ಆ ದಿನಗಳು
ಅಮ್ಮನ ಮಡಿಲು
ಪಪ್ಪನ ಭುಜ
ಎಲ್ಲ ನೆನಪಾಗುತಿದೆ..
–
ಅದೆಷ್ಟೋ ಚಂಚಲ
ಕ್ಷಣಗಳು ಅಲ್ಲೇ ಉಳಿದುಬಿಟ್ಟವಲ್ಲ
–
ಅಳುತ್ತ ಅಳುತ್ತ
ಅದು ಹೇಗೋ ಮಲಗಿಬಿಡುತ್ತಿದ್ದೆವು
ಏನೇನೋ ಕನವರಿಸುತ್ತ
ಅದೆಲ್ಲೋ ಕಳೆದುಹೋಗುತ್ತಿದ್ದೆವು
–
ತುಸುಹೊತ್ತಿಗೆಲ್ಲ
ಅಮ್ಮನ ಕ್ಷೀಣ ಕೂಗು
ಜೊತೆಗೊಂದು ಕೈತುತ್ತು;
ಮೊಸರು ಅವಲಕ್ಕಿ
–
ಸಂಜೆ ಪಪ್ಪನ
ಬರುವಿಕೆಗಾಗಿ
ಕಾಯುತ್ತಿದ್ದ ಕ್ಷಣ,
ಇವತ್ತೂ ನಂದೇ
ಹಠ ಗೆದ್ದಿತು
ಅಂತನಿಸುವ ಸಂಭ್ರಮಿಸುವ ಕ್ಷಣ
–
ಬಾಲ್ಯದ ದಿನಗಳೇ ಹಾಗೆ
ಎಲ್ಲಿ ಹೋದಿರಿ ನೀವೆಲ್ಲ
–
ಇವತ್ತು
ಇದ್ದ ಹಠವೆಲ್ಲ ನಮ್ಮದಾಗಿದೆ
ಬಿದ್ದ ಕನಸೆಲ್ಲ ನಮ್ಮದಾಗುತ್ತಿದೆ
ನಿಜವಾಗಿಯೂ
ಬೇಕಾಗಿರುವದೇನು ಅಂತ
ಯಾರಿಗೆ ಹೇಳುವದು
ಕನಸುಗಳ ಬೆನ್ನತ್ತಿ
ತುಂಬ ದೂರ ಬಂದಾಗಿದೆ;
ಕಳೆದು ಹೋದಂತಾಗಿದೆ
–
ಛೇ,ಯಾಕೆ ಬೆಳೆದು
ದೊಡ್ಡವರಾಗ್ತಿವೋ..
ಯಾಕೆ..??
ಏಪ್ರಿಲ್ 26, 2010 @ 14:13:53
Nice yar, Almost for many persons, feels the same thing,
KEEP WRITING.
ಏಪ್ರಿಲ್ 25, 2010 @ 11:24:39
fine