ವಿಶ್ವೇಶ್ವರ ಭಟ್ ‘ಪಲ್ಲವಿ’

ಹೀಗಿದ್ದರು ಅಡಿಗರು..

ಈ ಚಿನುವಾ ಯಾರು?

ಹರ್ಷದ್ ವರ್ಕಾಡಿ ಬರೆದ ಕವಿತೆಗೆ ಚಿನುವಾನ ಕಲಾಕೃತಿ ಬಳೆಸಿದ್ದೆವು. ಅದನ್ನು ನೋಡಿದ ತಕ್ಷಣ ಹಿರಿಯರೂ, ಕೇಂದ್ರ ವಾರ್ತಾ ಸೇವೆಯಲ್ಲಿದ್ದ ಕೃಷ್ಣಾನಂದ ಹೆಗ್ಡೆಯವರು ಮೇಲ್ ಕಳಿಸಿದ್ದಾರೆ. ಒಂದು ಕಲಾಕೃತಿ ತಂದುಕೊಡುವ ನೆನಪುಗಳಿಂದ ನಾವೂ ಸಂತೋಷಗೊಂಡಿದ್ದೇವೆ.

ಚಿನುವಾ ಯಾರು?

ಈತ ಇನ್ನೂ ಬಾಲವಾಡಿಯಲ್ಲಿರುವ ಪುಟಾಣಿ. ಧಾರವಾಡದಲ್ಲಿ ವೈದ್ಯ ಸಂಜೀವ ಕುಲಕರ್ಣಿ ಅವರು ವಿಶಿಷ್ಥವಾಗಿ ನಡೆಸುತ್ತಿರುವ ‘ಬಾಲ ಬಳಗ’ದ ಮಗು. ಅರಳು ಹುರಿದಂತೆ ಮಾತನಾಡುವ, ಅಪಾರ ಕಾರು ಬೈಕು ಆಟಿಕೆಗಳ ಸಂಗ್ರಹ ಹೊಂದಿರುವ ಚಿನುವಾ ಬೇಸರವಾದಗಳೆಲ್ಲಾ ಬಣ್ಣ ಬಳಿಯುತ್ತಾ ಕೂರುತ್ತಾನೆ.

ಹಿರಿಯ ಕಲಾವಿದ, ಮಕ್ಕಳ ಕಲಾಕೃತಿಗಳ ಬಗ್ಗೆ ಇನ್ನಿಲ್ಲದ ಗೌರವ ಹೊಂದಿರುವ ಎಂ ಎಸ್ ಮೂರ್ತಿ ಚಿನುವಾ ಗೆರೆ ಹಾಗೂ ಬಣ್ಣವನ್ನು ನೋಡಿ ಅವನ ಪ್ರತಿಭೆಗೆ ಇಂಬಾಗಿ ನಿಂತಿದ್ದಾರೆ. ಚಿನುವಾ ಈ ವಯಸ್ಸಿನಲ್ಲಿಯೇ ಕಲಾಪ್ರದರ್ಶನ ನಡೆಸಿಯೂ ಗೆದ್ದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಚಂದ್ರಶೇಕರ ದಾಮ್ಲೆ ಅವರು ನಡೆಸುತ್ತಿರುವ ಇನ್ನೊಂದು ವಿಶಿಷ್ಟ ಶಾಲೆ ಇವನ ಕಲಾಪ್ರದರ್ಶನಕ್ಕೆ ತನ್ನ ಅಂಗಳ ನೀಡಿತ್ತು. ಖ್ಯಾತ ಬರಹಗಾರ ಚಿನುವಾ ಅಚಿಬೆಯ ನೆನಪನ್ನು ಹೊತ್ತು ಈತನ ಹೆಸರು ರೂಪುಗೊಂಡಿದೆ. ಆಗೀಗ ಚಿನುವಾ ಕಲಾಕೃತಿಗಳನ್ನು ಕಾಣಲಿದ್ದೀರಿ. ಇಲ್ಲಿ ಇನ್ನೊಂದು ಸ್ಯಾಂಪಲ್ ಇದೆ –

Krishnaananda Hegde writes-

Chinua’s painting actually reminded me of Rabindranath Tagore’s poem written eleven days before his death in August 1941. It’s a piece on the Unknowable. Tagore speaks of the beginning of creation, the day when this universe came into bneing. On this most important day, the mystery of Creation is still a mystery. The Sun wants to know the nature of being. “Who are you, O Creation?” he asks. There is no answer. So Time passes. On the last day when this universe was to come to an end, the Sun asks again: “Who are you, O Creation?” Again, there is no answer.

