ಬರಲೇಬೇಕು ಅಂತಾರೆ ಕಾಯ್ಕಿಣಿ ಫ್ಯಾಮಿಲಿ

ಹೀಗೂ ಉಂಟೇ..?

ನೀವು ದೋಣಿ ಏರಿಯೇ ಸಾಗಬೇಕು, ಕಂದೀಲ ಬೆಳಕಿನಲ್ಲಿಯೇ ಇರಬೇಕು, ಬೆಳದಿಂಗಳು ಚೆಲ್ಲುವಾಗ ಪುಸ್ತಕ ಅನಾವರಣಗೊಳ್ಳಬೇಕು..

ಯಾವುದೋ ಒಂದು ಕಾದಂಬರಿಯ ಮೊದಲ ಸಾಲು ಹೀಗಿರಬಹುದೇನೋ..? ಹಾಗಿತ್ತು ಒಂದು ಕವನ ಸಂಕಲನದ ಬಿಡುಗಡೆ. ದಿನೇಶ್ ಹೊಳ್ಳ ಕಲಾವಿದರು. ಹಾಗಾಗಿ ಇಡೀ ಸಮಾರಂಭಕ್ಕೆ ಆ ಒಂದು ಕಳೆಯ ಸ್ಪರ್ಶ ಇರುವಂತೆ ನೋಡಿಕೊಂಡರು. ಗೆಳೆಯರು, ಹಿತೈಶಿಗಳನ್ನೆಲ್ಲಾ ಒಟ್ಟಾಗಿ ದೋಣಿ ಏರಿಸಿದರು. ಕತ್ತಲಲ್ಲಿ ಹುಟ್ಟು ಹಾಕುತ್ತಾ  ಮರಮೇಡ್ ದ್ವೀಪಕ್ಕೆ ಕರೆದುಕೊಂಡು ಹೋದರು

ಇದನ್ನೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು  ನೋಡಿದ್ದು ನಮ್ಮ ಹಿತೈಷಿ, ಕಥೆಗಾರ್ತಿ ರಾಜಲಕ್ಷ್ಮಿ ಕೋಡಿಬೆಟ್ಟು.

‘ಸುತ್ತಲೂ ಫಲ್ಗುಣಿಯ ಜುಳು ಜುಳು, ನಡುವೆ ಇರುವ ದ್ವೀಪದಲ್ಲಿ ಕಲಾವಿದ ಆಶಯ ಹೊತ್ತ ಪುಸ್ತಕ ಮೊದಲು ಹಾಯ್ ಹೇಳಿದ್ದು ಪಂಜಿನ ಬೆಳಕಿಗೆ ಮತ್ತು ಆಕಾಶದಲ್ಲಿರುವ ಚಂದಮಾಮಿಗೆ’ ಎನ್ನುತ್ತಾರೆ ಕೋಡಿಬೆಟ್ಟು

ಇಂತಹ ನೋಟ ಒದಗಿಸಿದ ಕೋಡಿಬೆಟ್ಟುವಿಗೆ ಥ್ಯಾಂಕ್ಸ್ ಹೇಳುತ್ತಾ ಆ ಬೆಳದಿಂಗಳ ಸಂಭ್ರಮ ನೀವೂ ಸವಿಯಲು ಸ್ವಾಗತ..

ಮಣಿಕಾಂತ್ ಬರೆದಿದ್ದಾರೆ: ನೇಸರ ನೋಡೂ

ಎ ಆರ್ ಮಣಿಕಾಂತ್

ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್.

ಸಂಗೀತ: ಸಿ. ಅಶ್ವತ್ಥ್. ಗಾಯನ:  ಸುಲೋಚನಾ ವೆಂಕಟೇಶ್.

ನೇಸರ ನೋಡು

ನೇ….ಸ….ರ ನೋಡು

ನೇಸರ ನೋಡು, ನೇಸರಾ ನೋಡೂ… ||ಪ||

ಮೂಡಣ ಬೈಲಿಂದ ಮೇಲಕ್ಕೆ ಹಾರಿ

ದೂರದ ಮಲೆಯ ತಲೆಯನೆ ಏರಿ

ನೇಸರ ನೋಡು, ನೇಸರಾ… ನೋಡೂ       ||೧||

ಹೊರಳಿತು ಇರುಳು ಬೆಳಕಿನ ಬೂಡು

ತೆರೆಯಿತು ನೋಡು ಬೆಳಗಿತು ನಾಡು

ನೇಸರ ನೋಡು….ನೇಸರ ನೋಡು

ನೇಸರಾ…ನೋಡು, ನೇಸರ ನೋಡು ||೨||

ಕಾಡುವ ಚಿತ್ರಗೀತೆಗಳ  ಲೆಕ್ಕ ಹಾಕಲು ಕೂತರೆ ತಕ್ಷಣ ಹೊಳೆಯುವ ಹಾಡೇ ‘ನೇಸರ ನೋಡು, ನೇಸರ ನೋಡೂ…’. ಮುಂಜಾನೆಯ ಸೊಬಗನ್ನು, ಸೂರ‍್ಯೋದಯದ ವೈಭವವನ್ನು ತುಂಬ ಪರಿಣಾಮಕಾರಿಯಾಗಿ ಹೇಳಿದ ಈ ಹಾಡು ‘ಕಾಕನ ಕೋಟೆ’ ಚಿತ್ರದ್ದು. ಕನ್ನಡದ ಅತ್ಯುತ್ತಮ ಚಿತ್ರಗೀತೆಗಳಲ್ಲಿ ಒಂದು ಎಂದೇ ಖ್ಯಾತಿ ಪಡೆದಿರುವ ಈ ಹಾಡು ಬರೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್!

ಒಮ್ಮೆ ತುಂಬ ನಿಧಾನವಾಗಿ, ಒಮ್ಮೆ ವೇಗವಾಗಿ, ಇನ್ನೊಮ್ಮೆ ಎಳೆದೆಳೆದು ಬರುವ ರಾಗವಾಗಿ, ಮತ್ತೊಮ್ಮೆ ನೂರೆಂಟು ಅರ್ಥದ ಭಾವವಾಗಿ ಕೇಳಿಬರುವುದು ‘ನೇಸರ ನೋಡೂ…’ ಹಾಡಿನ ವೈಶಿಷ್ಟ್ಯ. ಒಂದು ಸ್ವಾರಸ್ಯವೆಂದರೆ-‘ನೇಸರ ನೋಡು’ ಎಂಬ ಒಂದೇ ಸಾಲು ಪಲ್ಲವಿಯಲ್ಲಿ ನಾಲ್ಕು ಬಾರಿ ಕೇಳಿಸುತ್ತದೆ. ಪ್ರತಿ ಬಾರಿಯೂ ಒಂದೊಂದು ವಿಧದ ದನಿಯಲ್ಲಿ ಕೇಳಿಬರುವುದು ಈ ಪಲ್ಲವಿಯ ಹೆಗ್ಗಳಿಕೆ. ನಿಜ ಹೇಳಬೇಕೆಂದರೆ-ಈಗ ‘ನೇಸರ ನೋಡೂ…’ ಗೀತೆಯಿಲ್ಲದ ಕಾಕನಕೋಟೆ ಸಿನಿಮಾವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸತ್ಯ ಏನೆಂದರೆ, ಈ ಹಾಡಿನ ಬಗ್ಗೆ ಆ ಚಿತ್ರದ ನಿರ್ದೇಶಕರಾದ ಸಿ.ಆರ್. ಸಿಂಹ, ಸಂಗೀತ ನಿರ್ದೇಶಕ ಅಶ್ವತ್ಥ್‌ಗೆ ಅಂಥ ಒಲವಿರಲಿಲ್ಲ! ಇವರು, ಮಾಸ್ತಿಯವರ ಒತ್ತಾಯದ ಮೇರೆಗೆ, ಮನಸ್ಸಿಲ್ಲದ ಮನಸ್ಸಿನಿಂದ ಆ ಹಾಡನ್ನು ಮೊದಲು ನಾಟಕದಲ್ಲಿ, ಆ ಮೇಲೆ ಸಿನಿಮಾದಲ್ಲಿ ಬಳಸಿಕೊಂಡರು. ಇಲ್ಲಿ ಹಾಡು ಹುಟ್ಟಿದ್ದರ ಬಗ್ಗೆ ಕಥೆಯಿಲ್ಲ. ಆದರೆ, ಹಾಡಿಗೆ ಟ್ಯೂನ್ ಸಿಕ್ಕಿತಲ್ಲ? ಅದರ ಹಿಂದಿನ  ಕಥೆಯಿದೆ. ಅದನ್ನು ‘ಕಾಕನಕೋಟೆ’ಯ ನಿರ್ದೇಶಕ ಸಿ.ಆರ್. ಸಿಂಹ ಅವರಿಂದಲೇ ಕೇಳೋಣ ಬನ್ನಿ. ಓವರ್ ಟು ಸಿಂಹ.

***

ಇದು ೭೦ರ ದಶಕದ ಮಾತು. ಆಗ ಬಿ.ವಿ. ಕಾರಂತರು, ರವೀಂದ್ರ ಕಲಾಕ್ಷೇತ್ರದಲ್ಲಿ ಹೊಸ ಹೊಸ ನಾಟಕಗಳನ್ನು ಆಡಿಸುತ್ತಿದ್ದರು. ಸಂದರ್ಶನದ ಮೂಲಕ ಪಾತ್ರಧಾರಿಗಳನ್ನು ಆಯ್ಕೆ ಮಾಡುತ್ತಿದ್ದರು. ಇಂಥ ಸಂದರ್ಶನಕ್ಕೆ ನಾನು ಮತ್ತು ನಟ ಲೋಕೇಶ್ ಹೋಗಿದ್ದೆವು. ಆದರೆ ಅಲ್ಲಿ ನಮಗೆ ಅವಕಾಶ ಸಿಗಲಿಲ್ಲ. ಆಗ-ನಾವ್ಯಾಕೆ ಅಲ್ಲಿ ಇಲ್ಲಿ ಅವಕಾಶಕ್ಕೆ ಕೈ ಚಾಚಬೇಕು? ನಮ್ಮದೇ ಒಂದು ಗುಂಪು ಕಟ್ಟಿಕೊಳ್ಳೋಣ ಎಂದು ಯೋಚಿಸಿದ್ವಿ. ಆಗ ಲೋಕೇಶ್, ಸಿ. ಅಶ್ವತ್ಥ್, ಶ್ರೀನಿವಾಸ ಕಪ್ಪಣ್ಣ ಹಾಗೂ ವೆಂಕಟರಾವ್ ಜತೆಯಾದರು. ‘ನಟರಂಗ’ ಎಂಬ ತಂಡ ಅಸ್ತಿತ್ವಕ್ಕೆ ಬಂತು. ಸಂಗೀತದ ಹೊಣೆ ಅಶ್ವತ್ಥ್‌ಗೆ, ನಟನೆಯ ಜವಾಬ್ದಾರಿ ಲೋಕೇಶ್‌ಗೆ, ರಂಗಸಜ್ಜಿಕೆಯ ಹೊಣೆ ಕಪ್ಪಣ್ಣನಿಗೆ ಎಂದು ಕ್ಷೇತ್ರ ವಿಂಗಡಣೆಯಾಯ್ತು. ನಿರ್ದೇಶನದ ಜವಾಬ್ದಾರಿ ನನ್ನ ಪಾಲಿಗೆ ಬಂತು.

ಸರಿ, ಮೊದಲಿಗೆ ಮಾಸ್ತಿಯವರ ‘ಕಾಕನ ಕೋಟೆ’ ನಾಟಕ ಪ್ರದರ್ಶಿಸಲು ನಿರ್ಧರಿಸಿದೆವು. ಅದಕ್ಕೆ ಮಾಸ್ತಿಯವರಿಂದ ಒಪ್ಪಿಗೆಯನ್ನೂ ಪಡೆದೆವು. ನಮಗಿಂತ ಮೊದಲೇ ‘ರವಿ ಕಲಾವಿದರು’ ಇದೇ ಕಾಕನ ಕೋಟೆ ನಾಟಕವನ್ನು ಆಡಿ ಸಾಕಷ್ಟು  ಜನಪ್ರಿಯಗೊಳಿಸಿದ್ದರು. ನನಗೋ, ಇದೇ ನಾಟಕವನ್ನು ಬೇರೆಯ ಥರಾ ರಂಗದ ಮೇಲೆ ತಂದರೆ ಹೇಗೆ ಎಂಬ ಯೋಚನೆ ಬಂತು.

More

ಥ್ಯಾಂಕ್ಸ್ ಸ್ಮಿತಾ…

ಇದು ಯಾರು ತೆಗೆದ ಫೋಟೋ ? ಎಂದು ನಾವು ಇನ್ನೂ ತಲೆ ಕೆರೆದುಕೊಳ್ಳುತ್ತಿರುವಾಗಲೇ ಸ್ಮಿತಾ ಕಾಯ್ಕಿಣಿ ಉತ್ತರವನ್ನು ಶರವೇಗದಲ್ಲಿ ಕಳಿಸಿದ್ದಾರೆ. ಅಷ್ಟೇ ಅಲ್ಲ, ಇನ್ನಷ್ಟು ಫೋಟೋಗಳನ್ನೂ ಜೊತೆಗಿಟ್ಟಿದ್ದಾರೆ.

ಈ ಫೋಟೋಗಳನ್ನು ತೆಗೆದವರು ವೀಣಾ ನರಸಸೆಟ್ಟಿ ಅವರು. ಥ್ಯಾಂಕ್ಸ್ ಸ್ಮಿತಾ. ನಿಮ್ಮ ಪ್ರೀತಿಗೆ, ಅದರ ರೀತಿಗೆ..

ಸ್ಮಿತಾ ಕಳಿಸಿದ ಇನ್ನಷ್ಟು ಫೋಟೋಗಳು ಇಲ್ಲಿವೆ..

ಗೋಡೆಯ ಮೇಲೊಂದು ಕಾವ್ಯವಿತ್ತು..

ಇಂದು ವಿಶ್ವ ನೃತ್ಯ ದಿನ. ಆ ಕಾರಣಕ್ಕಾಗಿ ಕಾಡುವ ಈ ಚಿತ್ರಗಳು ನಿಮಗಾಗಿ.

ಈ ಫೋಟೋಗಳನ್ನು ಫೇಸ್ ಬುಕ್ ನಿಂದ ಆರಿಸಲಾಗಿದೆ. ಛಾಯಾಗ್ರಾಹಕರ ಹೆಸರು ನೆನಪಿಸಿಕೊಳ್ಳಲು ಪ್ರಯತ್ನಿಸಿದರೂ ಗೊತ್ತಾಗುತ್ತಿಲ್ಲ. ಛಾಯಾಗ್ರಾಹಕರ ಹೆಸರು ಗೊತ್ತಾದ ತಕ್ಷಣ ಕ್ರೆಡಿಟ್ ನಲ್ಲಿ ಸೇರಿಸಲಾಗುವುದು.

ಟೀನಾಗೆ ಮಳೆಯ ಗುಂಗು..

-ಟೀನಾ

Tinazone

ಹೊರಗೆ ಮಳೆ ಸುರಿಯುತ್ತಿರೋವಾಗ ಸುಡುಸುಡು ಕಾಫಿ ಹೀರುತ್ತ ಕಿಟಕಿ ಬದಿಯಲ್ಲಿ ಕುಳಿತುಕೊಂಡು ಮಳೆಹನಿಗಳು ನೆಲಕ್ಕೆ ಬೀಳೋದನ್ನೇ ದಿಟ್ಟಿಸಿಕೊಂಡು ಕೂತಿರುತ್ತಿದ್ದೆ. ಅಮ್ಮ ಅದೇನು ತಂದ್ರಾವಸ್ಥೆಯಲ್ಲಿ ಅಲುಗಾಡದೆ ಕೂತ್ಕೊಂಡಿರ್ತೀಯೋ ಕಾಣೆ!! ಎಂದು ಗೊಣಗುವುದೂ ಕೇಳುತ್ತ ಇರಲಿಲ್ಲ.

ಜೀರುಂಡೆಗಳ ಜಿರಿಜಿರಿ ಸದ್ದು, ಮನೆಯ ಉಣಗಲ್ಲಿನ ಮುಂದೆ ಇದ್ದ ಮಳೆನೀರಿನ ಚರಂಡಿಯಲ್ಲಿ ಹರಿಯುವ ನೀರಿನ ಬುಳುಬುಳು, ತೆಂಗಿನಗರಿಗಳ ಮೇಲೆ ಬೀಳುವ ಮಳೆಹನಿಗಳ ಟಪಟಪ ಗಲಾಟೆ, ಮಿಂಚು-ಗುಡುಗುಗಳ ‘ನೀನಾದಮೇಲೆ ನಾನು’ ಜಗಳ, ದೂರದಲ್ಲೆಲ್ಲೋ ಮನೆಯೊಂದರ ಚಿಮಣಿಯಿಂದ ಸುರುಳಿಯಾಗೇಳುವ ಹೊಗೆ, ಅಡಿಗೆಮನೆಯಿಂದ ತೇಲಿಬರುವ ಸಾರಿನ ಒಗ್ಗರಣೆಯ ಘಮಲು…ಎಲ್ಲವೂ ಸೇರಿಕೊಂಡು ನನ್ನನ್ನ ಒಂದುರೀತಿಯ ವಿಚಿತ್ರ ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದವು. ಆ ಸ್ಥಿತಿಯಲ್ಲಿ ಸುಮ್ಮನೆ ಹೊರಗೆ ದಿಟ್ಟಿಸಿಕೊಂಡು ಕುಳಿತುಕೊಳ್ಳುವುದಲ್ಲದೆ ಇನ್ನೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಚಿತ್ರ: ಬಾಲು ಮಂದರ್ತಿ

ಅಮ್ಮ ಫೋನು ಮಾಡಿದಾಗ ’ಈಗೆಲ್ಲ ಮೊದಲಿನ ಹಾಗೆ ಮಳೆ ಇಲ್ಲ ಕಣೆ’ ಅನ್ನುತ್ತಾರೆ. ಮಲೆನಾಡಿನಲ್ಲಿ ಹೆಚ್ಚೂಕಡಮೆ ವರ್ಷದ ಆರೇಳು ತಿಂಗಳೂ ಮಳೆ ಸುರಿಯುವುದನ್ನೆ ನೋಡುತ್ತ ಕಳೆಯುತ್ತಿದ್ದ ನನಗೆ ಹಳಹಳಿ. ಮಳೆ ಅಂದರೆ… ನಮ್ಮ ಪಾಲಿಗೆ ರೈನ್ ಕೋಟು, ರೈನ್ ಬೂಟು ತೊಟ್ಟು, ಪುಟ್ಟ ಕೊಡೆ ಹಿಡಿದು ಸ್ಲೇಟಿನಲ್ಲಿ ಬರೆದಿದ್ದ ಮನೆಪಾಠ ಅಳಿಸಿಹೋಗದಂತೆ ಎಚ್ಚರವಹಿಸುತ್ತ ಶಾಲೆಗೆ ಹೋಗುವುದು. ಸ್ಲೇಟು ಅಳಿಸಲು ದಾರಿಬದಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಾಂಡ ಚಿವುಟಿದರೆ ನೀರು ಒಸರುವ ‘ನೀರುಗಿಡ’ಗಳನ್ನು ಕಿತ್ತು ಚಿನ್ನದಷ್ಟು ಜೋಪಾನವಾಗಿಟ್ಟುಕೊಳ್ಳುವುದು.

ನಮ್ಮ ಮುಂದೆ ನಡೆದುಹೋಗುವ ಗೆಳತಿಯರ ಯೂನಿಫಾರಂ ಲಂಗಗಳಿಗೆ ಕೆಸರು ಸಿಡಿಸಿ ಕೂಗಾಡುವುದು. ಶಾಲೆ ಬಿಡುವ ವೇಳೆಗೆ ಸರಿಯಾಗಿ ಹೇಳಿಕಳಿಸಿದಂತೆ ಬಂದು ಸುರಿಯುವ ಮಳೆಯನ್ನು ಶಪಿಸುತ್ತ ಇಷ್ಟವಿರದಿದ್ದರೂ ವಿಧಿಯಿಲ್ಲದೆ ರೈನ್ ಕೋಟು, ಬೂಟು ಹಾಕಿಕೊಂಡು ಜಾರಿಬೀಳದ ಹಾಗೆ ಮೆಲ್ಲನೆ ನಡೆಯುವುದು. ಆಗೀಗ ನಮ್ಮ ಅದೃಷ್ಟಕ್ಕೆ ದೊಡ್ಡ ಮಳೆ ಬಂದ ಕೂಡಲೆ ಸ್ಕೂಲಿನಲ್ಲಿ ‘ಮಳೆರಜ’ ಘೋಷಿಸಲಾಗುತ್ತಿತ್ತು. ಆಗಂತೂ ನಮ್ಮ ಸಂತೋಷಕ್ಕೆ ಸೀಮೆಯೇ ಇಲ್ಲ!!! ’ಹೋಓಓಓಓಓಓ’ ಎಂದು ಗಂಟಲು ಹರಿಯುವಂತೆ ಕೂಗುತ್ತ ದೊಡ್ಡಮೈದಾನದ ಕಡೆ ಓಟ. ಮಳೆ ಬಂದಾಗೆಲ್ಲ ಕೆರೆಯಂತೆ ಕೆಂಪುನೀರು ತುಂಬಿಸಿಕೊಳ್ಳುವ ಊರ ಮೈದಾನ ನಮಗೆ ದೊಡ್ಡ ಸಮುದ್ರದಂತೆ ಕಾಣುತ್ತಿತ್ತು. ಊರಮಧ್ಯ ಹರಿಯುವ ಭದ್ರಾನದಿಯಲ್ಲಿ ನೆರೆ ಬಂದರೆ ಕೇಳುವುದೇ ಬೇಡ! ಅಪ್ಪನ ಕೈಹಿಡಿದುಕೊಂಡು ಸೇತುವೆಗೆ ಹೋಗಿ ಭದ್ರೆಯ ರೌದ್ರಾವತಾರವನ್ನ ನೋಡಿಬರುವುದೇ ಒಂದು ದೊಡ್ಡ ಸಾಹಸಯಾನ.

More

ಹೊಸ ಕ್ವಿಜ್ ಬಂದಿದೆ: ಯಾರಿವರು?

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸುರಿಮಳೆಯ ಇರುಳಲ್ಲಿ ಪಡುವಲಕಾಯಿ ತವ್ವೆ

ಅಳಿಯಲಾರದ ನೆನಹು-೬

ಎಚ್.ಎಸ್.ವೆಂಕಟೇಶಮೂರ್ತಿ

ನಮ್ಮ ಪುಟ್ಟಪ್ಪಜ್ಜನ ರಸಿಕತೆಯ ಬಗ್ಗೆ ನಿಮಗೆ ನಾನು ಹೇಳಬೇಕು.ನಮ್ಮ ಅಜ್ಜಿಯ ತಂದೆ ಪುಟ್ಟಪ್ಪಜ್ಜ. ನಾನು ಪುಟ್ಟ ಹುಡುಗನಾಗಿದ್ದಾಗ ಮುಪ್ಪಿನ ಅಂಚಿನಲ್ಲಿ ಇದ್ದ ವ್ಯಕ್ತಿ. ತನ್ನ ಕೋಪ ತಾಪ ಆಟಾಟೋಪಗಳಿಗೆ ಸುತ್ತಲ ಹತ್ತುಹಳ್ಳಿಗೆ ಪ್ರಸಿದ್ಧನಾಗಿದ್ದವನು. ನಾಕೂವರೆ ಅಡಿ ಎತ್ತರದ ಕುಳ್ಳ ಆಸಾಮಿ. ಯೌವನದಲ್ಲಿ ಬಯಲಾಟದಲ್ಲಿ ಹೆಣ್ಣು ಪಾತ್ರ ಮಾಡುತ್ತಿದ್ದನಂತೆ. ಗೆಜ್ಜೆಕಟ್ಟಿಕೊಂಡು ಗಿಲಿ ಗಿಲಿ ಗಿಲಿ ಸದ್ದು ಮಾಡುತ್ತಾ ಪಟ್ಟಪ್ಪ ಅಟ್ಟದ ಮೇಲೆ ಬಂದನೆಂದರೆ ಗಂಡಸರಿರಲಿ ಹೆಂಗಸರೂ ಅವನಿಗೆ ಮೋಹಿತರಾಗುತ್ತಿದ್ದರಂತೆ. ಸ್ತ್ರೀಪಾತ್ರಧಾರಿ ಅಪ್ಪನ ಚೆಲುವನ್ನು ನಮ್ಮ ಭೀಮಜ್ಜಿ ನಮಗೆ ತನ್ಮಯರಾಗಿ ವರ್ಣಿಸುತ್ತಾ ಇದ್ದರು.

ಕೆಲ್ಲೋಡಿನಲ್ಲಿ ಶಾನುಭೋಗರಾಗಿದ್ದಾಗ ಪುಟ್ಟಪ್ಪಜ್ಜ ನಮಗೆ ಅತ್ಯಂತ ಪ್ರಿಯರಾದ ವ್ಯಕ್ತಿಯಾಗಿದ್ದರು. ಕಾರಣ ಅವರು ರಸವತ್ತಾಗಿ ಮಹಾಭಾರತದ ಕಥೆಗಳನ್ನು ನಮಗೆ ಹೇಳುತ್ತಾ ಇದ್ದರು. ಕುಮಾರವ್ಯಾಸ ಭಾರತ ಅವರಿಗೆ ಹೆಚ್ಚು ಕಮ್ಮಿ ಬಾಯಿಗೆ ಬರುತ್ತಾ ಇತ್ತು. ಅದರಲ್ಲೂ ವಿರಾಟಪರ್ವ ಅವರಿಗೆ ಬಹು ಪ್ರಿಯವಾದ ಪರ್ವವಾಗಿತ್ತು. ಸಾಮಾನ್ಯವಾಗಿ ಮಕ್ಕಳ ಮೇಲೆ ಅವರು ರೇಗಿ ಕೂಗಾಡಿದ್ದು ಅಪರೂಪ. ಅವರ ಕೋಪಕ್ಕೆ ಯಾವಾಗಲೂ ಈಡಾಗುತ್ತಿದ್ದ ವ್ಯಕ್ತಿ ಅವರ ಮೂರನೇ ಹೆಂಡತಿಯಾಗಿ ಮನೆಗೆ ಬಂದಿದ್ದ ನರಸಮ್ಮಜ್ಜಿ. ನರಸಮ್ಮಜ್ಜಿಗೆ ಇಪ್ಪೆಮೆಳೆಯಂತೆ ನರಸಲು ಮೈಕಟ್ಟು. ಎಷ್ಟು ಮಾತ್ರಕ್ಕೂ ಚೆಲುವೆಯೇನಲ್ಲ. ಆದರೆ ಕೆಲಸದಲ್ಲಿ ಮಹಾ ಗಟ್ಟಿಗಿತ್ತಿ.

ನಮ್ಮ ಪುಟ್ಟಪ್ಪಜ್ಜ ಈ ಕಿರುವಯಸ್ಸಿನ ಹೆಂಡತಿಯ ಮೇಲೆ ಯಾಕೆ ಯಾವಾಗಲೂ ಉರಿದು ಬೀಳುತ್ತಿದ್ದರು ಎಂಬುದನ್ನು ನಾನು ಊಹಿಸಲಾರೆ. ಹಳೆಯ ಕಾಲದವರಿಗೆ ಅದು ಹೆಂಡತಿಯನ್ನು ಆಳುವ ಕ್ರಮವೇ ಆಗಿತ್ತೋ ಏನು ಸುಡುಗಾಡೋ. ಭರ್ತ್ಸನೆ ಬೈಗುಳದ ಜೊತೆಗೆ ಹೊಡೆತ ಬಡಿತಗಳು ಆಗ ಸಾಮಾನ್ಯವಾಗಿದ್ದವು. ಏನೇ ಆಗಲಿ ನಮ್ಮ ನರಸಮ್ಮಜ್ಜಿ ಮಾತ್ರ ಅಳುತ್ತ ಅಳುತ್ತಲೂ ತಮ್ಮ ಕೆಲಸ ತಾವು ತೂಗಿಸಿಕೊಂಡು ಹೋಗುವವರೇ! ಒಂದು ದಿನ ಅವರು ಮೂತಿ ದಪ್ಪ ಮಾಡಿಕೊಂಡು ಮೂಲೆ ಹಿಡಿದು ಮಲಗಿದ್ದು ನಾನು ನೋಡಿಲ್ಲ.

ಕಲೆ: ಸೃಜನ್

ನರಸಮ್ಮಜ್ಜಿ ಸೆಜ್ಜೆ ರೊಟ್ಟಿ ಬಡಿಯುವುದರಲ್ಲಿ ನಿಷ್ಣಾತರಾಗಿದ್ದರು. ರಜಾ ಬಂತೆಂದರೆ ನಾವು ಕೆಲ್ಲೋಡಿಗೆ ಹೋಗುತ್ತಿದ್ದೆವಲ್ಲ! ಅಡುಗೆ ಮನೆ ಮೂಲೆಯಲ್ಲಿ ಒಂದು ಗೂಟಕ್ಕೆ ನೇತುಹಾಕಿದ್ದ ದೊಡ್ಡ ಬಟ್ಟೆಯ ಗಂಟಲ್ಲಿ ಪೇರಿಸಿಟ್ಟ ಸೆಜ್ಜೆ ರೊಟ್ಟಿಗಳು! ಈವತ್ತಿನ ದುಬಾರಿ ಬಿಸ್ಕತ್ತುಗಳನ್ನು ನಮ್ಮ ಅಜ್ಜಿಯ ಸೆಜ್ಜೆ ರೊಟ್ಟಿ ಮುಂದೆ ನಿವಾಳಿಸಿ ಒಗೆಯಬೇಕು. ಗರಿ ಗರಿ ಗರಿಯಾಗಿ ನಾಲಗೆ ಮೇಲಿಟ್ಟರೆ ಕರಗುವಂತಿರುತ್ತಾ ಇದ್ದವು. ಕೆಲ್ಲೋಡಿಗೆ ಹೋದಾಗ ಮೊದಲು ನಾನು ಓಡುತ್ತಿದ್ದುದೇ ಅಡುಗೆ ಮನೆಗೆ. ಅಜ್ಜಿ ನನ್ನನ್ನು ಅದ್ಯಾಕೋ “ಕುಬೇರಾ…” ಅಂತ ಕರೆಯುತ್ತಾ ಇದ್ದರು. ಏನೋ ಕುಬೇರಾ…ಸೆಜ್ಜೆ ರೊಟ್ಟಿ ತಿನ್ನುತೀ? ಈಗಲೇ ಕೊಡಬೇಡ ಚಿಕ್ಕಮ್ಮಾ …ರಾತ್ರಿ ಊಟದ ಜತೆ ತಿನ್ನಲಿ ಬೇಕಾದರೇ..ಅಂತ ನಮ್ಮ ಅಮ್ಮ ಹೊರಗಿನಿಂದಲೇ ಬೊಬ್ಬೆ ಹಾಕುತ್ತಿದ್ದಳು. ರೊಟ್ಟಿ ಪಟ್ಟಿ ಆಗೋದಿಲ್ಲ ಅವನಿಗೆ..ಸುಮ್ಮಗೆ ಆಸೆ ಪಡ್ತಾನೆ ಅಷ್ಟೆ…

More

ಇದು ಸಿನೆಮಾ ‘ಸಾಂಗತ್ಯ’

ಸಾಂಗತ್ಯ ಬಳಗ ಪರಮೇಶ್ ಗುರುಸ್ವಾಮಿ ಸಂಪಾದಕತ್ವದಲ್ಲಿ ಸಿನೆಮಾ ಮ್ಯಾಗಜ್ಯಿನ್ ಹೊರತಂದಿದೆ. ತುಂಬಾ ಆಕರ್ಷಕವಾದ, ಓದಲು ಸಾಕಷ್ಟು ಹೂರಣವುಳ್ಳನಿಯತಕಾಲಿಕ ಇದು.

ಬಾದಾಮಿ ಹೌಸ್ ನಲ್ಲಿ ನಡೆದ ಬಿಡುಗಡೆ ಸಮಾರಂಭದ ನೋಟ ಇಲ್ಲಿದೆ.

ಚಂದಾಗೆ ಸಂಪರ್ಕಿಸಿ: mayflowermh@gmail.com

ಪತ್ರಕರ್ತರು ಎಂದರೆ..

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು

ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

Previous Older Entries

%d bloggers like this: