ಕರೆಂಟ್ ತೆಗೀಬೇಕಾ, ಬೇಡವಾ??

earth hour ಬಂದಿದೆ. ಒಂದು ಗಂಟೆ ಕಾಲ ನಿಮ್ಮ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ತೆಗೆದು, ಮೊಂಬತ್ತಿ ಬೆಳಕಲ್ಲಿದ್ದು ಒಂದು ಪುಟ್ಟ ಸಂದೇಶ ನೀಡಿ ಎಂದು ಕೇಳಲಾಗಿತ್ತು. ಅದನ್ನು ‘ಅವಧಿ’ಯೂ ಪ್ರಚಾರ ಮಾಡಿತ್ತು. ಓ ಕೆ ಮಾಡೋಣ ಅಂದರು ಕೆಲವರು. ಆದರೆ ಜಿ ಎನ್ ಅಶೋಕವರ್ಧನ ಮತ್ತು ಕಿರಣ್ ಆಚಾರ್ಯ ಎರಡು ಭಿನ್ನ ಸ್ವರ ಹೊರಡಿಸಿದ್ದಾರೆ. ಜಗ ಮಗಿಸುವ ಜಾಹೀರಾತುಗಳೂ, ಅದಕ್ಕೆ ಬೇಕಾದಷ್ಟು ವಿದ್ಯುತ್ ವೇಸ್ಟ್ ಮಾಡುತ್ತಾ ಅದರ ಮಧ್ಯೆ ಒಂದು ಗಂಟೆ ಕತ್ತಲಲ್ಲಿ ಕೂಡುವ ಅಗತ್ಯವೇನಿಲ್ಲ ಅಂತ ಹೇಳಿದ್ದಾರೆ.

ಡಾ. ಕಿರಣ್ ಆಚಾರ್ಯ ಪರಿಸರವಾದಿಗ ಳಿಂದಲೇ ನೂರೆಂಟು ಪ್ರಾಬ್ಲಂ ಇದೆ ಎನ್ನುವ ಸೊಲ್ಲು ಹೊರಡಿಸಿದ್ದಾರೆ.

ಹೌದಾ ಅಶೋಕವರ್ಧನ್, ಕಿರಣ್ ಆಚಾರ್ಯ ಹೇಳುತ್ತಿರುವುದರಲ್ಲಿ ಅರ್ಥವಿದೆಯಾ?? ನಿಮ್ಮ ಅಭಿಪ್ರಾಯ ಏನು??

ಮೊನ್ನೆ ನೆಹರೂ ಮೈದಾನದಲ್ಲಿ ರಾವಣನ ಭಾರೀ ಬೊಂಬೆ ನಿಲ್ಲಿಸಿದ್ದರು. ರಾತ್ರಿ ಯಾವುದೋ ಜಗದ್ಗುರುವಿನ ಮತ್ತದೇ ಧುಷ್ಟ ಶಿಕ್ಷಣ, ಶಿಷ್ಟರಕ್ಷಣದ ‘ಅದ್ಭುತ’ ಸಾಂಕೇತಿಕತೆಯ ಭಾಷಣದ ಕೊನೆಯಲ್ಲಿ ರಾವಣನಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದರು. ಗೋರಿಗಳ ನಗರ ದಿಲ್ಲಿಯಲ್ಲಂತೂ ಸಾವಿರದೊಂದು ಸಾಂಕೇತಿಕ ಆಚರಣೆಗಳು ಸತ್ತ ಎಲ್ಲರ ಬಗ್ಗೆ ನಡೆಯುತ್ತಲೇ ಇರುವುದನ್ನು ನಾವು ನೋಡಿ ನೋಡಿಯೇ ಬಳಲುತ್ತಿರುತ್ತೇವೆ.

ಮೂವತ್ತು ಮೀಟರಿಗೊಂದು ಹೈಮಾಸ್ಟ್ ದೀಪ ಹಚ್ಚಿ, ಬಸ್ ನಿಲ್ಲದ ‘ಸ್ಟಾಪು’ಗಳಲ್ಲೆಲ್ಲ ಝಗಮಗಿಸುವ ಜಾಹೀರಾತು ಇಟ್ಟು ಎಲ್ಲೋ ಚೂರುಪಾರು ಮಂದಿ ಒಂದು ಗಂಟೆ ಕತ್ತಲಲ್ಲಿ ಕೂರುವ ಸಾಂಕೇತಿಕತೆ ಒಂದು ವಾರ್ಷಿಕ ವಿಧಿಯಾಗುತ್ತಿರುವುದು ನನಗೆ ಒಪ್ಪಿಗೆಯಿಲ್ಲ. ನಾನು ಎಂದಿನಂತೆ ನನ್ನ ಕೋಣೆಯ ದೀಪ, ಫ್ಯಾನ್ ಹಾಕಿ ಗಣಕ ಕಾರ್ಯ ನಿರತನಾಗಿದ್ದೆ. ಹೆಂಡತಿ ಎಂದಿನಂತೆ ಅವಳ ಕಾರ್ಯರಂಗದ ಜಾಗದ ದೀಪ ಮಾತ್ರ ಹಚ್ಚಿಕೊಂಡು ಅವಳ ಕಾರ್ಯನಿರತಳಾಗಿದ್ದಳು.

-ಜಿ ಎನ್ ಅಶೋಕವರ್ಧನ

++

ನಾವಿರುವುದು ಬನಶಂಕರಿಯ ಸೋಕಾಲ್ಡ್ ಎಜುಕೇಟೆಡ್ ಬೀದಿಯಲ್ಲಿ. ಆದರೆ ದುರಂತ, ನಮ್ಮ ಬೀದಿಯಲ್ಲಿ ಲೈಟ್ ಸ್ವಿಚ್ ಮಾಡಿದ್ದು ಕೇವಲ ನಾವು ಹಾಗೂ ನಮ್ಮ ಮುಂದಿನ ಮನೆಯವರು ಮಾತ್ರ. ಆದರೆ ಲೈಟ್ ಸ್ವಿಚ್ ಮಾಡಿ ಅರ್ತ್ ಅವರ್ ಆಚರಿಸಿದುದರ ಬಗ್ಗೆ ನನಗೆ ಹೆಮ್ಮೆಯಿದೆ

-ಸುಘೋಷ್ ಎಸ್ ನಿಗಳೆ

++

ನಾವಿರುವ ಹಳ್ಳಿಮನೆಯಲ್ಲಿ ಸಂಜೆ ಏಳೂವರೆಗೇ ಕರೆಂಟ್ ಹೋಗಿತ್ತು. ದೂರ ದಿಗಂತದಲ್ಲಿ ಕಾಣುತ್ತಿದ್ದ ಬೆಂಗಳೂರಿನ ಧ್ರುವಪ್ರಭೆ ಕೂಡ ಮಂಕಾಗಿತ್ತು. ಬೆಸ್ಕಾಮ್ ಖುದ್ದಾಗಿ ಎಲ್ಲೆಡೆ ‘ಅರ್ಥ್ ಅವರ್’ ಆಚರಿಸುತ್ತಿದೆ ಎಂದು ಅಂದುಕೊಂಡು ರೇಡಿಯೊ ಕೇಳುತ್ತ ಕೂತಿದ್ದಾಗ ಏನಚ್ಚರಿ, ಸರಿಯಾಗಿ ಎಂಟೂವರೆಗೆ ಕರೆಂಟ್ ಬಂತು! ಇದಪ್ಪಾ ಚಮತ್ಕಾರ ಎಂದುಕೊಂಡು ನನ್ನ ಪತ್ನಿ ಸ್ವಿಚಾಫ್ ಮಾಡಿದಳು. ನಮ್ಮ ಕರೆಂಟ್ ಬಿಲ್ ತಿಂಗಳಿಗೆ ಯಾವತ್ತೂ ನೂರು ರೂಪಾಯಿ ತಲುಪದಂತೆ ಮಿತವಾಗಿ ಬಳಸುತ್ತಲೇ ಬಂದಿರುವ ನಮಗೆ ಮತ್ತೆ ಒಂದು ಗಂಟೆ ಕತ್ತಲಲ್ಲಿ ಕೂತಿರಬೇಕಾದ ನೈತಿಕ ಹರ್ಕತ್ತೇನೂ ಇರಲಿಲ್ಲ. ಆದರೆ ಕತ್ತಲನ್ನು ಆವಾಹಿಸುವ ಮೂಲಕ ವಿದ್ಯುತ್ ದುಂದುಗಾರರಿಗೆ ತುಸು ಬೆಳಕು ತೋರುವ ಈ ಅಭಿಯಾನಕ್ಕೆ ನಮ್ಮ ಬೆಂಬಲವಿದೆ.
-ನಾಗೇಶ ಹೆಗಡೆ

++

We switched off power yesterday evening for an hour from 8.30 to 9.30. tried to do our bit for the environment
:-)
malathi S

++

With the periodic power cuts+ unscheduled power cuts, theis earth hour does not make much sense to us! Moreover the self proclaimed environmentalists have caused enough damage to our country than all the industries put together!

Dr Kiran Acharya

++

ನಾನು ಇಲ್ಲಿ ಬೆಂಗಳೂರಿನಲ್ಲಿ ಶೇವಿಂಗ್ ಮಾಡಿಕೊಳ್ಳಲು ಲೈಟ್ ಹಾಕಿಕೊಳ್ಳದಿದ್ದರೆ

ಅಲ್ಲಿ ನನ್ನಣ್ಣನಿಗೆ ಥ್ರೀ ಫೇಸ್ ವಿದ್ಯುತ್ ಸ್ಪಲ್ಪ ಹೆಚ್ಚು ಸಿಕ್ಕುತ್ತದೆ

ನಾನು ಇಲ್ಲಿ ರೂಮಿನಿಂದ ಹೊರಬರುವಾಗ ಲೈಟ್ ಆಫ್ ಮಾಡಿದರೆ

ಅಲ್ಲಿ ನನ್ನಣ್ಣನ ಇರಿಗೇಷನ್ ಪಂಪ್ ಸೆಟ್ ಧಡ ಧಡ ಸದ್ದು ಮಾಡುತ್ತದೆ

ನಾನು ಇಲ್ಲಿ ಕೊಂಚ ಹೊತ್ತು ಟಿವಿ ಆಫ್ ಮಾಡಿದರೆ

ಅಲ್ಲಿ ನನ್ನಣ್ಣನ ಹೊಲದಲ್ಲಿ ಸ್ಪ್ರಿಂಕ್ಲರ್ ನೀರು ಚಿಮ್ಮಿಸುತ್ತದೆ

ನಾನು ಇಲ್ಲಿ ಒಂದು ರಾತ್ರಿ ಫ್ಯಾನ್ ಇಲ್ಲದೆ ಮಲಗಿದರೆ

ಅಲ್ಲಿ ನನ್ನಣ್ಣ ಸುಖವಾಗಿ ಮಲಗಬಹುದು…….

-ಸುಘೋಷ್ ಎಸ್ ನಿಗಳೆ

7 ಟಿಪ್ಪಣಿಗಳು (+add yours?)

  1. Kiran Acharya
    ಮಾರ್ಚ್ 30, 2010 @ 11:54:41

    How to switch OFF something which is not ON? was the dilemma of people of coastal Karnataka…

    ಉತ್ತರ

  2. Pramod
    ಮಾರ್ಚ್ 30, 2010 @ 09:43:30

    ಫ್ಯಾನ್ ಹಾಕದೆ, ಕಿಟಕಿ ತೆರೆದು ದಿನವೂ ನಾನು ರಾತ್ರಿಯಿ೦ದ ಬೆಳಗಿನವರೆಗೂ ಅವರ್ “ಅರ್ಥ್ ಅವರ್” ಆಚರಿಸುತ್ತೇನೆ.

    ಉತ್ತರ

  3. ಪಂಡಿತಾರಾಧ್ಯ
    ಮಾರ್ಚ್ 29, 2010 @ 21:57:33

    ಅಕಟಕಟಾ!
    ನೀವು ಮೈಸೂರಿನಲ್ಲಿ ಇದ್ದಿದ್ದರೆ ಊರಿನ ಎಲ್ಲರ ಮನೆಯ ದೀಪ ನಂದಿಸಿ ಅರಮನೆಯನ್ನು ಬೆಳಗಿಸುವ ವೈಭವ ನೋಡಬಹುದಿತ್ತು.
    ಸುಮ್ಮನೆ ಹೊಟ್ಟೆ ಉರಿಸಿಕೊಂಡರೆ ಏನು ಪ್ರಯೋಜನ?

    ಉತ್ತರ

  4. Vasanth
    ಮಾರ್ಚ್ 29, 2010 @ 21:36:53

    This is just an absurdity.

    ಉತ್ತರ

  5. malathi S
    ಮಾರ್ಚ್ 29, 2010 @ 17:46:11

    and fun thing was it started raining just then, so me and girls stood in the rain and enjoyed it.
    🙂

    ಉತ್ತರ

  6. shivu.k
    ಮಾರ್ಚ್ 29, 2010 @ 10:17:58

    ನಾನು ಕೂಡ Earth Hour ಬಗ್ಗೆ ಮೊದಲೇ ಪತ್ರಿಕೆಗಳಲ್ಲಿ ನೆಟ್‍ಗಳಲ್ಲಿ
    ತಿಳಿದುಕೊಂಡಿದ್ದನಾದ್ದರಿಂದ ಶನಿವಾರ ಸಂಜೆ ನನ್ನ ಶ್ರೀಮತಿಯನ್ನು ಅಕ್ಕನ ಮನೆಗೆ ಕಳಿಸಿ
    ನಾನು ರಾತ್ರಿ ಏಳುಗಂಟೆಗೆ ಮೇನ್ ಸ್ವಿಚ್ ಆಫ್ ಮಾಡಿ ಪರೀಕ್ಷೆ ಮುಗಿದು ರಜಾ
    ಅನುಭವಿಸುತ್ತಿದ್ದ ಪುಟ್ಟ ಮಕ್ಕಳೊಂದಿಗೆ ಬ್ಯಾಟ್‍ಮಿಂಟನ್ ಆಡುತ್ತಾ ಕಳೆದೆ.
    ರಾತ್ರಿ ೯೦೩೦ರ ನಂತರ ಕರೆಂಟು ಬೇಕೆನಿಸಲಿಲ್ಲವಾದ್ದರಿಂದ ಮೊಂಬತ್ತಿ ಬೆಳಕಿನಲ್ಲಿ
    ಊಟಮಾಡಿ ಮಲಗಿದೆವು.

    ಶಿವು.ಕೆ

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: