ಕಾಸು ಕುಡಿಕೆ -8.
“What has destroyed every previous civilization has been the tendency to the
unequal distribution of wealth and power” -Henry George.
ಮೊದಲಿನ ಪ್ರತಿಯೊಂದು ನಾಗರಿಕತೆಯನ್ನೂ ನಾಶ ಪಡಿಸಿದ್ದು ಯಾವುದೆಂದರೆ
ಸಂಪತ್ತು ಮತ್ತು ಬಲದ ಅಸಮಾನ ಹಂಚೋಣದ ಪ್ರವೃತ್ತಿ.- ಹೆನ್ರಿ ಜೋರ್ಜ್.
‘ಕಾಸು ಕುಡಿಕೆ’ಯ ಮೂರನೇ ಎಪಿಸೋಡಿನಲ್ಲಿ ನನ್ನೊಡನೆ ಕುಳಿತು ಮಸಾಲೆ ದೋಸೆ ತಿಂದು ಕಾಪಿ ಕುಡಿದು, ತದನಂತರ ಬಿರಬಿರನೆ ಹೊರಟೇಹೋದ ‘ಬಾಂಡ್ ಫಂಡ್ ವ್ಯಾಮೋಹ’ದ ಗುರುಗುಂಟಿರಾಯರು ಆಮೇಲೆ ನನಗೆ ಸಿಗಲೇ ಇಲ್ಲ! ನಾನೂ ಕೂಡಾ ಆಮೇಲೆ ಶೇರು, ಚಿನ್ನ, ಜಿಲೇಬಿ, ಇತ್ಯಾದಿ ಪ್ರಸಂಗಗಳಲ್ಲಿ ಮುಳುಗಿಹೋಗಿದ್ದೆ. ಆದರೂ ‘ನಿಗದಿತ ಆದಾಯ (Fixed Income)’ ಹೂಡಿಕೆಯ ಬಗ್ಗೆ ಅಗಾಗ್ಗೆ ಯೋಚನೆ ತಲೆಹೊಕ್ಕಾಗಲೆಲ್ಲ ಗುರುಗುಂಟಿರಾಯರು ನೆನಪಾಗದೆ ಇರುತ್ತಿರಲಿಲ್ಲ.
ಮೊನ್ನೆ ಸೋಮವಾರ, ಸಂಜೆಯ ಸುಮಾರು ಆರು ಗಂಟೆ. ಮನೆಯಲ್ಲಿ ಉದಯವಾಣಿ ಓದುತ್ತಾ ಕುಳಿತಿದ್ದೆ. ಅಚಾನಕ್ಕಾಗಿ ಗುರುಗುಂಟಿರಾಯರ ಫೋನ್ ಬಂತು.
After ಉಭಯಕುಶಲೋಪರಿ, ರಾಯರ ದನಿ ಸೀರಿಯಸ್ಸಾಯಿತು. “ನಿಮ್ಮ ಜಿಲೇಬಿ, ಕಾಫಿ ಅಂತೆಲ್ಲ ಕತೆ ಓದ್ಲಿಕ್ಕೆ ಖುಶಿಯಾಗ್ತದೆ ಮಾರಾಯರೇ, ಆದ್ರೆ ನಮ್ಮಂತ ಡಯಾಬಿಟೀಸ್ ಕೇಸುಗಳು ಏನ್ ಮಾಡ್ಬೇಕು? ನಮ್ಮ ಬಗ್ಗೆ ಕೂಡಾ ಸ್ವಲ್ಪ ಬರೀರಿ. ನಮಗೆ ಚಿನ್ನ, ಶೇರು ಎಲ್ಲ ಹಿಡಿಸುವುದಿಲ್ಲ. ಗೊತ್ತಾಯ್ತಾ? ನಾವು ಇರುವ ದುಡ್ಡನ್ನೆಲ್ಲ ಭಕ್ತಿಯಿಂದ ಕೊಂಡು ಹೋಗಿ ಬ್ಯಾಂಕಿನಲ್ಲಿ ಎಫ್ ಡಿ ಮಾಡುವುದು. ಅದರಲ್ಲಿ ಬರುವ ಬಡ್ಡಿಯಲ್ಲಿ ಮಾತ್ರ ನಮಗೆ ಇಂಟರೆಸ್ಟ್. ಗೊತ್ತಾಯ್ತಾ?”
“ಹ್ಹುಂ.. “
“ನಿಮ್ಮ ಸುಡುಗಾಡು ಶೇರು ಮಾರ್ಕೆಟ್ ಎಲ್ಲ ನಮ್ಗೆ ಬೇಡ. ನಾವು ಅದ್ರಲ್ಲಿ ದುಡ್ಡು ಹಾಕುವುದೂ ಬೇಡ. ಮನೆಮಠ ಎಲ್ಲ ಕಳೆದುಕೊಳ್ಳುವುದೂ ಬೇಡ. ನಮ್ಮಂತವರಿಗಾಗಿಯೂ ಬರೀಬೇಕು ನೀವು.” ಅಂತ ತುಸು ಖಾರವಾಗಿಯೇ ಶುರು ಮಾಡಿದರು.
“ಬರ್ಯೋಣ ಅದಕ್ಕೇನಂತೆ. ಏನು ಬರಿಬೇಕು? ನೀವೇ ಹೇಳಿ, ಸಾರ್.” ಅಂದೆ.
“ಬರೀತೀರಾ, ಬರೀರಿ ಹಾಗಿದ್ರೆ. . , ಕಳೆದ ಒಂದು ವರ್ಷದಲ್ಲಿ ಎಲ್ಲದಕ್ಕೂ ಕ್ರಯ ಡಬ್ಬಲ್ ಆಗಿದೆ, ಬಡ್ಡಿ ದರ ಮಾತ್ರ ಸರೀ ಅರ್ಧ ಆಗಿದೆ. ಬಾಂಡ್ ಫಂಡ್ ಒಂದು ನೋಡುವಾ ಅಂತ ಹೊರಟ್ರೆ ‘ಸಧ್ಯಕ್ಕೆ ಬೇಡ’ ಅಂತ ಮೊದ್ಲೇ ನೀವು ಹೆದರಿಸಿ ಇಟ್ಟಿದ್ದೀರಿ. ಹಾಗಾದ್ರೆ, ನಾವೆಲ್ಲ ಬದುಕುವುದು ಹೇಗೆ? ಇದಕ್ಕೆ ನಿಮ್ಮ ‘ಕಾಸು-ಕುಡಿಕೆ’ಯಲ್ಲಿ ಏನಾದ್ರು ಉತ್ತರ ಉಂಟಾ? ಅದೊಂದು ಬರೀರಿ ನೋಡ್ವ.” ಪ್ರಶ್ನೆ ನೇರವಾಗಿ ತಲೆ ಮೇಲೆಯೇ ಏರಿ ಬಂತು.
ಇತ್ತೀಚಿನ ಟಿಪ್ಪಣಿಗಳು