The poem reads like this:

The first day’s sun

questioned

the new appearance of being–

Who are you?

There was no answer.

Years went by.

Day’s last sun

asked the last question

from the shores of the western ocean

in a hushed evening —

Who are you?

There was no answer.

‘ಅವಧಿ’ ನನ್ನ ಊಟ ತಿಂಡಿ…

ಜರ್ಮನಿಯಿಂದ ವಿವೇಕ ರೈ

‘ಅವಧಿ’ಯ ಬಗ್ಗೆ ವಿಜಯ ಕರ್ನಾಟಕದಲ್ಲಿ ನಿಜವಾದ ಒಳ್ಳೆಯ ಮಾತುಗಳನ್ನು ಬರೆದಿದ್ದಾರೆ. ಕರ್ನಾಟಕದ ಹೊರಗಿರುವ ನನಗಂತೂ ಇದು ಊಟ ತಿಂಡಿಯಷ್ಟೇ ಅನಿವಾರ್ಯ ಆಗಿಬಿಟ್ಟಿದೆ.

ದಿನಾ ಬೆಳಗ್ಗೆ ಹೆಚ್ಚಿನ ಕನ್ನಡ ಪತ್ರಿಕೆಗಳ ಇ -ಆವೃತ್ತಿ ಓದುತ್ತೇನೆ. ಆದರೆ ‘ಅವಧಿ ‘ಕೊಡುವ ಮಾಹಿತಿ ,ದೃಶ್ಯ ದಾಖಲೆಗಳು ,ಹೊಸ ಸಂಗತಿಗಳು ಅಲ್ಲಿ ಸಿಗುವುದಿಲ್ಲ. ಜೊತೆಗೆ ಅವಧಿಯ ಕೊಂಡಿಯ ಮೂಲಕ ನನಗೆ ಗೊತ್ತಿಲ್ಲದ ಅನೇಕ ಅಡಗುತಾಣಗಳಿಗೆ ಇ-ಸಂಚಾರ ಮಾಡಿ ರೋಮಾಂಚನ ಹೊಂದಿದ್ದೇನೆ

ಹಾಗಾಗಿ ಅವಧಿಯ ಕಾರಣವಾಗಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಕರ್ನಾಟಕದ ಮಹತ್ವದ ಯಾವ ಆಗುಹೋಗುಗಳಿಂದಲೂ ನಾನು ವಂಚಿತ ಆಗಿಲ್ಲ.

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

ಇನ್ನೂ ನೇತ್ರಾವತಿಯ ಸೇತುವೆಯನ್ನು ದಾಟಿರಲಿಲ್ಲ, ಆಗಲೇ ದಟ್ಟ ಹೊಗೆ ಎದ್ದು ನಿಂತಿತ್ತು. ಮಂಗಳೂರಿನಿಂದ ಹರದಾರಿ ದೂರವಿರುವ ವಿಶ್ವವಿದ್ಯಾಲಯಕ್ಕೆ ಹೋಗಬೇಕಾದರೆ ನೇತ್ರಾವತಿ ದಾಟಲೇ ಬೇಕು. ವಿಶ್ವವಿದ್ಯಾಲಯಕ್ಕೆ ಅನಂತಮೂರ್ತಿ ಬರುವವರಿದ್ದರು.  ’ಪ್ರಜಾವಾಣಿ’ಯಲ್ಲಿದ್ದ ನಾನು ಸ್ಕೂಟರ್ ಏರಿ ಹೊರಟಿದ್ದೆ. ಅಷ್ಟರಲ್ಲಿ ಕಲ್ಲುಗಳ ತೂರಾಟ ಆರಂಭವಾಯಿತು. ಬಸ್ ಗಳಲ್ಲಿದ್ದವರು ಭಯ ಹೊತ್ತ ಮುಖಗಳೊಂದಿಗೆ ದುಡುದುಡನೆ ಇಳಿದು ಚೆಲ್ಲಾಪಿಲ್ಲಿಯಾದರು. ಟೈರುಗಳಿಗೆ ಹತ್ತಿದ ಬೆಂಕಿ ತನ್ನ ಕಮಟು ವಾಸನೆಯಿಂದ ಪರಿಸ್ಥಿತಿಗೆ ಇನ್ನಷ್ಟು ಭೀಕರ ಸ್ಪರ್ಶ ನೀಡಿತು. ಅದು ಡಿಸೆಂಬರ್ 6 ರ ನಂತರದ ದಿನ. ಸ್ಕೂಟರ್ ಹಿಂದಕ್ಕೆ ತಿರುಗಿಸುವಷ್ಟರಲ್ಲಿ ಸೇತುವೆಯ ಇನ್ನೊಂದು ಭಾಗದಲ್ಲೂ ಬೆಂಕಿ. ಬಸ್ ಗಳಿಂದ ಇಳಿದವರು ಪ್ರಾಣ ಭಯದಿಂದ ತಮ್ಮ ಮನೆಯತ್ತ  ಓಡಲು ತೊಡಗಿದರು. ಮೊದಲ ಬಾರಿಗೆ ಊರಿಗೆ ಊರೇ ನಿರಾಶ್ರಿತವಾಗಿಬಿಡುತ್ತಿದೆ ಎನ್ನುವ ಭಾವನೆ ಬಂತು. ದಿನಗಳು ಉರುಳುತ್ತಿದ್ದರೂ ಹತ್ತಿದ ಬೆಂಕಿಗೆ ಆರುವ ಅವಸರವೇ ಇಲ್ಲ. ಸುಡುವ ಬೆಂಕಿಗೆ ಮೈಯೆಲ್ಲಾ ಕಾಲು. ಅದು ನದಿ ದಾಟಿತು, ಬೆಟ್ಟ ಏರಿತು, ಸಿಕ್ಕ ಊರುಗಳನ್ನ, ಕಂಡ ಕಂಡಲ್ಲೆಲ್ಲಾ  ಗಲಭೆ ಹರಡುತ್ತಲೇ ಹೋಯಿತು.

ಪೂರ್ಣ ಓದಿಗೆ ಭೇಟಿ ಕೊಡಿ : ಮೀಡಿಯಾ ಮೈಂಡ್

ನಿಶ್ಯಬ್ದವಾಗಿರು ನನ್ನ ಹೃದಯವೇ ನಿಶ್ಯಬ್ದವಾಗಿರು!

ರಾತ್ರಿ ಮತ್ತು ಪ್ರಭಾತದ ನಡುವೆ..

-ಹರ್ಷದ್ ವರ್ಕಾಡಿ

ಚಿತ್ರ: ಚಿನುವಾ

ಅಂತರಿಕ್ಷಕ್ಕೆ ನಿನ್ನ ಶಬ್ದ

ಕೇಳಿಸುವುದಿಲ್ಲವಾದ್ದರಿಂದ

ನಿಶ್ಯಬ್ದವಾಗಿರು ನನ್ನ ಹೃದಯವೇ

ನಿಶ್ಯಬ್ದವಾಗಿರು!

ದಿವ್ಯವಾದ ಔಷಧ

ವಿಲಾಪವನ್ನೂ, ಸಂಕಟವನ್ನೂ ಕೆಮ್ಮುತ್ತವೆ

ಅವುಗಳಿಗೆ ನಿನ್ನ ಗೀತೆಗಳು, ಸ್ತೋತ್ರಗಳು

ಓದಲಾಗುವುದಿಲ್ಲವಾದ್ದರಿಂದ

ನಿಶ್ಯಬ್ದವಾಗಿರು!

ನಿನ್ನ ರಹಸ್ಯ ಮಂತ್ರಗಳಿಗೆ

ನಿಷೆಯಲ್ಲಿನ ಭೂತಗಳು

ಶ್ರದ್ದೆ ನೀಡದಿದ್ದುದರಿಂದ

ನಿಶ್ಯಬ್ದವಾಗಿರು!

ಅಂಧಕಾರದ ಘೋಷ ಯಾತ್ರೆಗಳು

ನಿನ್ನ ಸ್ವಪ್ನಗಳ ಮುಂದೆ

ವಿರಾಮಗೊಳ್ಳುವುದಿಲ್ಲ .

ಸಹನೆಯೊಂದಿಗೆ ಪ್ರಭಾತವನ್ನೂ

ನಿರೀಕ್ಷಿಸುತ್ತಿರುವವನು

ಖಂಡಿತವಾಗಿಯೂ ಅದನ್ನು

ಸಂಧಿಸುತ್ತಾನಾದ್ದರಿಂದ

ಪ್ರಕಾಶವನ್ನು ಪ್ರೀತಿಸಲ್ಪಡುವವನಾದ್ದರಿಂದ

ಪ್ರಭಾತದಲ್ಲಿಯೂ ಪ್ರೀತಿಸುವವನು

ಪ್ರಭಾತ ಬರುವ ತನಕ

ನಿಶ್ಯಬ್ದವಾಗಿರು!

More

ಕವಿತೆ ಅಂದರೆ ಹೃದಯದ ಗಾಯಕ್ಕೆ ತಣ್ಣನೆಯ ಮುಲಾಮು…

-ಅಂತರ್ಮುಖಿ

ಒಳಗೂ..ಹೊರಗೂ..

`1942ರಲ್ಲಿ ನಮ್ಮೂರು ಕೊಪ್ಪದಲ್ಲಿ ಪೊಲೀಸ್ ಸ್ಟೇಷನ್ ಆರಂಭವಾಗಿದ್ದು. ಇದುವರೆಗೂ ಅಲ್ಲಿ ಜಾತಿ ಹೆಸರಿನಲ್ಲಿ ಗಲಾಟೆ, ಸಂಘರ್ಷ ಅಂತ ಒಂದು ಕೇಸೂ ದಾಖಲಾಗಿಲ್ಲ. ನನ್ನೂರಿನ ಜನ ಜಾತಿ, ಧರ್ಮ ಎಲ್ಲ ಮರೆತು ಬೆರೆತು ಬದುಕುತ್ತಿರುವವರು’

ಅಂಥ ಸಾಮರಸ್ಯ, ಸೌಹಾರ್ದತೆಯ ವಾತಾವರಣದಲ್ಲಿ ಬೆಳೆದೆ ಎಂದು ಕವಿ, ಲೇಖಕ ಜಗದೀಶ್ ಕೊಪ್ಪ ನೆನಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರ ಸಂವೇದನೆ ಮನುಷ್ಯತ್ವವನ್ನು ಹುಡುಕಾಡುತ್ತದೆ. ಪ್ರೀತಿಯೊಂದೇ ಎಲ್ಲವನ್ನು ಬೆಸೆಯುತ್ತದೆ ಎಂದು ಪ್ರತಿಪಾದಿಸುತ್ತದೆ. ಕಾಶ್ಮೀರದ ಹಾಡುಗಳು, ಉಮರ್ ಖಯ್ಯಾಮನ ಪದ್ಯಗಳು, ಮಿರ್ಜಾ ಗಾಲಿಬ್ ಕಥನ-ಕಾವ್ಯ ಕೃತಿಗಳು ಅಂಥದ್ದೇ ಪ್ರಯತ್ನದ ಫಲ. ಗ್ರಾಮಗಳು ಮಾತ್ರ ಎಲ್ಲ ಎಲ್ಲೆಯನ್ನು ಮೀರಿ ನಿಲ್ಲುತ್ತವೆ ಎಂದು ನಂಬಿರುವ ಕೊಪ್ಪ ಅಕ್ಷರ ಕಲಿತವರ ಸಂಕುಚಿತತೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಕೊಪ್ಪ ಅವರ ಕೊಪ್ಪರಿಗೆ ತುಂಬಾ ತುಂಬಿರುವ ಸಮಾಜಮುಖಿ ಸಂವೇದನೆಯ ಬಗ್ಗೆ, ಕವಿತೆಗಳ ಬಗ್ಗೆ ನಾಲ್ಕು ಮಾತು…

ನೀವೇಕೆ ಬರೆಯುತ್ತೀರಿ?

ಬರವಣಿಗೆಯಿಂದ ಜಗತ್ತೇ ಬದಲಾಗಬಲ್ಲದು ಎಂಬ ಭ್ರಮೆ ನನಗಿಲ್ಲ. ಆದರೆ ಸಮಾನ ಮನಸ್ಕ ಓದುಗರೊಂದಿಗೆ ಆಪ್ತ ಸಂವಾದ ಸಾಧ್ಯ ಎಂದು ನಂಬಿದವನು.

ಇಷ್ಟು ದಿನಗಳಿಂದ ಬರೆಯುತ್ತಿದ್ದೀರಿ. ಆಗಾಗ್ಗೆ ನೆನಪಾಗುವ ಹಾಗೂ ಇಂದಿಗೂ ಕಾಡುತ್ತಲೇ ಇರುವ ಒಂದು ಘಟನೆ?

ಅದು 1986ರ ಜುಲೈ ತಿಂಗಳು. ವಾರ ಪತ್ರಿಕೆಯೊಂದರ ಉಪಸಂಪಾದಕನಾಗಿದ್ದೆ. ಅಹಮದಾಬಾದ್ ನಗರದ ರಥಯಾತ್ರೆಯ ಸಂದರ್ಭದಲ್ಲಿ ಕೋಮುಗಲಭೆ ಸಂಭವಿಸಿ 17 ಮಂದಿ ಗೋಲಿಬಾರ್ನಲ್ಲಿ ಮೃತಪಟ್ಟಿದ್ದರು. ಒಂದು ವಾರ ವಿಧಿಸಿದ ನಿಷೇಧಾಜ್ಞೆಯಲ್ಲಿ ನಾನು ಸಿಕ್ಕಿಕೊಂಡಿದ್ದೆ. ಅಲ್ಲಿನ ರಿಪ್ಲಿಕಾ ರಸ್ತೆಯೊಂದರ ಹನುಮಾನ್ ದೇವಸ್ಥಾನದ ಬಳಿ ಎಣ್ಣೆ ತುಂಬಿದ ಮಣ್ಣಿನ ಹಣತೆ ಮತ್ತು ಬತ್ತಿ ಮಾರುತ್ತಿದ್ದ ಮುಸ್ಲಿಂ ವೃದ್ಧನನ್ನು ಪೊಲೀಸರು ಹೊಡೆದು ಓಡಿಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸರನ್ನು ತಡೆದು, ಗಲಭೆಯ ವೇಳೆಯಲ್ಲಿ ಇಂಥ ಸಾಹಸವೇಕೆ ಎಂದು ನಾನು ಆ ವೃದ್ಧನನ್ನು ಪ್ರಶ್ನಿಸಿದೆ, ಆತ ಕೊಟ್ಟರ ಉತ್ತರ ಹೀಗಿತ್ತು:

`ಸಾಬ್ ಇಡೀ ನನ್ನ ಕುಟುಂಬ ತಲೆ ತಲಾಂತರಗಳಿಂದ ಈ ದೇವಸ್ಥಾನದ ಬಳಿ ಎಣ್ಣೆ, ಬತ್ತಿ ಮಾರಿ ಬದುಕುಕಟ್ಟಿಕೊಂಡಿದೆ. ಐದು ದಿನಗಳಿಂದ ಮನೆಯಲ್ಲಿ ಒಲೆ ಹಚ್ಚಿಲ್ಲ. ಬಾಣಂತಿ ಮಗಳಿದ್ದಾಳೆ. ಇವುಗಳನ್ನು ಇಲ್ಲಿ ಮಾರಬೇಡವೆಂದರೆ ನಾನು ಎಲ್ಲಿಗೆ ಹೋಗಲಿ?’. 23 ವರ್ಷಗಳ ಹಿಂದೆ ಆತ ಕೇಳಿದ ಪ್ರಶ್ನೆಗೆ ನಾನು ಇನ್ನೂ ಉತ್ತರ ಕಂಡುಕೊಂಡಿಲ್ಲ.

ಧರ್ಮದ ಬಗ್ಗೆ, ಜಾತಿಯ ಬಗ್ಗೆ ಮಾತನಾಡುವುದು ಅಪಮಾನಕರ ಎಂಬ ಕ್ಷಣಗಳಲ್ಲಿದ್ದೇನೆ ಎಂದು ನಿಮ್ಮ ಕೃತಿಯೊಂದರಲ್ಲಿ ಹೇಳಿಕೊಂಡಿದ್ದೀರಿ. ಇಂಥ ಹೊತ್ತಲ್ಲಿ ಉಮರ್ ಖಯ್ಯಾಮ್, ಮಿರ್ಜಾ ಗಾಲಿಬ್ ಅನುವಾದ ಮಹತ್ವ ಏನು?

ಸದ್ಯದ ಸ್ಥಿತಿಯಲ್ಲಿ ಜಾತಿ ಮತ್ತು ಧರ್ಮಕ್ಕೂ, ಮಾರಾಟದ ಸರಕುಗಳಿಗೂ ಅಂಥ ವ್ಯತ್ಯಾಸಗಳಿಲ್ಲ. ಮನುಷ್ಯನ ವಿಕಾರ ಮತ್ತು ವಿಕೃತಿಗಳಿಗೆ ಇವು ಈಗ ಗುರಾಣಿಯಾಗಿವೆ. ಇಂಥ ಸ್ಥಿತಿಯಲ್ಲಿ ಧರ್ಮ ಮತ್ತು ಜಾತಿಯ ಗಡಿರೇಖೆಯನ್ನು ಉಲ್ಲಂಘಿಸಿದ ಉಮರ್ ಖಯ್ಯಾಮ್, ಮಿರ್ಜಾ ಗಾಲಿಬ್, ಇವರ ಮೂಲಕ ಧರ್ಮದಾಚೆಗೂ ಕೂಡ ಬದುಕಬಹುದಾದ ಅರ್ಥಪೂರ್ಣ ಬದುಕಿದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನವೇ ಈ ಅನುವಾದ.

More

%d bloggers like this: