ಅಮಿತಾಬ್ ‘ಪಾ’ ಆದದ್ದು…

ಏನಾದ್ರೂ ಮಾಡಿ…

ಇದು ಕ್ಯಾಮೆರಾ ಕಥೆ..

ಭೇಟಿ ಕೊಡಿ: ಮೀಡಿಯಾ ಮೈಂಡ್

ಇದು ಸಿದ್ದು ಸಿಂಡ್ರೋಮ್

-ರವೀಂದ್ರ ರೇಷ್ಮೆ

“ಮ್ಯಾಂಚೆಸ್ಟರ್ ನೋಡುವ ಪೂರ್ವನಿಯೋಜಿತ ಯೋಜನೆಯಂತೆ ಒಂದು ದಿನ ರವಿವಾರ ಮುಂಜಾನೆ ಇಂಗ್ಲೆಂಡಿನ ಪ್ರಸಿದ್ಧ ಶಾಪಿಂಗ್ ಮಾಲ್ ಟ್ರೆಫೋಡರ್್ ಸೆಂಟರ್ ತಲುಪಿದಾಗ ‘ಕೊಳ್ಳುಬಾಕ ಸಂಸ್ಕೃತಿ’ ಎಂಬ ಪದದ ನಿಜವಾದ ಅರ್ಥ ಮನದಾಳಕ್ಕೆ ಇಳಿಯಿತು…..” ಹೀಗೆ ಕೌತುಕಮಯ ಕಣ್ಣುಗಳೊಂದಿಗೆ ಜಗಮಗಿಸುವ ಶಾಪಿಂಗ್ ಮಾಲ್ನಲ್ಲಿ ಸುತ್ತಾಡುವ ನಮ್ಮ ಗದುಗಿನ ಕಾಲೇಜು ಮೇಷ್ಟ್ರು ಸಿದ್ದು ಯಾಪಲಪರವಿಯವರಿಗೆ ಜ್ಞನೋದಯವಾಗುತ್ತದೆ: “ಮೆಜೆಸ್ಟಿಕ್ನ ಪ್ಲಾಜಾದಗಳಲ್ಲಿ ಸಿಕ್ಕಾಪಟ್ಟೆ ಚೌಕಾಸಿ ಮಾಡುವ ಮನೋಧರ್ಮ ರೂಢಿಸಿಕೊಂಡ ನನಗೆ ಅವರು ನೇತು ಹಾಕಿದ ಬೆಲೆಗೆ ವಸ್ತುಗಳನ್ನು ಖರೀದಿಸುವ ಪರಿ, ಅವರನ್ನು ಮಿಕಿಮಿಕಿ ನೋಡುವ ನಮ್ಮ ಅಸಹಾಯಕತೆಯನ್ನು ಹೋಲಿಸಿಕೊಳ್ಳುವುದು ಅನಿವಾರ್ಯವೆನಿಸಿತು.”

ಸಿದ್ದುವಿನ ದೇಶೀಯ ಮನಸ್ಥಿತಿ ಕೂಡ ಕುರುಡು ದೇಶಾಭಿಮಾನದ್ದಲ್ಲ, ಅದು ಇಂಗ್ಲಿಷ್ ಬೋಧನೆಯ ಮೂಲಕ ವಸ್ತು ನಿಷ್ಠತೆಯನ್ನು ರೂಢಿಸಿಕೊಂಡ ಸ್ವವಿಮಶರ್ೆಯ ಮನೋಧರ್ಮ: “ಕಾಲಿನಲ್ಲಿ ಮೆಟ್ಟುವ ಚಪ್ಪಲಿಗಳನ್ನು ಗಾಜಿನ ಶೋಕೇಸಿನಲ್ಲಿ, ಬಾಯಿಂದ ತಿನ್ನುವ ತರಕಾರಿಗಳನ್ನು ಕೊಳೆತು ನಾರುವ ರಸ್ತೆಬದಿಯಲ್ಲಿ ಮಾರುವ ನಮ್ಮ ಸಂಸ್ಕೃತಿಯ ಬಗೆಯನ್ನು ವಿಶ್ಲೇಷಿಸುವ ಯಾರೋ ಕಳಿಸಿದ್ದ ಎಸ್ಎಂಎಸ್ ನೆನಪಾಯಿತು. ಆಹಾರ ಗುಣಮಟ್ಟದ ನಿರ್ವಹಣೆಗೆ ಐರೋಪ್ಯರು ನೀಡುವ ಮಹತ್ವ ಅಚ್ಚರಿಯೆನಿಸಿತು. ತಯಾರಾದ ದಿನಾಂಕ, ಪ್ಯಾಕಿಂಗ್ ವಿವರ, ಅದಕ್ಕೆ ನಿಖರಗೊಳಿಸಿದ ಎಕ್ಸ್ಪೈರಿ ದಿನಾಂಕ ಅವುಗಳಿಗೆ ಅವರು ತೋರುವ ಕಾಳಜಿ ನನ್ನನ್ನು ವಿಸ್ಮಯಗೊಳಿಸಿತು”

ವಿಂಡೋ ಶಾಪಿಂಗ್ನಲ್ಲೇ ವಿಶ್ಲೇಷಣೆ ನಡೆಸುತ್ತ ಸಾಗುವ ಸಿದ್ದುವಿನ ಕ್ಯಾಮರಾ ಕಣ್ಣಿಗೆ ಡ್ರೆಸ್ ಆರಿಸಿಕೊಳ್ಳುತ್ತಿದ್ದ ‘ಮುಕ್ತ’ ಯುವತಿಯರೂ ಗೋಚರಿಸುತ್ತಾರೆ: “ತಾವು ಆಯ್ದುಕೊಂಡ ಬಟ್ಟೆ ಎಲ್ಲ ರೀತಿಯಲ್ಲಿ ಸರಿಹೊಂದುತ್ತದೆಯೋ ಇಲ್ಲವೋ ಎಂದು ತಿಳಿಯಲು ಎಲ್ಲರೆದುರಿಗೇ ಹಾಕಿಕೊಂಡ ಬಟ್ಟೆಯನ್ನು ಬಿಚ್ಚಿ ಒಗೆದು, ಹೊಸ ಬಟ್ಟೆ ಹಾಕಿಕೊಂಡು ಇದು ಹೇಗೆ ಎಂದು ಎದುರಿಗಿದ್ದವರನ್ನು ಕೇಳುತ್ತಾರೆ….”

ಬೆಂಗಳೂರಿಗೆ ಬರುವ ಬೋರೇಗೌಡ ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ ಕಂಡು ಬೆರಗುಗೊಳ್ಳುವಂತೆ ಬ್ರಿಟಿಷ್ ಪಾಲರ್ಿಮೆಂಟಿನ ಕಾರ್ಯಸೌಧವಾದ ಹೌಸ್ ಆಫ್ ಕಾಮನ್ಸ್ಗೆ ಧಾವಿಸುವ ಸಿದ್ದು “ಅನಾವಶ್ಯಕ ರಾಜಕಾರಣದ ವ್ಯಾಮೋಹ ಇಟ್ಟುಕೊಂಡು ಪಾಲರ್ಿಮೆಂಟ್ ಪ್ರವೇಶಿಸುವ ಆತುರತೆ ಇಲ್ಲಿನ ಪ್ರಜೆಗಳಿಗಿಲ್ಲ” ಎಂದು ಟಿಪ್ಪಣಿ ಮಾಡುತ್ತಾರೆ. “ಇಲ್ಲಿನ ಜನಪ್ರತಿನಿಧಿಗಳ ಸರಳತೆಯೊಂದಿಗೆ ನಮ್ಮವರ ಅಟ್ಟಹಾಸವನ್ನು ಸಮೀಕರಿಸುವುದು ಅಸಮಂಜಸವೆನಿಸಿತು” ಎಂಬ ಸೂಕ್ಷ್ಮತೆಯನ್ನೂ ಗುರುತಿಸುತ್ತಾರೆ.

ಬ್ರಿಟಿಷ್ ಸಂಸತ್ ಭವನದ ಐತಿಹಾಸಿಕತೆ, ಭವ್ಯತೆಗಳನ್ನು ಸಂಕ್ಷಿಪ್ತವಾಗಿ ಬಣ್ಣಿಸುತ್ತಲೆ “ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ಒತ್ತಡ ಹೇರುವ ಕ್ರಿಯೆಯಿಂದಾಗಿ ಲಾಬಿ ಎನ್ನುವ ಇಂಗ್ಲಿಷ್ ಕ್ರಿಯಾಪದ ಸೃಷ್ಟಿಯಾಯಿತು” ಎನ್ನುತ್ತ ಲಂಡನ್ನಿನ ಲಾಬಿ ರಾಜಕೀಯದ ವರಸೆಯನ್ನು ಗಮನಿಸುತ್ತಾರೆ.

ಇಂಗ್ಲೆಂಡ್ ಪ್ರವಾಸ ಕಥನಗಳನ್ನು ಕನ್ನಡದ ಗಣ್ಯಾತಿಗಣ್ಯರನೇಕರು ಬರೆದಿರಬಹುದಾದರೂ ನಮ್ಮ ‘ವಿಕ್ರಾಂತ ಕನರ್ಾಟಕ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಅನಾವರಣಗೊಂಡ ಸಿದ್ದುವಿನ ವೃತ್ತಾಂತ ಅಪ್ಪಟ ‘ಆಮ್ ಆದ್ಮಿಯೊಬ್ಬನ ಅನಿಸಿಕೆ, ಅನುಭವಗಳ ರಸಾಯನದಂತಿದೆ. ಈ ಅಭಿಪ್ರಾಯಕ್ಕೊಂದು ಸಮರ್ಥನೆ ಬೇಕೆ, ಇಲ್ಲಿದೆ ನೋಡಿ:

“ಸಾವಿರಾರು ವರ್ಷಗಳಿಂದ ಹೊಸ ಬಗೆಯ ಆವಿಷ್ಕಾರಗಳೊಂದಿಗೆ ಬೆಳೆಯುತ್ತ ಸಾಗಿರುವ ಆಕ್ಸ್ಫಡರ್್ ವಿವರಣೆಗಳನ್ನು ಇಂಗ್ಲಿಷ್ ಸಾಹಿತ್ಯದ ವಿದ್ಯಾಥರ್ಿಯಾಗಿ ಸಾಕಷ್ಟು ಓದಿದ್ದೆ. ನನ್ನ ಓದಿನ ಗ್ರಹಿಕೆಗೆ ಮೀರಿದ ಸಂಗತಿಗಳು ಇಲ್ಲಿವೆ ಎಂಬ ಸತ್ಯವು ನನಗೆ ಇಲ್ಲಿ ತಿರುಗಾಡುವಾಗ ಗೊತ್ತಾಯಿತು!…. ಎಲ್ಲವೂ ನನ್ನ ಕಲ್ಪನಾ ಶಕ್ತಿಗೆ ಮೀರಿದ್ದೆ!”

%d bloggers like this: