯವರಿಗೂ ಜಗಳವಾಯಿತಂತೆ. ಕೊನೆಗೆ ಅನಂತಮೂರ್ತಿಯವರು ನಿನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ ಎಂದು ಹೊರಟು ಹೋದರಂತೆ.

-ಶೂದ್ರ ಮತ್ತು ಡಿಆರ್ ಮಾತಾಡುತ್ತಿದ್ದಾಗ ಮಾತು ವಿಕೋಪಕ್ಕೆ ತಿರುಗಿ, ಶೂದ್ರನನ್ನು ಡಿಆರ್ ಲಂಕೇಶರ ನೆರಳು ಎಂದು ಕರೆದರಂತೆ. ಶೂದ್ರ ಸಿಟ್ಟಾಗಿ ಡಿಆರ್ ಮೇಲೆ ಕೈ ಮಾಡೋದಕ್ಕೇ ಹೋದರಂತೆ. ಕೊನೆಗೆ ಆರ್‌ಜಿ ಹಳ್ಳಿ ನಾಗರಾಜ್ ಬಂದು ಜಗಳ ಬಿಡಿಸಿದರಂತೆ.

-ಉಡುಪಿ ಸಾಹಿತ್ಯ ಸಮ್ಮೇಳನದಿಂದ ವಾಪಸ್ಸು ಬರುವಾಗ ಡಿ ಆರ್ ಮತ್ತು ಕೀರಂ ಸಿಕ್ಕಾಪಟ್ಟೆ ಬೈದಾಡಿಕೊಂಡರಂತೆ. ಕೊನೆಗೆ ಡಿಆರ್ ನಿಮ್ಮಂಥವರ ಜೊತೆ ಬರೋಲ್ಲ ಅಂತ ಬಸ್ಸಲ್ಲಿ ವಾಪಸ್ಸು ಬಂದರಂತೆ.

ಹೀಗೆ ಸಾಹಿತ್ಯಾಸಕ್ತರ ಬಾಯಲ್ಲಿ ಜಗಳಗಂಟ’ ಮತ್ತು ಬುದ್ಧಿವಂತ’ ಎಂದು ಕರೆಸಿಕೊಳ್ಳುತ್ತಿದ್ದ ಡಿ ಆರ್ ನಾಗರಾಜ್ ಮಟ್ಟಿಗೆ ಅವರೆಡು ವಿಶೇಷಣಗಳೂ ನಿಜವೇ. ಅವರೊಂದಿಗೆ ಮಾತಾಡುತ್ತಾ ಕುಳಿತರೆ, ಸಾಹಿತ್ಯ ಜಗತ್ತಿನಲ್ಲಿ ಒಂದು ಸುತ್ತು ಬಂದಂತಾಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ನಾವು ಕಾಣದ ಸತ್ಯಗಳನ್ನು ಅವರು, ಪರಮ ಸತ್ಯವೆಂಬಂತೆ ಹೇಳುತ್ತಿದ್ದರು. ಒಮ್ಮೊಮ್ಮೆ ಅವರು ಹೇಳುವುದು ಸತ್ಯವಲ್ಲ ಎಂದು ಅರ್ಥವಾಗುತ್ತಿದ್ದರೂ, ಅದನ್ನು ನಿರಾಕರಿಸುವುದಕ್ಕೆ ನಮ್ಮಲ್ಲಿ ಮಾತುಗಳೇ ಇರುತ್ತಿರಲಿಲ್ಲ. ಅಪೂರ್ವ ನೆನಪಿನ ಶಕ್ತಿ ಮತ್ತು ಅಸಾಮಾನ್ಯ ತರ್ಕಬದ್ಧತೆಯಲ್ಲಿ ಎಷ್ಟೋ ಸಲ ನಮ್ಮ ನಂಬಿಕೆಗಳೆಲ್ಲ ಕೊಚ್ಚಿಹೋಗುತ್ತಿದ್ದವು.

ಡಿ ಆರ್ ದಾರಿತಪ್ಪಿಸುತ್ತಿದ್ದರು ಎಂಬುದು ಅನೇಕರ ಆಕ್ಷೇಪ. ಅದನ್ನು ನೇರವಾಗಿ ಅವರ ಬಳಿಯೇ ಪ್ರಸ್ತಾಪ ಮಾಡಿದಾಗ ಅವರೆಂದಿದ್ದರು: ನಾನು ಮತ್ತೊಂದು ದಾರಿಯನ್ನು ತೋರಿಸುತ್ತಿದ್ದೇನೆ ಅಷ್ಟೇ. ನಡೆದ ದಾರಿಯಲ್ಲೇ ನಡೆಯುವುದು ನನ್ನ ಜಾಯಮಾನ ಅಲ್ಲ. ಅಡಿಗರ ಮೂಲಕ ಮಹಾಶಯರು’ ಕವನ ಸಂಕಲನದ ಬಗ್ಗೆ ಅವರು ಬರೆದಿದ್ದನ್ನು ಓದಿ ನಮಗೆಲ್ಲ ದಿಗ್ರ್ಭಮೆ. ಡಿ ಆರ್ ಅಡಿಗರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

More

ಡೈಲಿ ‘ಕ್ಲಿಕ್’

ನಿಮ್ಮನ್ನು ಕಾಡುವ, ನಿಮ್ಮ ನೋಟವನ್ನು ಬೇಡುವ, ನೋಡಿದ ಹಲ ದಿನಗಳ ನಂತರವೂ ನಿಮ್ಮ ಬೆನ್ನಟ್ಟಿ ಬರುವ, ಫೋಟೋ ಎಂದರೆ ಹೀಗಿರಬೇಕು ಎನ್ನುವಂತೆ ಮಾಡುವ ಚಿತ್ರಗಳವು. ನಿಮ್ಮ ಬಳಿಯೂ ಅಂತಹ ಕಾವ್ಯವಿದ್ದರೆ ‘ಅವಧಿ’ಗೆ ಕಳಿಸಿಕೊಡಿ. ಎಲ್ಲರೂ ನೋಡಲಿ ಬಿಡಿ

ಕಡಲ ಗಾನ / ವೀಣಾ ನರಸಸೆಟ್ಟಿ ಸಂಗ್ರಹ

%d bloggers like this: