‘ಛಂದ’ಕ್ಕೆಚಂದ ಮುಖಪುಟ ಬರೀರಿ ..

ಗೆಳೆಯರೆ, ಕೆಲಸ ಶುರು ಮಾಡಿದ್ರಾ?

ನಿಮ್ಮ ಸ್ಪೂರ್ತಿಗೆಂದು ಪುಸ್ತಕದಲ್ಲಿನ ಎರಡು ಪದ್ಯಗಳನ್ನು ಇಲ್ಲಿ ಕೊಡಲಾಗಿದೆ. (ಕ್ಲಿಕ್‌ ಮಾಡಿದರೆ ಚಿತ್ರ ದೊಡ್ಡದಾಗುವುದು). ಓದಿ ಹೊಸ ರೀತಿಯ ವಿನ್ಯಾಸ ಮಾಡಿ.

ಮತ್ಮೊಮ್ಮೆ ನೆನಪು ಮಾಡುವುದೇನೆಂದರೆ: ಈ ಪದ್ಯಗಳು ನಿಮ್ಮ ಸ್ಫೂರ್ತಿಗೆ ಮಾತ್ರ. ಅವಕ್ಕೇ ಚಿತ್ರ ಬರೆಯಬೇಕು ಎಂಬ ಕಟ್ಟುನಿಟ್ಟಿನ ನಿಯಮವೇನಿಲ್ಲ. ಒಟ್ಟಾರೆ ನಿಮ್ಮ ವಿನ್ಯಾಸ ಪುಸ್ತಕಕ್ಕೆ ಸೂಕ್ತ ಎನಿಸುವಂತಿದ್ದರೆ ಸಾಕು. ನವಿರಾದ ಮಕ್ಕಳ ಪದ್ಯಗಳಿರುವ ಪುಸ್ತಕವೊಂದಕ್ಕೆ ಮುಖಪುಟ ಹೇಗಿದ್ದರೆ ಚೆಂದ ಎಂದು ಆಲೋಚಿಸಿ ಅಷ್ಟೇ. ಅಲ್ಲಿ ಚಂದ್ರ ಇಲ್ಲದಿದ್ದರೂ ಚಿಂತೆ ಇಲ್ಲ.

ಇದು ಸ್ಪರ್ಧೆ ಎಂಬುದು ನೆನಪಿರಲಿ. ಹಾಗಾಗಿ ನಿಮ್ಮದು ಬರೀ ಸುಂದರ ಮುಖಪುಟವಾದರೆ ಸಾಲದು. ಇತರರಿಗಿಂತ ಎಷ್ಟು ಹೊಸ ರೀತಿಯ ಆಲೋಚನೆ ಎಂಬುದಕ್ಕೂ ಅಂಕವಿರುತ್ತದೆ.

ಅಂದಮೇಲೆ ಹರಿಯಗೊಡಿ ನಿಮ್ಮ ಸೃಜನಶೀಲತೆಯನ್ನು ಮನಬಂದಂತೆ. ಒಂದು ಅನನ್ಯ ಮುಖಪುಟ ಮಾಡಿ ಕಳಿಸಿ.

ಕಾಯುತ್ತಿದ್ದೇವೆ..

ಅನಂತಮೂರ್ತಿ 77

ಇವರು ದಿನಕರ ದೇಸಾಯಿ..

ನಿಮ್ಮ ಸಾಹಿತ್ಯ ಪ್ರೀತಿಗೆ ನಮ್ಮದೊಂದು ಸಲಾಂ. ಎಲ್ಲರೂ.. ಬಹುತೇಕ ಎಲ್ಲರೂ ಚುಟುಕಗಳ ಮೂಲಕ ನಮ್ಮೆಲ್ಲರನ್ನೂ ಜೀವಂತವಾಗಿಟ್ಟ ದಿನಕರ ದೇಸಾಯಿಯವರನ್ನು ಗುರುತಿಸಿದ್ದೀರ. ಥ್ಯಾಂಕ್ಸ್. ಬಹುಮಾನವಾಗಿ ತೆಗೆದುಕೊಳ್ಳಿ ಈ ಐದು ಚುಟುಕ.

ದಿನಕರನ ಚುಟುಕ

ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು

ಕೇಳಿದನು:ದೇಸಾಯಿ, ಹೇಗಿದ್ದಿ ನೀನು?

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು

ಅಂಕೋಲೆ ಹುಡುಗಿ

ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ

ಇಲ್ಲುಂಟು ದೇಸಾಯಿ ದಿನಕರನ ಬಾಲೆ

ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ

ಹಿಡಿಯ ಹೋದರೆ ಕುಳಿತುಕೊಳ್ಳುವಳು ಅಡಗಿ

ಅಂಕೋಲೆ ಉಪ್ಪು

ಗೃಹಮಂತ್ರಿ ಹೇಳಿದರು: ಎಲೆ ಚುಟುಕ ಜೋಕೆ

ಅತ್ಯಂತ ಉಗ್ರವಾಗಿದೆ ನಿನ್ನ ಟೀಕೆ.

ಚುಟುಕವೆಂದಿತು: ನನಗೆ ಹಾಕುವೆನೆ ಸೊಪ್ಪು

ನಾನು ಅಂಕೋಲೆ ಸತ್ಯಾಗ್ರಹದ ಉಪ್ಪು.

ಅಹಿಂಸಾಮಯ ಯುದ್ಧ

ಲೇಖನಿಯ ಹಿಡಿದು ಸರಕಾರದ ವಿರುದ್ಧ

ಪ್ರತಿ ದಿವಸವೂ ನಾನು ಹೂಡಿದೆನು ಯುದ್ಧ.

ಬಂದೂಕುಗಳ ಬದಲು ಚುಟುಕಗಳ ಬಾಣ.

ಎಷ್ಟು ಚುಚ್ಚಿದರೇನು ? ಬಿಡಲಿಲ್ಲ ಪ್ರಾಣ!

ಅಂಬಿಕಾತನಯದತ್ತರ ಕೃತಿ

ಅಂಬಿಕಾತನಯದತ್ತರ ಕೃತಿಯನೋದು

ಭಾವನಾಲೋಕದಲಿ ಅದು ಒಂದು ಜಾದು.

ಅರಗಳಿಗೆಯಲಿ ನೀನು ಮಂಗಳಕ್ಕೆ ಹಾರಿ.

ಕುಳಿತುಕೊಳಬಹುದು ಬ್ರಹ್ಮಾಂಡಗಳನೇರಿ…

%d bloggers like this: